ಶನಿವಾರ, ಜೂನ್ 9, 2012

ನಾನು ಮತ್ತು ನನ್ನ ಅನುಭವದ ಗಂಟು

   
                                           " ಹೆಣ್ಣು ಸೌಂದರ್ಯದ ಗಂಟು " 

ನಿಜ ಸ್ನೇಹಿತರೆ .......

'ಹೆಣ್ಣು', ನಮ್ಮ ಬ್ರಹ್ಮ  ದೇವರು ಕಷ್ಟ ಪಟ್ಟು, ಬೆವರು ಸುರಿಸಿ ನಮಗಾಗಿ  ಮಾಡಿಕೊಟ್ಟ ಸೌಂದರ್ಯದಗಂಟು. ಅದಕ್ಕಾಗಿಯೇ  ಏನೋ ಹೆಣ್ಣಿನ  ಮನಸ್ಸು ನಮಗೆ ಹರಿಯಲು ಸಾದ್ಯವೇ ಇಲ್ಲ, ಏಕೆಂದೆರೆ ಅವಳು  ಸೌಂದರ್ಯದ  ಗಂಟಲ್ಲವೆ. ಗಂಟಿನ ಒಳಗೆ ಏನಿದೆ ಎಂದು ಒಳಗೆ ನೋಡಿದಾಗಲೇ ನಮಗೆ ತಿಳಿಯುವುದು. ಇದೆಲ್ಲ ನಮಗೆ ಗೊತ್ತಿದ್ದರೂ  ಕೂಡ, ಹೆಣ್ಣು ಕನ್ನಡಿಯೊಳಗಿನ  ಗಂಟು ಅಂತ   ನಮ್ಮ  ಹಿರಿಯರು, ಬುದ್ದಿವಂತರು ಹೇಳಿದರೂ  ಸಹ, ಹುಡುಗಿ ಎನ್ನುವ  ಆ ಸೌಂದರ್ಯದ ಗಂಟೆಂದರೆ ಯಾರಾದರು ಮೂಗು ಮುರಿಯುತ್ತಾರೆಯೇ ?? ಇಲ್ಲವೇ ಇಲ್ಲ ..   ಎಲ್ಲರಿಗೂ ಅದೇನೋ ಅಚ್ಚು-ಮೆಚ್ಚು, ಪ್ರೀತಿ ,ವ್ಯಾಮೋಹ . ಅದು ಯಾವುದೇ ಗಂಟಾಗಲಿ, ಅದು ಹೇಗೆಯೇ  ಇರಲಿ ನಾವು ಅದನ್ನು ಕದಿಯಬೇಕೆಂದು ಒಮ್ಮೆಯಾದರು ಅಂದುಕೊಳ್ಳುತ್ತೇವೆ. ಅಪ್ಪಿ ತಪ್ಪಿ ಗಂಟೆನಾದರು ಸಿಕ್ಕರೆ ಆ  ಗಂಟನ್ನು  ಸದಾ ನಮ್ಮ ಬಗಲಲ್ಲೇ ಇಟ್ಟುಕೊಳ್ಳಬೇಕು ಅಂತ ಅಂದುಕೊಳ್ಳುತ್ತೇವೆ. ಗಂಟುಗಳು ಕೂಡ ಹಾಗೆಯೇ , ಕೆಲವು ಚಿಕ್ಕವಿರುತ್ತವೆ, ಕೆಲವು ದೊಡ್ಡವಿರುತ್ತವೆ, ಕೆಲವು ಒಳ್ಳೆಯ ಗಂಟುಗಳು, ಮತ್ತೆ ಕೆಲವು ಕೆಟ್ಟವು. ಎಲ್ಲಾ  ಗಂಟುಗಳನ್ನು ನಾವು ಒಮ್ಮೆ ಬಿಚ್ಚಿ ನೋಡಿದಾಗಲೇ ನಮಗೆ ಅವುಗಳ ಸ್ವರೂಪ, ನಿಜವಾದ ಅರ್ಥ ತಿಳಿಯುವುದು. ಇದೇನಪ್ಪ ಇವನ್ನು ಗಂಟು ಗಂಟು ಎಂದು  ತುಂಬಾ ಒಗಟಾಗಿ  ಮಾತನಾಡುತ್ತಿದ್ದಾನೆ ಅಂದುಕೊಂಡಿರಾ ??? ನಿಜ ನಾನು ಈದಿನ ನಿಮಗೆ ಮತ್ತು ನಮಗೆ ಇರುವ ಗಂಟಿನ ನಂಟಿನ ಬಗ್ಗೆ, ನನ್ನ ಅನುಭವಗಳ ಪುಟ್ಟ ಅಬಿಪ್ರಾಯದ  ಗಂಟನ್ನು ನಿಮ್ಮ ಮುಂದೆ ಸ್ಪುಟವಾಗಿ ಬಿಚ್ಚಿಡ ಬಯಸುತ್ತೇನೆ. ನಾ ಹೇಳುವುದು ನಿಮಗೆ ಯಾವುದೇ ಕಾರಣಕ್ಕೂ  ಕಗ್ಗಂಟು ಆಗುವುದಿಲ್ಲ  ಎಂದು ಭಾವಿಸುತ್ತೇನೆ. 

          ಕನ್ನಡ ನಿಘಂಟಿನಲ್ಲಿ ಅಥವಾ ರತ್ನಕೋಶ ದಲ್ಲಿ ನಮಗೆ ಗಂಟು ಪದಕ್ಕೆ ಸಿಗುವ ಅರ್ಥವೆಂದರೆ " ದಾರ ಮುಂತಾದುವುಗಳ ಕಟ್ಟು, ಕಂತೆ, ಗಡ್ಡೆ, ಐಶ್ವರ್ಯ, ನಂಟು, ಸಮಸ್ಯೆ". ಗಂಟು ನನ್ನ ದಿನಬಳಕೆಯ ಸರಕಿನಂತೆ ನನ್ನ ಭಾಷಾ ಸರಕಿನ ಒಂದು ಬಹುಮುಖ್ಯ ಶಬ್ದವಾಗಿದೆ. ಅದನ್ನು ನಾನು ಸ್ವಾಭಾವಿಕವಾಗಿ  ಎತ್ತೇಚವಾಗಿ ಬಳಸುತ್ತೇನೆ, ಅದರಿಂದ ಅತಿಯಾದ ಹಾಸ್ಯ ಕೂಡ ಹೊರಹೊಮ್ಮುತ್ತದೆ. ಕೆಲವರು ಆ ಹಾಸ್ಯವನ್ನು ಮೆಚ್ಚುತ್ತಾರೆ, ಕೆಲವರು ಮುಖ ಗಂಟು ಹಾಕಿಕೊಳ್ಳುತ್ತಾರೆ.


            ಕನ್ನಡ ನಿಘಂಟಿನಲ್ಲಿ ಗಂಟು ಹೇಗೆ ಶಾಶ್ವತ ಸ್ಥಾನ ಪಡೆದಿದೆಯೋ ಹಾಗೆಯೇ ಬ್ರಹ್ಮ ಗಂಟಾಕಿ ಕರೆತರುವ ಹೆಣ್ಣು ಕೂಡ ನಮ್ಮಲ್ಲಿ ಶಾಶ್ವತವಾಗಿದೆ ನೆಲೆಸುತ್ತಾಳೆ. ನೋಡಿ ಗಂಟು ಹೇಗೆ ನಮಗೆ ಅಂಟಿಕೊಳ್ಳುತ್ತದೆ. ಗಂಟಿನ ನಂಟನ್ನು ನಾವು ಬಿಡಬೇಕೆಂದರು ಅದು ನಮ್ಮನ್ನು ಬಿಡೊಲ್ಲ. ಈ ಗಂಟು ಪದದ ಅರ್ಥವು ಕೂಡ ಹಾಗೆಯೇ. ಹೇಗೆ  ಗಂಟಾಕಿಕೊಂಡ ಹೆಣ್ಣು ಬದಲಾಗುತ್ತಾಳೋ, ಹಾಗೆಯೇ ಗಂಟು ಪದದ ಅರ್ಥವು  ಸಂದರ್ಭಕ್ಕೆ ತಕ್ಕಹಾಗೆ ಬದಲಾಗುತ್ತಲೇ ಹೋಗುತ್ತದೆ. ಗಂಟಿನ ಎಲ್ಲ ಮಜಲುಗಳನ್ನು ನಾವು ಸರಿಯಾಗಿ  ಬಳಸಿದಾಗ ಅದರ ಮಜವೇ ಬೇರೆ. ನಮಗೆ ಒಂದೊಂದು ಸಮಯದಲ್ಲಿ ಒಂದೊಂದು "ಗಂಟು" ಗಳು ಬೇಕೆನಿಸುತ್ತವೆ. ಒಂದು ವಯಸ್ಸಿನಲ್ಲಿ "ಸೌಂದರ್ಯದ ಗಂಟು", "ಅಪ್ಪ-ಅಮ್ಮನ ಗಂಟು", "ಸರ್ಕಾರದ ಗಂಟು", "ಜನರ ಗಂಟು", "ದೇಶದ ಗಂಟು", "ಹೆಂಡತಿಯ ಗಂಟು", "ಮಾವನ ಗಂಟು" ಹೀಗೆ ಒಂದಲ್ಲ ಒಂದು ರೀತಿಯಾಗಿ ಗಂಟಿನ ಮೇಲೆ ಗಂಟುಗಳ    ಆಸೆ , ವ್ಯಾಮೋಹ   ಕಾಲಘಟ್ಟದಲ್ಲಿ ಬೆಳೆಯುತ್ತಲೇ ಹೋಗುತ್ತದೆ. ಈ ಗಂಟನ್ನು ಪಡೆದು, ಅನುಭವಿಸುವ ಕ್ರಿಯೆಯನ್ನು ನಾವು ಹಾಡು ಭಾಷೆಯಲ್ಲಿ " ಗಂಟು ನುಂಗುವುದು , ಗಂಟು ಕದಿಯುವುದು, ಗಂಟು ತಿನ್ನುವುದು " ಎಂದು ಹೇಳುತ್ತೇವೆ.     

              ಎಲ್ಲರೂ ಕೂಡ ಹಾಗೆಯೇ ಒಮ್ಮೆ ಗಂಟಿನ ಮೇಲೆ ಕಣ್ಣಿಟ್ಟರೆ ಆ ಗಂಟನ್ನು  ಹೊಡೆಯುವ ತನಕ ಸುಮ್ಮನಿರುವುದಿಲ್ಲ. ಆ ಗಂಟನ್ನು ಕದಿಯಲು ಹಗಲು ರಾತ್ರಿ ಕಷ್ಟ ಪಡುತ್ತಾರೆ. ಅದನ್ನು ಕದಿಯುವ ತನಕ ಅವರು ನಿದ್ದೆ ಕೂಡ ಮಾಡುವುದಿಲ್ಲ. ಅದಕ್ಕೆ ಉತ್ತಮ ಉದಾಹರಣೆ ಎಂದರೆ ನಮ್ಮ ನಾಯಕರುಗಳು. ಅವರು ತಾವು ದೇಶದ, ಸಾರ್ವಜನಿಕರ ಗಂಟನ್ನು  ಹೊಡೆಯಲು ಬಳಸುವ ಕಾರ್ಯಕ್ಷೇತ್ರ ರಾಜಕೀಯ ಸಂತೆ. ಇಲ್ಲಿ ನೋಟಿನ ಕಂತೆಯದೇ ಮೇಲುಗೈ. ಆ ಕಂತೆಗಳ ಗಂಟುಗಳನ್ನು ಕದಿಯಲು ಅವರು ಯಾವ ಮಟ್ಟಕ್ಕೆ ಬೇಕಾದರೂ ಏರುತ್ತಾರೆ. ಆಮೇಲೆ ಯಾವ ಮಟ್ಟಕ್ಕಾದರೂ ಮರ್ಯಾದೆ ಎಲ್ಲಿತ್ತೋ ಅಲ್ಲೇ ಬಿಟ್ಟು   ಇಳಿಯುತ್ತಾರೆ. ಯಾರು ಏನೇ ಅಂದರು, ಏನೇ ಜರಿದರು, ಗಂಟು ಕದ್ದೆ ಕದಿಯುತ್ತಾರೆ. ಭೂಮಿಯ ಅಂತರಾಳದ  ಒಳಪದರದಲ್ಲಿ   ಗಂಟು ಇದ್ದರು ಅದನ್ನು ಅಗೆದು-ಬಗೆದು ತಗೆದ  ಅದೆಷ್ಟೋ ಉದಾಹರಣೆಗಳು ನಮ್ಮ ಮುಂದೆ ಈಗಲೂ ಇವೆ. ಅದು ನಮ್ಮ ಗಂಟಾದರೂ ನಾವು ಮಾತ್ರ ಬಾಯಿ ಬಿಡದೆ, ಮುಖ ಮಾತ್ರ ಗಂಟು ಹಾಕಿಕೊಂಡು ಕೂತುಬಿಡುತ್ತೇವೆ. ನಮ್ಮ ಜನ ಪ್ರತಿ"ನಿಧಿ"ಗಳು ಮಾತ್ರ ತಮ್ಮ ಕುಟುಂಬದವರಿಗೆ ಮಾತ್ರವಲ್ಲದೇ ಬೇರೆ ಬೇನಾಮಿ ಜನಕ್ಕೆಲ್ಲ "ನಿಧಿ ಗಂಟು"ಗಳನ್ನು ಸಂಗ್ರಹಿಸುತ್ತಾರೆ, ನಮ್ಮ ಮಟ್ಟಿಗೆ ಅದು ಗಂಟು ಕದಿಯುವುದು ಎಂದು ಅನ್ನಿಸುತ್ತದೆ ಅಷ್ಟೇ.



            ಇದೇನಪ್ಪ ಬರಿ ಇವನು ರಾಜಕೀಯದವರನ್ನು ಮಾತ್ರ ಕಳ್ಳ ಅಂತ ಅನ್ನುತ್ತಾನೆ, ನಾವೇನೂ ತುಂಬಾ ಸಾಚಗಳ ??? ಹ ಹ ಹ,  ನಾವೇನೂ ಸಾಚಗಳಲ್ಲ ನಾವು ಕೂಡ ಕಳ್ಳರೇ. ನಾವು ಕೂಡ ಒಂದು ವಯಸ್ಸಿನ್ನಲ್ಲಿ ಅಂದರೆ ಚಿಕ್ಕವರಿದ್ದಾಗ ಅಪ್ಪ-ಅಮ್ಮ ಮಾಡಿದ ಗಂಟನ್ನು ಕಳೆಯುತ್ತೇವೆ, ದೊಡ್ಡವರಾದ ಮೇಲೆ ಮೀಸೆಗಳು ಚಿಗುರುವ ಸಮಯದಲ್ಲಿ ಮೇಲೆ ಹೇಳಿದ ಹಾಗೆ ಸೌಂದರ್ಯದ ಗಂಟು ಅಂದರೆ ಹೆಣ್ಣನ್ನು ಕದಿಯ ಬಯಸುತ್ತೇವೆ. ಹೀಗೆ ಮೊನ್ನೆ ನನ್ನ ಸ್ನೇಹಿತ ಇದೆ ರೀತಿಯ ಒಂದು ಗಂಟು ಕದಿಯಲು ಹುಡುಗಿಯ ಬಳಿ ಹೋಗಿದ್ದಾಗ ನೆಡೆದ ಒಂದು ಸಣ್ಣ ಸುಂದರ ಘಟನೆಯ ಬಗ್ಗೆ ನಾನು ಹೇಳ ಬಯಸುತ್ತೇನೆ. ಎಷ್ಟೇ ದೈರ್ಯವಾಂತರಾದರೂ, ಎಷ್ಟು ಕೆರೆ ನೀರು ಕುಡಿದಿದ್ದರೂ ಸಹ,  ಹುಡಿಗಿಯ ಬಳಿ ಹೋಗಿ ನಮ್ಮ "ಪ್ರೀತಿಯ ಗಂಟು"  ಬಿಚ್ಚಿಡಲು ನಿಜವಾದ ಗಂಡೆದೆ ಬೇಕೇ ಬೇಕು. ಅದೇ ರೀತಿ ನಮ್ಮ ಹುಡುಗ ಹುಡುಗಿ ನೋಡಿದ, ನಿಜವಾಗಿಯೂ ಅವಳು ಸೌಂದರ್ಯದ ಗಂಟೆ ಆಗಿದ್ದಳು. ಆ ಗಂಟನ್ನು ಗಂಟು ಹಾಕಿಕೊಳ್ಳಲೇ ಬೇಕು  ಎಂದು ನಿರ್ದರಿಸಿದ.  ಒಮ್ಮೆ ಒಳ್ಳೆಯ ಸಮಯ ನೋಡಿ, ಒಬ್ಬಳೇ ಇದ್ದಾಗ ತನ್ನ ಪ್ರೀತಿಯ "ಭಾವನೆಗಳ ಗಂಟ"ನ್ನು ಅವನು ಅವಳ ಮುಂದೆ ಸಲೀಸಾಗಿ, ಸುಲಲಿತವಾಗಿ, ಯಾವುದೇ ಸಂಕೋಚವಿಲ್ಲದೇ, ತೊಡಕಿಲ್ಲದೆ  ಬಿಚ್ಚಿಟ್ಟ. ಅವಳಿಗೂ ಕೂಡ ತುಂಬಾ ಆಶ್ಚರ್ಯವಾಯಿತು. "ಇದೇನೋ ಇಷ್ಟೊಂದು ಸರಳವಾಗಿ, ನೇರವಾಗಿ ಮನ ಮುಟ್ಟುವಂತೆ ಹೇಳಿಬಿಟ್ಟೆ. ನನಗೆ ನೀನು  ನಿನ್ನ ಭಾವನೆಗಳ ಗಂಟನ್ನು ಬಿಚ್ಚಿಟ್ಟ ಪರಿ ತುಂಬಾ ಇಷ್ಟ ಆಯಿತು, ಹೇಗೋ ಇಷ್ಟು ಸಲೀಸಾಗಿ ಹೇಳಿದೆ ನನಗೆ ಇದನ್ನೆಲ್ಲ " ಅಂದಾಗ ಅವನು , "ಅಯ್ಯೋ ಅದರಲ್ಲಿ ಏನಿದೆ ಚಿನ್ನ , ಅದಕ್ಕೆಲ್ಲ ಬಿಚ್ಚಿಡುವ ಅನುಭವ ಬೇಕಮ್ಮ , ನನಗೆ  ಈಗಾಗಲೇ ನಾಲ್ಕು ಹುಡುಗಿಯರ  ಮುಂದೆ "ಪ್ರೀತಿಯ ಗಂಟು" ಬಿಚ್ಚಿದ ಅನುಭವವಿದೆ ಎಂದು ಹೇಳಿದ. ಆಕೆ ಆಗ ಆ  ಕ್ಷಣಕ್ಕೆ "ಮುಖ ಗಂಟು" ಹಾಕಿಕೊಂಡದ್ದಂತೂ ನಿಜ.


