" ಅವಳ Guest appearance....."
ರವಿವಾರವನ್ನು ಸಂಪೂರ್ಣವಾಗಿ ಸವಿದು ಸೋಮವಾರ ಆಫೀಸ್ ಗೆ ಹೋಗಬೇಕೆಂದರೆ ಬಹುಪಾಲು ನಾರ್ಮಲ್ ಮನಸ್ಸಿನ ಜನರಿಗೆ ಸ್ವಲ್ಪ ಕಷ್ಟದ ಕೆಲಸವೇ ಸರಿ , ಅದೇ ರೀತಿ ಆ ದಿನ ನನ್ನ ಮನಸ್ಸಿಗು ಏನೋ ಒಂದು ರೀತಿ ಕಸಿವಿಸಿ. ನನಗು ಆ ದಿನ ಏನೋ ಒಂಥರಾ ಸಂಕಟ "ಅಯ್ಯೋ ಆಫೀಸ್ಗೆ ಹೋಗಬೇಕಲಪ್ಪ " ಎಂದು . ಪ್ರತಿ ದಿನದಂತೆ ಬೆಳಿಗ್ಗೆ ಎದ್ದು, ಜಲ್ದಿ-ಜಲ್ದಿ ರೆಡಿಯಾಗಿ,ಅವಸರವಸರವಾಗಿ ಬಟ್ಟೆಹಾಕಿ, ಏನ್ ಬಿಟ್ಟಿದಿನಿ , ಏನ್ ತಗೊಂಡಿದಿನಿ , ಏನ್ ಮರೆತಿದಿನಿ. ಆಕಡೆ " ಅಮ್ಮ ಯಾವಾಗ ಬರ್ತೀಯ , ಎಷ್ಟು ಚಪಾತಿ ಇಡ್ಲಿ , ಒಂದ್ ಬಾಕ್ಸ್ ಸಾಕ ಇನ್ನು ಜಾಸ್ತಿ ಬೇಕಾ " ಎಂಬ ಮಾತುಗಳಿಗೆ ತಾಳ್ಮೆಇಲ್ಲದ ಸಣ್ಣ -ಸಣ್ಣ ಉತ್ತರಗಳನ್ನು ಕೊಡುತ್ತ ( ನಾ ಯಾವತ್ತು ಸಣ್ಣ ಉತ್ತರಗಳನ್ನು ಕೊಟ್ಟವನೇ ಅಲ್ಲ ), ಅಂತು ಇಂತೂ ರೆಡಿ ಆಗಿ "ಅಮ್ಮ ನಾ ರೆಡಿ" ಅಂತ ಹೇಳಿದೆ.ಅದೇ ಸಮಯಕ್ಕೆ ಜೀವ ಒಂದ್ ಕ್ಷಣ ನಿಂತಂತೆ ಆಯಿತು "ನಾ ಪ್ಯಾಂಟ್ ಜಿಪ್ ಹಾಕೊಂಡ್ನ ಅಥವಾ ಇಲ್ವಾ ಅಂತ" , ತತ್ಕ್ಷಣ ನೋಡಿದಾಗ ಎಲ್ಲವು ಸರಿಯಾಗಿಯೇ ಇತ್ತು , ಆದರು ಈ ಹಾಳಾದ್ ಹೊರಡುವ ತರಾತುರಿಯಲ್ಲಿ ಅಪರೂಪಕ್ಕೆ ಅಲ್ಲ ಅಲ್ಲ ಸಾಮಾನ್ಯವಾಗಿ ಅಗ್ಗಿಂದಾಗಿ ಹೀಗೂ ಆಗುವುದು ಉಂಟು. ಅದೇ ರೀತಿ ಏನನ್ನಾದರೂ ಮರೆತಿದ್ದರು ಸಹ ಎಲ್ಲ ಸರಿಯಾಗಿದೆ, ಏನು ಮರೆತಿಲ್ಲ, ಎಲ್ಲ ತಗೊಂಡಿದಿನಿ ಅಂದ್ಕೊಂಡು ಮನೆ ಬಿಡುವುದು ನನ್ನ ದೈನಂದಿನ ಕಾರ್ಯಕ್ರಮ.
ಆ ದಿನ ನಾ ಮಲ್ಲೇಶ್ವರಂಗೆ ಹೋಗಿ ಅಲ್ಲಿಂದ ಆಫೀಸ್ ಕ್ಯಾಬ್ ಕ್ಯಾಚ್ ಹಾಕಬೇಕಿತ್ತು, ಅದಕ್ಕಾಗಿ ನಾ ವಿದ್ಯಾರಣ್ಯಪುರದಿಂದ ನಮ್ಮ ಪ್ರೀತಿಯ, ಸದಾ ಎಷ್ಟೊತ್ತಿಗೆ ಬರುತ್ತೋ ಅಂತ ಸಸ್ಪೆನ್ಸ್ ಅಲ್ಲಿ ಇಡುವ,ಹತ್ತಿದಮೇಲೆ ಯಾವಾಗಲು ಥ್ರಿಲಿಂಗ್ ಎಫೆಕ್ಟ್ ಕೊಡುವ ನಮ್ಮ BMTC ಬಸ್ ಹತ್ತಿದೆ . ನಮ್ಮ ವಿದ್ಯಾರಣ್ಯಪುರದ ಬಸ್ ಗಳು ನಿತ್ಯ ಹರಿದ್ವರ್ಣ ಕಾಡುಗಳು ಹೇಗೆ ಸದಾ ಹಸಿರಾಗುರುತ್ತವೋ ಹಾಗೆಯೇ ಸದಾ ಸ್ವಲ್ಪ ವರ್ಣರಂಜಿತವಾಗಿರುತ್ತವೆ( COLORFUL ) .ಅದರಲ್ಲೂ ಬೆಳ್ಳ ಬೆಳಗ್ಗೆ ಅಂತು ನೋಡಲೆರೆಡು ಕಣ್ಣು ಸಾಲದು. ಆದರೆ ಈ ದಿನ ಯಾಕೋ ಬಸ್ ಬಿಕೋ ಅನ್ನುತಿದೆ , ಬಣ ಬಣ ಎಂದು ಖಾಲಿ ಬಿಟ್ಟ ಹಳೆ ಮನೆ ತರ ಖಾಲಿ-ಖಾಲಿಯಾಗಿ ಕಾಣುತ್ತಿದೆ. ಬಸ್ಸಿನ ತುಂಬಾ ಬರಿ ಬೈತಲೆಗಳು :). ಮುಕ್ಕಾಲು ಬಾಗ ಬಸ್ಸಿನ ಸೀಟ್ ಗಳು " ಯಾರಾದರು ಬರಲಿ, ಬಂದು ನಮ್ಮನ್ನು ಅಲಂಕರಿಸಿ ನಮ್ಮನ್ನು ಕ್ರುಥಾರ್ತರನ್ನಾಗಿಸಲಿ ಎಂದು ಹಾತೊರೆಯುತ್ತಿವೆ ". ಅದೇ ರೀತಿ ನನಗು ಯಾಕಪ್ಪ ಈ ದಿನ ಹೀಗಿದೆ ?? ಅನ್ನಿಸಿತು.
