ಶನಿವಾರ, ಡಿಸೆಂಬರ್ 11, 2010

ಸಹ್ಯಾದ್ರಿಯ ಸೊಬಗು....


                                                           
           ಸಹ್ಯಾದ್ರಿಯ ಸೊಬಗು...
oಜು ಮುಸುಕಿದ ವಾತಾವರಣ, ಪೂರ್ಣ ಸೂರ್ಯೋದಯವಾಗಿರದ ಸಮಯ,ಪ್ರಯಾಣಾದುದ್ದಕ್ಕೂ ಬೇಡ ಅಂದರು ಬಿಡೊಲ್ಲ ಅಂತಿದ್ದ ತಣ್ಣನೆ ಗಾಳಿ, ಇಬ್ಬನಿಯಿಂದ ಒದ್ದೆಯಾಗಿದ್ದ ವಿಶಾಲವಾಗಿದ್ದ ರಸ್ತೆ, ರಸ್ತೆಯ ಇಕ್ಕೆಲಗಳಲ್ಲೂ ಬರಿ ಹಸಿರಿನಿದ ಕೂಡಿದ ಬಾರಿ ಮರಗಳು, ಕಣ್ಣಾಯಿಸಿದಷ್ಟೂ ದೂರ ಸಹ್ಯಾದ್ರಿ ಶಿಖರಗಳ ವಿಹಂಗಮ ನೋಟ,ಹಕ್ಕಿ ಪಕ್ಷಿಗಳ ಚಿಲಿಪಿಲಿ ನೀನಾದ, ಅಬ್ಭಾ ಎಂತಹ ವಾತಾವರಣ ಮತ್ತು ಈ ನನ್ನ ಪ್ರಯಾಣ. ನಿಜ ನಾನು  ನೋಡಬೇಕೆಂದಿರುವ ಸ್ಥಳದಷ್ಟೇ ನನ್ನ ಪ್ರಯಾಣವೂ ಸೊಗಸಾಗಿತ್ತು.

         ಸಹ್ಯಾದ್ರಿಯ ಶಿಖರಗಳೆಂದರೆ ನಮಗೆ ತಟ್ಟನೆ ನೆನಪಾಗುವುದು ಶಿವಮೊಗ್ಗ ಜಿಲ್ಲೆ, ಇಲ್ಲಿಯ ಪ್ರಕೃತಿ ಸೌಂದರ್ಯಕ್ಕೆ ಮನಸೋಲದವರಿಲ್ಲ, ಕುವೆಂಪು,ನಿಸಾರ್ ಅಹಮದ್ ಮತ್ತು ಅನೇಕರು ಕವಿಗಳಾಗಲು ಕಾರಣ ಕೂಡ ಇಲ್ಲಿಯ ಪ್ರಕೃತಿ ಮತ್ತು ಮಣ್ಣಿನ ಮಹಿಮೆ !!!! . ಅನೇಕ ಬಾರಿ ಶಿವಮೊಗ್ಗ ಜಿಲ್ಲಾ ಪ್ರವಾಸ ಮಾಡಿದ್ದರು ಕೂಡ ನನಗೆ , ಪ್ರತಿ ಬಾರಿಯೂ ಸುಂಧಾರವಾಗಿಯೇ ಕಾಣುವ ಈ ಜಾಗಗಳು ಪದೇ ಪದೇ ನನ್ನನ್ನು ಸೆಳೆಯುತ್ತಲೇ ಇವೆ. ಸರಿ ಸುಮಾರು ಬೆಳೆಗ್ಗೆ 7.30 ಕ್ಕೆ ಸ್ವಲ್ಪ ಉಪಹಾರ ಅಂದರೆ 4 ಇಡ್ಲಿ, 3 ಉದ್ದಿನವಡೆ ತಿಂದು !!!!!! , ನನ್ನ ಪ್ರಯಾಣವನ್ನು ಎಂಜಾಯ್ ಮಾಡುತ್ತಾ ನಾನೀಗ ಹೊರಟಿರುವುದು ಸಾಗರದಿಂದ 5-6 ಕಿ.ಮೀ ಇರುವ ಇಕ್ಕೇರಿ ಎಂಬ ಪುರಾತನ ದೇವಾಲಯವಿರುವ ತಾಣಕ್ಕೆ .
        ಇನ್ನೂ ಚಳಿಗೆ ಹೊರಗೆ ಬಾರದ ಜನ, ಬಾರಿ ವಿಶಾಲವಾದ ದೇವಾಲಯದ ಪ್ರಾಂಗಣ,ಹಸಿರು ಹುಲ್ಲಿನ ಹಾಸು, ಹಾಸಿನ ಮೇಲೆ ಕುಳಿತಿರುವ ಇಬ್ಬನಿಯ ಹನಿಗಳು, ಅವು ಸೂರ್ಯನ ಬೆಳಕನ್ಣು ಪ್ರತಿಫಲಿಸುತಿದ್ದ ರೀತಿ,ಕಪ್ಪು ಮತ್ತು ಕೆಂಪು ಬಣ್ಣದ ಶಿಲೆಗಳ ಆ ದೇಗುಲ, ದೇಗುಲದೊಳಗಿದ್ದ  ಶಿವನ ಸುಂದರ ವಿಗ್ರಹ,ಎದುರಿಗಿದ್ದ ಬಾರಿ ಕಪ್ಪು ಶಿಲೆಯ ಬಸವ,ಸೂರ್ಯನ ಬಿಸಿಲಿಗೆ ಮಿಂಚುತ್ತಿದ್ದ ಅದರ ಮುಖ,ದೇವಾಲಯದಾವರಣದ ಒಂದು ಮೂಲೆಯಲ್ಲಿದ್ದ ಹಳೆಯ ಬಾವಿ, ಕೇಸರಿ ಮಡಿಯುಟ್ಟ  ಇಳಿವಯಸ್ಸಿನ  ಪೂಜಾರಿ , ಬಾವಿಯಲ್ಲಿ ನೀರು ಸೇದುತ್ತಿದ್ದ ಅವರ ಆ ವೈಖರಿ, ಇದನ್ನೆಲ್ಲ ನೋಡಿ ನಾಚಿ ನರ್ತಿಸುತ್ತಿಸುತ್ತಿದ್ದ ದೇಗುಲದ ಗೋಡೆಯ ಮೇಲಿದ್ದ ಶಿಲ್ಪಗಳು,ದೇವಾಲಯವನ್ನೇ ಮನೆಯಾಗಿಸಿಕೊಂಡಿದ್ದ ಪಾರಿವಾಳಗಳು, ಒಟ್ಟಾರೆ ಇದೊಂದು ಸಖತ್ ಅನುಭವ.

               ನಿಜವಾಗಿಯೂ ನನಗೆ ಆ ದಿನ ,ಈ ರೀತಿಯಾಗಿ ಶುರು ಆಗಿದ್ದು ಖುಷಿ ಕೊಟ್ಟಿತ್ತು ಮತ್ತು ಏನೋ ಒಂದು ಮನ್ನಸಿಗೆ ಚೈತನ್ಯ ತಂದಿತ್ತು. ಸ್ವಲ್ಪ ಸಮಯ ಕಳೆದ ನಾನು ನನ್ನ ಕ್ಯಾಮಾರಾದಲ್ಲಿ ಸಾಕಷ್ಟು ಫೋಟೋಗಳನ್ನು ತೆಗೆದು, ದೇವರ ದರ್ಶನ ಪಡೆದು ಅಲ್ಲಿಂದ ನಾ ಹೊರಟಿದ್ದು ವರಧಪುರ ಎಂಬ ಇನ್ನೊಂದು ತಾಣಕ್ಕೆ, ಅಲ್ಲಿ ನಾ ಕಳೆದ ಒಂದು ದಿನದ ಬಗ್ಗೆ ಹೇಳಲು ಹಾಗಲೇ ಬರೆದಿರುವ “ ಆಶ್ರಮಾದಲ್ಲೊಂದು ದಿನ “ ಎಂಬ ಲೇಖನವನ್ನು ನಾ ಪೋಸ್ಟ್ ಮಾಡಿದ ಮೇಲೆ ನೀವು ಓದಲೇ ಬೇಕು !!!!!!
                                        


















ನಿಮಗಾಗಿ.......
ನಿರಂಜನ್

ಭಾನುವಾರ, ನವೆಂಬರ್ 28, 2010

ತಿಮ್ಮಪ್ಪನಿಗೆ ನಾ ಚಾಲೆಂಜ್ ಮಾಡಿದ್ದು .........