            ಪ್ರೀತಿಸಿದ ಹುಡುಗ ಅಪ್ಪ-ಅಮ್ಮ ಮಾಡಿದ  ಗಂಟನ್ನು ಕಳೆದು ಹುಡುಗಿಯನ್ನು ಗಂಟಾಕಿ ಕೊಂಡರೆ, ಪ್ರೀತಿಸದೇ ಇರುವ ಹುಡುಗ ಗಂಟು ಉಳಿಸಿಕೊಂಡು ಮನೆಯವರ ಸಮ್ಮುಖದಲ್ಲಿ ತನಗೆ ನೀವೇ ಯಾರನ್ನಾದರೂ ಗಂಟು ಹಾಕಿ ಎಂದು ಗೋಗರೆಯುತ್ತಾನೆ. ಅದಕ್ಕೆ ಅವರು ತಮ್ಮ ಪ್ರೀತಿಯ ಮತ್ತು  ಐಶ್ವರ್ಯದ ಗಂಟನ್ನು ತಮ್ಮ ನೆಂಟರ ಮುಂದೆ  ಬಿಚ್ಚಿಡುತ್ತಾರೆ. ಆ ಗಂಟು ನೋಡಿದ ನೆಂಟನು ಮಗಳನ್ನು ಹುಡುಗನಿಗೆ ಗಂಟಾಕಿ, ತಾನು ಅಂಟಿಕೊಳ್ಳುವ ನೆಂಟನಾಗುತ್ತಾನೆ. ಅಳಿಯನೇನು   ಕಡಿಮೆ ಅಲ್ಲ ಹೆಂಡತಿ ತರುವ ಗಂಟು, ಆಮೇಲೆ ಅವನಿಗೆ ಸಿಗುವ ಮಾವನ ಗಂಟಿನ ಮೇಲೆಯೇ ಕಣ್ಣಿಟ್ಟಿರುತ್ತಾನೆ. ಅದು ಸಿಗಲಿಲ್ಲ ಅಂದರೆ ಮುಖ ಗಂಟು ಹಾಕಿ ಕೊರಗುತ್ತಾನೆ. ಒಂದು ರೀತಿಯಲ್ಲಿ ಇಲ್ಲಿ ಎಲ್ಲರೂ ಗಂಟು ಕಳ್ಳರೇ ಮಾವ ಹೆಣ್ಣುಕೊಟ್ಟು INDIRECT ಆಗಿ ಅಳಿಯನ ಗಂಟು ಕಳ್ಳ, ವರದಕ್ಷಿಣೆ ಹಾಳು-ಮೂಳು ಇಸ್ಕೊಂಡು ಮಧುವೆ ಆಗುವ ಅಳಿಯ ಕೂಡ ಮಾವನ  ಗಂಟು ಕಳ್ಳ . 

          ಹೀಗೆ ಒಬ್ಬಬ್ಬರು ಒಂದೊಂದು ರೀತಿಯಲ್ಲಿ ಗಂಟು ಕಳ್ಳರು ಮತ್ತು ಗಂಟು ಮಾಲೀಕರು. ಕವಿಗಳಿಗೆ ಗಂಟು ಎಂದರೆ ಅವರ ಭಾವನೆಗಳು,ಕಲ್ಪನೆಗಳು ಮತ್ತು ಕನಸುಗಳು. ವಾಗ್ಮಿಗಳಿಗೆ ಗಂಟು ಎಂದರೆ ಮಾತುಗಳು. ಕೇಳುವವರು ಸಿಕ್ಕರೆ ಸಾಕು ಹಾಗೆ ಇಂದು-ಮುಂದು ಕೇಳದೇ, ಒಡಕು ಸ್ವಾರೆ, ತೆರೆದ ಪುಸ್ತಕದಂತೆ, ಆ ಭಾರಿ ಗಂಟುಗಳ ಮೊನಚಾದ  ಬಾಣಗಳನ್ನು ನಮ್ಮ ಮೇಲೆ ಪ್ರಯೋಗಿಸಿ, ನಮ್ಮನ್ನು ಕೆಲವೊಮ್ಮೆ ಸಂತೋಷಗೊಳಿಸಿ, ಮತ್ತೊಮ್ಮೆ ಪೇಚಿಗೂ ಸಿಗಿಸುತ್ತಾರೆ. ಅದೇ ರೀತಿ ಒಬ್ಬ ಕವಿ ಹೃದಯಿ ಒಮ್ಮೆ ಒಂದು ಕವಿತೆ ಬರೆದು ತನ್ನ ಹೆಂಡತಿ ಬಳಿ ಹೋಗಿ ಅದನ್ನು ಲಯಬದ್ದವಾಗಿ ಬಿಚ್ಚಿಟ್ಟನಂತೆ, ಆಗ ಅವಳಿಗೆ ಅರ್ಥವಾಗದೆ , ಅದರ ಅರ್ಥ ಕಗ್ಗಂಟಾಗಿ , ಮುಖ ಗಂಟು ಹಾಕಿಕೊಂಡಳಂತೆ. ಕವಿಗೆ ಕವನವನ್ನು ಯಾರಾದರೂ ತಿರಸ್ಕರಿಸಿದರೆ ಕವಿಯನ್ನೇ ತಿರಸ್ಕರಿಸಿದಂತೆ ಎಂದು ಭಾವಿಸುತ್ತಾನೆ. ಅದೇ ರೀತಿ ಈ ಕವಿಗೂ ತುಂಬಾ ಬೇಜಾರಾಗಿ ಬೇರೆ ದಾರಿಯಿಲ್ಲದೇ ಅದೇ ದಾರಿಯ ಕೊನೆಯ ಮನೆಯ ಸಾವಿತ್ರಯನ್ನು ಯಾರಿಗೂ ಗೊತ್ತಿಲ್ಲದೇ ಗಂಟು ಹಾಕಿಕೊಂಡನಂತೆ. 

           ಈ "ಗಂಟು" ಸ್ನೇಹಿತರೆ ನಮ್ಮ ಭಾಷೆಯ ಅತ್ಯಂತ ಅದ್ಬುತ , ಹಾಸ್ಯಮಾಯವಾದ ಅರ್ಥ ಕೊಡುವ ಒಂದು ಶಬ್ದವಾಗಿದೆ. ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಇದನ್ನು ಉಪಯೋಗಿಸುತ್ತೇವೆ. ಹಳ್ಳಿಗಳಲ್ಲೋಂತೂ ಇದರ ಪ್ರಯೋಗ ಮತ್ತು ಭಾವ ವಿಬಿನ್ನವಾಗಿರುತ್ತೆ. ಹಳ್ಳಿಗರು ಅನ್ಯಾಯವಾದಾಗ ಇದನ್ನು ಇನ್ನೊಬ್ಬರನ್ನು ನಿಂದಿಸಲು ಸುಂದರವಾಗಿ ಉಪಯೋಗಿಸುತ್ತಾರೆ. " ಅಯ್ಯೋ ನಿನ್ ಮನೆ ಕಾಯ್ವಾಗ್ ಹೋಗಾ, ನನ್ನ ಗಂಟು ತಿಂದ ನೀ ಮುಂಡಮೋಸಿ ಹೋಗಾ " "ಬೇರೆ ಜನದ್ ಗಂಟು ತಿಂದ ನೀ ಉದ್ದಾರ ಆಗ್ತೀಯ ಎನ್ಲಾ ??? " ಹೀಗೆ ಇನ್ನೂ ಅನೇಕೆ ಅದ್ಬುತ ಬೈಗುಳಗಳಿವೆ. ನೀವ್ ಹಳ್ಳಿಗಳಲ್ಲಿ ನಿಮ್ಮ ಕಿವಿಗಳಲ್ಲೇ ಅವುಗಳನ್ನು ಖುದ್ದಾಗಿ ಕೇಳಿದ್ರೆ ತುಂಬಾ ಮಜ ಬರುತ್ತೆ. ನಾ ಏನೇ ಹೇಳಿದ್ರು ಅದು ಅಷ್ಟೊಂದು ಎಫೆಕ್ಟ್ ಕೊಡೋಲ್ಲ ಬಿಡಿ.  ಹಳ್ಳಿಯಲ್ಲಿ ಗಂಟುಗಳು ಮತ್ತೊಂದು ಬಗೆಯಲ್ಲೂ ಹಿತ   ಕೊಡುತ್ತೆ ನೋಡಿ. ಬಿಸಿಲಲ್ಲಿ ತನಗಾಗಿ ದುಡಿಯುವ ತನ್ನ  ಗಂಡನಿಗೆ ಅವನ ಪ್ರೀತಿಯ  ಹೆಂಡತಿ ಹೊಲದ ಬದುವಿನ ಮೇಲೆ ಬಳುಕುತ್ತಾ  "ಬುತ್ತಿ ಗಂಟ"ನ್ನು ತರುತ್ತಾಳೆ. ಆಕೆ ಬರುವುದನ್ನು ನೋಡಿದ ತಕ್ಷಣ ಆ ಬಳಲಿದ ರೈತ ತನ್ನೆಲ್ಲ ಬವಣೆಗಳನ್ನು ಮರೆತು, ಗಮ್ ಎನ್ನುವ ಬುತ್ತಿ ಗಂಟು ಬಿಚ್ಚಿ ಅದರ ಸವಿ ಸವಿಯುತ್ತಾನೆ. ಹೀಗೆ ಗಂಟಿಗೂ ಬವಣೆಗಳನ್ನು ಮರೆಸುವ ಶಕ್ತಿ ಇದೆ ನೋಡಿ.  ನಮಗೆ ಆ ಹಳ್ಳಿಗನ ಆ ಸಹಜ ಸುಖ ಅಥವಾ ಆ  ಪುಣ್ಯ ಇಲ್ಲವೇ ಇಲ್ಲ  ಅಲ್ಲವೇ ??? ಏಕೆಂದರೆ ನಮ್ಮದು ಜಾಮ್ ರಸ್ತೆಗಳು, ಲಂಚ್ ಬಾಕ್ಸ್ಗಳು ಮೇಲಾಗಿ ಸೆಲ್ಫ್ ಸರ್ವೀಸ್ ....

           ನಮಗೆಲ್ಲ ಗೊತ್ತಿರೋ ಹಾಗೆ ಇತ್ತೀಚಿಗೆ ಒಂದು ಭಾರಿ ಗಂಟುಗಳ್ಳರ ವಿರುದ್ದ ಅಂಧೊಲನವೂ ನಮ್ಮ ದೇಶದಲ್ಲಿ  ಆಯಿತು. ಅದರಲ್ಲಿ ನಮ್ಮ ಅಣ್ಣ ತಮ್ಮನ್ನು ತಾವು  ಸಂಪೂರ್ಣವಾಗಿ ತೊಡಗಿಸಿಕೊಂಡರು. ಬಹಳೋಶ್ಟು ಆದಿಕಾರಿಗಳು, ರಾಜಕಾರಿಣಿಗಳು ಇನ್ನೂ ಅನೇಕರು,  ಜನರ ಹಾಗು ದೇಶದ ಗಂಟು ತಿಂದು ನೀರು ಕುಡಿಯುತ್ತಿದ್ದಾರೆಂದು, ಪಾಪ ನಮ್ಮ ಅಣ್ಣ  ಅವರು ತಮ್ಮ ಅನ್ನ-ನೀರು ಬಿಟ್ಟು ಸ್ವಲ್ಪ ದಿನ ಉಪವಾಸ ಮಾಡಿಯೂ ಬಿಟ್ಟರು. ಆದರೆ ಗಂಟುಗಳ್ಳರೂ ಮಾತ್ರ ಇನ್ನೂ ಗಂಟು ಕದಿಯುತ್ತಲೇ ಇದ್ದಾರೆ, ಗಂಟು ನುಂಗುತ್ತಲೇ ಇದ್ದಾರೆ. ಪಾಪ ಅಣ್ಣ ಇದನ್ನೆಲ್ಲ ನಿಲ್ಲಿಸಲು ಇನ್ನೂ ಏನೇನು ಮಾಡಬೇಕೋ ಯಾರಿಗೂ ಗೊತ್ತಿಲ್ಲ.  ಒಂದಲ್ಲ ಒಂದು ರೀತಿಯಲ್ಲಿ ನಾವೆಲ್ಲರೂ ಗಂಟು ಕಳ್ಳರೆ. ಚಿಕ್ಕವರಿದ್ದಾಗ ಅಪ್ಪ ಅಮ್ಮನ ಗಂಟು, ದೊಡ್ಡವರಾದಾಗ ದೇಶದ ಗಂಟು, ಇನ್ನೋಬರ , ಮತ್ತೊಬ್ಬರ ಗಂಟುಗಳನ್ನು ನಾವು ಕದಿಯುತ್ತಲೇ, ನುಂಗುತ್ತಲೇ ಇರುತ್ತೇವೆ. ನಮಗೆ ಅಲ್ಲದೇ ನಮ್ಮ ಮಕ್ಕಳು, ಮೊಮ್ಮಕ್ಕಳಿಗೂ ಗಂಟು ಮಾಡೋ ಮುಂದಾಲೋಚನೆ ಮಾಡುತ್ತೇವೆ. ಅದೇ ರೀತಿ ಗಂಟು ಗುಳಮ್ ಮಾಡಲು ಶತಾಯಾಗತ ಪ್ರಯತ್ನವನ್ನು ಮಾಡುತ್ತೇವೆ. ನಾವು ಮಾಡದಿದ್ದರೂ ನಮ್ಮ ಸಮಾಜ ನಮ್ಮ ವಾತಾವರಣ  ನಮ್ಮನ್ನು  ಗಂಟುಗಳ್ಳಾರನ್ನಾಗಿ ಮಾಡುತ್ತದೆ. ಹೀಗೆ ಈ ಹಾಳಾದ ಗಂಟು ನಾವು ಬಿಡಲು ಇಚ್ಛಿಸಿದರು ಅದು ಮಾತ್ರ ನಮ್ಮನ್ನು ಬಿಡದೆ ನಮಗೆ ಅಂಟಿಕೊಂಡು ಬಿಡಿಸಲಾಗ ಕಗಂಟಾಗಿದೆ. 