ಕುಲು-ಕುಲು ನಗು ಇಲ್ಲ, ಪಿಸು-ಪಿಸು ಮಾತುಗಳಿಲ್ಲ, ಪಾಪ ಸದಾ ತನಗೆ ಸಂಗೀತದಂತೆ ಕೇಳುತಿದ್ದ ಬಳೆ ಸದ್ದುಗಳೊಂತು ಈ ದಿನ ನಮ್ಮ ಡ್ರೈವರ್ ಸಾಹೇಬರ ಕಿವಿಗೆ ಬೀಳುತ್ತಲೇ ಇಲ್ಲ, ಪಾಪ ಇನ್ನೆಲ್ಲಿ ಅವರಿಗೆ ಡ್ರೈವಿಂಗ್ ಫೋರ್ಸ್ ಇರುತ್ತೆ ಡ್ರೈವ್ ಮಾಡಲು, ಆಟೋ, ಸೈಕಲ್ಲುಗಳು ನಮ್ಮ ಬಸ್ ಅನ್ನು ಹಿಂದಿಕ್ಕಿ ಹೋಗುತ್ತಿವೆ , ನಮ್ಮ ಬಸ್ ಮಾತ್ರ ಆಮೆ ವೇಗದಲ್ಲಿ ತೆವಳುತ್ತ ಸಾಗಿದಂತೆ ಕಾಣುತ್ತಿತ್ತು . ಯಾಕಪ್ಪಾ ಈ ಬಸ್ ಹತ್ತಿದೆ ಅನ್ನಿಸ ತೊಡಗಿತು. ಇತ್ತಕಡೆ ನಮ್ಮ ಕಂಡಕ್ಟರ್ ಮಹಾಶಯರು ಮುಂದೆ ಹೋಗಿದ್ದ ಮತ್ತೊಂದು ಬಸ್ಸನ್ನು ಮನಸೋ ಇಚ್ಛೆ ಶಪಿಸುತ್ತ ಇದ್ದಾರೆ. " ಎಲ್ಲರನ್ನೂ ತುಂಬಿಸಿಕೊಂಡು ಹೋಗಿದ್ದಾನೆ, ಒಬ್ಬರು ನಮ್ಮ ಬಸ್ ಹತ್ತುವರಿಲ್ಲ, ಹತ್ತಿದವರೆಲ್ಲ ಪಾಸ್-ಪಾಸ್ ಅಂತ ಹೇಳ್ತಾರೆ" ಎಂದು ಗೊಣಗುತ್ತಿದ್ದ. ಸದಾ ಮಲ್ಲೇಶ್ವರಂನ ಮಹಿಳಾ-ಮಣಿಗಳ ಕಾಲೇಜುಗಳಿಗೆ ಹೋಗುತ್ತಿದ್ದ ಹೆಣ್ಣುಮಕ್ಕಳನ್ನು ಪ್ರೀತಿಯಿಂದ, ನಗು-ನಗುತ್ತಾ, ಅವರಾಡುವ ಪಿಸುಮಾತುಗಳನ್ನಲಿಸುತ್ತ , ಅವರನ್ನು ನಮ್ಮವರೆಂದೇ ತಿಳಿದು ಕರೆದೋಯುತ್ತಿದ್ದ ಅವರಿಬ್ಬರಿಗೆ , ಇಂದು ಯಾಕೋ ಅವರಿಲ್ಲದೆ ತುಂಬಾ ಬೇಜಾರಿತ್ತು,ಮುಂದೆ ಹೋದ ಬಸ್ಸಿಗೆ ಪದೇ-ಪದೇ ಇಡೀ ಶಾಪ ಹಾಕುತ್ತಾ, ಹೃದಯಕ್ಕಾದ ಆ ನೋವನ್ನು, ಕರುಳಿಗಾದ ಕೆಟ್ಟ ಸಂಕಟವನ್ನು ಅವರು ತಮ್ಮ ಕೆಲಸದಲ್ಲಿ ವ್ಯಕ್ತ ಪಡಿಸುತ್ತಾ ಇದ್ದರು. ಇದೆಲ್ಲದರ ನಡುವೆ ತೆವಳುತ್ತಿರುವ ಈ ಬಸ್, " ನನ್ನನ್ನು ಮಲ್ಲೇಶ್ವರಂಗೆ ತಲಿಪಿಸುತ್ತೋ ಅಥವಾ ಇಲ್ಲವೋ ?? ಲೇಟ್ ಆಗುತ್ತೋ ??? ಆಫೀಸ್ ಕ್ಯಾಬ್ ಎಲ್ಲಿ ಮಿಸ್ ಆಗುತ್ತೋ ?? " ಎನ್ನುವ ಪ್ರಶ್ನೆಗಳ ಜೊತೆಗೆ ಸ್ವಲ್ಪ ಭಯ ಕೂಡ ಕಾಡತೊಡಗಿತು.