ತಿಮ್ಮಪ್ಪ ಚಾಲೆಂಜಲ್ಲಿ ಗೆದ್ದದ್ದು !!!!!!!

ಗೆಳೆಯರೇ ,
ನಾ ಇಂದು ನನಗಾದ ಎರಡು ಅನುಭವಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕೆಂದುಕೊಂಡಿದ್ದೇನೆ, ನಿಜವಾಗಿಯೂ ಈ ಎರೆಡು ಅನುಭವಗಳಲ್ಲಿ ಮೊದಲನೆಯದು ನಂಬಿಕೆಗೆ ಸಂಬಂಧಿಸಿದ್ದು ಹಾಗೂ ಕಾಕತಾಳೀಯವಾದದ್ದು, ಮತ್ತೊಂದು ವಿಬಿನ್ನವಾದ ಒಂದು ನೃತ್ಯರೂಪಕ ಕಾರ್ಯಕ್ರಮದ ಬಗ್ಗೆ.

        ಅನೇಕ ದಿನಗಳಿಂದ ತಿರುಪತಿಗೆ ಹೋಗುವ ನನ್ನ ಬಯಕೆ ಯಾವ್ಯಾವುದೋ ಕಾರಣಗಳಿಂದ ಈಡೇರುತ್ತಿರಲಿಲ್ಲ.ಅದರಂತೆಯೇ ಅಲ್ಲಿಯ ಸಾಮಾನ್ಯ ಹಾಗೂ  VIP  ದರ್ಶನಗಳ ಬಗ್ಗೆ ಸ್ವಲ್ಪ ಅಸಮಾಧಾನವಿದ್ದ  ನನಗೆ  ತಿಮ್ಮಪ್ಪನ ಮೇಲೆ ಸಿಟ್ಟು ಕೂಡ ಇತ್ತು :). ಸದಾ ಆತನನ್ನು ನೆನಪಿಸಿಕೊಂಡಾಗಲೆಲ್ಲ ನೀನು ನಿಜವಾಗಿಯೂ ಇದ್ದರೆ ಅಥವಾ ನಿನ್ನ ಶಕ್ತಿ ಈ ಪ್ರಪಂಚದಲ್ಲಿ  ಇದ್ದರೆ ನನಗು ಕೂಡ ಒಮ್ಮೆ  VIP ದರ್ಶನ ಕೊಡು ನೋಡೋಣ ಎಂದು ತಿಮ್ಮಪ್ಪನಿಗೆ ನಮಸ್ಕರಿಸುವ ಬದಲು ಪದೇ ಪದೇ ಚಾಲೆಂಜ್ ಮಾಡಿ,ದೇವರನ್ನೇ ಒಮ್ಮೆ ಪರೀಕ್ಷಿಸಲು ಮುಂದಾಗಿದ್ದೆ !!!!!.  ಅಂದಿನಿಂದಲೂ ನಾನು ಯಾವುದೇ ವೆಂಕಟೇಶ್ವರನ ದೇವಸ್ಥಾನಕ್ಕೂ ಹೋಗಿರಲಿಲ್ಲ. ನಂಬಿಕೆ ಎಂಬ ಒಂದು ಶಕ್ತಿಗೆ ಚಾಲೆಂಜ್ ಮಾಡಿ ಮನಸ್ಸಿನಲ್ಲೇ  ಆತನನ್ನು ನೆನೆಯುತ್ತಿದ್ದೆ ಹಾಗೂ ನೋಡಿ ನಗುತ್ತಿದೆ.

            ಮೊನ್ನೆ ಶನಿವಾರ ನನ್ನ ತಮ್ಮ ಮಧುಸೂಧನ ನನಗೆ  
ISKCON ನಲ್ಲಿ ನೆಡೆಯುತ್ತಿರುವ ಒಂದು ನೃತ್ಯರೂಪಕದ ಬಗ್ಗೆ ಹೇಳಿ,ನನಗೆ ಅಲ್ಲಿಗೆ ಬರಲು ಆಹ್ವಾನವಿತ್ತ. ಅಂದು ಶನಿವಾರವಾಗಿದ್ದರಿಂದ ನಾ ಮರುಮಾತನಾಡದೇ ಸರಿ ಎಂದು, ಅದೇ ನೀರಸವಾದ ವಾರಾಂತ್ಯದ ಚರ್ಚೆಗಳು,ಟೀವಿ ಪ್ರೋಗ್ರಾಂಗಳು,ರೌಂಡ್ಸ್ಗಗಳನ್ನೆಲ್ಲ ಬಿಟ್ಟು   ISKCON ಮುಟ್ಟುವಷ್ಟೊತ್ತಿಗೆ ಸರಿಯಾಗಿ ಸಂಜೆ 6 ಗಂಟೆಯಾಗಿತ್ತು. ಮಧು ಅಷ್ಟೊತ್ತಿಗೆ ಅಲ್ಲಿಗೆ ಬಂದ ತನ್ನ ಸ್ನೇಹಿತೆ ರಂಜೀತಾಳನ್ನ ನಮಗೆ ಪರಿಚಯ ಮಾಡಿಕೊಟ್ಟ.ಅವಳು ಕೊಟ್ಟ ಪಾಸುಗಳನ್ನು ಜೇಬಿಗೇರಿಸಿದ ನಾವು ಕಾರ್ಯಕ್ರಮಕ್ಕೆ ಹೊರಟೆವು. ಯಾವುದೇ ಪೂರ್ವನಿರ್ಧಾರವಿಲ್ಲದೇ ಹೋಗಿದ್ದ ನಮಗೆ ಆ ಕಾರ್ಯಕ್ರಮ ಇನ್ನೂ ಆರಂಭವಾಗಿರದ ಕಾರಣ, ರಂಜಿತ ನಮ್ಮನ್ನು ದೇವರ ದರ್ಶನ ಮಾಡಲೇ ಬೇಕು ಎಂದು ಒತ್ತಾಯಿಸಿ ನಮ್ಮನ್ನು ಅವಳಿಂದೆ ಬರುವಂತೆ ಹೇಳಿ ಮುಂದೆ ಮುಂದೆ ನೆಡೆಯ ತೊಡಗಿದಳು.ಸರಿ ಎಂದು ನಾವು ಅವಳಿಂದೆ ಹೊರಟೆವು, ಮೊದಲು ಸಿಕ್ಕ ದೇವರಿಗೆ ನಮಸ್ಕರಿಸಿ ಮುಂದೆ ನೆಡೆದ ನನಗೆ ಅಚ್ಚರಿಯೊಂದು ಕಾದಿತ್ತು. ಆ ಅಚ್ಚರಿ ಎಂದರೆ ನನಗಾದ ತಿಮ್ಮಪ್ಪನ ದರ್ಶನ ಹಾಗೂ ಅದು ಆದ ರೀತಿ. ನಮ್ಮನು ರಂಜೀತ ಕರೆದೊಯ್ದದ್ದು VIP ದಾರಿಯಲ್ಲೇ !!!!!!!!  ಹತ್ತಿರದಿಂದಲ್ಲೇ ನೋಡಿ, ಆತನ್ನನ್ನು ನಮಸ್ಕರಿಸಿದ ನಾನು, ಮನಸಿನ್ನಲ್ಲೇ ಅಂದುಕೊಂಡದ್ದು " ಶಹಬಾಸ್ ತಿಮ್ಮಪ್ಪ, ತಿರುಪತಿಯಲ್ಲಿ ನನಗೆ VIP ದರ್ಶನ ಕೊಡು ಅಂದ್ರೆ ಬೆಂಗಳೂರಿನಲ್ಲೇ ಕೊಟ್ಟು ಬಿಟ್ಟೆ, ನೀನು ಸಾಮಾನ್ಯನಲ್ಲ ". ನಂತರ ಒಂದು ದೊಡ್ಡ ನಮಸ್ಕಾರ ಮಾಡಿ, ಹೊರನೆಡೆದಾಗ ನನಗಂತು ಒಂದು ರೀತಿಯ ನಗು ಬರುತ್ತಿತ್ತು ಹಾಗೂ ತಿಮ್ಮಪ್ಪ ಚಾಲೆಂಜಲ್ಲಿ ಗೆದ್ದು ಬಿಟ್ಟನಲ್ಲ ಎಂದೆನಿಸಿ !! ಅವನ ಮೇಲಿದ್ದ ನಂಬಿಕೆ ಇನ್ನೊಷ್ಟ ಜಾಸ್ತಿ ಕೂಡ ಆಗಿತ್ತು. ಅಷ್ಟೊತ್ತಿಗೇ ನಾವು ಹೋಗಿದ್ದ ಇನ್ನೊಂದು ಅದ್ಭುತ ಕಾರ್ಯಕ್ರಮ ಶುರುವಾಗುವುದರಲ್ಲಿತ್ತು. ಅದನ್ನು ನೋಡೊಲು ರಂಜಿತ ಕೊಟ್ಟ ಪಾಸ್ ತೋರಿಸಿ ಹೊಳಗೆ ಹೋಗಿ ಕೂತೆವು. ಆ ನೃತ್ಯರೂಪಕದ ಬಗ್ಗೆ ನಾ ನಿಮಗೆ ಹೇಳಲೇ ಬೇಕು. ಆದರೆ ಮುಂದಿನ ಲೇಖನದಲ್ಲಿ ಅದರ ಬಗ್ಗೆ ಹೇಳುವುದು ಒಳ್ಳೆಯದೆಂದು ನಾ ಯೋಚಿಸಿ, ಶನಿವಾರ ಮಾಡದಿದ್ದ, ಮತ್ತೆ ಅದೇ ಚರ್ಚೆಗಳಿಗೆ,ಟೀವೀ ಪ್ರೋಗ್ರಾಂಗಳಿಗೆ, ರೌಂಡ್ಸ್ ಗಳಿಗೆ ಸಿದ್ದನಾಗಲು,ನಮ್ಮಮ್ಮನ " ಬೆಣ್ಣೆ" ಹಾಕದ ದೋಸೆ ತಿನ್ನಲು ಹೊರಟೆ.......