            ಒಟ್ಟಿನಲ್ಲಿ ಗಂಟು ಯಾವುದೇ ಆಗಿರಲಿ, ಅದು ಹೇಗೆ ಇರಲಿ, ಭಾರ ಕಡಿಮೆ ಇದ್ದರೆ, ಸುಂದರವಾಗಿದ್ದರೆ ನಮಗೆ ಅದನ್ನು ಸಂಪಾದಿಸಲು, ಕದಿಯಲು ಸುಲಭವಾಗುತ್ತೆ. ಸೌಂದರ್ಯದ ಗಂಟು ಕದಿಯಬೇಕಾದಗ ಮಾತ್ರ ಗಾತ್ರದ ಬಗ್ಗೆ ಗಮನ ಕೊಡಿ. ಒಳ್ಳೆಯ ಗಂಟೆ ಬ್ರಹ್ಮ-ಗಂಟಾಗಲಿ. ನಮ್ಮ ಮುಂದಿನ ಪೀಳಿಗೆಗೆ ನಾವು ಒಳ್ಳೆಯ, ಸುಂದರವಾದ, ಸಾತ್ವಿಕವಾದ, ಗಂಟನ್ನು ಬಿಟ್ಟು ಹೋಗುವ . ಆಮೇಲೆ ಅವರಿಗೆ ಬೇಕಾದ ಗಂಟುಗಳನ್ನು ಅವರು ಆರಿಸಿಕೊಳ್ಳುತ್ತಾರೆ. ಮೊದಲು ನಾವು ಒಳ್ಳೆಯ ಗಂಟು ಕದಿಯಲು ಪ್ರಯತ್ನ ಪಡೋಣ. 

          ಇತೀಚೆಗೆ ನಾನು ಕೂಡ ಬೇಜಾನ್ ಗಂಟುಗಳನ್ನು ತಿಂದೆ , ನುಂಗಿದೆ . ಆದ್ರೆ ಯಾವ ಗಂಟು ನುಂಗಿದೆ, ಯಾರ ಗಂಟು ನುಂಗಿದೆ ಅನ್ನೋದು  ಸಕತ್ ಆಗಿ ಇದೆ. ಗಂಟು ತಿಂದಾಗ ಗಂಟು ಕಳೆದು ಕೊಂಡವರು ಸಾಮಾನ್ಯವಾಗಿ ಬೇಜಾರಾಗುತ್ತಾರೆ , ಇಡೀ ಶಾಪವನ್ನೇ ಕೊಡತ್ತಾರೆ. ಆದರೆ ನಾನು ಗಂಟು ನುಂಗಿದಾಗ ಮಾತ್ರ ಎಲ್ಲರೂ ತುಂಬಾ ಖುಷಿ ಪಟ್ಟರು, ಷಹಬ್ಬಾಷ್ ಗಿರಿ ಕೂಡ ಕೊಟ್ರೂ. ಅಂತಹ ಅದೇನು ಆ ಗಂಟು ಅಂತೀರಾ ??? " ನಮ್ಮ ಅತ್ತಿಗೆ ಕಲಿಯುವ ಸಂದರ್ಭದಲ್ಲಿ  ಮಾಡಿದ ರಾಗಿ ಮುದ್ದೆಯಲ್ಲಿ ಸಿಕ್ಕ ಹೇರಳವಾದ, ಹರಳು-ಹರಳಾದ, ದುಂಡು-ದುಂಡನೆ ಮುದ್ದೆಯ ಗಂಟುಗಳು "

       ಲಂಚಕೋರರು "ದೇಶದ ಗಂಟು"
          ನುಂಗಿದ್ದಕ್ಕೆ
          ಸಿಡಿಮಿಡಿಗೊಂಡರು "ಅಣ್ಣ
          ನಮ್ಮತ್ತಿಗೆಯ "ಮುದ್ದೆಯ ಗಂಟು"
          ನುಂಗಿದ್ದಕ್ಕೆ 
          ಸಂತೋಷಗೊಂಡನು 
          ನನ್ನ ಸ್ವಂತ "ಅಣ್ಣ"

ನಿಮಗಾಗಿ 
ನಿರಂಜನ್  

ಭಾನುವಾರ, ಏಪ್ರಿಲ್ 22, 2012

ಪ್ರಕೃತಿಯ

                               
                                                ಮರೆತೆವಾ ನಾವೆಲ್ಲರು.......

ದೊಂದು ರಜ ದಿನ , ಬೆಳಿಗ್ಗೆ ಜಲ್ದಿ ಎದ್ದು  ಬೇಸಗೆಯ  ಸೂರ್ಯನ ಎಳೆ ಬಿಸಿಲಿನಲ್ಲಿ  ಒಂದು ಸಣ್ಣ ವಾಕ್ ಹೊರಟಿದ್ದೆ. ಎಲ್ಲರೂ ಇಷ್ಟ ಪಡುವಂತೆಯೇ ನಾನು ಕೂಡ ಈ ಹಸಿರು  ಗಿಡ-ಮರ, ಹಕ್ಕಿ-ಪಕ್ಷಿಗಳ ಚಿಲಿ -ಪಿಲಿ ಜಾಸ್ತಿ ಇರುವ, ನಾಯಿಗಳು ಹಾಗು ಜನಸಂದಣಿ ಕಡಿಮೆ ಇರುವ ದಾರಿಗಳನ್ನೇ ಇಷ್ಟ ಪಡ್ತೇನೆ ಹಾಗು ಅಂತಹ ಜಾಗಗಳಲ್ಲಿ ಸದಾ ಇರಲು ಕೂಡ  ಬಯಸುತ್ತೇನೆ. ಅದೇ ತರ ಆ ದಿನ ಕೂಡ ಅಂತಹ ಒಂದು ದಾರಿಯನ್ನೇ ಆಯ್ಕೆ ಮಾಡಿಕೊಂಡಿದ್ದೆ ವಾಕ್ ಮಾಡಲು.



 
             
               ನಿಜಕ್ಕೂ ಅದು ಒಂದು ಪಕ್ಕ ರೆಸಿಡೆನ್ ಶಿಯಲ್  ಪ್ರದೇಶ ಆದರೂ ಕೂಡ ಸಕತ್ ಡಿಫರೆಂಟ್ ಆಗಿ ಇತ್ತು. ಆ ರಸ್ತೆಯ ಇಕ್ಕೆಲಗಳಲ್ಲೂ ಸುಂದರ ಮನೆಗಳು , ಮನೆಗಳು ಸ್ವಲ್ಪ ಹಳೆಯವಾಗಿದ್ದರೂ, ಸುಂದರವಾಗೇ ಇದ್ದವು. ಒಂದು ಕ್ಷಣ ನನಗೆ ಏನು ಇಂತಹ ಬೆಂಗಳೂರಿನಲ್ಲಿ, ಅದು ಈ ಪರಿಯ ಬೇಸಗೆಯ ಕಾಲದಲ್ಲೂ  ಈ ರೀತಿಯ ವಾತಾವರಣ ?? . ನಿಜವಾಗಿಯೂ  ಸ್ನೇಹಿತರೆ  ಸೂರ್ಯನ ಬಿಸಿಲು ಎಲ್ಲಿ ರಸ್ತೆಗೆ ಬಿದ್ದು ಬಿಡುತ್ತೋ ಅಂತ ರಸ್ತೆಯ ಬದಿಯಲಿದ್ದ ಆ ಬೃಹದಾಕಾರದ ಮರಗಳು ತಾವೇ ಬಿಸಿಲೀರಿ ರಸ್ತೆಗೆ ನೆರಳಾಸಿದ್ದವು. ಕೋಗಿಲೆ ಕೂಗು ಮಾವಿನ ಮರಗಳಿಂದ ನನ್ನ ಕಿವಿಗೆ ಕೇಳಿದರೆ, ಸಂಪಿಗೆಯ ಸುವಾಸನೆ ಗಗನ ಚುಂಬಿಸುತ್ತಿದ್ದ ಆ ಸಂಪಿಗೆ ಮರದಿಂದ ನನ್ನ ಮೂಗಿಗೆ ಬಡಿಯುತ್ತಿತ್ತು. ರಸ್ತೆಗೆ ಬಿದ್ದ ಗಸಗಸೆ ಮರದ ಹಣ್ಣುಗಳ ಆ ವಾಸನೆಯಂತು ಬಾಯಲ್ಲಿ ನೀರೂರಿಸುತಿತ್ತು , ಹಕ್ಕಿ ಪಕ್ಷಿಗಳು ಆ ಮರಗಳಲ್ಲಿ ಕಾಣದಂತೆ ಅಡಗಿ ಹಾಡಿದರೂ  ಅವುಗಳ ಹಾಡು ಮಾತ್ರ ನನ್ನ ಕಿವಿಗೆ ಕೇಳಿಸುತ್ತಿತ್ತು. ಕಾಯಿಡಿದ ಮಾವಿನ ಮರದ ಮೇಲೊಂದು ಮಂಗನ  ಕುಟುಂಬವು ಮಾವಿನ ಕಾಯಿಯನ್ನು ತಿನ್ನುವ ದೃಶ್ಯವಂತೂ ಸೊಗಸಾಗಿತ್ತು. ಮನೆಯ ಮುಂದೆ ಇರುವ ಸ್ವಲ್ಪ ಜಾಗದಲ್ಲೇ ಅಲ್ಲಿಯ ಜನರು ಹೂವು ಹಣ್ಣುಗಳ ಗಿಡ ಸಾಕಿಕೊಂಡಿದ್ದರು. ಪೇರಲ, ಸಪೋಟ ,ಗಸಗಸೆ, ದಾಳಿಂಬೆ ಹಣ್ಣಿನ ಗಿಡಗಳಾದರೆ, ಮಲ್ಲಿಗೆ ಬಳ್ಳಿಗಳು , ದಾಸವಾಳ , ಕಣಗಿಲೆ ಹಾಗೆ ಇನ್ನು ಹಲವು ಹೂವಿನ ಗಿಡ ಬಳ್ಳಿಗಳಿದ್ದವು. ದೊಡ್ಡ ಪೊದೆಗಳ ತರ ಇದ್ದ ಹೂವು ಗಿಡ ಬಳ್ಳಿಗಳು ಸಣ್ಣ ಸಣ್ಣ ಪಕ್ಷಿಗಳಾದ ಗುಬ್ಬಿಗಳು,ಹಮ್ಮಿಂಗ್ ಬರ್ಡ್ ಗಳಿಗೆ  ಆವಾಸ ಕಲ್ಪಿಸಿದ್ದವು.ಆದಿ ಬೀದಿಗಳೆಲ್ಲ, ಊರು ಕೇರಿಗಳೆಲ್ಲ, ಸಂಪೂರ್ಣ ಪ್ರಪಂಚವೆಲ್ಲ  ಹೀಗೆಯೇ  ಹಚ್ಚ ಹಸುರಾಗಿದ್ದರೆ , ಹಕ್ಕಿ-ಪಕ್ಕಿಗಳಿಂದ ತುಂಬಿದ್ದರೆ  ಅದೆಷ್ಟು ಚಂದ ಅಂತ ಅಂದು ಕೊಂಡೆ .




        






                   ಹಾಗೆ ಸವಿಯುತ್ತ ಮುಂದೆ ಸಾಗಿದ ನಾನು ಅಲ್ಲಿಯೇ ಮರಗಳ ನೆರಳಲ್ಲಿ ಆಡುತಿದ್ದ ಚಿಕ್ಕ ಮಕ್ಕಳ ಗುಂಪನ್ನು ಮಾತಾಡಿಸಿ, ಇವರೆಲ್ಲ ಇಂತಹ ವಾತಾವರಣದಲ್ಲಿ ಇರುವರಲ್ಲ ಅದೆಷ್ಟು ಅದೃಷ್ಟವಂತರು ಅಂತ ಮನಸ್ಸಿನಲ್ಲೇ ಅಂದುಕೊಂಡೆ. ಇದೆಲ್ಲವೂ ನಮ್ಮ  ಪ್ರದೇಶಗಳ ಒಂದು ಮುಖವಷ್ಟೇ. ಇನ್ನೊಂದು ಮುಖದ ಬಗ್ಗೆಯೂ ನಾನು ಹೇಳಲೇಬೇಕು.  ಹೀಗೆ ಮುಂದೆ ಬಂದ ನಾನು ಅಲ್ಲಿಯೇ ಇದ್ದ ನಮ್ಮ ಪ್ರದೇಶದಲ್ಲಿ  BBMP ನೋಡಿಕೊಳ್ಳುವ ಒಂದು ಉದ್ಯಾನವನವನ್ನು ಹೊಕ್ಕು , ಸ್ವಲ್ಪ ಹೊತ್ತು ಸುತ್ತಾಡಿದೆ. ಆ ಉದ್ಯಾನವನವೂ ಮರಗಿಡ, ಹೂ ಬಳ್ಳಿಗಳಿಂದ  ಅದ್ಬುತವಾಗಿದೆ. ಅಲ್ಲಿ ಜನಸಂದಣಿ ಜಾಸ್ತಿ ಇರುವ ಕಾರಣವೇನೋ ಹಕ್ಕಿ ಪಕ್ಷಿಗಳು  ಅಷ್ಟೊಂದು ಇಲ್ಲ . ಆದರೂ ನೋಡಲು ತುಂಬಾ ಹಸಿರಾಗಿದ್ದು ವಿಶಾಲವಾದ ಜಾಗ. ಎಲ್ಲಿ ನೋಡಿದರು   ಅಲ್ಲಿ ಹಸಿರು, ನೆಲ ಕಾಣದಂತೆ ಹುಲ್ಲು ಬೆಳಸಿ, ದಿನವು ಅದಕ್ಕೆ ನೀರುಣಿಸಿ BBMP  ಅದರ ಅಬಿವೃದ್ದಿ ಮಾಡುತ್ತಿದೆ. ಆ ಉದ್ಯಾನವನದಲ್ಲಿ , ಹಸಿರು ಹುಲ್ಲಿದೆ, ಮರಗಿಡಗಳ ನೆರಳಿದೆ, ಬಹಾಳೋಷ್ಟು ನೀರಿದೆ ಆದರೆ ಉದ್ಯಾನವನಕ್ಕೊಂದು ದೊಡ್ಡ ತಂತಿ ಬೇಲಿಯೂ ಇದೆ. ಮನುಷ್ಯ ಪಕ್ಷಿಗಳಿಗೆ ಬಿಟ್ಟರೆ ಎಲ್ಲಿ ಯಾರಿಗೂ ಪ್ರವೇಶವಿಲ್ಲ. ಬೇಸಗೆಯ ದಿನವಾದರಿಂದ ಸೂರ್ಯ ಅಷ್ಟರಲ್ಲೇ ಸಾಕೊಷ್ಟು ಮೇಲೇರಿ ಬಂದಿದ್ದ ಪ್ರಕರವಾದ ಬಿಸಿಲನ್ನು ಕೂಡ  ಚೆಲ್ಲಿದ್ದ. ಅದೇ ಸಮಯದಲ್ಲಿ ಆ ಬಿಸಿಲಿಗೆ ದಣಿದಂತೆ ಕಾಣುತಿದ್ದ ೩ ಹಸುಗಳ ಗುಂಪೊಂದು ಅಲ್ಲಿ ಕಂಡಿತು. ಅಲ್ಲಿ ಹುಲ್ಲಿಗೆ ನೀರು ಹಾಯಿಸುತ್ತಿರುವುದು ಅವುಗಳಿಗೆ ಕಾಣುತ್ತಿವೆ , ಹಸಿರು ಹುಲ್ಲು ಕೂಡ ಅಲ್ಲಿದೆ ಆದರೆ ಅದೆಲ್ಲ ಆ ಹಸುಗಳಿಗೆ ಸಿಗುತ್ತಿಲ್ಲ. ಅವು ನೋಡುತ್ತಲೇ ಇವೆ ಹೊರಗಡೆ ಇಂದ. ಅವೆಷ್ಟು ಬಾಯಾರಿದ್ದವೋ ಅದೆಷ್ಟು ಹಸಿದಿದ್ದವೋ.???

