ಶುಕ್ರವಾರ, ಏಪ್ರಿಲ್ 8, 2011

ಬನ್ನಿ ಕೈ ಜೋಡಿಸೋಣ.........

              ಅಣ್ಣನೊಂದಿಗೆ ನಾವು ........... ಬನ್ನಿ ಕೈ ಜೋಡಿಸೋಣ ............

ಭಾರತ ಎದ್ದು ನಿಂತಿದೆ, ಭ್ರಷ್ಟಾಚಾರ ಈಗ ನಿಲ್ಲಲೇಬೇಕಾಗಿದೆ. ಇದೆ ಸುಸಮಯ, ಬನ್ನಿ ಭ್ರಷ್ಟಾಚಾರದ ವಿರುದ್ದ ಹೋರಾಡೋಣ, ಚಳುವಳಿಯಲ್ಲಿ ಭಾಗಿಯಾಗೋಣ, ಇದೆ ನಮಗೆಲ್ಲ ಬದಲಾವಣೆ ತರಲು ಸಿಕ್ಕಿರುವ ಕಡೆಯ ಅವಕಾಶ. ಬರಿ ಚುನಾವಣೆಗಳಲ್ಲಿ ಮತ ಚಲಾಯಿಸಿ ಬದಲಾವಣೆ ತರಲು ಸಾದ್ಯವಿಲ್ಲ, ಬರಿ ರಾಜಕಾರಣಿಗಳ ಹಾಗೂ ಲಂಚಗುಳಿತನದ ಬಗ್ಗೆ ಮಾತನಾಡಿದರೆ ಸಾಲದು, ಇದರ ವಿರುದ್ದ ಹೋರಾಟ ನೆಡಸಬೇಕು. ಹೋರಾಟ ನೆಡೆಸುತ್ತಿರುವ ಗಾಂಧಿವಾದಿ ಅಣ್ಣ ಹಜ಼ಾರೆ ಮತ್ತು ಮಿತ್ರರಿಗೆ ಹಾಗೂ ಎಲ್ಲ ಚಳುವಳಿಗಾರರಿಗೆ ನಮ್ಮ ಬೆಂಬಲ ನೀಡಬೇಕಾಗಿದೆ.

                                   
           ಅಣ್ಣನವರ  ಈ ಚಳುವಳಿ ಬರಿ ಲೊಕಪಾಲ್ ಮಸೂದೆಯ ಜಾರಿಗೆ ಮಾತ್ರ ಸೀಮಿತವಾಗಿಲ್ಲ, ಇದು ಯಾವುದೇ ರಾಜಕೀಯ ಪಕ್ಷದ , ರಾಜಕೀಯ ವ್ಯಕ್ತಿಗಳ  ಅಥವಾ ಸರಕಾರದ ವಿರುದ್ದವೂ ಅಲ್ಲ. ಇದು ಭ್ರಷ್ಟಾಚಾರದ ವಿರುದ್ದ , ಅದು ಯಾರೇ ಮಾಡಲಿ. ಇದೊಂದು ಭ್ರಷ್ಟಾಚಾರದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಒಂದು ಚಳುವಳಿ. ಭ್ರಷ್ಟಾಚಾರಕ್ಕೆ ಕಾರಣ ಬರಿ ರಾಜಕೀಯದವರು ಮಾತ್ರವಲ್ಲ ಅದರಲ್ಲಿ ಸಮನಾದ ಪಾಲು ನಮ್ಮದು ಇದೆ, ಇದನ್ನು ನಾವು ಮೊದಲು ಅರ್ಥ ಮಾಡಿಕೊಳ್ಳಬೇಕಾಗಿದೆ. ಹಾಗಾಗಿ ಇದನ್ನು ಸರಿ ಮಾಡುವ ಕರ್ತವ್ಯ ಕೂಡ ನಮ್ಮದೇ ಆಗಿದೆ. ಈ ಚಳುವಳಿಯನ್ನು ಅರ್ಥ ಮಾಡಿಕೊಂಡು ನಾವು ಕೂಡ ಇದರಲ್ಲಿ ಭಾಗಿಯಾಗಿ ನಮ್ಮ ಸಮಾಜಕ್ಕೆ ಒಂದಿಷ್ಟು ಒಳ್ಳೆಯದನ್ನು ಮಾಡಬೇಕಾಗಿದೆ. ಲೋಕಾಪಾಲ್ ಮಸೂದೆ ಜಾರಿಯಾದರೆ ಮಾತ್ರ ಭ್ರಷ್ಟಾಚಾರ ನಿಲ್ಲುವುದಿಲ್ಲ , ಸಮಾಜದ ಎಲ್ಲ ಸ್ತರದಲ್ಲೂ ನೆಡೆಯುವ ಭ್ರಷ್ಟಾಚಾರವನ್ನು ವಿರೋದಿಸಬೇಕು ಹಾಗೂ ಲಂಚ ಕೊಡದಿರಲು ಹಾಗೂ ತೆಗೆದುಕೊಳ್ಳದಿರಲು ನಿರ್ಧರಿಸಿ,  ಅದರಂತೆ ನೆಡೆಯಲೇಬೇಕಾಗಿದೆ.

          ಭ್ರಷ್ಟಾಚಾರದ ವಿರುದ್ದ ನೆಡೆಯುತ್ತಿರುವ  ಈ ಹೋರಾಟ ಕೇವಲ ಹೋರಾಟವಾಗದೆ , ಇದೊಂದು ದೇಶದ ಬದಲಾವಣೆಗೆ, ಲಂಚ ಮುಕ್ತ ದೇಶವನ್ನು ಕಟ್ಟಲು ಭದ್ರ ಬುನಾದಿಯಾಕಬೇಕಾಗಿದೆ. ಇದಕ್ಕೆಲ್ಲ ನಮ್ಮ ಸಹಕಾರ ಅಣ್ಣನವರಿಗೆ ನಾವು ನೀಡಲೇಬೇಕು. ನಮ್ಮದೇ ಆದ ಶೈಲಿಯಲ್ಲಿ ನಾವು ಈ ಹೋರಾಟದಲ್ಲಿ ಭಾಗಿಯಾಗಬಹುದು, ನಮ್ಮ ಸುತ್ತಮುತ್ತಲಿನ ಜನರಲ್ಲಿ , ಮನೆಯವರಲ್ಲಿ ಇದರ ಬಗ್ಗೆ ಜಾಗೃತಿ ಮೂಡಿಸಿ. ಭ್ರಷ್ಟಾಚಾರ ಮುಕ್ತ ರಾಷ್ಟ್ರ ಕಟ್ಟಲು ನಮ್ಮ ಕೈಲಾದಷ್ಟು ಸೇವೆ ನಾವು ಮಾಡೋಣ, ಬನ್ನಿ ಚಳುವಳಿಯಲ್ಲಿ ಭಾಗವಹಿಸೋಣ,ಸಮಾಜದ ಏಳಿಗೆಗೆ ಕಾರಣವಾಗೋಣ.   
 
ನಿಮಗಾಗಿ.......
ನಿರಂಜನ್