ನಿಮಗಾಗಿ.......
ನಿರಂಜನ್

ಭಾನುವಾರ, ನವೆಂಬರ್ 7, 2010

Relevant forever

                                                         
                                      Relevant forever ..............its just my opinion !!


"I am filled with hope and inspiration as I have the privilege to view this testament to Gandhi's life. He is a hero not just to India but to the world,"

6 ದಶಕಗಳ ಹಿಂದೆ ನಮ್ಮನ್ನಗಲಿದ ಒಬ್ಬ ನಾಯಕನ ಬಗ್ಗೆ, ಯಾವುದೋ ದೇಶದಿಂದ  ಬಂದ, ಅತ್ಯಂತ ಪ್ರಭಾವಿ ಹಾಗೂ ಮುಂದುವರಿದ ರಾಷ್ಟ್ರದ ಮತ್ತೊಬ್ಬ, ಈ ಪೀಳಿಗೆಯ, ಅಗ್ರಗಣ್ಯ ನಾಯಕ ಈ ರೀತಿ ಹೇಳಬೇಕೆಂದರೆ, ಅವರ ತತ್ವ ಮತ್ತು ಆದರ್ಶಗಳಿಂದ ಈತ ಅದೆಷ್ಟು ಪ್ರಭಾವಿತನಾಗಿರಬಹುದು.

          ನಿಜ ನಾನು ಹೇಳುತ್ತಿರುವುದು ನಮ್ಮ ಹೆಮ್ಮೆಯ ಮಹಾತ್ಮ ಗಾಂಧೀಜಿಯವರ ಮೇಲಿರುವ ಅಮೇರಿಕಾದ ಅದ್ಯಕ್ಷ ಒಬಾಮನ ಪ್ರೀತಿ ಮತ್ತು ಗೌರವದ ಬಗ್ಗೆ. ಎಲ್ಲೋ ಇರುವ ಒಬಾಮನಿಗೆ,ಎಂದೋ ನಮ್ಮನ್ನಗಲಿದ ಮಹಾತ್ಮರು ಇಂದಿಗೂ ಸ್ಪೂರ್ತಿಯಾಗಬೇಕೆಂದರೆ, ನಿಜಕ್ಕೂ ಆತನ ಮೇಲೆ ನಮ್ಮ ಮಹಾತ್ಮರು ಅದೆಷ್ಟು ಪ್ರಭಾವ ಬೀರಿರಬೇಕು.ನಮ್ಮ ದೇಶಕ್ಕೆ ಬಂದಿಳಿದ ಕೆಲವೇ ಗಂಟೆಗಳಲ್ಲಿ ಆತ ಮೊದಲು ಮಾಡಿದ ಕೆಲಸ ಮುಂಬೈಯಲ್ಲಿರುವ ಮಹಾತ್ಮರು ಎಂದೋ ತಂಗಿ ಹೋಗಿದ್ದ ಜಾಗಕ್ಕೆ ಬೇಟಿ ನೀಡಿ ಅವರಿಗೆ ನಮಿಸಿ ಆಡಿದ ಮಾತುಗಳು ನಿಜಕ್ಕೂ ಮಹಾತ್ಮರ ಬಗ್ಗೆ ಬರಾಕ್ ಒಬಾಮನಿಗೆ ಇದ್ದ ಪ್ರೀತಿಯನ್ನು ತೋರಿಸುತ್ತದೆ.