                ನಾವು ಅರ್ಥ ಮಾಡಿಕೊಳ್ಳಬೇಕಾದ ವಿಷಯವೇನೆಂದರೆ ನಮ್ಮ  ನಾಗರಿಕತೆ ಹೆಚ್ಚಾಗಿ ಅವುಗಳಿಗೆ ಕುಡಿಯಲು ನೀರು, ಆಹಾರ ಸರಿಯಾದ ಪ್ರಮಾಣದಲ್ಲಿ ಈ ಪ್ರಾಣಿ ಪಕ್ಷಿಗಳಿಗೆ  ಪೇಟೆಗಳಲ್ಲಿ ಸಿಗುತ್ತಿಲ್ಲ . ಮೊದಲೆಂದರೆ ನೀರಿನ ಹೊರ  ಚರಂಡಿಗಳಿದ್ದವು, ಬೀದಿಗೊಂದು ನಲ್ಲಿ - ಬೋರುಗಳು, ಅಲ್ಲಿ ನಿಂತ ನೀರು , ಮುಚ್ಚದ ನೀರಿನ  ಟ್ಯಾಂಕುಗಳು  ಈ ಪ್ರಾಣಿ ಪಕ್ಷಿಗಳಿಗೆ ನೀರಿನ ಆಕರವಾಗಿರುತ್ತಿದ್ದವು , ಈಗ ಅವುಗಳು ಇಲ್ಲ. ನೀರಿನ ನಲ್ಲಿಗಳು ಈಗ  ನಮ್ಮ ಮನೆಯೊಳಗೇ ಇವೆ,  ಟ್ಯಾಂಕುಗಳಿಗೆ ಮುಚ್ಚಣಿಕೆಗಳು ಬಂದಿವೆ. ಇನ್ನು ಬೋರುಗಳಿದ್ದರು ಅವುಗಳಲ್ಲಿ  ನೀರು ಇಲ್ಲ. ಅದಕ್ಕೆ ಕಾರಣ ಭೂಮಿಯಲ್ಲಿ ಅಂತರ್ಜಲದ ಕೊರತೆ.  ಹಾಗಾಗಿ ಈ ಬೆಸಿಗೆಯಲೊಂತು ಪಕ್ಷಿಗಳಿಗೆ ನೀರುಡುಕುವುದು ಅಸಾದ್ಯದ ಕೆಲಸ. ಸ್ನೇಹಿತರೆ ಸ್ವಲ್ಪ ಯೋಚಿಸಿ ನಮಗಂತೂ ಬೀದಿ ಬೀದಿಗೆ ತಂಪು ಪಾನೀಯಗಳ ಅಂಗಡಿಗಳು, Fruit  juice  ಸಿಗುವ ಅಂಗಡಿಗಳು ಇವೆ ಆದರೆ ಈ ಚಿಕ್ಕ ಪುಟ್ಟ ಪಕ್ಷಿಗಳಿಗೆ ನೀರೆಲ್ಲಿ ಸಿಗಬೇಕು ???   ನಮ್ಮ ಮನೆಯ ಮುಂದಿನ ಜಾಗವನ್ನೆಲ್ಲ ಕಾಂಕ್ರೀಟು ಗೊಳಿಸಿ, ಕಾರ್ ಪಾರ್ಕಿಂಗ್ ಮಾಡಿಕೊಂಡರೆ ಹೇಗೆ ??? ಮಕ್ಕಳಿಗೆ Dust allergy ಅಂತ ಮಣ್ಣಿನ ಜಾಗ ಬಿಡದೆ, ಹಾವು, ಹುಳು ಹುಪ್ಪಡಿ ಸೇರುತ್ತವೆಂದು ಮನೆಯ ಮುಂದೆ ಗಿಡ ಮರಗಳನ್ನು ಹಾಕದಿದ್ದರೆ ಪಕ್ಷಿಗಳು ಹೇಗೆ ಬದುಕಬೇಕು ???? ಎಷ್ಟೋ ಜನರು ಒಣಗಿದ ಎಲೆಗಳು ಬೀಳುತ್ತವೆ, ದಿನವು ಕಸ ಹೊಡೆಯುವರಾರು ಎಂದು ಮರಗಳನ್ನು ಕಡಿಸಿರುವವರು ಇದ್ದಾರೆ. ನಾವು ಹೀಗೆ ಮಾಡಿದರೆ, ಮರ ಗಿಡ ಕಡಿದರೆ, ಬೆಳಸದಿದ್ದರೆ, ಸಾಮನ್ಯವಾಗಿ ನಮ್ಮ ಜೊತೆಯಲ್ಲೇ ಸಾವಿರಾರು ವರ್ಷಗಳಿಂದ ಸಹಬಾಳ್ವೆ ಮಾಡಿಕೊಂಡಿದ್ದ ಕೋತಿ, ಗಿಳಿ, ಪಾರಿವಾಳ, ಗುಬ್ಬಿ, ಹಮ್ಮಿಂಗ್ ಬರ್ಡ್, ಮೈನ, ಕೋಗಿಲೆಗಳು, ಟಿಟ್ಟಿಬಗಳು  ಹೇಗೆ ನಮ್ಮೊಡನೆ ಇರುತ್ತವೆ. ಅವುಗಳಿಗೆ ನೀರು, ದಾನ್ಯ, ಗೂಡು ಕಟ್ಟಲು, ಮಾವು, ಸಂಪಿಗೆ, ಬೇವು, ಮಲ್ಲಿಗೆ ಬಳ್ಳಿಗಳು ಎಲ್ಲಿ ಸಿಗುತ್ತವೆ ??? ನಾಳೆ  ಇವುಗಳೊಂದಿಗೆ ಬಾಳುವ ಸಹಜ ಸುಖವನ್ನು ನಾವು ಕಳೆದು ಕೊಲ್ಲುವುದಿಲ್ಲವೇ ??? ನಮ್ಮ ಮುಂದಿನ ಪೀಳಿಗೆಗೆ ನಾವು ಉಳಿಸಿ ಕೊಡುವುದಾದರೂ ಏನು ???  ವರ್ಷ ವರ್ಷಕ್ಕೂ ಬರಿ ಬಿಸಿಲು ಜಾಸ್ತಿ ಆಗುತ್ತಿದೆ ಎಂದು ನಾವು ಅಂದುಕೊಳ್ಳುತ್ತೇವೆ ಮತ್ತು ಪ್ರಕೃತಿಗೆ ಇಡಿ ಶಾಪವನ್ನೇ ಹಾಕುತ್ತೇವೆ ಹೊರತು ನಾವು ಈ ಬಿಸಿಲು  ಕಡಿಮೆ ಆಗಲು ಏನಾದರು ಕ್ರಮ ಕೈಗೊಂಡಿದ್ದೇವೆಯೇ ??? ಬರಿ ಚೆನ್ನಾಗಿರುವ ಪ್ರಕೃತಿಯನ್ನು ಸವಿಯುವ ನಾವು ಆ ಸೊಬಗನ್ನು ಮತ್ತೊಷ್ಟು ಹೆಚ್ಚಿಸಲು ನಾವೇನಾದರೂ ಮಾಡುತ್ತಿದ್ದೇವೆಯೇ ???  ಹಕ್ಕಿ ಪಕ್ಕಿಗಳಿಗೆ ನೀರುಣಿಸಿದ್ದೆವೆಯೇ ???
 


                ಸ್ನೇಹಿತರೆ, ನಾವೆಷ್ಟೇ ಮುಂದುವರಿದರೂ, ಎಷ್ಟೇ ದುಡಿದರೂ, ಪ್ರಾಣಿ ಪಕ್ಷಿಗಳಿಲ್ಲದ, ಮರ-ಗಿಡ, ಬಳ್ಳಿಗಳಿಲ್ಲದ, ಹಕ್ಕಿ ಪಕ್ಕಿಗಳ ಕೂಗಿಲ್ಲದ ನಮ್ಮ  ಬಾಳು ನಿಜವಾಗಿಯೂ ಬರಡು, ಅಂತಹ ಆ ಜೀವನ ಅಸ್ತಿ ಇಲ್ಲದ ದೇಹದಂತೆ. ನಮ್ಮ ಬಳಿ ಅದೆಷ್ಟೇ ದುಡ್ಡು ಇದ್ದರು, ಎಂತಹ ಮನೆ ಇದ್ದರು, ಮನೆಯ ಸುತ್ತ ಹಸಿರು ಬಳ್ಳಿ, ಕುಡಿಯಲು ನೀರು ಇಲ್ಲ ಅಂದರೆ ಅದು ನಮಗೆ ಬದುಕಲು ಯೋಗ್ಯವೇ. ಹಾಗಾಗಿ ನಾನು ವರ್ಷಕ್ಕೆ ಒಂದಾದರು ಗಿಡ ನೆಡುವ ಪ್ರತಿಜ್ಞೆ ಮಾಡಿದ್ದೇನೆ ಅದು ಎಲ್ಲಾದರೂ ಸರಿಯೇ, ಯಾವ ಗಿಡವಾದರು ಸರಿಯೇ. ನಾನು ಗಿಡ ನೆಡಲೇ ಬೇಕು, ನನ್ನ ಮುಂದಿನ ಪೀಳಿಗೆಯು ನನಗೆ ಶಾಪ ಹಾಕದಿರುವಂತೆ ನಾನು ನಡೆದುಕೊಳ್ಳಬೇಕು. ನನ್ನ ಮುಂದಿನ ಜನಾಗಂಗಕ್ಕೆ ಹಾಗು ನನ್ನ ಮುಂದಿನ ಜೀವನದ ಒಳಿತಿಗಾಗಿ ಕೊನೆ ಪಕ್ಷ ವರ್ಷಕ್ಕೆ ಒಂದಾದರು ಒಳ್ಳೆಯ ಗಿಡ ನೆಡಬೇಕು. ನಾಲ್ಕು ಜನರಿಗೆ ಪ್ರಕೃತಿಯ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ತೀರ್ಮಾನಿಸಿದ್ದೇನೆ. ನೀವು ಕೂಡ ಯೋಚಿಸಿ, ಚಿಂತಿಸಿ ನಮ್ಮ ಹಿರಿಯರು ನಮಗೆ ಕೊಟ್ಟ ಈ ವಾತಾವರಣವನ್ನು ನಾವು ಒಳ್ಳೆಯ ರೀತಿಯಲ್ಲೇ ನಮ್ಮ ಮುಂದಿನವರಿಗೆ ಕೊಡಲು ನಿರ್ಧರಿಸಿ.


**  ಸದ್ಯಕ್ಕೆ  ನಮ್ಮ ಮನೆಗಳ ಮುಂದಿನ ಜಾಗಗಳಲ್ಲಿ, ಮಹಡಿಗಳ ಮೇಲೆ ಸ್ವಲ್ಪ ನೀರನ್ನು  ನಮ್ಮ ಪಕ್ಷಿಗಳಿಗೆ ಬೇಸಗೆಯಲ್ಲಿ ಕುಡಿಯಲು ಇಡಬೇಕು.
** ಚಿಕ್ಕ ಪುಟ್ಟ ಗಿಡ ಬಳ್ಳಿಗಳನ್ನು ಸಾದ್ಯವಾದರೆ ನಮ್ಮ ಮನೆಯಂಗಳಲ್ಲಿ, ಕುಂಡಗಳಲ್ಲಿ ಬೆಳೆಸಬೇಕು.
** ವರ್ಷಕ್ಕೆ ಒಂದಾದರು ನಮ್ಮ ಕೈಯಿಂದ ಗಿಡ ನೆಡಲೇಬೇಕು.
** ಆದೊಷ್ಟು ಮಕ್ಕಳಲ್ಲಿ ಪ್ರಕೃತಿಯ ಬಗ್ಗೆ, ಮರ ಗಿಡ, ಹಕ್ಕಿ ಪಕ್ಷಿಗಳ ಬಗ್ಗೆ ಆಸಕ್ತಿ,  ಪ್ರೀತಿ ಹಾಗು ಜಾಗೃತಿ  ಮೂಡುವಂತೆ ಮಾಡಬೇಕು.

ನಿಮಗಾಗಿ 
ನಿರಂಜನ್

ಭಾನುವಾರ, ಏಪ್ರಿಲ್ 8, 2012

ಹನಿಗವನಗಳು .......


                                                        ಹನಿಗವನಗಳು .......
ಸ್ನೇಹಿತರೆ.....

ನಾ ಚಿಕ್ಕವನಾಗಿದ್ದಾಗಿನಿಂದಲೂ , ಅನೇಕ ಲೇಖಕರ ಲೇಖನಗಳಿಗೆ, ಮಾರು ಹೋಗಿದ್ದೇನೆ, ಅವುಗಳಿಂದ ಪ್ರಭಾವಿತನಾಗಿದ್ದೇನೆ, ಕಲಿತಿದ್ದೇನೆ, ಎಷ್ಟೋ ಬಾರಿ ಅವರಿಂದಲೇ ಪ್ರೇರೇಪಿತನಾಗಿ ಅವರನ್ನೇ ಅನುಕರಿಸಿದ್ದೇನೆ ಕೂಡ. ಅವರ ಶೈಲಿಗಳಲ್ಲೇ ಬರಹಗಳನ್ನು ಸಹ ಬರೆದಿದ್ದೇನೆ. ಅವರ ರೀತಿಯಲ್ಲೇ ಮಾತು ಕೂಡ ಆಡುತ್ತೇನೆ. ನಾನು ಅವರನ್ನು ಅನುಕರಿಸುತ್ತೇನೆ ಅನ್ನುವುದಕಿಂತ ಅವರ ಬರವಣಿಗೆ, ಶೈಲಿ  ಹಾಗು ಅವರ ಚಿಂತನೆಗಳಿಂದ ನಾನು ಅಷ್ಟೊಂದು ಪ್ರಭಾವಿತನಾಗಿದ್ದೇನೆ. ಸದಾ ನಗುವ, ನಗಿಸುವ , ನಾಲ್ಕೇ ನಾಲ್ಕು ಸಾಲುಗಳಲ್ಲೇ ಜೀವನ , ಪ್ರೀತಿ , ಸ್ನೇಹ, ಸಂಬಂದಗಳನ್ನು ಹಾಗು ವಿಡಂಬನೆಗಳನ್ನು ಹಾಸ್ಯದ ರೂಪದಲ್ಲಿ ಬಿಚ್ಚಿಡುವ ನಮ್ಮ ನೆಚ್ಚಿನ ಕವಿ ಚುಟುಕ ಬ್ರಹ್ಮರೆಂದೇ ಪ್ರಸಿದ್ದಿಯಾಗಿರುವ ಶ್ರೀ ದುಂಡಿರಾಜ್ ರವರ ಪ್ರಭಾವ ಕೂಡ ನನ್ನ ಮೇಲೆ ಅಷ್ಟಿಷ್ಟಲ್ಲ.  ಇಂತಹ ದೊಡ್ಡ ಹಾಸ್ಯ ಕವಿ  ದುಂಡಿರಾಜ್ ಸಾಹಿತ್ಯದ ಪ್ರಭಾವಕ್ಕೆ ಸಾಕ್ಷಿಯೇ ಈ ಕೆಳಗಿನ ನನ್ನ ಕೆಲವು ಹನಿಗವನಗಳು. ಈ ನನ್ನ ಹನಿಗವನಗಳನ್ನು ನಾನು ನನ್ನ ಮಾನಸ ಗುರುವಾದ ದುಂಡಿರಾಜ್ ರವರಿಗೆ  ಅರ್ಪಿಸುತ್ತಿದ್ದೇನೆ.  
         ಆಸೆ 
ಪರೂಪಕ್ಕೆ ಹತ್ತಿರ ಬಂದ
ನನ್ನವಳ ನಾ ಕೇಳಿದೆ
ಕೈ ಹಿಡಿದು
ಒಂದೇ ಒಂದು 'ಕೊಡುವೆಯ' .....
ಅದಕ್ಕವಳು ಹೇಳಿದಳು
ಸದ್ಯಕ್ಕೆ ಕೈ ಬಿಟ್ಟು ಬಿಡು'WAY"ಯ....
                          
      ನಿರಾಸೆ 
ನ್ನವಳ ಒಡಲು
ಪ್ರೀತಿಯ ಬಾರಿ  'ಕಡಲು'
ಅಂತ ತಿಳಿದಿದ್ದೆ....
ಅದು ನಿಜ ತಾನೇ
ಬಿದ್ದ ಮೇಲೆ  ನನಗೆ ಆಗುತ್ತಲೇ
ಇಲ್ಲ , ಇನ್ನು ಮೇಲೆ 'ಏಳಲು'....


  ಕಾಮನ ಬಿಲ್ಲು 
ದುವೆಯ ಮೊದಲು
ಮಾತು ಮಾತಿಗೂ ಬಿಡುತ್ತಿದ್ದಳು
ಪ್ರೀತಿಯ ಬಾಣಗಳನ್ನು,  ಹೂಡಿ  ನಗು ಮುಖದ ಬಿಲ್ಲು
ಈಗಲೂ ಕೊಡುತ್ತಾಳೆ  ಮಾತು ಮಾತಿಗೂ
ಶಾಕ್ ಕೊಡುವ ಕರೆಂಟ್ ಬಿಲ್ಲು, ನೀರು ಬಿಲ್ಲು

    ಮೊದಮೊದಲು 
ದುವೆಗೂ ಮೊದಲು 
ನನ್ನವಳ ಗಲ್ಲ 
ಸಿಹಿ ಬೆಲ್ಲ....
ಬಹಳ ದಿನವಾಯಿತಲ್ಲ
ಅದೇ ಸಿಹಿ ಬೆಲ್ಲ   
ಈಗ
ಹುಳಿ ಬೆಲ್ಲ  ........


    ಅನ್ವೇಷಣೆ 
ನಮ್ಮ ಪ್ರೀತಿ 
ನೆನ್ನೆ ಮೊನ್ನೆಯದಲ್ಲ 
ಪ್ರಿಯ
ಜನ್ಮ ಜನ್ಮಾಂತರದು...... 
ನಿಜ ನಿಜ 
ಪ್ರಿಯೆ 
ತುಂಬಾ 'ಹಳೆಯದು'
ಅದಕ್ಕೆ ನಾ ಹುಡುಕುತ್ತಿರುವೆ  
ಮತ್ತೊಂದು 'ಹೊಸದು'.... 


        ಇರುವೆ 
ಮೊದಮೊದಲು ನನಗನ್ನಿಸುತ್ತಿತ್ತು
ನೀ ನನ್ನ ಚಲುವೆ
ನಾ ನಿನಗಾಗಿಯೇ  'ಇರುವೆ'......
ಈಗಲೂ ಕೂಡ ಅನ್ನಿಸುತ್ತಿದೆ
ಇನ್ನೂ ಯಾಕೆ ನೀ
ನನ್ನ ಜೊತೆಯಲ್ಲೇ 'ಇರುವೆ'....

   ನಿನ್ನ  ನಲ್ಲ 
ಹೇ ಹುಡುಗಿ, ನಾ ನಿನ್ನ ನಲ್ಲ
ಕೊಡುವೆಯಾ ನಿನ್ನ ಗಲ್ಲ.....
ಲೊ ಹುಡುಗ, ಅದು ನಿನಗಲ್ಲ
ನನ್ನ ನಲ್ಲ ನೀ ಅಲ್ಲವೇ ಅಲ್ಲ.....

   ಬುದ್ದಿವಂತರು 
ದುವೆಗೂ ಮೊದಲೇ ಹುಡುಗರು
ಕಷ್ಟ ಪಟ್ಟು ಸಂಪಾದಿಸುತ್ತಾರೆ 
ಚಿಕ್ಕದೋ ದೊಡ್ಡದೋ ಒಂದು
'ಕೆಲಸ'.....
ಏಕೆಂದರೆ ???
ಖಾಲಿ ಇದ್ರೆ ಕೊಡುವಳಲ್ಲ
ಮುಂದೊಂದು ದಿನ ಮನೆಯ 
ಎಲ್ಲಾ  'ಕೆಲಸ'......


   ಕಿಲಾಡಿ
ಲೋ ಹುಡುಗ
ನೀ ತುಂಬಾ
ಪೋಲಿ , ಕಿಲಾಡಿ
"ಒಳ್ಳೆನಲ್ಲ".....
ಹೌದು ಹುಡುಗಿ
ನೀ ಹೇಳಿದ
ಹಾಗೆ ನಾ
ಒಳ್ಳೇ 'ನಲ್ಲ'

    ಬಲ್ಲೆ
ಗೊತ್ತಿತ್ತು ಒಂದಲ್ಲ
ಒಂದು ದಿನ
ಹೇಳುವಳು
ನೀ ನನಗೆ ಬರಿ
' ಸ್ನೇಹಿತ '
ಅದಕ್ಕೆ ನಾ ಕೂಡ
ಮಾಡಿದ್ದೆ
ಅವಳಿಗಾಗಿ
ಕರ್ಚು
'ಹಿತ' 'ಮಿತ '


ನಿಮಗಾಗಿ 
ನಿರಂಜನ್

ಗುರುವಾರ, ಮಾರ್ಚ್ 22, 2012

ನಮ್ಮ ಹಳ್ಳಿಯ ಹಬ್ಬ


                                    ಯುಗಾದಿಯ ನೆನಪುಗಳು..... 

ಸಂತನ ಆಗಮನದಿಂದ ಕಂಗೊಳಿಸುತ್ತಿರುವ ಪ್ರಕೃತಿ ಮರ-ಗಿಡಗಳನ್ನು ಹಸಿರು ಚಿಗುರಿನಿಂದ ಸಿಂಗರಿಸಿದೆ, ಎಳೆಯ ಚಿಗುರು ತಿಂದು ಪಂಚಮದಲ್ಲಿ ಹಾಡುವ ಕೋಗಿಲೆಗಳು ಎಲ್ಲೆಲ್ಲೂ ತಮ್ಮ ಸಂಗೀತ ಗೋಷ್ಠಿ ನಡೆಸುತ್ತಿವೆ, ಸುಡುವ ಬೇಸಗೆಯ ಬಿಸಿಲ ಜಳಕ್ಕೆ ಅಂಜದೆ ಅಳುಕದೆ  ಬೇಸಗೆಯ ರಜವನ್ನು ಅನುಭವಿಸುತ್ತಿರುವ ಚಿಕ್ಕ ಚಿಕ್ಕ ಮಕ್ಕಳು , ನಮ್ಮ ಹೊಸ ವರುಷವನ್ನು ಸ್ವಾಗತಿಸಲು ಸಂಭ್ರಮದಿಂದ ಸಜ್ಜಾಗಿದ್ದಾರೆ . ಈ ಹೊಸ ಸಂವತ್ಸರವನ್ನು, ಹೊಸ ವರುಷವನ್ನು ಸ್ವಾಗತಿಸುವ ಈ ದಿನ ಅಂದರೆ  ನಮ್ಮ ನೆಚ್ಚಿನ ಯುಗಾದಿ ಹಬ್ಬ ಮತ್ತೆ ಬಂದು ಬಿಟ್ಟಿದೆ. ಖರನಾಮ ಸಂವತ್ಸರವನ್ನು ಕಳೆದು , ಬರುವ ನಂದನ ಸಂವತ್ಸರವು ಎಲ್ಲರಿಗೂ ಒಳಿತು ಮಾಡಲಿ, ಕಳೆದ ವರುಷದ ಕಹಿ ಮರೆತು ಸಿಹಿ ಮಾತ್ರ ನೆನೆದು , ಈ ವರುಷದಲಿ ಸಿಹಿ-ಕಹಿಗಳನ್ನು ಸಮನಾಗಿ ಅನುಭವಿಸುವ ಶಕ್ತಿಯನ್ನು ಆ ದೇವರು ಎಲ್ಲರಿಗೂ ಕರುಣಿಸಲಿ  ಎಂದು ದೇವರಲ್ಲಿ ಬೇಡುತ್ತ , ನಾವು ಚಿಕ್ಕವರಿದ್ದಾಗ ಹಳ್ಳಿಯಲ್ಲಿ ಆಚರಿಸುತ್ತಿದ್ದ  ಆ ಯುಗಾದಿಯ ನೆನಪುಗಳ ಬಗ್ಗೆ ಸ್ವಲ್ಪ ಮೇಲುಕು ಹಾಕುತ್ತೇನೆ. 

                                        ಯುಗಯುಗಾದಿ ಕಳೆದರೂ
                                        ಯುಗಾದಿ ಮರಳಿ ಬರುತಿದೆ 
                                        ಹೊಸ ವರುಷಕೆ ಹೊಸ ಹರುಷವ 
                                        ಹೊಸತು ಹೊಸತು ತರುತಿದೆ....
                                  
                                        ಹೊಂಗೆಹೂವ ತೊಂಗಲಲ್ಲಿ 
                                        ಭೃಂಗದ ಸಂಗೀತಕೇಳಿ 
                                        ಮತ್ತೆ ಕೇಳಿ ಬರುತಿದೆ.
                                        ಬೇವಿನ ಕಹಿ ಬಾಳಿನಲ್ಲಿ
                                        ಹೂವಿನ ನಸುಗಂಪು ಸೂಸು
                                        ಜೀವ ಕಳೆಯ ತರುತಿದೆ.
                                                            - ದ.ರಾ. ಬೇಂದ್ರೆ 

            ಯುಗಾದಿ ಬಂತೆಂದರೆ ನಮಗೆ ತಟಕ್ಕನೆ ನೆನಪಾಗುವುದು ನಾವು ರೇಡಿಯೋದಲ್ಲಿ  ಕೇಳುತ್ತಿದ್ದ ಬೇಂದ್ರೆಯವರ  ಈ ಸಾಲುಗಳು. ಈ ಸಾಲುಗಳು ನಿಜವಾಗಿಯೂ ನಮ್ಮೆಲ್ಲರನ್ನು  ಒಂದೇ  ಕ್ಷಣದಲ್ಲಿ  ಹಬ್ಬದ ವಾತಾವರಣಕ್ಕೆ ಎಳೆದೊಯ್ದು  ಬಿಡುತ್ತವೆ.ಯುಗಾದಿಯನ್ನು ವರ್ಣಿಸಲು ಇದಕ್ಕಿಂತ ಬೇರೆ ಸಾಲುಗಳು ಬೇಕೇ. ನಿಜವಾಗಿಯೂ ಬೇಂದ್ರೆಯವರಿಗೆ ನನ್ನ ಅಂತರಾಳದ  ನಮನಗಳು. 

  
          ಸ್ನೇಹಿತರೆ ನಾವು ಚಿಕ್ಕವರಿದ್ದಾಗ ಹಳ್ಳಿಯಲ್ಲಿ ಈ ಹಬ್ಬವನ್ನು ಆಚರಿಸುತ್ತಿದ್ದ  ರೀತಿಯೇ ಬೇರೆ. ಬೇಸಗೆಯ ರಜಾ ದಿನಗಳಲ್ಲಿ ಹುಡುಗರೆಲ್ಲಾ ಸೇರಿ ಹಬ್ಬ ಯಾವಾಗ ಬರುತ್ತೋ ಅಂತ ಕಾಯುತ್ತಿದ್ದ ನಮಗೆ, ಹಬ್ಬದ ಮೊದಲ ದಿನ  ಚೆಂಡಾಟ  ಆಡಲು ಬಟ್ಟೆ ಚೆಂಡನ್ನು ಸಿದ್ದ ಮಾಡುವುದರಲ್ಲೇ ಒಂದೆರೆಡು ದಿನ ಕಳೆಯುತ್ತಿದ್ದೆವು. ಅಂತೂ ಇಂತೂ ಹಬ್ಬದ ದಿನ ಬಂತೆಂದರೆ ಸಾಕು ಬೆಳಗಿನ ಜಾವಕ್ಕೆ ಎದ್ದು ಹೊಲಕ್ಕೆ ಹೋಗಿ ಮಾವಿನ ಸೊಪ್ಪು, ಬೇವಿನ ಸೊಪ್ಪು , ಬೇವಿನ ಹೂವು ತಂದು. ತಳಿರು ತೋರಣಗಳಿಂದ ಮನೆಯನ್ನು ಸಿಂಗರಿಸುತ್ತಿದ್ದೆವು. ಅಷ್ಟೊತ್ತಿಗಾಗಲೇ ಮನೆಯ ಅಂಗಳಗಳನ್ನು ಸಗಣಿಯಲ್ಲಿ ಸಾರಿಸಿ , ರಂಗೋಲಿ ಬಿಟ್ಟಿರುತ್ತಿದ್ದರು ಮನೆಯ ಹೆಣ್ಣು ಮಕ್ಕಳು ಬಲು ಸಡಗರದಿಂದ. ಅಷ್ಟರಲ್ಲಿ  ಅಮ್ಮ-ಅಜ್ಜಿಯರು ನಮಗೆಲ್ಲ ಹರಳೆಣ್ಣೆ - ಕೊಬ್ಬರಿ ಎಣ್ಣೆ ಹಚ್ಚಿ  ಹಣೆಗೆ ಕುಂಕುಮವನಿತ್ತು , ಸಣ್ಣ ಆರತಿ ಮಾಡುತಿದ್ದರು. ಎಣ್ಣೆ ಹಚ್ಚಿಕೊಂಡು ನಾವು ನಮ್ಮ ಸ್ನೇಹಿತರ , ದೊಡ್ಡಪ್ಪ- ಚಿಕ್ಕಪ್ಪ, ಮಾವಂದಿರ ಮನೆಗೆ ಹೋಗಿ, ಸಮಾನ ವಯಸ್ಸಿನ ಎಲ್ಲ ಹುಡುಗರನ್ನು ಕರೆತಂದು ಮೊದಲೇ ಸಿದ್ದ ಪಡಿಸಿದ್ದ ಬಟ್ಟೆ ಚೆಂಡಿನಿಂದ ಲಗ್ಗೋರಿ ಆಟ ಆಡುವುದಂತೂ ತುಂಬಾ ಮಜವಾಗಿರುತ್ತಿತ್ತು. ಅಬ್ಬಾ ಒಂದೊಂದು ಹೊಡೆತಗಳು ಬೆನ್ನನ್ನು ಕೆಂಪಾಗಿಸುತ್ತಿದ್ದವು, ಚರ್ಮವೂ ಚುರ್‌ ಗುಟ್ಟಿ   ಗಟ್ಟಿಯಾಗುತ್ತಿತ್ತು.  ಹಾಗೂ-ಹೀಗೂ  ಸ್ನೇಹಿತರು ಸಂಬಂಧಿಗಳ ಜೊತೆ ಚೆನ್ನಾಗಿ ಎಳೆಯ ಬಿಸಿಲಲ್ಲಿ ಮೈಗೆ ಎಣ್ಣೆ ಹಚ್ಚಿ ಆಟವಾಡಿ ದಣಿದು ಮನೆಗೆ ಬಂದಾಗ, ಮನೆಯಲ್ಲಿ ಬೇಸಿಗೆಗಾಗಿಯೇ ಇಟ್ಟಿರುತ್ತಿದ್ದ ದೊಡ್ಡ ಮಡಿಕೆಯ(ಗಡಿಗೆ) ನೀರನ್ನು  ಗಟ ಗಟ ಕುಡಿದಾಗ  ನಮಗಾಗುತ್ತಿದ್ದ ನೆಮ್ಮದಿಯೇ ಬೇರೆ .  ಸಾಕೆನ್ನುವೊಷ್ಟು  ಆಟವಾಡಿ  ಹಿತ್ತಾಳೆ ಅಂಡೆಯ ನೀರಲ್ಲಿ ಮಿಂದರೆ " ಅಬ್ಬಾ ಅದೆಷ್ಟು ಸುಖ ಸಿಗುತಿತ್ತು ಅದರಲ್ಲಿ " ಅಂತ ಈಗಲೂ ನನಗೆನ್ನಿಸುತ್ತದೆ . ಬೇವಿನ ಸಪ್ಪು ಹಾಕಿದ ಹಿತ್ತಾಳೆ ಅಂಡೆಯ  ನೀರಲ್ಲಿ , ಒಳ್ಳೆಯ ಸ್ನಾನ ಮುಗಿಸಿ ಆಮೇಲೆ ಶುಭ್ರ  ಬಟ್ಟೆಯ ಧರಿಸಿ ಮತ್ತೊಮ್ಮೆ ಎಲ್ಲರ ಮನೆಗಳಿಗೆ ಬೇಟಿ ನೀಡಿ ಮನೆಯಲ್ಲಿ ಹಿರಿಯರು ತಯಾರಿಸಿದ ಬೇವು-ಬೆಲ್ಲ ತಿಂದು ಬೆಳಿಗ್ಗೆ ಆಡಿದ ಆಟದ ಅವಲೋಕನ ಮಾಡುತಿದ್ದಂತೆಯೇ ಹೊಟ್ಟೆ ಚುರ್ ಎನ್ನುತ್ತಿತ್ತು.