ಅಷ್ಟೊತ್ತಿಗೆ, ನಮ್ಮ ಬಸ್ ವೇಗಕ್ಕೆ ತಾನೇ ಸೋತು,BEL ವೃತ್ತವೆ ತಲೆಕೆಟ್ಟು ನಮ್ಮ ಕಡೆ ಓಡಿ-ಓಡಿ ಬಂದ ಹಾಗೆ ಬಾಸವಾಯಿತು ನನಗೆ, ಅಲ್ಲೂ ಅದೇ ... ಬಸ್ ಹತ್ತುವರಿಲ್ಲ , ಕಂಡಕ್ಟರ್ ಮತ್ತೆ ಡ್ರೈವರ್ ಗೋಳು ಕೇಳುವರಿಲ್ಲ, ಜೊತೆಗೆ ನಮ್ಮ ಬಸ್ ಹತ್ತಿದ ಕೆಲವರು ನಮ್ಮ ಕಂಡಕ್ಟರ್ ತಲೆ ತಿನ್ನೋಕೆ ಶುರು ಮಾಡಿದರು. ಅವರು ತಮಿಳು, ಇವ ತೇಟ್ ಉತ್ತರ ಕರ್ನಾಟಕ, ಸಕತ್ತಾಗಿ ಇತ್ತು ಅವರ ಸಂಭಾಷಣೆ , ಸ್ವಲ್ಪ ವಾತಾವರಣೆ ತಿಳಿಗೊಂಡ ಹಾಗೆ ಅನ್ನಿಸಿತು ಅವರ ಸಣ್ಣ ವಾಕ್ ಸಮರದ ನಂತರ. ಹಿಡಿದ ಜಿಡ್ಡು ಬಿಟಂತ್ತಾಗಿತು ನಮ್ಮ ಬಸ್ಸಿಗೆ ಆ ಕ್ಷಣ . ಅದೇ ವೇಗದಲ್ಲಿ ಸ್ವಲ್ಪ ಮುಂದೆ ಸಾಗಿತು,ಕುವೆಂಪು ವೃತ್ತದ ಸಿಗ್ನಲ್ ಕೂಡ ಹಾರಿಸಿದ ನಮ್ಮ ಡ್ರೈವರ್ ದೊಡ್ಡ ಮನಸ್ಸು ಮಾಡಿ. ಬಸ್ ನಿಲ್ದಾಣ ಕೂಡ ಬಂದೆ ಬಿಟ್ಟಿತು, ಯಾರೊಬ್ಬರು ಬಸ್ಸನ್ನೆರುವರಿಲ್ಲ , ಅಷ್ಟರಲ್ಲೇ ಆಕಡೆ ಅಂದರೆ ಹೆಬ್ಬಾಳ ಮಾರ್ಗವಾಗಿ ಜೋರಾಗಿ ಬಂದ ಕಡು ಕಪ್ಪು ಬಣ್ಣದ SANTRO ಕಾರು, ಸುಸ್ತಾಗಿ ನಿಂತಿದ್ದ ನಮ್ಮ ಬಸ್ಸಿನ ಪಕ್ಕಕ್ಕೆ ಬಂದು ನಿಂತಿತು. ಅದರಿಂದ ಇಳಿದ ಒಬ್ಬ ಬಿಳಿ ಅಂಕಲ್, ಸರಿ ಸುಮಾರು 45-50 ವರುಷವಿರಬಹುದು, ಇನ್ನೇನು ತೆವಳಲು ಶುರು ಮಾಡಿದ್ದ ನಮ್ಮ ಬಸ್ಸನ್ನು , ವೇಗವಾಗಿ ಹೊಡಿಬಂದು ಸೈಡ್ ಹಾಕಿ, ಡ್ರೈವರ್ ಗೆ ಸ್ವಲ್ಪ ನಿಲ್ಲಿಸಲು ಹೇಳಿ, " ಮೆಜೆಸ್ಟಿಕ್ ಹೋಗ್ತದ ??? " ಅಂತ ಕೇಳಿದ, ಅದಕ್ಕೆ ನಮ್ಮ ಡ್ರೈವರ್ ಸಮಾದಾನದಿಂದ "ಹೋಗುತ್ತೆ ಅಂತ" ಎಂದು ತಲೆ ಆಡಿಸಿದ, ತಕ್ಷಣ ಆತ ತನ್ನ ಕಾರಿನ ಕಡೆಗೆ ಕೈ ಮಾಡಿ ಯಾರನ್ನೋ ಕರೆಯ ತೊಡಗಿದ . ಬಸ್ಸಿನಲ್ಲಿದ್ದವರಿಗೆಲ್ಲ ಒಂದು ಕ್ಷಣ ಕೋಪ, ಆತ ಸಿಕ್ಕರೆ ಹೊಡೆಯುವಷ್ಟು ರೋಷ ಬಂದಿತ್ತೆನಿಸಿತು, ಎಲ್ಲರೂ " ಛೇ ಛೇ , ಎಲ್ಲೆಲ್ಲಿ ಬೇಕೋ ಅಲ್ಲಲ್ಲಿ , ಯಾವನಿವ " ಅನ್ನ ತೊಡಗಿದರು. ಅಷ್ಟೊತ್ತಿಗೆ ಅಲ್ಲೇ ನಿಂತಿದ್ದ ಆ ಕಾರಿನಿಂದ ಸರ ಸರ ಇಳಿದು ಬಸ್ ಕಡೆ ಓಡಿ ಬಂದ ಆ ಹುಡುಗಿಯನ್ನು ನೋಡಿ ಎಲ್ಲರೂ ತೆಪ್ಪಾಗಾದರೂ, ಅಷ್ಟೇ ಅಲ್ಲ ಮುಖಗಳು ಹಾಗೆ ಹರಳಿದವು ಹೂವುಗಳ ರೀತಿ , ನನ್ನ ಊಹೆಯ ಪ್ರಕಾರ ಅವಳು ಆತನ ಮಗಳು, ಅವಳಿಗೆ ಸರಿ ಸುಮಾರು 21 ರಿಂದ 23 ವಯಸ್ಸಿರಬಹುದು. ಓಡಿ ಬಂದು ಒಂದೇ ಉಸಿರಿನಲಿ ಬಸ್ ಏರಿದ ಅವಳು ಆ ಕ್ಷಣವೇ ಎಲ್ಲರ ಕಣ್ಣುಗಳಿಗೆ ಆಹಾರವಾದಳು. ಉಸಿರಾಡಲು ಕಷ್ಟವಾಗಿದ್ದ ರೋಗಿಗೆ ಕೃತಕ ಆಮ್ಲಜನಕ ನೀಡಿದಂತೆ ಆಗಿತ್ತು ನಮ್ಮ ಬಸ್ಸಿಗೆ ಅವಳು ಹೇರಿದ್ದು, ಅವಳಪ್ಪ "ಮೆಜೆಸ್ಟಿಕ್ ಅಲ್ಲಿ ಉಷಾರಾಗಿ ಇಳಿ , ಅಲ್ಲಿಂದ ಫೋನ್ ಮಾಡು, ಬ್ಯಾಗು ಉಷಾರು " ಅಂತೆಲ್ಲಾ ಕೂಗಿದ್ದು ಎಲ್ಲೋ ದೂರದಲ್ಲಿ ಬ್ಯಾಕ್ ಗ್ರೌಂಡ್ ಡೈಯಲಾಗ್ ಹಾಗೆ ಕೇಳಿಸಿತು ಎಲ್ಲರಿಗೂ, ಯಾಕೆ ಅಂದ್ರೆ ಎಲ್ಲರ ಗಮನ, ನೋಟ ಅವಳ ಮೇಲೆಯೇ ಇತ್ತು, ಮರುಭೂಮಿಯ ಒಯಾಸಿಸ್ ತಾರಾ ಆಗಿದ್ದಳ್ಲೂ ನಮಗೆ ಆ ಬಸ್ಸಿನಲ್ಲಿ ಅವಳು. ಆಕಾಶ ನೀಲಿ ಬಣ್ಣದ TOP, ತೊಡೆ ಭಾಗದಲ್ಲಿ ಮಾತ್ರ ಸ್ವಲ್ಪ ಬಿಳಿ ಶೇಡ್ ಇದ್ದ ನೀಲಿ ಬಣ್ಣದ ಜೀನ್ಸ್ ಪ್ಯಾಂಟು ತೊಟ್ಟಿದ್ದಳು . ಆ ಬಟ್ಟೆಗಳು ಅವಳನ್ನು ಅವಳ ಚರ್ಮದಂತೆಯೇ ಅವಳನ್ನು ಗಟ್ಟಿಯಾಗಿ ಅಂಟಿದ್ದವು , ದೇಹಕ್ಕೆ ಕನ್ನಡಿಯೇ ಎಂಬಂತೆ ಆ ಬಟ್ಟೆಗಳು ಅವಳ ಸೌಂದರ್ಯವನ್ನು ನಮಗೆ ನೋಡಿ ನೋಡಿ ಎಂದು ತೋರಿಸುತ್ತ ಇದ್ದವು. ಎಡಗೈಯಲ್ಲಿ ಒಂದು ಸಣ್ಣ ವೆನೆಟಿ ಬ್ಯಾಗು, ಬಲಗೈಯಲ್ಲೊಂದು ಪರ್ಸು ,ಪೆನ್ನು, ಹೆಗಲಿಗೊಂದು ಬ್ಯಾಗು, ಪದೇ ಪದೇ ಅದೇ ಬಲಗೈಯಿಂದ ಮುಖಕ್ಕೆ ಆಗಾಗ ಮುತ್ತಿಡುತ್ತಿದ್ದ ಅವಳ ಮುಂಗೂದಲುಗಳಿಗೆ " ಈಗ ಬೇಡ ಬೇಡ " ಅಂತ ಇಂದಕ್ಕೆ ಸರಿಸುತ್ತಾ ಇದ್ದಳು. ಎಲ್ಲರ ನೋಟ ಅವಳ ಕಡೆ, ಆಗಿಂದ ಅವಳಿಗಾಗಿಯೇ ಕಾಯುತ್ತಿದ್ದ ಅನಾಥವಾಗಿದ್ದ ಆ ಸೀಟ್ ನ್ನು ಅವಳು ಇನ್ನು ಅಲಂಕರಿಸಿಲ್ಲ, ಬಸ್ ಸೀಟ್ ಗಳು ಕೂಡ ಅಷ್ಟೊತ್ತಿಗೆ ಅವಳಿಗೆ ಸೋತು ಅವಳು ಇಲ್ಲೇ ಕೂರಲಿ ಅಂತ ಪೈಪೋಟಿ ಮಾಡುತ್ತಿದ್ದವು, ಜಾಗಗಳು ಖಾಲಿ ಇದ್ದರು ಅವಳು ಕೂರುವ ಲಕ್ಷಣ ತೋರುತ್ತಿಲ್ಲ, ಅವಳಪ್ಪಾ ಮೆಜೆಸ್ಟಿಕ್ ಗೆ ಹೋಗುತ್ತಾ ?? ಮೆಜೆಸ್ಟಿಕ್ ಅಲ್ಲಿ ಹುಷಾರಾಗಿ ಇಳಿ ,, ಅಂತೆಲ್ಲಾ ಹೇಳಿದ್ದ ಕಾರಣ, ಅವಳು ಮೆಜೆಸ್ಟಿಕ್ ಗೆ ಬರ್ತಾಳೆ ಅಂತ ಖಾತ್ರಿ ಪಡಿಸಿಕೊಂಡಿದ್ರೂ ನಮ್ಮ ಡ್ರೈವರ್ ಮತ್ತು ಕಂಡಕ್ಟರ್ ಮಹಾಶಯರು. ಅದರಂತೆ ನಮ್ಮ ಕಂಡಕ್ಟರ್ ಒಂದು ಹೆಜ್ಜೆ ಮುಂದೆ ಹೋಗಿ ಅವಳಿಗೆ ಮೆಜೆಸ್ಟಿಕ್ ಟಿಕೆಟ್ ಕೂಡ ಹರಿದು ಕೈಲಿ ಕೊಟ್ಟ ಅವಳನ್ನು ಏನು ಕೇಳದೇ, " ಟಿಕೆಟ್ ಇಟ್ಕೋಲಿ ಆಮೇಲೆ ದುಡ್ಡು ಕೊಡಿ" ಎಂದು ತನ್ನ ಉದ್ಹಾರತೆಯನ್ನು ಮೆರೆದು, ಬರೊಲೋಲ್ಲದ ಮನಸ್ಸಿನಿಂದ ಬಸ್ಸಿನ ಹಿಂಬಾಗಕ್ಕೆ ಬರ ತೊಡಗಿದರು .