         ಇತ್ತೀಚಿನ ದಿನಗಳಲ್ಲಿ ನಮ್ಮ ದೇಶದಲ್ಲೇ ನಾವೆಲ್ಲರೂ ಗಾಂಧೀಜಿಯವರ ತತ್ವ,ಸಿದ್ಧಾಂತಗಳನ್ನು ಮರೆಯುತ್ತಿರುವ ಹಾಗೂ ಅವೆಲ್ಲವೂ ಈಗಿನ ಕಾಲದಲ್ಲಿ ಉಪಯೋಗಕ್ಕೆ  ಬಾರದವು (Irrelevant) ಎಂದು  ಯೋಚಿಸುತ್ತಿರುವ ನಮಗೆಲ್ಲರಿಗೂ ಒಬಾಮನ ಈ ಗಾಂಧಿ ಸ್ಮಾರಕ ಬೇಟಿಯಿಂದ ಮತ್ತು ಈತನ ಮಾತುಗಳಿಂದ ನಾವು ಬಹಳಷ್ಟು ಕಲಿಯುವುದಿದೆ. ಕೆಲವು ಇತಿಹಾಸ ತಜ್ಞರು ಹಾಗೂ ಲೇಖಕರು ಇತಿಹಾಸವನ್ನು, ಹಲವಾರು  ನಾಯಕರ ತತ್ವ, ಆದರ್ಶಗಳನ್ನು ಅವರವರ ಬುದ್ಧಿಮಟ್ಟಕ್ಕೆ ಅರ್ಥೈಸಿಕೊಂಡು ತಮ್ಮ ಅನೇಕ ಲೇಖನಗಳಲ್ಲಿ ನಮ್ಮ ನಾಯಕರ ಬಗ್ಗೆ ಜನರಲ್ಲಿ ಒಂದು ರೀತಿಯ ತಪ್ಪು ಭಾವನೆಗಳನ್ನು ಮೂಡಿಸಿದ್ದಾರೆ. ನಿಜ ಒಬ್ಬ ಮನುಷ್ಯ ಸಂಪೂರ್ಣ ಒಳ್ಳೆಯವನು ಹಾಗೂ ಆತ ತೆಗೆದುಕೊಳ್ಳುವ ಎಲ್ಲ ನಿರ್ಧಾರಗಳು ಸರಿಯಾಗಿರಬೇಕೆಂದಿಲ್ಲ. ಆತನ ವಿಚಾರಗಳು ನಮ್ಮ ವಿಚಾರಗಳು ಬೇರೆ ಬೇರೆ ಆಗಿರಬಹುದು. ಆದರೆ ನಾವು ಯಾವುದೇ ಮನುಷ್ಯನ ಒಳ್ಳೆಯ ಗುಣಾದರ್ಶಗಳನ್ನು ಬಿಟ್ಟು ಆತನ ವೈಯುಕ್ತಿಕ ಹಾಗೂ ತಪ್ಪುಗಳನ್ನು ಮಾತ್ರ ನೋಡಿದರೆ ನಮ್ಮ ಏಳಿಗೆಗೆ ಏನು ಉಪಯೋಗವಾಗದು.ಮಹಾತ್ಮ ಗಾಂಧಿಯವರ ಸತ್ಯ,ಅಹಿಂಸೆ,ಸರಳತೆ ಮತ್ತು ಪ್ರೀತಿ, ನೂರು ವರ್ಷಗಳ ಹಿಂದೆ ಮತ್ತು ಇನ್ನೂ ನೂರು ವರ್ಷಗಳು ಕಳೆದರು ಅವು ಸಮಂಜಸವಾಗಿರುತ್ತವೆ(Relevant) . ನಾವು ಕೂಡ ಅವಷ್ಟನ್ನೇ ಪಾಲಿಸಿದರು ಸಹ ನಮ್ಮ ವೈಯುಕ್ತಿಕ ಹಾಗೂ ಸಾಮಾಜಿಕ ಜೀವನ ಬಹಳಷ್ಟು ಬದಲಾವಣೆಗಳನ್ನು ಕಾಣಬಹುದು ಎಂಬುದು ನನ್ನ ವೈಯುಕ್ತಿಕ ಅಬಿಪ್ರಾಯ ಅಷ್ಟೇ.  


ನಿಮಗಾಗಿ.......
ನಿರಂಜನ್

ಗುರುವಾರ, ಅಕ್ಟೋಬರ್ 14, 2010

ನಾವು ಚಿಕ್ಕವರಿದ್ದಾಗ

                                                  ನಾವು ಚಿಕ್ಕವರಿದ್ದಾಗ ...........