             ಸ್ನೇಹಿತರೆ ಈ ಹಬ್ಬದ ಸಮಯದಲ್ಲಿ ಹಳ್ಳಿಗಲ್ಲಿ ಹೇರಳವಾಗಿ ಸಿಗುವ ತರಕಾರಿ ಎಂದರೆ ನುಗ್ಗೆಕಾಯಿ.ಆದ್ದರಿಂದ ನುಗ್ಗೆ ಕಾಯಿ ಸಾಂಬಾರು , ಬೇಸಗೆಯ ದಿನಗಳಲ್ಲಿ ದೇಹದ ಉಷ್ಣತೆಯನ್ನು  ಕಾಪಾಡಲು   ರಾಗಿಯಿಂದಲೇ  ಬೇರೆ ರೀತಿಯ ಪದ್ದತಿಯಲ್ಲಿ  ಹಿಟ್ಟಿನ್ನು  ತೆಗೆದು ಮಾಡುತಿದ್ದ ಒತ್ತಿದ ಶಾವಿಗೆ ನಮ್ಮ ಯುಗಾದಿ ಹಬ್ಬದ ವಿಶೇಷ ಅಡುಗೆಗಳು.  ಈ ಶಾವಿಗೆ ಮಾಡೋ ವಿಧಾನವಂತೂ ಅದ್ಬುತವಾಗಿರುತಿತ್ತು.  ಮನೆಯ ಹೆಣ್ಣುಮಕ್ಕಳು ಹಬ್ಬಕ್ಕೂ ಹದಿನೈದು ದಿನ ಮುಂಚಿತವಾಗಿಯೇ ರಾಗಿಯನ್ನು ನೀರಲ್ಲಿ ನೆನೆಸಿಟ್ಟು , ಮೊಳಕೆ  ಕಟ್ಟಿ , ಮೊಳಕೆ ಬಂದ ರಾಗಿಯನ್ನು ಹದವಾಗಿ ಬಿಸಿಲಲ್ಲಿ ಒಣಗಿಸಿ, ಆಮೇಲೆ ಗಿರಣಿಯಲ್ಲಿ ನಯವಾಗಿ ಹೊಡೆಸಿ, ಹಿಟ್ಟು ಮತ್ತೆ ರಾಗಿ ತೌಡನ್ನು  ಬೇರ್ಪಡಿಸಿ,  ಮತ್ತೆ ಆ ಹಿಟ್ಟನ್ನು  ಬಿಸಿಲಿನಲ್ಲಿ ಎಷ್ಟು ಬೇಕೋ ಅಷ್ಟು  ಒಣಗಿಸಿ ಹಬ್ಬಕೆಂದೇ ಸಿದ್ದಪಡಿಸುತ್ತಾ ಇದ್ದರು ವೊಡ್ಡರಾಗಿ ಹಿಟ್ಟನ್ನು . ಮೊಳಕೆ ತಗೆದು ಮಾಡಿದ ಈ ಹಿಟ್ಟು ದೇಹಕ್ಕೆ ತಂಪು ಎಂದು  ಬೇಸಗೆಯಲ್ಲಿ ಇದರಿಂದ ಬೇರೆ ಬೇರೆ  ತಿನಿಸುಗಳನ್ನು ನಮ್ಮ  ಕಡೆ  ಮಾಡುತ್ತಾರೆ. ಇದೇ ಹಿಟ್ಟಿನಿಂದ ಮುದ್ದೆ ಮಾಡಿ ಅವುಗಳಿಂದ ಶಾವಿಗೆ ತಯಾರಿಸುತ್ತಿದ್ದರು.ಈ ಶಾವಿಗೆ ಮಾಡಲು ನಮ್ಮ ಹಳಿಗಳಲ್ಲಿ ಒಂದು ರೀತಿಯ ಮರದ ಯಂತ್ರ ಇರುತ್ತಿತ್ತು ಅದನ್ನು ನಾವು  ಶಾವಿಗೆ ಕೊಂತಿ ಎಂದು ಕರೆಯುತ್ತಿದ್ದವು. ಅದರ ಒಂದು ಬಾಗದಲ್ಲಿ ಒಂದು ಮುದ್ದೆ  ಇಟ್ಟು ಶಕ್ತಿ ಬಿಟ್ಟು ಒತ್ತಿದರೆ ಶಾವಿಗೆ  ಸಿದ್ದವಾಗುತ್ತಿದ್ದವು. ನಿಜವಾಗಿಯೂ ನಾವು ಚಿಕ್ಕವರಿದ್ದಾಗ ಅದೊಂದು ಅದ್ಬುತವಾದ  ಯಂತ್ರವಾಗಿಯೇ ನಮಗೆ ಅದು  ಕಾಣುತ್ತಿತ್ತು. ಅದನ್ನು ಮೇಲಿನಿಂದ  ಒತ್ತುವುದು ಆಮೇಲೆ ಕೆಳಗೆ ಶಾವಿಗೆ ಬರುವುದು ನಮಗೆ ಆ ಸಮಯದಲ್ಲಿ ಏನೋ ಒಂದು ವಿಚಿತ್ರದಂತೆ ಕಾಣುತ್ತಿತ್ತು . ಅದರಲ್ಲಿ ಭಾಗಿಯಾಗಿ ಶಾವಿಗೆ ಒತ್ತುವುದು  ನಮಗೆ  ತುಂಬಾ ಆನಂದವನ್ನೂ ತರುತ್ತಿತ್ತು. ಸಾಕಷ್ಟು  ಆಟ ಆಡಿ, ಬಿಸಿಲಲ್ಲಿ ದಣಿದು ಸಾಕಾಗಿರುತ್ತಿದ್ದ  ನಮಗೆ ಹೊಲದ ಪೂಜೆ, ಹಸು ಎತ್ತುಗಳ ಪೂಜೆಯ ನಂತರ ಊಟ ಮಾಡಲು ಕೂತರೆ ಸಾಕು , ಆ ಚಿಕ್ಕ ಹೊಟ್ಟೆಗಳಿಗೆ ಅದೆಷ್ಟು ತುಂಬಿಸುತ್ತಿದ್ದೆವೋ ಗೊತ್ತಿಲ್ಲ. ನುಗ್ಗೆಕಾಯಿ ಬೇಳೆ ಸಾರು , ಅನ್ನ , ವೊಡ್ಡರಾಗಿ  ಹಿಟ್ಟಿನ ಶಾವಿಗೆ, ಶಾವಿಗೆಗೆ ಏಲಕ್ಕಿ- ಶುಂಠಿ ಮಿಶ್ರಿತ ಬೆಲ್ಲದ ಪಾಕ ಮತ್ತು  ಕಾಯಿರಸ, ಅಬ್ಬಾ ಚಪ್ಪರಿಸಿಕೊಂಡು ಸ್ಪರ್ದೆಗೆ ಕೂತವರಂತೆ ತಿನ್ನುತ್ತಿದ್ದೆವು. ಹೀಗೆ ಊಟ ಮುಗಿಸಿ ಎಲ್ಲರೂ ಅಲ್ಲಿ ಇಲ್ಲಿ ಅಡ್ಡಾಡಿಕೊಂಡು, ಹೊಲಗಳಿಗೋ , ನಮ್ಮೂರ ಕೆರೆ ಏರಿ ಮೇಲೋ ಸುತ್ತುತ್ತಾ ಇದ್ದೆವು. ಅಲ್ಲಿ ಇಲ್ಲಿ ಕೋಗಿಲೆಗಳ ಹಾಡು, ಸುತ್ತಲು ಹಸುರು ಹೊತ್ತ ಮರಗಿಡಗಳ ಆ ವಾತಾವರಣ   ನಿಜವಾಗಿಯೂ  ಹಬ್ಬದ ದಿನ  ನಮಗೊಂದು ಸ್ವರ್ಗದಂತೆ  ಕಾಣುತ್ತ ಇತ್ತು. 

                 ಮೊದಲ ದಿನ ಎಣ್ಣೆ ನೀರು, ಚೆಂಡಾಟ , ಶಾವಿಗೆ ಊಟ ಆದ ಮೇಲೆ ಮಾರನೆ ದಿನ ಮತ್ತೆ ಅದೇ ಲಗ್ಗೋರಿ ಆಟ. ಆದರೆ ಎಣ್ಣೆ ಹಚ್ಚಿರುತ್ತಿರಲಿಲ್ಲ ಅಷ್ಟೇ. ಆ ದಿನ ಅಂತಹ ವಿಶೇಷ ಪೂಜೆಗಳಿಲ್ಲದಿದ್ದರು ಹೋಳಿಗೆ ಊಟವೇ ನಮಗೆ ಅತ್ಯಂತ ವಿಶೇಷವಾಗಿರುತಿತ್ತು . ಮನೆಯ ತೊಗರಿ ಬೇಳೆ, ತಂದ ಬೆಲ್ಲ, ಸಿಹಿ ನೀರಲ್ಲಿ ಬೇಯಿಸಿ ದುಂಡಿ ಕಲ್ಲಿನಲ್ಲಿ ರುಬ್ಬಿ,ಉರುಣ ಸಿದ್ದಪಡಿಸಿ ಕಟ್ಟಿಗೆ ಓಲೆಯ ಮೇಲೆ ಮಾಡುತಿದ್ದ ಹೋಳಿಗೆಗಳು, ಅವುಗಳ ಸುವಾಸನೆ ಮದ್ಯಾಹ್ನದ  ಹೊತ್ತಿಗೆ ನಮ್ಮನ್ನು ಎಲ್ಲಿದ್ದರೂ ಮನೆಗೆ ಸೆಳೆಯುತ್ತಿತ್ತು. ಆಗಲೇ ನಾವು ನಮ್ಮ ಅಮ್ಮ ಮಾಡುತಿದ್ದ ಸಕತ್ ಅಗಲವಾದ 4-5 ಹೋಳಿಗೆ ತಿನ್ನುತ್ತಿದ್ದೆವು. ಹಬ್ಬದ ಹೋಳಿಗೆ ಊಟ ಮುಗಿಸಿದ ಮೇಲೆ ಸಂಜೆ ಎಲ್ಲರೂ ನಮ್ಮ ಮನೆಯ ಬೀದಿಯಲ್ಲಿ ಸೇರಿ "ಸೂರ್ಯ ಅದೆಷ್ಟೊತ್ತಿಗೆ  ಮುಳುಗುತ್ತಾನೋ ನಾವು ಎಷ್ಟೊತ್ತಿಗೆ ಚಂದ್ರನನ್ನು ನೋಡುತ್ತೇವೋ" ಎಂದು ಆಕಾಶವನ್ನೇ ದಿಟ್ಟಿಸುತ್ತಾ," ಕಾಣುಸ್ತೇನೋ ಚಂದ್ರ ನಿಂಗೆ " ಅಂತ ಒಬ್ಬರಿಗೊಬ್ಬರು ಕೇಳುತ್ತಾ ಇದ್ವಿ. ಅಮಾವಾಸ್ಯ ಆಗಿ  ಎರೆಡು ದಿನವಾಗಿರುತಿತ್ತು . ತೇಳು ಚಂದ್ರನನ್ನು ಆಕಾಶದಲ್ಲಿ ಹುಡುಕುವುದೇ ಒಂದು ಚಾಲೆಂಜ್  ಆಗಿರುತ್ತಿತ್ತು. ಅದು ಕಂಡ ಕ್ಷಣ ಅದರ ವರ್ಣನೆಯಂತೂ  ಒಬ್ಬಬ್ಬರ ಬಾಯಲ್ಲಿ ಒಂದೊಂದು ರೀತಿಯಲ್ಲಿ  ಅದ್ಬುತವಾಗಿರುತಿತ್ತು , ಮೊದಲು ನೋಡಿದವರಂತು  ನಿಜವಾಗಿಯೂ ನಾವೇನೋ ಕಂಡು ಹಿಡಿದಷ್ಟೇ ಖುಷಿ  ಪಡುತ್ತಿದ್ದರು. ಚಂದ್ರ ದರ್ಶನವಾದ ಮೇಲೆ ಗುರು ಹಿರಿಯರುಗಳ , ತಂದೆ ತಾಯಿಗಳ ಕಾಲಿಗೆ ಬಿದ್ದು ಅವರ ಆಶೀರ್ವಾದ ಪಡೆದು. ಚಂದ್ರಮಾನ ಯುಗಾದಿಗೆ ವಿಧಾಯ ಹೇಳುವುದಂತೂ ನಮಗೆ ತುಂಬಾ ದುಃಖದ ವಿಷಯವೇ ಆಗಿರುತಿತ್ತು. ನಮ್ಮೂರಲ್ಲಿ ಆಗ ದೋಸೆ ಮಾಡುತ್ತಾ ಇದ್ದದ್ದು ವರ್ಷಕ್ಕೆ ಒಂದೆರೆಡು ಸಲ ಮಾತ್ರ. ಯುಗಾದಿ ಹಬ್ಬದ ನಂತರದ ಮಾತ್ರ ಕಾಯಂ ಆಗಿ  ವೊಡ್ಡ ರಾಗಿ ಹಿಟ್ಟಿನ ದೋಸೆ ಎಲ್ಲರ ಮನೆಯಲ್ಲೂ ನಮಗೆ ಸಿಗುತ್ತಾ ಇದ್ದವು. ಅದೇ ರೀತಿ ಹಬ್ಬ ಮುಗಿಯುವ ದಿನ ನಾಳೆ ನಮಗೆ ಸಿಗುತ್ತಿದ್ದ ಕಾಯಿ ಚಟ್ನಿ-ದೋಸೆ ಮತ್ತು ಬೆಳಿಗ್ಗೆ ಆಡುತ್ತಿದ್ದ ಹೋಳಿ ನಮ್ಮ " ಹಬ್ಬ ಮುಗಿಯಿತಲ್ಲಪ್ಪ " ಎಂಬ  ದುಃಖವನ್ನು ಮರೆಸುತಿತ್ತು . ನಿಜವಾಗಿಯೂ ಸ್ನೇಹಿತರೆ ಹಳ್ಳಿಗಳಲ್ಲಿ ಮಾಡುವ ಯುಗಾದಿಗೂ, ಪೇಟೆಗಳಲ್ಲಿ ಮಾಡುವ ಯುಗಾದಿಗೂ ತುಂಬಾ ವ್ಯತ್ಯಾಸಗಳಿವೆ. ಆದರೂ ನಾ ಸಾಕಷ್ಟು ಬಾರಿ ಹಳ್ಳಿಯಲ್ಲಿ ಆಚರಿಸಿದ  ಆ ಸಡಗರದ ಯುಗಾದಿಯನ್ನು ಹೇಗೆ ಮರೆಯಲು ಸಾದ್ಯ. ಒಂದೊಂದು ಪ್ರಾಂತ್ಯದಲ್ಲಿ  ಒಂದು ಒಂದು ರೀತಿಯಾಗಿ, ವಿಶಿಷ್ಟವಾಗಿ ಆಚರಿಸುವ ಈ ಹಬ್ಬ ಎಲ್ಲರಿಗೂ  ಸಿಹಿ ಕಹಿಗಳನ್ನು ಸಮನಾಗಿ ಸ್ವೀಕರಿಸುವ ಶಕ್ತಿ ನೀಡಲಿ, ನಾಡಿನ ಜನತೆಗೆ ಒಳ್ಳೆಯದನ್ನು ಮಾಡಲಿ ಎಂದು ಆಶಿಸುತ್ತ ನೆನಪುಗಳ ಈ ಗಂಟನ್ನು ಮತ್ತೆ ಕಟ್ಟಿ ನನ್ನ ಮನದಾಳದಲ್ಲಿ  ಬಚ್ಚಿಡುತ್ತೇನೆ.

                                 


ನಿಮಗಾಗಿ 
ನಿರಂಜನ್ 

ಬುಧವಾರ, ಫೆಬ್ರವರಿ 29, 2012

ನನಗೆ ಅನಿಸಿದ್ದು ಇಷ್ಟೇ

                                                 ಗೋವಿಂದ ಗೋ....ವಿಂದಾ 

ತಿರುಪತಿ ನೋಡುವ ಬಹುದಿನದ ಆಸೆಯನ್ನು ಈಡೇರಿಸಿಕೊಳ್ಳುವ ಸಮಯ ಬಂದೇ ಬಿಟ್ಟಿದೆ.ಅವನಲ್ಲಿಗೆ ಹೋಗುತ್ತಿರುವುದು ಇದೆ ಮೊದಲ ಭಾರಿ. ಬಹಳಷ್ಟು ಜನಗಳ ಬಾಯಿಯಿಂದ ತಿರುಪತಿಯ ವಿಚಾರ ಮತ್ತು ಮಹಿಮೆಗಳ ಬಗ್ಗೆ ಸಾಕಷ್ಟು ತಿಳಿದು ಕೊಂಡಿದ್ದ.ಇವೆಲ್ಲದರ ಜೊತೆಗೆ ತಿರುಪತಿಯ ಬಗ್ಗೆ ಅವನಿಗೆ ನೂರೆಂಟು ಬಗೆಯ ಕಲ್ಪನೆಗಳೂ ಉಂಟು.ಅಷ್ಟೊಂದು ಜನ ಅಲ್ಲಿಗೆ ಏಕೆ ಹೋಗುತ್ತಾರೆ ? ಅಂತಹದ್ದು ಅಲ್ಲಿ ಏನಿದೆ ? ಇಲ್ಲಿ ಇರೋ ದೇವಾಲಯಗಳಿಗೂ , ಅಲ್ಲಿ ಇರುವ ಆ ದೇವಾಲಯಕ್ಕೂ ಏನು ಅಂತ ಮಹಾ ವ್ಯತ್ಯಾಸ ? ಹೀಗೆ  ಹತ್ತು ಹಲವು ಪ್ರಶ್ನೆಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡು.ಜೊತೆಗೆ ಅನೇಕ ತರ್ಕ ಬದ್ದ ವಿಚಾರಗಳನ್ನು ಸಹ ತಲೆಯಲ್ಲಿ ಇಟ್ಟುಕೊಂಡು  ಹೊರಟ ನಮ್ಮ ಪುನೀತ್, ಅವನ ಆಪ್ತ ಸ್ನೇಹಿತನ ಪರಿವಾರದ  ಜೊತೆಗೆ.ಪುನೀತನ  ಸ್ನೇಹಿತ ಮಹಾನ್ ದೈವ ಭಕ್ತ, ಇತ್ತೇಚಿಗಷ್ಟೇ  ಅವನ ಸ್ನೇಹಿತನ ಮದುವೆಯೂ ಕೂಡ ಆಗಿತ್ತು. ಆ ನವ ದಂಪತಿಗಳ ಜೊತೆಗೆ ಅವನ ತಂದೆ ತಾಯಿಗಳು, ಹೆಣ್ಣು ಕೊಟ್ಟ  ಅತ್ತೆ ಮಾವಂದಿರು ಕೂಡ ಇದ್ದರು. ಅದೊಂದು ತುಂಬು ಸಂಸಾರ.ಅವರೆಲ್ಲರ ನಡುವೆ ನಮ್ಮ  ಪುನೀತ್ ಮಾತ್ರ ಶಿವಪೂಜೆಯಲ್ಲಿ ಕರಡೀಯ ಹಾಗೆ ಇದ್ದ.ಪಾಪ ಅವರೆಂದೂ  ಪುನೀತನನ್ನು  ಹೊರಗಿನವನೆಂದು  ತಿಳಿದಿರಲಿಲ್ಲ , ಆದರೂ ಪುನೀತನಿಗೆ ಮಾತ್ರ ಮೊದ ಮೊದಲಿಗೆ ಮುಜಗರವಾದರೂ  ಆಮೇಲೆ ಎಲ್ಲರೊಡನೆ ಚೆನ್ನಾಗಿ ಬೆರೆತ.ಅವರಿಗೂ ಕೂಡ  ಪುನೀತ್ ಅಂದರೆ ಬಹು ಪ್ರೀತಿ. ಹಾಗಾಗಿ ಎಲ್ಲರೂ ಒಂದೇ ಕುಟುಂಬದವರ ರೀತಿ ತಿರುಪತಿಯ ತಿರುಮಲವಾಸ ಶ್ರೀ ಶ್ರೀನಿವಾಸನನ್ನು ನೋಡಲು ಹೊರಟರು.

            ಪುನೀತ್ ವಯಸ್ಸು ಅಂತದ್ದು,ವಯಸ್ಸಿಗೆ ತಕ್ಕ ಮನಸ್ಸು.ಗಾಳಿಯಂತೆ ಅಲ್ಲಿ ಇಲ್ಲಿ ನುಸುಳುತ್ತೆ , ನೀರಿನಂತೆ ಜಾರುಗಳಲ್ಲಿ ಹರಿದಾಡುತ್ತೆ.ಇನ್ನೂ ಅದೊಂದು ಪ್ರೌಡ ಅಥವಾ ಪ್ರಭುದ್ದ ಸ್ಥಿತಿಯನ್ನು ತಲುಪಿಲ್ಲ.ಇನ್ನೂ ನಿರ್ಧಾರಗಳು, ಆಲೋಚನೆಗಳು ಗಟ್ಟಿಯಾಗುವಷ್ಟು ಅನುಭವವೂ ಕೂಡ ಆಗಿಲ್ಲ.ಒಂದು ಸಾರಿ ದೇವರು ಇದಾನೆ ಅನ್ನುತ್ತೆ, ಇನ್ನೊಂದು ಸಾರಿ ಅದೇ ಮನಸ್ಸು ಇಲ್ಲ ಇಲ್ಲ  ದೇವರೆಲ್ಲಿ ಇದಾನೆ ಅನುತ್ತೆ. ತಲೆಯಲ್ಲಿ ಮಾತ್ರ ಯಾವುದು ಸರಿ ? ಯಾವುದು ತಪ್ಪು ? ಎಂಬ ತರ್ಕಗಳ ಸಂತೆ ಪ್ರತಿದಿನವೂ ನೆಡೆಯುತ್ತೆ. ಒಮ್ಮೊಮ್ಮೆ ನಿಜ ಅಂತ ಒಪ್ಪಿಕೊಂಡು ಮತ್ತೊಮ್ಮೆ ಅದು ತಪ್ಪೇನೋ ಅನ್ನೋ ಮನೋಭಾವ ಅವನದು.ಅವೆಲ್ಲದರ ಜೊತೆಗೆ ಎಲ್ಲೋ ಒಂದು ಕಡೆ ಅವನಿಗೆ ದೇವರಲ್ಲಿ ಅಚಲವಾದ ಭಕ್ತಿಯು ಇದೆ ಶ್ರದ್ದೆಯೂ ಇದೆ. ಅದು ದೇವರಲ್ಲೋ ಅಥವ ಪ್ರಕೃತಿಯ ಒಂದು ಶಕ್ತಿಯಲ್ಲೋ ಅವನಿಗೆ ಇನ್ನೂ ತಿಳಿದಿಲ್ಲ . ಆದರೂ  ಸಹ ಬಹು ಆಸ್ತಿಕನಾದ ಅವನ ಸ್ನೇಹಿತನೊಂದಿಗೆ ಮಾತ್ರ ಅವನ ಈ  ದೇವರ ದರ್ಶನ ಯಾತ್ರೆ  ಆರಂಭವಾಗಿಯೇ ಬಿಟ್ಟಿತು.

                 ಎಲ್ಲರೂ ರಾತ್ರಿ ಪ್ರಯಾಣ ಮುಗಿಸಿ, ದೇವಸ್ಥಾನಕ್ಕೆ ಹೊರಟಾಗ ಬೆಳಿಗ್ಗೆ 6.30 ರ ಸಮಯ. ಡಿಸೆಂಬರ್ ಕಾಲ ಸ್ವಲ್ಪ ಚಳಿ  ಇತ್ತು. ಆದರೂ ತಿರುಮಲೆಯನ್ನು ಅವರೆಲ್ಲರು ನಡೆದೇ ಬೆಟ್ಟ  ಏರಬೇಕೆಂದು ನಿರ್ಧರಿಸಿದ್ದರು. ನವ ದಂಪತಿಗಳ ತಂದೆ ತಾಯಿಯರ ಆಸೆಯೂ ಮತ್ತು ಹರಕೆಯೂ ಕೂಡ ಅದೇ ಆಗಿತ್ತು. ನನ್ನ ಸ್ನೇಹಿತನ ತಾಯಿಯು "ನನ್ನ ಸೊಸೆಯೊಂದಿಗೆ ನಾನು ನಡೆದುಕೊಂಡೆ ಹತ್ತುತ್ತೇನೆ, ನನ್ನ ಮಗನಿಗೆ  ಒಳ್ಳೆಯ ಹೆಂಡತಿ, ನನಗೆ ಒಳ್ಳೆಯ ಸೊಸೆ ಸಿಕ್ಕರೆ" ಅಂತ ಹರಕೆ  ಮಾಡಿಕೊಂಡಿದ್ದರಂತೆ ಹಿಂದಿನ ಸಾರಿ ತಿರುಮಲೆಗೆ  ಬಂದಾಗ !!!. ಹಾಗಾಗಿ ಅವರು ತಿರುಪತಿಯ ಗುಡ್ಡವನ್ನೇರಲು  ತಯಾರಿ   ಮಾಡಿಕೊಂಡರು.ಅದೇ ರೀತಿ ಬೆಳಗ್ಗೆ ವೇಗವಾಗಿ "ನಾವು ಬೆಟ್ಟವನ್ನು ಏರಬಹುದು,ಚಾರಣ ಬೇಗ ಸಾಗುವುದೆಂದು" ಅವಸರ ಅವಸರವಾಗಿ ಲಾಡ್ಜ್ ಇಂದ ಹೊರಟು, ಗುಡ್ಡ ಹತ್ತುವ ಜಾಗಕ್ಕೆ ಬಂದರು.

              ಏಳು ಬೆಟ್ಟಗಳ ನಡುವೆ ನೆಲೆಸಿರುವ ವೆಂಕಟೇಶ್ವರನನ್ನು  ನೋಡಲು,ಬಹಳಷ್ಟು  ಜನರು ಬರಿ  ಕಾಲಿನಲ್ಲೇ ಗುಡ್ಡ ಏರುತ್ತಾರೆ. ಹೋಗುವ ದಾರಿಯುದ್ದಕ್ಕೂ ವೆಂಕಟೇಶನ ಸ್ಮರಣೆ ಮಾಡುತ್ತ, ತಮ್ಮ ಇಷ್ಟಾರ್ಥ ಸಿದ್ದಿಗಾಗಿ ಪ್ರಾರ್ಥನೆಗಳನ್ನು  ಮಾಡುತ್ತಾ ಬೆಟ್ಟ ಏರುತ್ತಾರೆ. ಬಹಳ  ಎತ್ತರವಿರುವ  ಈ ಬೆಟ್ಟವನ್ನು ಬರಿಗಾಲಲ್ಲಿ ಕ್ರಮಿಸಿ  ದೇವರ ಸನ್ನಿದಿ  ಸೇರಲು ಕನಿಷ್ಟ 6 ರಿಂದ 8 ಗಂಟೆಯಾದರು ಬೇಕೇ ಬೇಕು. ಇಷ್ಟು ದೊಡ್ಡ ಬೆಟ್ಟವನ್ನು ಬಹುತೇಕ ಜನರು ಪಾದರಕ್ಷೆಗಳನ್ನು ಧರಿಸದೆಯೇ ಏರುವುದು ಮತ್ತೊಂದು ಅಲ್ಲಿಯ ವಿಶೇಷ. ಅದೇ ರೀತಿ  ಪುನೀತನ  ಸ್ನೇಹಿತ ಪರಿವಾರದವರು ಕೂಡ ಬರಿ  ಕಾಲಿನಲ್ಲೇ  ಬೆಟ್ಟ ಹತ್ತುವವರಿದ್ದರು. ಹತ್ತುವ ಮೊದಲು ಅಲ್ಲೊಂದು ವೆಂಕಟೇಶನ ವಿಗ್ರಹಕ್ಕೆ ಪೂಜೆ ಸಲ್ಲಿಸಿ ಭಕ್ತಾದಿಗಳು ಮುಂದೆ ಸಾಗುತ್ತಾರೆ.ಅದೇ ರೀತಿ ಇವರು ಪೂಜೆಗಳು ಸಲ್ಲಿಸಿ ಬೆಟ್ಟ ಏರುವ ಕಾರ್ಯಕ್ರಮವನ್ನು ತುಂಬಾ ಭಯ ಭಕ್ತಿಯಿಂದ ಶುರು ಮಾಡಿದರು.  ಪುನೀತನಿಗೆ ಇದೆಲ್ಲ ಹೊಸತು ಆದರೆ ಅವನ ಸ್ನೇಹಿತನಿಗೆ ಇದೆಲ್ಲವು  ಸಾಮಾನ್ಯವಾಗಿ ಹೋಗಿತ್ತು. ಅವನಿಗೆ ತಿರುಮಲೆಯು ವೆಂಕಟೇಶ್ವರ ಮನೆ ದೇವರು ಆಗಾಗ ಬಂದು ಹೋಗುತ್ತಿರುತ್ತಾನೆ. ಪುನೀತನಿಗೆ ಮಾತ್ರ ಇವೆಲ್ಲ ಏನೋ ಒಂದು ತರಹ ಕಾಣುತ್ತಿದ್ದೆ.  ಪುನೀತನೋ "ದೇವರು ಇರುವುದು ನಿಜ ಆದರೆ ಈ ರೀತಿ ಜನರು ಏಕೆ ಮಾಡುತ್ತಾರೆ ? ಆದರೂ ಇವೆಲ್ಲ  ಅವರವರ  ನಂಬಿಕೆಗಳು  ಬಿಡು" ಎಂದು ಯೋಚಿಸುತ್ತಾನೆ. ಪುನೀತ್ ಎತ್ತ ನೋಡಿದರತ್ತ  ಕಾಣುವ ಜನ ಸಾಗರ, ಅವರ ಭಕ್ತಿ, ಅವರು ಅಲ್ಲಿ ಭಕ್ತಿಯನ್ನು ವ್ಯಕ್ತಪಡಿಸುತ್ತಿದ್ದ ರೀತಿ ಎಲ್ಲವೂ ಅವನಿಗೆ ಆಶ್ಚರ್ಯ ತರಿಸಿತ್ತು.  ಕೆಲವರು ತಾವು ಏರುವ ಒಂದೊಂದು ಮೆಟ್ಟಿಲುಗಳಿಗೂ ಅರಿಶಿನ ಕುಂಕುಮ ಹಚ್ಚುವರು , ಮತ್ತೆ ಕೆಲವರು ತುಪ್ಪದ ದೀಪಗಳನ್ನು ಪ್ರತಿ ಮೆಟ್ಟಿಲುಗಳಿಗೆ ಹಚ್ಚಿಡುವರು. ಇನ್ನು ಕೆಲವರು ಕಾಲು ಮಡಚಿಕೊಂಡು ಬರೀ ತಮ್ಮ ಮಂಡಿಯಲ್ಲೇ ಬೆಟ್ಟ ಏರಲು ಪ್ರಯತ್ನ ಪಡುತ್ತಿದ್ದರು. ಇದನೆಲ್ಲ ನೋಡಿ ಪುನೀತ್ " ದೇವರಿಗೆ ಇದೆಲ್ಲ ಬೇಕಾ ? ಇದೆಲ್ಲ ಮಾಡಿರಿ ಅಂತ ಅವನು ಎಂದಾದರು ಕೇಳಿರುವನೆ ? ದೇವರ ಸಾಕ್ಷಾತ್ಕಾರಕ್ಕೆ ಈ ರೀತಿ ಮಾಡಬೇಕ ? ಈ ನಂಬಿಕೆಗಳಿಗೆ ಅರ್ಥ ನಿಜವಾಗಿಯೂ ಉಂಟೋ ? " ಎಂಬ ನೂರೆಂಟು ಯೋಚನೆಗಳು ಒಂದು ಕಡೆ ಆದರೆ, ಮತ್ತೊಂದು ಕಡೆ ಅವನ ಮನಸ್ಸು  "ಹೋಗಲಿ ಬಿಡು ಜನರಿಗೆ ಇದನ್ನು ಮಾಡುವುದರಿಂದ ಶಾಂತಿ ಸಮಾಧಾನಗಳು ದೊರೆಯುವುದಾದರೆ ಇದನ್ನೇ ಮಾಡಲಿ , ಇದರಿಂದಂತು ಯಾರಿಗೂ ತೊಂದರೆ ಇಲ್ಲ ಅಂದ ಮೇಲೆ ಇದನ್ನು ಮಾಡಿದರೂ ತಪ್ಪಿಲ್ಲ " ಎನ್ನುವುದು.

               ತಿರುಪತಿಯಲ್ಲಿ  ಬಹಳಷ್ಟು ಜನರು ಇರುತ್ತಾರೆ ಅಂತ ಕೇಳಿದ್ದ  ಪುನೀತ್ , ಆದರೆ ತನ್ನ ಕಣ್ಣುಗಳಲ್ಲಿ ನೋಡಿದ್ದು ಇದೆ ಮೊದಲು. ಪೂಜೆ ಮಾಡುತ್ತಾ ಭಕ್ತರು "ಗೋವಿಂದಾ ಗೋವಿಂದಾ" ಎಂದು ಮುಗಿಲು ಮುಟ್ಟುವ ಹಾಗೆ ಕೂಗಿ ತಿರುಮಲೆಗಳ  ಮೂಲೆ  ಮೂಲೆಗಳಿಗೂ  ಕೇಳುವಂತೆ ವೆಂಕಟೇಶನ್ನನ್ನು ಸ್ಮರಿಸುತ್ತಾ ಇದ್ದರು. ಒಬ್ಬರು ಗೋವಿಂದ ಅಂದರೆ ಸಾಕು ಅದೆಷ್ಟೋ ಜನರು ಅದರಿಂದ ಪ್ರಚೋದನೆಗೊಂಡು ಅವರು ಕೂಡ "ಗೋವಿಂದ ಗೋವಿಂದ" ಎಂದು ತಮ್ಮ ದ್ವನಿಗೂಡಿಸುತ್ತಿದ್ದರು. ಪುನೀತನಿಗೋ ಅದೆಲ್ಲ ಒಂದು ತರಹ ಅನ್ನಿಸಿದರೂ ಪದೇ ಪದೇ "ಅವರವರ ಭಕ್ತಿ ಮತ್ತು ಅವರವರ ನಂಬಿಕೆ" ಎಂದು ಮನಸ್ಸಿನಲ್ಲೇ  ಅಂದುಕೊಳ್ಳುತ್ತಿದ್ದ. "ಇಷ್ಟೊಂದು ಜನರು ಈ ರೀತಿಯಾಗಿ ವೆಂಕಟೇಶನನ್ನು ನಂಬಿದ್ದಾರೆ ಅಂದರೆ ಆತನ ಮಹಿಮೆ ಆದೆಷ್ಟಿದೆ ? ಆತನ ಮೇಲೆ ಇವರಿಗೆ ಇಷ್ಟೊಂದು ನಂಬಿಕೆಯಾ ?  ಆ ನಂಬಿಕೆ ಬರಲು ಈ ದೇವರು ಇವರಿಗೆಲ್ಲ ಅಂತಾದ್ದೇನು ಕರುಣಿಸಿದ್ದಾನೆ ? " ಎಂಬ  ಹತ್ತಾರು ಪ್ರಶ್ನೆಗಳೊಂದಿಗೆ ಬೆಟ್ಟ ಏರಲು ಶುರು ಮಾಡೇ ಬಿಟ್ಟರು.

             ಎಲ್ಲೆಲ್ಲೂ ಜನರ ಗುಂಪು ಗುಂಪು, ಗೋವಿಂದ ಗೋವಿಂದ ಎಂದು ಕಿವಿ ಪೊರೆ ಗುಯ್ ಅನ್ನುವೊಷ್ಟು ಜೋರಾದ ಅವರ ಪ್ರಾರ್ಥನೆಗಳು  ಅವರ ಭಕ್ತಿಯ ಆ  ಪರಾಕಾಷ್ಟೇ ಮುಗಿಲು ಮುಟ್ಟಿ, ಬೆಟ್ಟದ ಮೂಲೆ  ಮೂಲೆಗೂ ತಗುಲಿ ಪ್ರತಿದ್ವನಿಸುತ್ತಿತ್ತು. ಬೆಟ್ಟ ಏರುವ ಆರಂಭದಲ್ಲೋಂತೂ   ಅವರ ಶಕ್ತಿ ಎಷ್ಟಿರುವುದೋ ಅಷ್ಟು ಒಂದುಗೂಡಿಸು "ಗೋವಿಂದ ಗೋವಿಂದ" ಅಂದು ಕೂಗುತ್ತಿದ್ದರು. ಪುನೀತ್  ಮತ್ತು ಅವನ ಸ್ನೇಹಿತನ ಅಪ್ಪ ಅಮ್ಮ ಜೊತೆಯಾಗಿ ನೆಡೆದರೆ, ಸ್ನೇಹಿತನ ಅತ್ತೆ ಮಾವ ಒಂದಾಗಿ ನೆಡೆಯುತ್ತಿದ್ದರು. ಅತ್ತೆ ಮಾವನವರು  ಸ್ವಲ್ಪ ತೇಳು ಮೈಕಟ್ಟಿನವರು. ಯಾವ ಆಯಾಸವಿಲ್ಲದೇ ಸರ ಸರ ಬೆಟ್ಟ ಏರುತ್ತಿದ್ದಾರೆ. ಪುನೀತ್  ಮತ್ತು ಅವನ ಜೊತೆಗಿದ್ದ ಅವನ ಸ್ನೇಹಿತನ ತಂದೆ ತಾಯಿಯರು ನಿಧಾನವಾಗಿ ಹೋಗುತ್ತಿದ್ದಾರೆ, ನವ ದಂಪತಿಗಳು ಸ್ವಲ್ಪ ಹಿಂದೆಯೇ ಇದ್ದರು. ಗುಡ್ಡ ಹತ್ತುವಾಗ ಮೈಯ ತಾಪ ಏರುತ್ತಿದ್ದರು ಅಲ್ಲಿ ಬೀಸುತ್ತಿದ್ದ ತಂಗಾಳಿ ತಣ್ಣನೆ ಅವರನ್ನೆಲ್ಲ ಸ್ಪರ್ಶಿಸಿ ಹಿತ ನೀಡುತ್ತಿತ್ತು.ದೂರದಲ್ಲೇ ಬೆಟ್ಟದ ಕೆಲವು ಭಾಗಗಳಲಿದ್ದ ದೇವಸ್ತಾನಗಳಿಂದ  ಸುಬ್ಬಲಕ್ಷ್ಮಿಯ ಹಿತವಾದ ಸಂಗೀತ ಚಾರಣದ  ದಣಿವನ್ನು ತಣಿಸುತಿತ್ತು. ದೇಹಕ್ಕೆ ಸ್ವಲ್ಪ ಸುಸ್ತು ಅನ್ನಿಸಿದರೂ ಅಲ್ಲೇ ಇದ್ದ ಮೆಟ್ಟಿಲುಗಳ ಮೇಲೆ ಕೂತು ನಂತರ ಚಾರಣ ಮುಂದುವರೆಯುತ್ತಿತ್ತು. ಹೀಗೆ ದೇವಸ್ಥಾನದ ಬಗೆಗೆ, ವೆಂಕಟೇಶನ ವಿಚಾರಗಳ ಬಗೆಗೆ ಮಾತನಾಡಿಕೊಳ್ಳುತ್ತ, ಆಗೊಂದು ಈಗೊಂದು ಫೋಟೋ ತೆಗೆಸಿಕೊಳ್ಳುತ್ತ  ಮುಂದೆ ಮುಂದೆ ಸಾಗಿತ್ತು  ಅವರ ಪ್ರಯಾಣ.  ಬೆಟ್ಟ ಏರುವುದಂತೂ ಪುನೀತನಿಗೆ  ಸಕತ್ ಖುಶಿ ನೀಡುತ್ತಿತ್ತು. ಬಹಳಷ್ಟು  ದಿನದಿಂದ  ಒಳಗೇ ಅಡಗಿದ್ದ ಬೆವರು ಆದಿನ ಕಿತ್ತು  ಕಿತ್ತು  ಬರುತ್ತಿತ್ತು. ಹಿಡಿದಿಟ್ಟ  ನೀರು ಬಿಟ್ಟಾಗ ಹರಿವಂತೆ ಹರಿಯುತ್ತಿತ್ತು ಬೆವರು ಮೈಯಿಂದ. ಅಲ್ಲಿ ಇಲ್ಲಿ ನೀರು ಸಿಕ್ಕಾಗ ನೀರು ಕುಡಿದು, ದೇಹದ ಮೇಲೆ ಹಾಕಿಕೊಂಡು, ಮೆಟ್ಟಿಲ ಬಳಿ ಇರುವ ಮರಗಳ ಬುಡಗಳ  ಕೆಳಗೆ ಕೂತು ನೀಲಾಕಾಶ  ನೋಡಿದರೆ  ಏನೋ ಒಂದು  ಹಾಯಾದ ಅನುಭವ. ಮುಂದೆ ಹೋಗಬೇಕೆನ್ನುವ ಅವಸರ, ಇನ್ನೂ ಅನೇಕ ಬಗೆಯ ಅನುಭವಗಳಿಗೆ ಹಾತೊರೆಯುತ್ತಿರುವ ಮನ ಬೇಗ ಬೇಗ ಬೆಟ್ಟವನೇರು ಎಂದು ಹೇಳುತಿತ್ತು. ಒಮ್ಮೊಮ್ಮೆ ಅದೇ ಮನಸ್ಸು ಅಲ್ಲಿ ಕಾಣುತ್ತಿದ್ದ ಕೆಲವು ಭಕ್ತರ ಆಚರಣೆ ಮತ್ತು  ನಂಬಿಕೆಗಳನ್ನು ನೋಡಿ ಪುನೀತನನ್ನು ತರ್ಕಕ್ಕೆ ಎಳೆದು ತಂದು ಬಿಡುತ್ತಿತ್ತು. ಆದರೂ  ಪುನೀತ್  ಅತಿಯಾಗಿ ಯೋಚಿಸದೇ, ಯಾವುದೇ ತರ್ಕ ಮಾಡದೇ ಅಲ್ಲಿರುವ ಪ್ರಕೃತಿಯನ್ನು ಇಂಚು ಇಂಚಾಗಿ ಸವಿಯ ತೊಡಗಿದ. ನಿಜವಾಗಿಯೂ ಅದೊಂದು ಅದ್ಬುತ ವಾದ ವಾತಾವರಣ. ಅಲ್ಲಿ ಇಲ್ಲಿ ಕೂಗುವ ಪಕ್ಷಿಗಳು, ದೂರದಲ್ಲಿ ಏನನ್ನಾದೂರು ಕೊಟ್ಟಾರೆನೋ  ಅಂತ ಕಾಯುತ್ತಿರುವ ಮಂಗಗಳು, ಭಕ್ತಿ ಭಾವದಲ್ಲಿ ಒಬ್ಬರಿಗೊಬ್ಬರು ಆಸರೆ ಮಾಡಿಕೊಂಡು ಬೆಟ್ಟ ಏರುತ್ತಿರುವ ತಿಮ್ಮಪ್ಪನ ಭಕ್ತರು,  ನಿಜವಾಗಿಯೂ ಅಲ್ಲಿರುವ ಸ್ಥಳ  ಮಹಿಮೆಯ ಬಗ್ಗೆ ಹೇಳುತ್ತಿದ್ದಂತೆ ಕಾಣುತ್ತಿತ್ತು. ಈ ದೇವರು ಬೆಟ್ಟದ ಮೇಲೆ ನಿಜವಾಗಿ ಇದಾನೋ ಇಲ್ಲವೋ ಗೊತ್ತಿಲ್ಲ, ಆದರೆ ಈ ಪ್ರಕೃತಿ ಮಾತ್ರ ನಿಜವಾದ ದೇವರ ತರ ಕಾಣುತ್ತಿತ್ತು ಪುನೀತನಿಗೆ. ಸುಸ್ತಾದ ದೇಹಕ್ಕೆ ತಂಗಾಳಿಯ  ಲೇಪನ ಮಾಡುತ್ತಿದ್ದ ಈ  ಪ್ರಕೃತಿ, ದಣಿದಿದ್ದ ಈ ದೇಹಗಳಿಗೆ ತಣ್ಣೀರು ಉಣಿಸುತಿದ್ದ ಈ ಪ್ರಕೃತಿ, ಮನಸ್ಸಿನಲ್ಲಿ  ಅದೇನೆಲ್ಲ ಯೋಚನೆಗಳಿದ್ದರೂ ಕ್ಷಣ ಕಾಲಕ್ಕೆ ಅವನ್ನೆಲ್ಲ  ದೂರಮಾಡಿ ಕಿವಿಗೆ ಇಂಪಾದ ಚಿಲಿಪಿಲಿ ಹಕ್ಕಿಗಳ  ಸಂಗೀತವನ್ನು ಉಣಬಡಿಸುತ್ತಿದ್ದ ಈ ಪ್ರಕೃತಿ, ನಿಜವಾದ ದೇವರು ಅಂದು ಪುನೀತನಿಗೆ  ಅನಿಸುತ್ತಿತ್ತು.        

               ಬಹಳಷ್ಟು  ಎತ್ತರ ಕ್ರಮಿಸಿದ ಅವರಿಗೆ ಗಾಳಿ ಗೋಪುರ ಎಂಬ ಒಂದು ಹೆಬ್ಬಾಗಿಲು ಸಿಕ್ಕಿತು. ಅದು ಅವರು ಏರಿದ ಮೊದಲ  ಬೆಟ್ಟದ ತುದಿ. ಅಲ್ಲಿಯವರೆಗೂ ಅವರು ಇನ್ನೂ ಕೇವಲ ಆರ್ದ ಭಾಗ ಮಾತ್ರ ಪ್ರಯಾಣವನ್ನು  ಸವೆಸಿದ್ದರು. "ಇನ್ನೂ ಅರ್ಧ ಹೋದಮೇಲೆಯೇ  ದೇವಾಲಯ ಸಿಗುವುದು, ಇನ್ನೂ ಮುಂದೆ ಈಗ ಬಂದೊಷ್ಟು ಕಡಿದಾದ ದಾರಿಯಿಲ್ಲ " ಎಂದು  ಪುನೀತನ  ಸ್ನೇಹಿತನ ತಂದೆ ಹೇಳುತ್ತಿದ್ದರು.ಗಾಳಿ ಗೋಪುರದ ಬಳಿ ಸ್ವಲ್ಪ ಹೊತ್ತು ಕೂತು ಅಲ್ಲಿ ದಣಿವಾರಿಸಿಕೊಂಡರು  ಬೀಸುವ ಆ ಭಾರಿ ಗಾಳಿಯ ಜೊತೆಗೆ ಸರಸವಾಡಿ. ಅಲ್ಲೇ ಇದ್ದ  ಹಳ್ಳಿ ಹೊಟೇಲು ಒಂದರಲ್ಲಿ ಒಬ್ಬಬ್ಬರು ಹಸಿದೆ ಹೊಟ್ಟೆಗೆ ಕಡಿಮೆ ಎಂದರೂ ಒಂದೊಂದು ದೋಸೆ ಹಾಕಿಕೊಂಡರು. ಪುನೀತ್ ಮಾತ್ರ  ದೋಸೆ, ಬಿಸಿ ಬಿಸಿ ಇಡ್ಲಿ ತಿನ್ನುವುದಲ್ಲದೇ ಜೊತೆಗೆ ಅಲ್ಲಿಯ ಮೆಣಸಿನಕಾಯಿ ಬೋಂಡಾದ ರುಚಿಯೂ ನೋಡಿದ.  ಸರಿಯಾಗಿ ಹೊಟ್ಟೆ ತುಂಬಿಸಿಕೊಂಡು ತಮ್ಮ ಹೊಟ್ಟೆ ದೇವರನ್ನು ತೃಪ್ತಿ ಪಡಿಸಿಕೊಂದಾಗ ಸಮಯ 9.30 ರಿಂದ  10 ಗಂಟೆ ಇರಬಹುದು. ಅಲ್ಲಿಂದ ಮತ್ತೆ ಪ್ರಯಾಣ ಶುರು ಆಯಿತು. ನಡೆದು ನಡೆದು ದೇಹದ ತ್ರಾಣವೆಲ್ಲ ನಿತ್ರಾಣವಾಗ ತೊಡಗಿತ್ತು. ಅಲ್ಲಿ ಇಲ್ಲಿ ಕೂತು ಮತ್ತೆ ಮತ್ತೆ ಪ್ರಕೃತಿಯ ಅಂದವನ್ನು ಅನುಭವಿಸುತ್ತಾ ಮುಕ್ಕಾಲು ಭಾಗ ಪ್ರಯಾಣವನ್ನು ಮುಗಿಸಿದ್ದರು. ಅಲ್ಲಿಗೆ ಅವರು ಆ ಚಾರಣದ 2 ಹಂತವನ್ನು ಮುಗಿಸಿದ್ದರು  .

            ಎರೆಡು ಬೆಟ್ಟಗಳ ನಡುವಿನ ಒಂದು ರಸ್ತೆ ದಾಟಿ ಮತ್ತೊಂದು ಅಂದರೆ ಮೂರನೇ ಹಂತವನ್ನು ಶುರು ಮಾಡೋಕೂ ಮುಂಚೆ ಆ ಮೂರನೇ ಬೆಟ್ಟವನ್ನು  ನೋಡಿ ಪುನೀತ್  ಒಂದು ಕ್ಷಣ ಯೋಚಿಸಿ "ಓ ಓ ಇನ್ನೂ ಇದನ್ನೂ ಹತ್ತಬೇಕಾ " ಎಂದಾಗ ಅಲ್ಲೇ ಇದ್ದ ಅವನ ಸ್ನೇಹಿತನ ತಂದೆ "ನೋಡು ಇದೊಂದೇ ಒಂದು ಬೆಟ್ಟ , ಅವರಿಗೆ  ಕಾಣುವೋಷ್ಟು ದೂರ ಕೈ ತೋರಿಸಿ , ಅಲ್ಲಿತನಕ ಮಾತ್ರ ಕಡಿದಾಗಿದೆ, ಇದನ್ನು ಹತ್ತಿದರೆ ಮುಗೀತು ಆಮೇಲೆ  ನೇರ ಹಾದಿ. ಅದೇ ಹಾದಿಯಲ್ಲಿ ಸ್ವಲ್ಪ ಮುಂದೆ ಹೋದರೆ ಸಾಕು ದೇವಸ್ತಾನ ಸಿಕ್ಕೇ ಬಿಡುತ್ತೆ " ಅಂದರು. ಈ ಮಾತನ್ನು ಕೇಳಿ ,  ಇಳಿದು ಹೋಗಿದ್ದ ದೇಹ ಚೇತನ ಮತ್ತೆ ಜಾಗೃತವಾಗಿ ಮೂರನೇ ಹಂತವನ್ನು ಏರಲು ಶುರು ಮಾಡಿಯೇ ಬಿಟ್ಟಿತು. ಅಲ್ಲೊಂದು ಮತ್ತೆ ಆಶ್ಚರ್ಯಕರ ನಂಬಿಕೆ ನಡೆಯುತ್ತಿತ್ತು. ಆ ಕಡಿದಾದ ಬೆಟ್ಟಕೆ ಮೆಟ್ಟಿಲುಗಳಿದ್ದವು. ಅವುಗಳೆಲ್ಲ ಕುಂಕುಮ ಹರಿಷಣಗಳ ಮುದ್ದೆಯಾಗಿದ್ದವು. ಜನರು ಆ ಮೆಟ್ಟಿಲುಗಳನ್ನು ಮಂಡಿಯೂರಿ  ಹತ್ತುತಿದ್ದರು. ಅದೇ ರೀತಿ ನಮ್ಮ ಸ್ನೇಹಿತನ ಹೆಂಡತಿಯು ಕೂಡ ಒಂದು ಹತ್ತೋ ಹನ್ನೊಂದು ಮೆಟ್ಟಿಲನ್ನು ತನ್ನ ಗಂಡನ ಶ್ರೇಯಸ್ಸಿಗೆಂದು ಮಂಡಿಯಲ್ಲೇ ನೆಡೆದೆ ಹತ್ತಿದರು. ಆಮೇಲೆ ