ಮರೆತೆವಾ ನಾವೆಲ್ಲರು.......
ಅದೊಂದು ರಜ ದಿನ , ಬೆಳಿಗ್ಗೆ ಜಲ್ದಿ ಎದ್ದು ಬೇಸಗೆಯ ಸೂರ್ಯನ ಎಳೆ ಬಿಸಿಲಿನಲ್ಲಿ ಒಂದು ಸಣ್ಣ ವಾಕ್ ಹೊರಟಿದ್ದೆ. ಎಲ್ಲರೂ ಇಷ್ಟ ಪಡುವಂತೆಯೇ ನಾನು ಕೂಡ ಈ ಹಸಿರು ಗಿಡ-ಮರ, ಹಕ್ಕಿ-ಪಕ್ಷಿಗಳ ಚಿಲಿ -ಪಿಲಿ ಜಾಸ್ತಿ ಇರುವ, ನಾಯಿಗಳು ಹಾಗು ಜನಸಂದಣಿ ಕಡಿಮೆ ಇರುವ ದಾರಿಗಳನ್ನೇ ಇಷ್ಟ ಪಡ್ತೇನೆ ಹಾಗು ಅಂತಹ ಜಾಗಗಳಲ್ಲಿ ಸದಾ ಇರಲು ಕೂಡ ಬಯಸುತ್ತೇನೆ. ಅದೇ ತರ ಆ ದಿನ ಕೂಡ ಅಂತಹ ಒಂದು ದಾರಿಯನ್ನೇ ಆಯ್ಕೆ ಮಾಡಿಕೊಂಡಿದ್ದೆ ವಾಕ್ ಮಾಡಲು.
ನಿಜಕ್ಕೂ ಅದು ಒಂದು ಪಕ್ಕ ರೆಸಿಡೆನ್ ಶಿಯಲ್ ಪ್ರದೇಶ ಆದರೂ ಕೂಡ ಸಕತ್ ಡಿಫರೆಂಟ್ ಆಗಿ ಇತ್ತು. ಆ ರಸ್ತೆಯ ಇಕ್ಕೆಲಗಳಲ್ಲೂ ಸುಂದರ ಮನೆಗಳು , ಮನೆಗಳು ಸ್ವಲ್ಪ ಹಳೆಯವಾಗಿದ್ದರೂ, ಸುಂದರವಾಗೇ ಇದ್ದವು. ಒಂದು ಕ್ಷಣ ನನಗೆ ಏನು ಇಂತಹ ಬೆಂಗಳೂರಿನಲ್ಲಿ, ಅದು ಈ ಪರಿಯ ಬೇಸಗೆಯ ಕಾಲದಲ್ಲೂ ಈ ರೀತಿಯ ವಾತಾವರಣ ?? . ನಿಜವಾಗಿಯೂ ಸ್ನೇಹಿತರೆ ಸೂರ್ಯನ ಬಿಸಿಲು ಎಲ್ಲಿ ರಸ್ತೆಗೆ ಬಿದ್ದು ಬಿಡುತ್ತೋ ಅಂತ ರಸ್ತೆಯ ಬದಿಯಲಿದ್ದ ಆ ಬೃಹದಾಕಾರದ ಮರಗಳು ತಾವೇ ಬಿಸಿಲೀರಿ ರಸ್ತೆಗೆ ನೆರಳಾಸಿದ್ದವು. ಕೋಗಿಲೆ ಕೂಗು ಮಾವಿನ ಮರಗಳಿಂದ ನನ್ನ ಕಿವಿಗೆ ಕೇಳಿದರೆ, ಸಂಪಿಗೆಯ ಸುವಾಸನೆ ಗಗನ ಚುಂಬಿಸುತ್ತಿದ್ದ ಆ ಸಂಪಿಗೆ ಮರದಿಂದ ನನ್ನ ಮೂಗಿಗೆ ಬಡಿಯುತ್ತಿತ್ತು. ರಸ್ತೆಗೆ ಬಿದ್ದ ಗಸಗಸೆ ಮರದ ಹಣ್ಣುಗಳ ಆ ವಾಸನೆಯಂತು ಬಾಯಲ್ಲಿ ನೀರೂರಿಸುತಿತ್ತು , ಹಕ್ಕಿ ಪಕ್ಷಿಗಳು ಆ ಮರಗಳಲ್ಲಿ ಕಾಣದಂತೆ ಅಡಗಿ ಹಾಡಿದರೂ ಅವುಗಳ ಹಾಡು ಮಾತ್ರ ನನ್ನ ಕಿವಿಗೆ ಕೇಳಿಸುತ್ತಿತ್ತು. ಕಾಯಿಡಿದ ಮಾವಿನ ಮರದ ಮೇಲೊಂದು ಮಂಗನ ಕುಟುಂಬವು ಮಾವಿನ ಕಾಯಿಯನ್ನು ತಿನ್ನುವ ದೃಶ್ಯವಂತೂ ಸೊಗಸಾಗಿತ್ತು. ಮನೆಯ ಮುಂದೆ ಇರುವ ಸ್ವಲ್ಪ ಜಾಗದಲ್ಲೇ ಅಲ್ಲಿಯ ಜನರು ಹೂವು ಹಣ್ಣುಗಳ ಗಿಡ ಸಾಕಿಕೊಂಡಿದ್ದರು. ಪೇರಲ, ಸಪೋಟ ,ಗಸಗಸೆ, ದಾಳಿಂಬೆ ಹಣ್ಣಿನ ಗಿಡಗಳಾದರೆ, ಮಲ್ಲಿಗೆ ಬಳ್ಳಿಗಳು , ದಾಸವಾಳ , ಕಣಗಿಲೆ ಹಾಗೆ ಇನ್ನು ಹಲವು ಹೂವಿನ ಗಿಡ ಬಳ್ಳಿಗಳಿದ್ದವು. ದೊಡ್ಡ ಪೊದೆಗಳ ತರ ಇದ್ದ ಹೂವು ಗಿಡ ಬಳ್ಳಿಗಳು ಸಣ್ಣ ಸಣ್ಣ ಪಕ್ಷಿಗಳಾದ ಗುಬ್ಬಿಗಳು,ಹಮ್ಮಿಂಗ್ ಬರ್ಡ್ ಗಳಿಗೆ ಆವಾಸ ಕಲ್ಪಿಸಿದ್ದವು.ಆದಿ ಬೀದಿಗಳೆಲ್ಲ, ಊರು ಕೇರಿಗಳೆಲ್ಲ, ಸಂಪೂರ್ಣ ಪ್ರಪಂಚವೆಲ್ಲ ಹೀಗೆಯೇ ಹಚ್ಚ ಹಸುರಾಗಿದ್ದರೆ , ಹಕ್ಕಿ-ಪಕ್ಕಿಗಳಿಂದ ತುಂಬಿದ್ದರೆ ಅದೆಷ್ಟು ಚಂದ ಅಂತ ಅಂದು ಕೊಂಡೆ .
ಹಾಗೆ ಸವಿಯುತ್ತ ಮುಂದೆ ಸಾಗಿದ ನಾನು ಅಲ್ಲಿಯೇ ಮರಗಳ ನೆರಳಲ್ಲಿ ಆಡುತಿದ್ದ ಚಿಕ್ಕ ಮಕ್ಕಳ ಗುಂಪನ್ನು ಮಾತಾಡಿಸಿ, ಇವರೆಲ್ಲ ಇಂತಹ ವಾತಾವರಣದಲ್ಲಿ ಇರುವರಲ್ಲ ಅದೆಷ್ಟು ಅದೃಷ್ಟವಂತರು ಅಂತ ಮನಸ್ಸಿನಲ್ಲೇ ಅಂದುಕೊಂಡೆ. ಇದೆಲ್ಲವೂ ನಮ್ಮ ಪ್ರದೇಶಗಳ ಒಂದು ಮುಖವಷ್ಟೇ. ಇನ್ನೊಂದು ಮುಖದ ಬಗ್ಗೆಯೂ ನಾನು ಹೇಳಲೇಬೇಕು. ಹೀಗೆ ಮುಂದೆ ಬಂದ ನಾನು ಅಲ್ಲಿಯೇ ಇದ್ದ ನಮ್ಮ ಪ್ರದೇಶದಲ್ಲಿ BBMP ನೋಡಿಕೊಳ್ಳುವ ಒಂದು ಉದ್ಯಾನವನವನ್ನು ಹೊಕ್ಕು , ಸ್ವಲ್ಪ ಹೊತ್ತು ಸುತ್ತಾಡಿದೆ. ಆ ಉದ್ಯಾನವನವೂ ಮರಗಿಡ, ಹೂ ಬಳ್ಳಿಗಳಿಂದ ಅದ್ಬುತವಾಗಿದೆ. ಅಲ್ಲಿ ಜನಸಂದಣಿ ಜಾಸ್ತಿ ಇರುವ ಕಾರಣವೇನೋ ಹಕ್ಕಿ ಪಕ್ಷಿಗಳು ಅಷ್ಟೊಂದು ಇಲ್ಲ . ಆದರೂ ನೋಡಲು ತುಂಬಾ ಹಸಿರಾಗಿದ್ದು ವಿಶಾಲವಾದ ಜಾಗ. ಎಲ್ಲಿ ನೋಡಿದರು ಅಲ್ಲಿ ಹಸಿರು, ನೆಲ ಕಾಣದಂತೆ ಹುಲ್ಲು ಬೆಳಸಿ, ದಿನವು ಅದಕ್ಕೆ ನೀರುಣಿಸಿ BBMP ಅದರ ಅಬಿವೃದ್ದಿ ಮಾಡುತ್ತಿದೆ. ಆ ಉದ್ಯಾನವನದಲ್ಲಿ , ಹಸಿರು ಹುಲ್ಲಿದೆ, ಮರಗಿಡಗಳ ನೆರಳಿದೆ, ಬಹಾಳೋಷ್ಟು ನೀರಿದೆ ಆದರೆ ಉದ್ಯಾನವನಕ್ಕೊಂದು ದೊಡ್ಡ ತಂತಿ ಬೇಲಿಯೂ ಇದೆ. ಮನುಷ್ಯ ಪಕ್ಷಿಗಳಿಗೆ ಬಿಟ್ಟರೆ ಎಲ್ಲಿ ಯಾರಿಗೂ ಪ್ರವೇಶವಿಲ್ಲ. ಬೇಸಗೆಯ ದಿನವಾದರಿಂದ ಸೂರ್ಯ ಅಷ್ಟರಲ್ಲೇ ಸಾಕೊಷ್ಟು ಮೇಲೇರಿ ಬಂದಿದ್ದ ಪ್ರಕರವಾದ ಬಿಸಿಲನ್ನು ಕೂಡ ಚೆಲ್ಲಿದ್ದ. ಅದೇ ಸಮಯದಲ್ಲಿ ಆ ಬಿಸಿಲಿಗೆ ದಣಿದಂತೆ ಕಾಣುತಿದ್ದ ೩ ಹಸುಗಳ ಗುಂಪೊಂದು ಅಲ್ಲಿ ಕಂಡಿತು. ಅಲ್ಲಿ ಹುಲ್ಲಿಗೆ ನೀರು ಹಾಯಿಸುತ್ತಿರುವುದು ಅವುಗಳಿಗೆ ಕಾಣುತ್ತಿವೆ , ಹಸಿರು ಹುಲ್ಲು ಕೂಡ ಅಲ್ಲಿದೆ ಆದರೆ ಅದೆಲ್ಲ ಆ ಹಸುಗಳಿಗೆ ಸಿಗುತ್ತಿಲ್ಲ. ಅವು ನೋಡುತ್ತಲೇ ಇವೆ ಹೊರಗಡೆ ಇಂದ. ಅವೆಷ್ಟು ಬಾಯಾರಿದ್ದವೋ ಅದೆಷ್ಟು ಹಸಿದಿದ್ದವೋ.???

ಸ್ನೇಹಿತರೆ, ನಾವೆಷ್ಟೇ ಮುಂದುವರಿದರೂ, ಎಷ್ಟೇ ದುಡಿದರೂ, ಪ್ರಾಣಿ ಪಕ್ಷಿಗಳಿಲ್ಲದ, ಮರ-ಗಿಡ, ಬಳ್ಳಿಗಳಿಲ್ಲದ, ಹಕ್ಕಿ ಪಕ್ಕಿಗಳ ಕೂಗಿಲ್ಲದ ನಮ್ಮ ಬಾಳು ನಿಜವಾಗಿಯೂ ಬರಡು, ಅಂತಹ ಆ ಜೀವನ ಅಸ್ತಿ ಇಲ್ಲದ ದೇಹದಂತೆ. ನಮ್ಮ ಬಳಿ ಅದೆಷ್ಟೇ ದುಡ್ಡು ಇದ್ದರು, ಎಂತಹ ಮನೆ ಇದ್ದರು, ಮನೆಯ ಸುತ್ತ ಹಸಿರು ಬಳ್ಳಿ, ಕುಡಿಯಲು ನೀರು ಇಲ್ಲ ಅಂದರೆ ಅದು ನಮಗೆ ಬದುಕಲು ಯೋಗ್ಯವೇ. ಹಾಗಾಗಿ ನಾನು ವರ್ಷಕ್ಕೆ ಒಂದಾದರು ಗಿಡ ನೆಡುವ ಪ್ರತಿಜ್ಞೆ ಮಾಡಿದ್ದೇನೆ ಅದು ಎಲ್ಲಾದರೂ ಸರಿಯೇ, ಯಾವ ಗಿಡವಾದರು ಸರಿಯೇ. ನಾನು ಗಿಡ ನೆಡಲೇ ಬೇಕು, ನನ್ನ ಮುಂದಿನ ಪೀಳಿಗೆಯು ನನಗೆ ಶಾಪ ಹಾಕದಿರುವಂತೆ ನಾನು ನಡೆದುಕೊಳ್ಳಬೇಕು. ನನ್ನ ಮುಂದಿನ ಜನಾಗಂಗಕ್ಕೆ ಹಾಗು ನನ್ನ ಮುಂದಿನ ಜೀವನದ ಒಳಿತಿಗಾಗಿ ಕೊನೆ ಪಕ್ಷ ವರ್ಷಕ್ಕೆ ಒಂದಾದರು ಒಳ್ಳೆಯ ಗಿಡ ನೆಡಬೇಕು. ನಾಲ್ಕು ಜನರಿಗೆ ಪ್ರಕೃತಿಯ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ತೀರ್ಮಾನಿಸಿದ್ದೇನೆ. ನೀವು ಕೂಡ ಯೋಚಿಸಿ, ಚಿಂತಿಸಿ ನಮ್ಮ ಹಿರಿಯರು ನಮಗೆ ಕೊಟ್ಟ ಈ ವಾತಾವರಣವನ್ನು ನಾವು ಒಳ್ಳೆಯ ರೀತಿಯಲ್ಲೇ ನಮ್ಮ ಮುಂದಿನವರಿಗೆ ಕೊಡಲು ನಿರ್ಧರಿಸಿ.
** ಸದ್ಯಕ್ಕೆ ನಮ್ಮ ಮನೆಗಳ ಮುಂದಿನ ಜಾಗಗಳಲ್ಲಿ, ಮಹಡಿಗಳ ಮೇಲೆ ಸ್ವಲ್ಪ ನೀರನ್ನು ನಮ್ಮ ಪಕ್ಷಿಗಳಿಗೆ ಬೇಸಗೆಯಲ್ಲಿ ಕುಡಿಯಲು ಇಡಬೇಕು.
** ಚಿಕ್ಕ ಪುಟ್ಟ ಗಿಡ ಬಳ್ಳಿಗಳನ್ನು ಸಾದ್ಯವಾದರೆ ನಮ್ಮ ಮನೆಯಂಗಳಲ್ಲಿ, ಕುಂಡಗಳಲ್ಲಿ ಬೆಳೆಸಬೇಕು.
** ವರ್ಷಕ್ಕೆ ಒಂದಾದರು ನಮ್ಮ ಕೈಯಿಂದ ಗಿಡ ನೆಡಲೇಬೇಕು.
** ಆದೊಷ್ಟು ಮಕ್ಕಳಲ್ಲಿ ಪ್ರಕೃತಿಯ ಬಗ್ಗೆ, ಮರ ಗಿಡ, ಹಕ್ಕಿ ಪಕ್ಷಿಗಳ ಬಗ್ಗೆ ಆಸಕ್ತಿ, ಪ್ರೀತಿ ಹಾಗು ಜಾಗೃತಿ ಮೂಡುವಂತೆ ಮಾಡಬೇಕು.
** ಚಿಕ್ಕ ಪುಟ್ಟ ಗಿಡ ಬಳ್ಳಿಗಳನ್ನು ಸಾದ್ಯವಾದರೆ ನಮ್ಮ ಮನೆಯಂಗಳಲ್ಲಿ, ಕುಂಡಗಳಲ್ಲಿ ಬೆಳೆಸಬೇಕು.
** ವರ್ಷಕ್ಕೆ ಒಂದಾದರು ನಮ್ಮ ಕೈಯಿಂದ ಗಿಡ ನೆಡಲೇಬೇಕು.
** ಆದೊಷ್ಟು ಮಕ್ಕಳಲ್ಲಿ ಪ್ರಕೃತಿಯ ಬಗ್ಗೆ, ಮರ ಗಿಡ, ಹಕ್ಕಿ ಪಕ್ಷಿಗಳ ಬಗ್ಗೆ ಆಸಕ್ತಿ, ಪ್ರೀತಿ ಹಾಗು ಜಾಗೃತಿ ಮೂಡುವಂತೆ ಮಾಡಬೇಕು.
ನಿಮಗಾಗಿ
ನಿರಂಜನ್
Nice blog. Keep up the good work ;-)
ಪ್ರತ್ಯುತ್ತರಅಳಿಸಿGood message... :-)
ಪ್ರತ್ಯುತ್ತರಅಳಿಸಿVery nice message ..hope all will understand this and make our world more beautiful..good article..keep writing..
ಪ್ರತ್ಯುತ್ತರಅಳಿಸಿ