ಸ್ನೇಹಿತರೆ ಮೊನ್ನೆ ನಾನು ಮತ್ತು ನನ್ನ ಸ್ನೇಹಿತ ರಾಮಕೃಷ್ಣ ನಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾ ಆಫೀಸಲ್ಲಿ ಒಬ್ಬರಿಗೊಬ್ಬರು ಚಾಟ್ ಮಾಡುತ್ತಾ ಇದ್ದೆವು. ಇತ್ತೀಚಿನ ದಿನಗಳಲ್ಲಿ ಆ ಹಳೆಯ ನೆನಪುಗಳು ನನ್ನನ್ನು ತುಂಬಾ ಕಾಡತೊಡಗಿವೆ. ನಾವು ಆಡಿದ ಆಟಗಳು,ನಾವಾಡಿದ ಜಾಗಗಳು,ನಾವಾಡಿದ ಜಗಳಗಳು,ತಿಂದ ಏಟುಗಳು,ಬಿಟ್ಟ ಬಸ್ಸು ಮತ್ತು ರೈಲುಗಳು,ಸುತ್ತಿದ ಬೇಲಿ ಸಾಲುಗಳು, ಕೋತಿಗಳಂತಿದ್ದ ನಮಗೆ ಆಶ್ರಯ ನೀಡುತ್ತಿದ್ದ ಮರಗಳು,ನಮ್ಮಿಂದ ಕಲ್ಲೇಟು ತಿಂದರು ಹುಣಸೇ ಮತ್ತು ಮಾವಿನ ಹಣ್ಣುಗಳನ್ನು ಕೊಟ್ಟ ಮರಗಳು, ಬಿಸಿಲಲ್ಲಿ ಬಳಲಿ ಬಾಯಾರಿದಾಗ ನೀರುಣಿಸುತಿದ್ದ ಬೋರುಗಳು, ನಾವಾಡುತ್ತಿದ್ದ ಕೆರೆ, ಆಟದ ಮೈದಾನ,ನಾವು ಕದ್ದು ತಿನ್ನುತಿದ್ದ ಸೀಬೇಕಾಯಿ ಹಣ್ಣಿನ ಗಿಡಗಳು, ಕತೆ ಹಾಗೂ ಸಿನಿಮಾ ಸ್ಟೋರಿ ಕೇಳಲು ಸೇರುತಿದ್ದ ಅಮ್ಮನ ಗುಡಿ,ಇಂದು ಇವೆಲ್ಲ ಮತ್ತೆ ನನ್ನನ್ನು ಮತ್ತೆ ಆ ಕಡೆ ಸೆಳೆಯುತ್ತಿವೆ.
           ಸಿರಿ,ರಾಮ,ರವಿ,ರಾಮಕೃಷ್ಣ ಮತ್ತು ಸಂತೋಷ್ ನಾವೆಲ್ಲ ಒಂದೇ ಶಾಲೆಯಲ್ಲಿ ಓದುತ್ತಿದ್ದವರು ಮತ್ತು ನಮ್ಮ ಪಕ್ಕದ ಮನೆಯವರು ಕೂಡ,ಬೇಸಿಗೆ ಬಂತು ಅಂದರೆ ಸಾಕು ನಮಗೆಲ್ಲ ಅದೇನೋ ಸಂತೋಷ ಮತ್ತು ಆನಂದ.ಆ ದಿನಗಳ ನಮ್ಮ ದಿನಚರಿಯೇ ಬೇರೆ ಮತ್ತು ವಿಚಿತ್ರ.ವಿಷನ್,ಕಮ್ಮಿಟ್ಮೆಂಟ್ಸ್ ,ಪ್ರಾಜೆಕ್ಟ್,ದುಡ್ಡು, ಮಧುವೆ !!! ಇವೇನೂ ತಲೆಯಲ್ಲಿ ಇಲ್ಲದ ಸ್ವಚ್ಛ ಮನಸುಗಳು ನಮ್ಮವು ಆಗ.ನಾವೆಲ್ಲಿ ಹೋದರು ಜೊತೆಗೆ ಹೋಗುತ್ತಿದ್ದೆವು,ಬರುತ್ತಿದ್ದೆವು,ಎಲ್ಲ ಕೆಲಸಗಳನ್ನು ಜೊತೆಗೆ ಮಾಡುತಿದ್ದೆವು, ನಿಜ ಹೇಳಬೇಕೆಂದ್ರೆ ನಾವೆಲ್ಲ ಗುಂಪಾಗಿಯೇ ಕೆರೆಯಗಲಕ್ಕೆ ಹೋಗುತಿದ್ದೆವು !!! ಬೇಸಿಗೆಯ ದಿನಗಳೆಂದರೆ ಸಾಮಾನ್ಯವಾಗಿ ನನ್ನ ಮೊದಲ ಕೆಲಸವೆಂದರೆ ಎದ್ದ ಕೂಡಲೇ ಮುಖ ತೊಳೆದು ಅಮ್ಮ ಕೊಟ್ಟ ಟೀ ಕುಡಿದ ಕೂಡಲೇ ಸಿರಿ ಹಾಗೂ ರಾಮು ಮನೆಗೆ ಹೋಗುತಿದ್ದೆ, ಕಾರಣ ಅಲ್ಲಿಯೂ ಟೀ ಸಿಗುತ್ತೆ , ಅದು ದೊಡ್ಡ ಕಪ್ಪಲ್ಲಿ ಅಂತ. ಇಷ್ಟಾದ ಮೇಲೆ ನಾವೆಲ್ಲ ಒಂದೆಡೆ ಸೇರಿ ನೇರ ಹೋಗುತಿದ್ದು ಸಾಮಾನ್ಯವಾಗಿ ಸಿರಿಯ ಹೊಲದ ಕಡೆಗೆ. ಊರಿನಿಂದ ಸ್ವಲ್ಪ ಹತ್ತಿರ ಮತ್ತು ಒಂದು ಮಾವಿನ ತೋಟವಿದ್ದ ಹೊಲ ಅದು. ಹೇರಳವಾಗಿ ದೊರೆಯುತಿದ್ದ ಮಾವಿನ ಹಣ್ಣುಗಳು,ಬಾರೆ ಮತ್ತು ಕಾರೆ ಹಣ್ಣುಗಳು ನಮ್ಮನ್ನು ಅಲ್ಲಿಗೆ ಬೆಳ್ಳಬೆಳಗ್ಗೆ ನಮ್ಮನು ಕೈ ಬೀಸಿ ಕರೆಯುತಿದ್ದವು.ಹಾವು,ಹುಳ ಉಪ್ಪಡಿಗಳಿಗೆ ಹೆದರದೇ ಒಂದು ರೀತಿಯ ವಿಚಿತ್ರರಾಗಿದ್ದ ನಾವು ಬೇಲಿ,ಪೊದೆ,ಮುಳ್ಳುಗಳೆನ್ನದೇ ಬರಿ ಕಾಲಲ್ಲೇ ಅಡ್ಡಾಡುತ್ತಿದ್ದ ನಾವು ಬೇಲಿ ಸಾಲುಗಳಲ್ಲಿ ಸಾಮಾನ್ಯವಾಗಿ ಇರುತಿದ್ದ ಬಾರೆ ಹಣ್ಣುಗಳಿಗಾಗಿ ಹೊಳನುಗ್ಗಿ ಹಣ್ಣು ಕೀಳುತಿದ್ದೆವು. ಮುಳ್ಳುಗಳು ತರಚಿದರು ಮತ್ತು ಚುಚ್ಚಿದರು ಗಮನ ಕೊಡದ ನಾವು ಗುಂಪಾಗಿ ಕುಳಿತು ಅವುಗಳ್ನ್ನು ಹಂಚಿ ತಿನ್ನುವುದನ್ನು ನೆನಸಿಕೊಂಡರೆ ಈಗಲೂ ಆನಂದವಾಗುತ್ತೆ ಮತ್ತು ಊರಿನ ಯೋಚನೆಗಳೇ ಇರುತ್ತಿರಲಿಲ್ಲ. ಜೇನುಗಳನ್ನು ಮುರಿದು ಅವುಗಳಿಂದ ಕಡಿಸಿಕೊಂಡದ್ದು ಉಂಟು. ಸ್ವಲ್ಪ ಬಿಸಿಲೇರುತಿದ್ದಂತೆ ನಾವೆಲ್ಲರೂ ಊರಿಗೆ ವಾಪಾಸಾಗಿ ಹೋಗುತಿದ್ದದ್ದು ಮನೆಗಳಿಗಲ್ಲ, ನೇರವಾಗಿ ನಮ್ಮೂರಿನ ಮಠದ ಹಿಂದೆ ಇದ್ದ ದೊಡ್ಡ ಕಲ್ಲು ಭಾವಿಗೆ ಅಥವಾ ನಮ್ಮೋರಿನ ದೊಡ್ಡ ಕೆರೆಗೆ, ಅವೇ ನಮಗೆ ದೊಡ್ಡ ಸ್ವಿಮ್ಮಿಂಗ್ ಪೂಲುಗಳು  !! ಅಲ್ಲಿ ಈಜಾಡಿದ ಮೇಲೆ ಹೊಟ್ಟೆ ಚುರುಗುಟ್ಟಿದ ಮೇಲೆಯೇ ನಮಗೆ ನಮ್ಮ ಮನೆಗಳ ನೆನಪು ಬರುತಿದ್ದದ್ದು. ಆಗ ಮನೆಗೆ ಹೋಗಿ ನೇರ ಊಟ ( ತಿಂಡಿಯ ಸಮಯ ಸಾಮಾನ್ಯವಾಗಿ ಮೀರಿರುತಿತ್ತು ಅಥವಾ ಹಳ್ಳಿಗಳಲ್ಲಿ ಸಾಮಾನ್ಯವಾಗಿ ತಿಂಡಿ ಮಾಡುತಿರಲಿಲ್ಲ) ಮಾಡಿ ತಕ್ಷಣ ಮತ್ತೆ ನಾವು ಮಾಡುತಿದ್ದ ಕೆಲ್ಸಾ ಮತ್ತೆಲ್ಲಿಗೆ ನಾವು ಹೋಗೋದು ಅಂತ ಗಾಡವಾದ ಯೋಚನೆ!!.ಅಷ್ಟೊತ್ತಿಗೆ ನಮಗೆ ಐಸ್ ಬಸಣ್ಣನ ಪೀಪೀ ಸದ್ದು ಕೇಳುತಿದ್ದಂತೆ ಕೆಂಪಾದ ನೀರ್ಐಸ್ ತಿನ್ನುವ ಬಯಕೆ ಆದರೆ ಅದು ದಿನವೂ ನೆರವೇರುತಿರಲಿಲ್ಲ. ಬರಿ ಅದನ್ನು ತಿನ್ನುವ ಜನರನ್ನು ನೋಡುತ್ತಾ ನಮ್ಮ ದಾಹ ತೀರಿಸಿಕೊಳ್ಳುತಿದ್ದೆವು !!

          ಹೀಗೆ ಹೇಳುತ್ತಾ ಹೋದರೆ ನಮ್ಮ ಬಾಲ್ಯದ ದಿನಗಳ ಬಗ್ಗೆ,ಆಡಿದ ಆಟಗಳ,ಮಾಡಿದ ಚೇಷ್ಟೆಗಳ,ತಿಂದ ಏಟುಗಳಿಗೆ ಕಾರಣಗಳು,ಶಾಲೆಯ ಅನುಭವಗಳ ಬಗ್ಗೆ ಹೇಳಲು ಪುಟಗಳನ್ನೇ ಬರೆಯಬೇಕಾಗುತ್ತೆ.ಇಲ್ಲಿಗೆ ಯಾಕೆ ನಿಲ್ಲಿಸಿದ್ದೇನೆ ಅಂದ್ರೆ ನನ್ನ ಸ್ನೇಹಿತ ಫೋನ್ ಮಾಡಿ ಸ್ವಲ್ಪ ಬರೆಯೋ ಕೊರೀಬೇಡ ಅಂತ ಹೇಳಿದ !! ಮತ್ತು ಲೇಖನಗಳು ಚಿಕ್ಕದಾಗಿದ್ದರೆ ಒಳ್ಳೆಯದು ಎಂಬ ಭಾವನೆ ನನ್ನದು ಕೂಡ.ಈ ಬ್ಲಾಗ್ ಓದಿದ ಮೇಲೆ ನಿಮ್ಮ ಚಿಕ್ಕಂದಿನ ನೆನಪುಗಳು ನಿಮಗೂ ಕೂಡ ಬಂದರೆ ಆಗ ನಿಮ್ಮ ಒಳ್ಳೆಯ ನೆನಪುಗಳನ್ನು ನೆನಪಿಸಿದ ಸ್ವಲ್ಪ ತೃಪ್ತಿ ನನಗೂಸಿಗುತ್ತೆ , ಏಕೆಂದರೆ ನೆನಪುಗಳಲ್ಲಿ ಬಾಲ್ಯದ ನೆನೆಪುಗಳು ಮಾತ್ರ ಸಂತೋಷ,ಮಜ,ಸ್ಪೂರ್ತಿ ನೀಡುವವು , ಬಿಟ್ಟರೆ ಮತ್ತೆ ಯಾವ ನೆನೆಪುಗಳು ನಮ್ಮನು ರೆಫ್ರೆಶ್ ಮಾಡೋಲ್ಲ !!! ನಿಮ್ಮನ್ನು ಕೂಡ ನಿಮ್ಮ ಹಳೆಯ ನೆನಪುಗಳ ಲೋಕಕ್ಕೆ ಕರೆದೊಯ್ಯುವ ಒಂದು ಸಣ್ಣ ಕೆಲಸ ಮತ್ತು ನನ್ನ ಅನುಭವಗಳ ಬಿಚ್ಚಿಡುವ ಒಂದು ಸಣ್ಣ ಲೇಕನವಿದು ..............