ಅಲ್ಲಿಯವರೆಗೂ ಹೆಂಡತಿಯನ್ನು ತವರಿಗೆ ಕಳುಹಿಸಿದ ಗಂಡನ ಮುಖದಂತಿದ್ದ ನಮ್ಮ ಡ್ರೈವರ್ ಸಾಹೇಬ್ರು ಮುಖ ಈಗ ಚೇತನಾಯುಕ್ತವಾಗಿ, ಮುಂದೆ ನೋಡಿಕೊಂಡು ಬುಸ್ ಹೋಡಿಸ ಬೇಕೆಂದು ಮರೆತಂತೆ ಕಾಣತೊಡಗಿತು, ಕ್ಷಣಾಕೊಮ್ಮೆ ಹಿಂದೆ ಹಿಂದೆ ನೋಡುತ್ತಾ ನನಗೆ ಯಾಕೋ ಸುಸ್ಪೆನ್ಸ್ ,ಥ್ರಿಲರ್ ಜೊತೆಗೆ ಹಾರಾರ್ ಶೋ ಕೂಡ ತೋರಿಸಲು ಸಜ್ಜದಂತ್ತಿತ್ತು ಅವರ ಡ್ರೈವಿಂಗ್ ಸ್ಟೈಲ್. ನನಗೆ ಯಾಕೋ ಸ್ವಲ್ಪ ಇದೆಲ್ಲ ಜಾಸ್ತಿ ಆಯಿತು ಅನ್ನಿಸ ತೊಡಗಿತು. ಅವಳು ಸೌಂದರ್ಯವು ಕೂಡ ಹಾಗೆಯೇ ಇತ್ತು, ನೋಡಿದರೆ ಹಾಗೆ ತಿರು ತಿರುಗಿ ನೋಡುತ್ತಲೇ ಇರಬೇಕು ಅನ್ನುವಹಾಗೆ. ಸುಮ್ಮನಿರಲು ಮನುಷ್ಯ ಅಥವಾ ರಸಿಕನಿಗೆ ಸಾದ್ಯವೇ ಇರುತ್ತಿರಲಿಲ್ಲ. ಎಂತವರಿಗೂ ಅವಳ ಆ ಚಂದವನ್ನು ತನ್ನ ಹೃದಯದಲ್ಲಿ ಬಚ್ಚಿಟ್ಟು ಕೊಳ್ಳಬೇಕು ಎಂದೆನಿಸುತ್ತಿತ್ತು. ಮತ್ತೆ ಮತ್ತೆ ನೋಡುತ್ತಲೇ ಇರಬೇಕು, ಅವಳು ಬಂದು ನನ್ನ ಪಕ್ಕ ಕೂರಲಿ , ನನ್ನೊಡನೆ ಒಮ್ಮೆ ಅವಳು ಮಾತಾಡಲಿ, ನನ್ನ ಹಾಗೆ ಅವಳು ಕಣ್ಣು ಮಿಟುಕಿಸದೆ ನೋಡುತ್ತಲೇ ಇರಲಿ ಅನ್ನೋ ಹಾಗಿದವು ಅವಳ ಆ ಎರೆಡು ಸ್ವಚ್ಚ ಕಣ್ಣುಗಳು , ಅವುಗಳ ಮೇಲೆ ಕಾಮನ ಬಿಲ್ಲಿನಂತಿದ್ದ ಅವಳ ಕಣ್ಣುಬ್ಬುಗಳು, ಕಪ್ಪು ಕಾಡಿಗೆಯಿಂದ ನಯವಾಗಿ ತೀಡಿದ್ದ ಆ ಕಣ್ ರೆಪ್ಪೆಗಳು, ಅವಳ ಅಂದವನ್ನು ಮತ್ತೊಷ್ಟು ಜಗ ಜಾಹೀರಗೊಳಿಸುತ್ತಿದ್ದವು . ಇದೆಲ್ಲದರ ಜೊತೆಗೆ ಅವಳ ಆ ಕಣ್ಣುಗಳು ನಮ್ಮನ್ನೇ ನೋಡುತ್ತಾ ನಮಗೆ ಏನೋ ಒಂದು ಸಂದೇಶ ನೀಡುತ್ತ " ನೋಡೋ ಆಮೇಲೆ ನಾ ಹಿಳಿದು ಹೋಗ್ತೀನಿ , ಈಗಲೇ ಚನ್ನಾಗಿ ನೋಡಿಬಿಡು " ಅನ್ನೋ ಹಾಗೆ ನಮ್ಮನ್ನು ಆಕರ್ಷಿಸುತ್ತಾ ಇದ್ದವು. ಎಲ್ಲರ ಚಿತ್ತ, ನೋಟ , ಗಮನ ಎಲ್ಲ ಅವಳ ಕಡೆಯೇ , ಇಬ್ಬರು ಮಲೆಯಾಳಿ ಹುಡುಗರಂತೂ ಅವಳನ್ನೇ ಕಣ್ಣ ಮುಚ್ಚದೆ ಗುರಾಯಿಸುತ್ತಿದ್ದ ರೀತಿ ಹೇಗಿತ್ತೆಂದರೆ , " ಅವರ ಕಣ್ಣು ಗುಡ್ಡೆಗಳು ಕಣ್ನಿಂದ ಎಲ್ಲಿ ಬಿದ್ದು ಬಿಡುತ್ತವೋ, ನನಗೆ ಎಲ್ಲಿ ನಾನೇ ಅವನ್ನ ಕ್ಯಾಚ್ ಹಾಕ್ತಿನೋ ಆ ಎರೆಡು ಜೊತೆ ಕಣ್ಣುಗಳನ್ನ" ಅಂತ ಅನ್ನಿಸುತ್ತಿತ್ತು. ನನ್ನ ಊಹೆಯ ಪ್ರಕಾರ ಆ ಹುಡುಗರು ರಾಮಯ್ಯ ಹಾಸ್ಪಿಟಲ್ ನರಸಣ್ಣಗಳಿರಬೇಕು. ಹಿರಿಯರು ಕಿರಿಯರು ಬೇದವಿಲ್ಲದೇ ಅವಳನ್ನೇ ಬಾಯೀ ತೆಗೆದು ನೋಡುತ್ತಾ ಏನೋ ಒಂದು ಹೇಳಲಾಗದ ಭಾವನೆಯಲ್ಲಿ ತೇಲುತ್ತಿದ್ದರು. ನನಗು ಕೂಡ ಮಲ್ಲೇಶ್ವರಂ, ಆಫೀಸು , ಆಫೀಸ್ ಕ್ಯಾಬ್ ಎಲ್ಲ ಮರೆತಿತ್ತು ಆ 5 ನಿಮಿಷಗಳು . ಅವಳು ಇನ್ನೂ ಕೂತಿರಲಿಲ್ಲ, ಅವಳು ನಾ ಕೂರುತ್ತೇನೆ ಅಂದಿದ್ದರೆ ಇಡೀ ಬಸ್ ಪ್ರಯಾಣಿಕರೆಲ್ಲಾ ತಮ್ಮ ಜಾಗ ಬಿಟ್ಟು ಕೊಡಲು ಸಿದ್ದರೆನೋ ಅನ್ನುವಂತಿತ್ತು ಆ ವಾತಾವರಣ. ಅಷ್ಟರಲ್ಲಿ ಅವಳು ಮೊದಲೇ ನಿಧಾನವಾಗಿ, ಆಮೆಗತಿಯಲ್ಲಿದ್ದ ನಮ್ಮ ಬಸ್ಸನ್ನ ನಿಲ್ಲಿಸಲು ಚಿಕ್ಕ ಮಗುವಿನಂತೆ " ನಿಲ್ಸಿ ನಿಲ್ಸಿ , ಸ್ಟಾಪ್ ಸ್ಟಾಪ್ " ಅಂತ ಹೇಳಿದಳು . ಪಾಪ ಡ್ರೈವರ್ ಆ ನಿಲ್ದಾಣದಲ್ಲಿ ಬಸ್ ನಿಲ್ಲಿಸುವುದೇ ಮರೆತಿದ್ದ, ಯಾವುದೋ ಲೋಕದಲ್ಲಿ ಬುಸ್ ಚಲಾಯಿಸುತ್ತಾ ಅವನಿಗೆ ಅವಳ " ಸ್ಟಾಪ್ ಸ್ಟಾಪ್ " ಎನ್ನೋ ಮಾತುಗಳು ತತ್ ಕ್ಷಣ ನ್ಯೂ BEL ರೋಡಿಗೆ ಬರುವಂತೆ ಮಾಡಿತು ಅಂತ ಅನಿಸುತ್ತೆ , ಯಾಕೋ ಗರ ಬಡಿದವಂತೆ ಬಸ್ ನಿಲ್ಲಿಸಿಯೇ ಬಿಟ್ಟನು.ಯಾಕೋ ಎಲ್ಲರ ಮುಖಗಳು ಸಪ್ಪೆಯಾದವು, ಅವಳು ಗೊತ್ತಿಲ್ಲದೇ ಅವಳ ಬಳಿಗೆ ಹೋಗಿ ನಿಂತಿದ್ದ ಕಂಡಕ್ಟರ್ ಗೆ ಹತ್ತಿದ್ದ 5 ನಿಮಿಷಕ್ಕೆ 13 ರು ಕೊಟ್ಟು, ಮುಂದಿನ ನಿಲ್ದಾಣದಲ್ಲೇ ಇಳಿದಳು. ಎಲ್ಲರಿಗು ಅಯ್ಯೋ ಅವಳು ಹಿಳಿದೆ ಬಿಟ್ಟಳಲ್ಲ, ಮುಂದೆ ಹೇಗೆ ಅನ್ನುವಷ್ಟು ಒಂತರ ಆಯಿತು. ನೋಡು ನೋಡುತ್ತಲೇ ತನ್ನ ಬಸ್ ಪ್ರಯಾಣವನ್ನು ಅಲ್ಲಿಯೇ ಮೊಟಕುಗೊಳಿಸಿ, ನಿಧಾನವಾಗಿ ಅಲ್ಲೇ ಕಾಯುತ್ತನಿಂತಿದ್ದ ಒಬ್ಬ ಹುಡುಗನ ಬೈಕ್ ಹೇರಿ ನೋಡು ನೋಡುತ್ತಿದ್ದಂತೆಯೇ ಅವನೊದಿಂಗೆ ಹೋಗಿಯೇ ಬಿಟ್ಟಳು. ಎಲ್ಲರಿಗೂ ಬೇಜಾರ್ ಆದಂತೆ ನನಗು ಆಯಿತು, " ಅಯ್ಯೋ ಹೋಗೆ ಬಿಟ್ಟಳಲ್ಲ " ಅಂತ ಅನಿಸಿತು, ನಮ್ಮ ಡ್ರೈವರ್ ಮತ್ತು ಕಂಡಕ್ಟರ್ ಮತ್ತೆ ಹೆಂಡತಿಯನ್ನು ತವರಿಗೆ ಕಳುಹಿಸಿದ ಮುಖ ಬಾವನೆಯೊಂದಿಗೆ ಸುಮ್ಮನಾದರು. ನನಗೆ ಅದನ್ನೆಲ್ಲ ನೋಡಿದ ಮೇಲೆ ಕಾಡಿದ ಪ್ರಶ್ನೆಗಳು , " ಅವ ಯಾರು ??? ಅವಳಪ್ಪ ಮೆಜೆಸ್ಟಿಕ್ ಅಲ್ಲಿ ಇಳಿ ಅಂದರು ಅವಳು ಇಲ್ಲೇ ಯಾಕೆ ಇಳಿದಳು ? ಅವನೇನು ಅವಳ ಸ್ನೇಹಿತನ ಅಥವಾ ಮತ್ತೆ ಯಾರೋ ??? ಇನ್ನೊದು ಮುಖ್ಯವಾದ ಪ್ರಶ್ನೆ ಅಂದರೆ ಅವಳು ಅವನೊಡನೆ ಕೂತಾಗ ಅವಳ ಆ ಕಪ್ಪು ಬ್ಯಾಗು ಅವರಿಬ್ಬರ ನುಡುವೆ ಇತ್ತ ?ಅತವ ಇನ್ನೊಬ್ಬರಿಗೆ ಬೈಕಿನಲ್ಲಿ ಜಾಗವಾಗುವಂತೆ ಅಂಟಿಕೊಂಡು ಕೂತಿದ್ದರ ಅಂತ ? :) ". ಅಷ್ಟೊತ್ತಿಗೆ ಬೇಸಿಗೆಯಲ್ಲೊಮ್ಮೆ ಹನಿ ಮಳೆ ಬಂದು ಬಿಟ್ಟಹಾಗೆ ಹಾಗಿತ್ತು ಬಸ್ಸಿನಲ್ಲಿ. ಮತ್ತೆ ಅದೇ ಪ್ರಯಾಣ , ಅದೇ ಜನಗಳು, ಅದೇ ಆಮೆ ವೇಗ , ಅದೇ ಚಿಂತೆಗಳೊಂದಿಗೆ ಸಾಗಿತು ನಮ್ಮ ಪ್ರಯಾಣ ಮತ್ತು ನಮ್ಮ ಬಸ್. ನನ್ನ ಆ ದಿನದ ಪ್ರಯಾಣದಲ್ಲಿ "ಅವಳ ಆ guest appearance.. " ಒಂಥರಾ ಮಜಾ ನೀಡುವುದರ ಜೊತೆಗೆ ಅಷ್ಟೇ ಬೇಜಾರು ಮಾಡಿತು ಅವಳು ಇಳಿದಿ ಹೋದದ್ದು ...........