" ಮನುಷ್ಯನ ವಯಸ್ಸು ಏರುತ್ತಿದ್ದಂತೆ , ಹುಮ್ಮಸ್ಸೂ ಏರಬೇಕು. ನಮ್ಮ ಬಾಲ್ಯದಲ್ಲಿನ ಚಟುವಟಿಕೆ ಯುಳ್ಳ ಮನಸ್ಸು ಇಂದಿಗೂ ನಮ್ಮ ಸ್ವತ್ತು . ನಾವು ದಿನೇ ದಿನೇ ಎದುರಿಸುವ ಚಿಂತಾಗ್ರಸ್ಥ ಸಂಧರ್ಭಗಳಲ್ಲಿ 'ಅಯ್ಯೋ ನಾ ಸೋತೆ ' ಅನ್ನದೆ ಬಾಲ್ಯದ ಆ ಹುರುಪನ್ನು ಮರು ಉಪಯೊಗಿಸಿಕೊಲ್ಳುವುದು ನಮ್ಮ ಮೇಲಿದೆ " by Aswini BM 


ನಿಮಗಾಗಿ.......
ನಿರಂಜನ್





ಗುರುವಾರ, ಆಗಸ್ಟ್ 5, 2010

ಸ್ಪೂರ್ತಿ !!!


ಮಳೆಗಾಲದ ಆ ದಿನ ನಾ ಬೆಳೆಗ್ಗೇ ಎದ್ದು ಹೊರಗೆ ನೋಡಿದಾಕ್ಷಣ , ಇನ್ನೂ ಸ್ವಲ್ಪವತ್ತು ಕೂಡ ನಾ, ನಿದ್ದೆ ಮಾಡಿದ್ದರೆ ಇಷ್ಟೊಂದು ಸುಂದರವಾದ ಮುಂಜಾನೆಯನ್ನು ಕಳೆದುಕೊಳ್ಳುತಿದ್ದೇನಲ್ಲ ಎಂದೆನಿಸಿತು !!!!!

                ಆಹಾ ಹೊರಗೆ, ಇಷ್ಟೊಂದು ಸುಂದರವಾಗಿದ್ದ ವಾತಾವರಣ, ಭೂಮಿಗೆ ಎಲ್ಲಿ ನೋವಾಗುತ್ತೋ ಎಂದು ಮೃದುವಾಗಿ ಸುರಿಯುತ್ತಿರುವ ಆ ಜುಬ್ಬು ಮಳೆ ಹನಿಗಳು, ಮಳೆ ಹನಿಗಳನ್ನು ಬಾಚಿ ತಬ್ಬಲುಮೈಯೊಡ್ಡಿ ನಿಂತ ಹಸಿರು ಬಾಳೆಗಿಡದೆಲೆಗಳು, ಮಳೆ ಹನಿಗಳನ್ನು ತನ್ನೋಡಲಲ್ಲಿ ಹಿಡಿದಿಡಲು  ತವಕದಲಿ ನಿಂತಿದ್ದ  ಹಸಿರು ಗರಿಕೆ ಹುಲ್ಲು ಕಡ್ಡಿಗಳು,ಮಳೆಯ ಪೂರ್ಣಾನಂದವನ್ನು ಅನುಭವಿಸುತ್ತಾ ಇದ್ದ ಆ ಜೋಡಿ ಗುಬ್ಬಿಗಳು, ಸೂರ್ಯನನ್ನು ಮರೆಮಾಚಿದ  ಆ ಕಾರ್ಮೋಡಗಳು, ಮೋಡವನ್ನು ಛೇದಿಸಿ ಹೊರಗೆ ಬರಲು ಪ್ರಯಾಸಪಟ್ಟು ಸುಸ್ತಾದಂತೆ ಕಾಣುತಿದ್ದ ಸಪ್ಪೆ ಸೂರ್ಯ ರಷ್ಮಿಗಳು, ಅದೇ ಪ್ರಯತ್ನದಲ್ಲಿ ಸೂರ್ಯ ರಷ್ಮಿಗಳು ಸೋತು ಸುರಿಸಿದ ಬೆವರ ಹನಿಗಳೆ ಈ ಸುಂದರ ಮುಂಜಾವಿನ  ಮಳೆ ಎಂದೆನಿಸುತ್ತಿತ್ತು !! ಅಬ್ಬಾ ಒಟ್ಟಾರೆ  ಹೇಳುವುದಾದರೆ ಅದೊಂದು ಸಾಮಾನ್ಯ ದಿನವಾಗಿರಲಿಲ್ಲ. ನಾ ಸವಿಯಲು ನನಗೆ ಪ್ರಕೃತಿ ಕೊಟ್ಟ ಅದೊಂದು ಸುಂದರ ದಿನವೆಂದು ನನಗನಿಸುತ್ತಿತು !!!! 
                  ಅಷ್ಟರಲ್ಲಿ ಮನೆಯ ಒಳಗಿನಿಂದ ಅಮ್ಮ ಟೀ ಕುಡಿಯಲು ಕರೆದರು,ಒಲ್ಲದ ಮನಸಿನ್ನಿಂದ ಒಳಗೆ ಹೋಗಿ ಟೀ ಕುಡಿಯುತ್ತಿರುವಾಗ ಟೀವೀ ವಾರ್ತೆಯಲ್ಲೂ ರಾಜ್ಯದೆಲ್ಲೆಡೆ ಭಾರಿ ಮಳೆಯಾಗಿರುವ ಸುದ್ದಿ ಬರುತಿತ್ತು, ಎಂದಿನಂತೆ ಕಾವೇರಿ ನದಿಯನ್ನು ತೋರಿಸುತ್ತಾ ಇದ್ದರು. ನಮಗೆಲ್ಲ ಗೊತ್ತಿರುವ ಹಾಗೆ ನಾವು ಕರ್ನಾಟಕ ಯಾವುದೇ ಭಾಗದಲ್ಲಿದ್ದರು  ನಮ್ಮ ಕಾವೇರಿಯ ಮೇಲೆ ನಮಗೆ ಎಲ್ಲಿಲ್ಲದ ಅಭಿಮಾನ ಮತ್ತು ವ್ಯಾಮೋಹ ಅಲ್ಲವೇ , ಅದಕ್ಕಾಗಿ ನಾನು ಅದರ ವಿಷಯವನ್ನು ಗಮನವಿಟ್ಟು ನೋಡಿದೆ. ಸುಂದರವಾದ K.R.S ಡ್ಯಾಮ್, ಅಲ್ಲಿ  ನಿಂತಿರುವ ಆ ನೀರು, ಅದು ಬರಿ ನದಿಯಾಗಿ ಕಾಣಲಿಲ್ಲ ನನಗೆ ಅದು ಸಾಗರದಂತಿತ್ತು. ಅದನ್ನು ನೋಡಿದ ತಕ್ಷಣ ನನಗೆ ನೆನಪಾಗಿದ್ದು ಮತ್ತೊಂದು ಸಾಗರ, ಅದು ಬಾರಿ ಸಾಗರವಲ್ಲ ಜ್ಞಾನ ಸಾಗರ,ಕಾಯಕ ಯೋಗಿ, ಮತ್ತ್ಯಾರೂ ಅಲ್ಲ ಅದರ ನಿರ್ಮಾತೃ Sir M.V.  ನಾವೆಲ್ಲ ಸದಾ ಅವರನ್ನು ನೆನೆಪಿಸಿಕೊಂಡರು ಕೂಡ ನಾವು  ಈ ದಿನ ಅವರ ಸಾಧನೆಯನ್ನು ಸ್ಮರಿಸಲೇಬೇಕು . Sir M.Vಯವರು ನಮ್ಮಂತೆ ಹೊಟ್ಟೆಪಾಡಿಗೆ,ಹಣಗಳಿಸಲು, ಎಂಜಿನೀರ್ ಆದವರಲ್ಲ. ದೇಶದ ಹಿತಕ್ಕಾಗಿ ,ನಮ್ಮೆಲ್ಲರ ಒಳಿತಿಗಾಗಿ,ಸಂಪನ್ಮೂಲಗಳ ಸಂಪೂರ್ಣ ಬಳಕೆಗಾಗಿ, ಬಾಲ್ಯದಲ್ಲಿ ಎಷ್ಟೇ ಕಷ್ಟ ಇದ್ದರು, ದೇವರೇ ಅವರಿಗೆ ಆ ಶಕ್ತಿ ಕೊಟ್ಟು ಅವರನ್ನು ಎಂಜಿನೀರ್ ಮಾಡಿದ್ದ ಅನ್ನಿಸುತ್ತೆ. ಅದೇ ರೀತಿ ಅವರು ಕೂಡ ದೇಶದ ಕೆಲಸಗಳನ್ನು ವೈಯಕ್ತಿಕ ಕೆಲಸಗಳಷ್ಟೇ ಶ್ರದ್ದೆ ಮತ್ತು ಬುದ್ದಿವಂತಿಕೆಯಿಂದ ಮಾಡಿದರು. ಅವರು ಓದಿದ್ದು ಸಿವಿಲ್ ಇಂಜಿನಿಯರಿಂಗ್ ಆದರೂ ಅವರು ತಮ್ಮ ಕಾರ್ಯ ಕ್ಷೇತ್ರವನ್ನು ಬರಿ ಕಟ್ಟಡಗಳ ನಿರ್ಮಾಣಕ್ಕೆ ಮಾತ್ರ ಸೀಮಿತಗೊಳಿಸದೇ, ಬ್ಯಾಂಕಿಂಗ್,ಟೆಕ್ಸ್‌ಟೈಲ್,ಇನ್‌ಫ್ರಾಸ್ಟ್ರಕ್ಚರ್ ಮತ್ತಿತರ ಕ್ಷೇತ್ರಗಳಿಗೂ ವಿಸ್ತರಿಸುತ್ತಾರೆ. ಇವೆಲ್ಲವಕ್ಕೂ ಸಾಕ್ಷಿ ಎಂಬಂತೆ ಇಂದು ಬೃಹದಾಕಾರವಾಗಿ ಬೆಳೆದು ನಿಂತಿರುವ ಭದ್ರಾವತಿ ಉಕ್ಕಿನ ಕಾರ್ಖಾನೆ, ಮಹಾತ್ಮ ಗಾಂಧಿ ಪವರ್ ಹೌಸ್,ಜೋಗ್,  KRS  ನಂತಹ ಡ್ಯಾಮುಗಳು ,ಬ್ಯಾಂಕುಗಳು ಮತ್ತು ಇನ್ನೂ ಹತ್ತು ಹಲವು !!!  ಅವರ ದೂರದೃಷ್ಟಿ ಹೇಗಿತ್ತೆಂದರೆ 1930 ರಲ್ಲೇ ಅವರು ಇಂಗ್ಲೆಂಡ್ ಇಂದ ಭಾರತಕ್ಕೆ ಅನೇಕ ಬಗೆಯ ಟೆಕ್ಸ್‌ಟೈಲ್ ( ಜವಳಿ ) ಯಂತ್ರಗಳನ್ನು   ತರಿಸುತ್ತಾರೆ , ಇದು ಬಟ್ಟೆ ಉದ್ಯಮದ ಬೆಳವಣಿಗೆಗೆ ಅಥವಾ ಕ್ರಾಂತಿಗೆ ನಾಂದಿಯಾಗುತ್ತದೆ. ವೈಯಕ್ತಿಕವಾಗಿ  ಕೂಡ ಅವರು ತುಂಬಾ ಶಿಸ್ತು ಬದ್ಧ ಹಾಗೂ ಸದಾ ಚಟುವಟಿಕೆಯುಕ್ತ  ಜೀವನವನ್ನು ನೆಡೆಸುತ್ತಾರೆ. ಇಂತವರ ಜೀವನ ನಮ್ಮೆಲರಿಗೂ ಆದರ್ಶವಾಗಬೇಕಿದೆ. ಇವರು ಹುಟ್ಟಿದ ನಾಡಲ್ಲಿ ನಾವು ಹುಟ್ಟಿದ್ದೇವೆ ಮತ್ತೆ ಅವರ ಯೋಜನೆಗಳ ಲಾಭ ಪಡೆಯುತ್ತಿರುವುವ ನಾವೆಲ್ಲರೂ ತುಂಬಾ ಭಾಗ್ಯಶಾಲಿಗಳು. ಅವರು  ಮಾಡಿದಷ್ಟು ಕೆಲಸಗಳನ್ನು ಅಥವಾ ಆ ರೀತಿಯ ಜೀವನವನ್ನು ನಮ್ಮಿಂದ ಮಾಡಲು ಹಾಗೂ ನೆಡೆಸಲು ಆಗುವಿದಿಲ್ಲವೆಂಬುದು ನಿಜ. ಅವರ ಜೀವನವನ್ನು ಬರಿ ಓದಿ ತಿಳಿಡಿಕೊಳ್ಳುವುದರ ಜೊತೆಗೆ ಅಥವಾ ಸಾಧನೆಗಳನ್ನು ಹಾಡಿ ಹೊಗಳುವುದರ ಜೊತೆಗೆ, ಅವರ ಕೆಲವೇ ಕೆಲವು ಅಂಶಗಳನ್ನು ನಮ್ಮ ಜೀವನಕ್ಕೆ ಅಳವಡಿಸಿಕೊಂಡರೆ ನಾವು ಉತ್ತಮ ಮತ್ತು ಸಾರ್ಥಕ ಜೀವನವನ್ನು ನೆಡೆಸಬಹುದು ಅಂತ ನನ್ನ ಅನಿಸಿಕೆ.
                Sir M.V ಅವರ  ಬಗ್ಗೆ ಯೋಚಿಸುತ್ತಾ  ಈ ಬ್ಲಾಗನ್ನು  ಉಪಾಂತ್ಯದವರೆಗೆ  ಬರೆದು ಮುಗಿಸುವ ಹೊತ್ತಿಗೆ ಅಮ್ಮ ಬಿಸಿ ಬಿಸಿ ತಿಂಡಿ ಮಾಡಿ ಕರೆದರು, ಅದು ಆರುವ ಮೊದಲೇ ಸ್ವಾಹ ಮಾಡಿ, ಅಂದಿನ ಅದ್ಭುತ ವಾತಾವರಣವನ್ನು ಸವಿಯಲು ನಾ ಕೊಡೆ ಹಿಡಿದು ಹೊರಗೆ ಹೋಗಿ , ಪ್ರಕೃತಿಯಲ್ಲಿ ಒಂದಾದೆ !!!!!

ನಿಮಗಾಗಿ,
ನಿರಂಜನ ಮೂರ್ತಿ ಏಚ್ ಓ 

ಗುರುವಾರ, ಜುಲೈ 29, 2010

Poly-tical Jaatre !!!!