ನಿಮಗಾಗಿ
ನಿರಂಜನ್
ಮೂರ್ತಿಗಳೇ ಸೊಗಸಾದ ರಸಗವಳದಂತ ಬರಹ ಕೊಟ್ಟಿದೀರಿ:
ಪ್ರತ್ಯುತ್ತರಅಳಿಸಿವರ್ಣನಾ ಲಹರಿ ಲಯಬದ್ಧವಾಗಿದೆ, ಶೈಲಿ ಹಿತವಾಗಿದೆ, ಬರವಣಿಗೆ ಸ್ವಲ್ಪ ಆಯತಪ್ಪಿದ್ದರೂ ಲೇಖನ ಬೇರೆ ತರ ಕಲ್ಪನೆ ಹುಟ್ಟುಸುವ ಅಪಾಯ ಇತ್ತು...
ಬಹುತೇಕ ಲೇಖನವನ್ನು "ಪ್ರಾಯ"ದ ವಿವರಣೆಗೆ ಮೀಸಲಿಟ್ಟು, ವಯೋಸಹಜ ಬುದ್ಧಿವಂತಿಕೆಯನ್ನು ಮೆರೆದಿದ್ದೀರಿ(ಪ್ರಾಯವಂತರಾಗಿದ್ದೀರಿ)..
ದಯವಿಟ್ಟು ಶಬ್ದಗಳ ಅಪಭ್ರಂಷದ ಕಡೆಗೆ ಗಮನ ಕೊಡಿ, ಓದುಗರ ಸರಾಗವಾದ ಓದಿಗೆ ಅದು ಬಹಳ ಮುಖ್ಯ..
ಕೆಲವು ಕಡೆ ತುಂಬಾ ಅಪಾರ್ಥ(ಅಪಾರ ಅರ್ಥ ?) ವಾಗಿದೆ ಉದಾ:
"ಅವಳಪ್ಪ ಮೆಜೆಸ್ಟಿಕ್ ಅಲ್ಲಿ ಇಲಿ ಅಂದರು ಅವಳು ಇಲ್ಲೇ ಯಾಕೆ ಹಿಲಿದಳು ?"
ಕನ್ನಡದ ಬಲ್ಲವರೇ ಈ ತರ ಮಾಡಿದರೆ ಇದು ಇನ್ನೊಂದು ಹೊಸ ಆತಂಕ ಹುಟ್ಟಿಸುತ್ತೆ.
Keep going....
tahnks Byaadgi for comments,,
ಪ್ರತ್ಯುತ್ತರಅಳಿಸಿSuper maga........... spelling mistakes are there still ok. Good Job Done...
ಪ್ರತ್ಯುತ್ತರಅಳಿಸಿBUT Being Kannadiga and writing mistakes is not acceptable.... by any one person in Karnataka.......Good Work kanappa,
keep Rooking ...............
We ALL LOVE YOU My Dear FRIEND.
thanks naveen :)
ಪ್ರತ್ಯುತ್ತರಅಳಿಸಿsakkath natural aagi baridiya niranjan,,,,, odutta odutta naane bus nalle idde,,,,aa hudugina aage imagine madkonda aage annisitu,,,,,,,super ri,,,,keep writing always.
ಪ್ರತ್ಯುತ್ತರಅಳಿಸಿಸ್ವಾಮಿಗಳೆ ರುಚಿಗೆ ತಕ್ಕಸ್ಟೂ ಎಲ್ಲಾ ಪದಾರ್ಥ(ಪದ + ಅರ್ಥ)ಗಳನ್ನು ಹಾಕಿ!!! ಮತ್ತೊಮ್ಮೆ ರಸದೌತಣವನ್ನು ಸವಿಯಲು ಕೊಟ್ಟ ನಿಮಗೆ ಧನ್ಯವಾದಗಳು...ಹೀಗೆ ತಮ್ಮ ಬೊಂಬಾಟ್ ಭೋಜನವನ್ನು ಯಾವಾಗಲು ಬೊಂಬಾಟ್ ಆಗಿ ಇರಿಸಿ.!!!!...ಪ್ರಭು
ಪ್ರತ್ಯುತ್ತರಅಳಿಸಿvery nice.. continue..