ಸ್ನೇಹಿತರೆ ,

ಈ ದಿನ ನನಗೆ ಯಾಕೋ ತುಂಬಾ ಗಾಂಧೀಜಿಯವರು ನೆನಪು ಆಗುತ್ತ ಇದ್ದಾರೆ, ಅವರು ಇಲ್ಲಿ ಇದ್ದಿದ್ದರೆ ಅವರ ಪರೀಸ್ತಿತಿ ಹೇಗಿರುತೀತ್ತೋ ಎನ್ನುವ ಪ್ರೆಶ್ನೆ ಕಾಡತೊಡಗಿದೆ, ಅದಕ್ಕೆ ಪ್ರಮುಕ ಕಾರಣವೆಂದರೆ, ನಮ್ಮ ರಾಜಕೀಯ ನಾಯಕರ ನಮ್ಮ ( ಅವರ ) ಒಳಿತಿಗಾಗಿ ಮಾಡುತ್ತಿರುವ ಸೇಡಿನ ಬೆಂಗಳೂರು-ಬಳ್ಳಾರಿ ಪಾದಯಾತ್ರೆ ! ! ! ಅದು ಪಾದಯಾತ್ರೆಯೋ ಅಥವಾ ಮೋಜಿನ ಜಾತ್ರೆಯೊ ! ! !, ಮಾಡುವವರಿಗೆ ಗೊತ್ತು ಮತ್ತು ನೋಡಿದವರಿಗೆ ಗೊತ್ತು !!. ಗಾಂಧೀಜಿಯವರು ಈಗ ನಮ್ಮೊಟ್ಟಿಗೆ ಇದ್ದು, ಟೀವೀ9 ನೋಡಿದ್ದರೆ ಅವರಿಗೆ ಎನಾಗುತ್ತಿತ್ತೊ,ಎಷ್ಟು ನೊಂದಿರುತ್ತಿದ್ದರೋ,ನನಗೆ ಗೊತ್ತಿಲ ಮತ್ತು ಊಯಿಸಲು ಸಾದ್ಯವಿಲ್ಲ . ಈಗಿನ ನಮ್ಮ ರಾಜಕೀಯ ನಾಯಕರ ಪಾದಯಾತ್ರೆ ನಿಜವಾಗಿಯೂ ಒಂದು ದೊಂಬರಾಟದಂತೆ ಇದೆ ಹಾಗೂ ಏಗಾಗಲೇ ಒಬ್ಬ ಮನುಷ್ಯನ ಜೀವವನ್ನು ತೆಗೆದುಕೊಂಡಿದೆ. ಮಹಾತ್ಮ ಗಾಂಧಿಯವರು 1930 ರಲ್ಲಿ ಅಹಮದಾಬಾದ್ನಿಂದ ದಂಡಿಯವರೆಗೆ ಉಪ್ಪಿನ ಸತ್ಯಾಗ್ರಾದ ಬಾಗವಾಗಿ ಪಾದಯಾತ್ರೆಯನ್ನು ಮಾಡಿದ್ದರು.ಆಗ ಅವರು ದಾರಿಯಲ್ಲಿ ಕಾಲ್ನೆಡಿಗೆಯಲ್ಲಿ ಸಾಗುವಾಗ ಆ ಆ ಭಾಗದ ಜನರ ಕಷ್ಟ ಮತ್ತು ಜೀವನದ ಕೊರತೆಗಳನ್ನು ಮತ್ತು ಸಮಸ್ಯೆಗಳನ್ನು ಅರಿತು , ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳಲು ಪ್ರಯತ್ನ ನೆಡೆಸಿದ್ದರು, ಅದಕ್ಕೆ ವಿರೋದವೆಂಬಂತೆ ಈ ದಿನ ನಮ್ಮ ಕೆಲವು ರಾಜಕೀಯ ಮುಖಂಡರು ಬೆಂಗಳೂರಿನಿಂದ-ಬಳ್ಳಾರಿಯವರೆಗೆ ಪಾದಯಾತ್ರೆ ಮಾಡುತ್ತಾ, ಅದರ ಜೊತೆಗೆ ಕುಣಿದು ಕುಪ್ಪಳಿಸುತ್ತಾ ,ವಿವಿಧ ರೀತಿಯ ಮನೋರಂಜನಾ ಕಾರ್ಯಕ್ರಮಗಳನ್ನು ನೆಡೆಸುತ್ತಾ , ಬಗೆ ಬಗೆಯ ಭಕ್ಷ್ಯಗಳನ್ನು ಸವಿಯುತ್ತಾ, ಕೂಗಾಟ ಮತ್ತು ಚೀರಾಟಗಳೊಂದಿಗೆ ಪಾದಾಯಾತ್ರೆಯ ಉದ್ದೇಶವನ್ನು ಮರೆತಿದ್ದಾರೆ. ಅವರೊಟ್ಟಿಗೆ ಅವರ ಅನುಯಾಯಿಗಳು ಕೂಡ ಆಟೋಟಗಳಲ್ಲಿ ಬಾಗವಹಿಸಿ ಅದೇನೋ ಒಂದು ರೀತಿಯ ಮಧುವೆಯ ದಿಬ್ಬನದಂತೆ ಸಾಗಿದೆ ಈ ಸೇಡಿನ ಪಾದಾಯಾತ್ರೆ. ಅಲ್ಲಿ ಬಳ್ಳಾರಿಯಲ್ಲೊಬ್ಬ ಅತ್ಯಂತ ಪ್ರಭಾವಿ ನಾಯಕ ತನ್ನ ತಲೆ ಬೋಳಿಸಿಕೊಂಡು ಪ್ರೆಸ್ ಮೀಟ್ ಕೂಡ ಮಾಡಿದ್ದಾರೆ ( ನಿಜ ಅಂದರೆ ಅವರಿಗೆ ತಲೆ ಕೂದಲೆ ಇರಲಿಲ್ಲ ! ! ! ) . ಅಲ್ಲಿಗೆ ಅನೇಕ ಪತ್ರಕರ್ತರು ಕೂಡ ಹೋಗಿ ಅದರ ಬಗ್ಗೇನೂ ಲೇಖನಗಳನ್ನು ತಮ್ಮ ಪತ್ರಿಕೆಗಳ ಮೊದಲ ಪುಟದಲ್ಲಿ ಬರೆದಿರುವುದು ನಗೆಪಾಟಲಾಗೀಡು ಮಾಡಿದೆ. ಸ್ವಾಮಿ ನಿಮ್ಮ ತಲೆ ಕೂದಲನ್ನು ತಗೆಯುವುದರಿಂದ ಅಲ್ಲಿಯ ಸಮಸ್ಯೆ ಪರಿಹಾರವಾಗುವುದಿಲ್ಲ ದೇಶದ ಸಂಪನ್ಮೂಲಗಳನ್ನು ರಕ್ಷಿಸುವುದರಿಂದ,ಜನರ ಹಿತ ಕಾಪಾಡುವುದರಿಂದ ನೀವು ನಮಗೆ ಒಳ್ಳೆಯದನ್ನು ಮಾಡಬಹುದೇ ವಿನಹ ಇದ್ದ ಎರಡು ಕೂದಲನ್ನು ತಗೆದರೆ ಏನು ಆಗದು . ಇದರ ಬದಲು ನಾಯಕರು, ಜನರ ಸಮಸ್ಯೆಗಳ ಬಗ್ಗೆ ತಿಳಿದುಕೊಂಡು ಪರಿಹರಿಸಿದ್ದರೆ, ನಮ್ಮ ನಾಡಿನ ಪರಿಸ್ತಿತಿ ಹೀಗೆ ಇರುತ್ತಿರಲಿಲ್ಲ. ಇನ್ನಾದರೂ ನಮ್ಮ ನಾಯಕರು ಮತ್ತೆ ನಾವು ಬುಡ್ಡಿ ಕಲಿಯಬೇಕಾಗಿದೆ.ಪತ್ರಿಕೆಗಳು ಹಾಗೂ ಮಾದ್ಯಮಗಳು ಇಂತಹ ದೊಂಬರಾಟಗಳಿಗೆ ಹೆಚ್ಚಿನ ಮಹತ್ವಕೊಡದೆ, ನಿಜವಾದ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಾಬೇಕಾಗಿದೆ. We should understand this and have to be carefull in elections !!!!!

ನಿಮಗಾಗಿ,
ನಿರಂಜನ ಮೂರ್ತಿ ಏಚ್ . ಓ