ಪ್ರತ್ಯುತ್ತರಅಳಿಸಿರವಿವಾರವನ್ನು ಸಂಪೂರ್ಣವಾಗಿ ಸವಿದು ಸೋಮವಾರ ಆಫೀಸ್ ಗೆ ಹೋಗಬೇಕೆಂದರೆ ಬಹುಪಾಲು ನಾರ್ಮಲ್ ಮನಸ್ಸಿನ ಜನರಿಗೆ ಸ್ವಲ್ಪ ಕಷ್ಟದ ಕೆಲಸವೇ ಸರಿ , ಅದೇ ರೀತಿ ಆ ದಿನ ನನ್ನ ಮನಸ್ಸಿಗು ಏನೋ ಒಂದು ರೀತಿ ಕಸಿವಿಸಿ. ನನಗು ಆ ದಿನ ಏನೋ ಒಂಥರಾ ಸಂಕಟ "ಅಯ್ಯೋ ಆಫೀಸ್ಗೆ ಹೋಗಬೇಕಲಪ್ಪ " ಎಂದು . ಪ್ರತಿ ದಿನದಂತೆ ಬೆಳಿಗ್ಗೆ ಎದ್ದು, ಜಲ್ದಿ-ಜಲ್ದಿ ರೆಡಿಯಾಗಿ,ಅವಸರವಸರವಾಗಿ ಬಟ್ಟೆಹಾಕಿ, ಏನ್ ಬಿಟ್ಟಿದಿನಿ , ಏನ್ ತಗೊಂಡಿದಿನಿ , ಏನ್ ಮರೆತಿದಿನಿ. ಆಕಡೆ " ಅಮ್ಮ ಯಾವಾಗ ಬರ್ತೀಯ , ಎಷ್ಟು ಚಪಾತಿ ಇಡ್ಲಿ , ಒಂದ್ ಬಾಕ್ಸ್ ಸಾಕ ಇನ್ನು ಜಾಸ್ತಿ ಬೇಕಾ " ಎಂಬ ಮಾತುಗಳಿಗೆ ತಾಳ್ಮೆಇಲ್ಲದ ಸಣ್ಣ -ಸಣ್ಣ ಉತ್ತರಗಳನ್ನು ಕೊಡುತ್ತ ( ನಾ ಯಾವತ್ತು ಸಣ್ಣ ಉತ್ತರಗಳನ್ನು ಕೊಟ್ಟವನೇ ಅಲ್ಲ ), ಅಂತು ಇಂತೂ ರೆಡಿ ಆಗಿ "ಅಮ್ಮ ನಾ ರೆಡಿ" ಅಂತ ಹೇಳಿದೆ.ಅದೇ ಸಮಯಕ್ಕೆ ಜೀವ ಒಂದ್ ಕ್ಷಣ ನಿಂತಂತೆ ಆಯಿತು "ನಾ ಪ್ಯಾಂಟ್ ಜಿಪ್ ಹಾಕೊಂಡ್ನ ಅಥವಾ ಇಲ್ವಾ ಅಂತ" , ತತ್ಕ್ಷಣ ನೋಡಿದಾಗ ಎಲ್ಲವು ಸರಿಯಾಗಿಯೇ ಇತ್ತು , ಆದರು ಈ ಹಾಳಾದ್ ಹೊರಡುವ ತರಾತುರಿಯಲ್ಲಿ ಅಪರೂಪಕ್ಕೆ ಅಲ್ಲ ಅಲ್ಲ ಸಾಮಾನ್ಯವಾಗಿ ಅಗ್ಗಿಂದಾಗಿ ಹೀಗೂ ಆಗುವುದು ಉಂಟು. ಅದೇ ರೀತಿ ಏನನ್ನಾದರೂ ಮರೆತಿದ್ದರು ಸಹ ಎಲ್ಲ ಸರಿಯಾಗಿದೆ, ಏನು ಮರೆತಿಲ್ಲ, ಎಲ್ಲ ತಗೊಂಡಿದಿನಿ ಅಂದ್ಕೊಂಡು ಮನೆ ಬಿಡುವುದು ನನ್ನ ದೈನಂದಿನ ಕಾರ್ಯಕ್ರಮ.
ಪ್ರತ್ಯುತ್ತರಅಳಿಸಿ------------------------------------------------
ಕೆಲಸಕ್ಕೆ ಅಷ್ಟೇ ಅಲ್ಲ ಇದು... ಶಾಲೆಗೆ ಹೋಗೋ ಮಕ್ಕಳಲ್ಲೂ ಈ ರೀತಿ ಆಗುತ್ತೆ. (ಬಾಲ್ಯಾದ ಕೆಲವು ನೆನಪುಗಳು).... :)
ಎಷ್ಟೋ ಕಡೆ ಅಕ್ಷರಗಳಲ್ಲಿ ತಪ್ಪಾಗಿದೆ.. ಅದರಿಂದ ಪದಗಳ ಅರ್ಥ ಬದಲಾಗಿ... ಇಲ್ಲಿ ಬೇರೆ ಯಾವುದೋ ಭಾವನೆ ನೀಡುವ ಹಾಗೆ ಮೂಡಿ ಬಂದಿದೆ.... ಅದರ ಕಡೆ ಸ್ವಲ್ಪ ಗಮನ ಹರಿಸಬೇಕು...
ಒಟ್ಟಿನಲ್ಲಿ ಬಹಳ ಸುಂದರವಾಗಿ ಬರೆದಿರುವೆ... ಓದಲು ಸೊಗಸಾಗಿದೆ...
ಇತಿಹಾಸದ ನೆನಪುಗಳ ಮರುಸೃಷ್ಟಿಯೋ...
ನೈಜ ಘಟನೆಯೋ ಅಥವಾ ಸುಂದರ ಕಲ್ಪನೆಯೋ....
ಕನಸಲ್ಲಿ ಮೂಡಿದ ಮಾಯಾಲೋಕದ ವರ್ಣನೆಯೋ....
ಪ್ರಕೃತಿ ನೋಟದ ಒಂದು ಪುಟ್ಟ ವಿವರಣೆಯೋ......
ಅದೇನೇ ಇರಲಿ ನಿನ್ನ ಬರಹ ಸದಾ ಮುಂದೆ ಸಾಗುತಲೇ ಇರಲಿ... :)
Good maga … really nice … Even I am phasing same situations while going to office. Good DUDE.
ಪ್ರತ್ಯುತ್ತರಅಳಿಸಿ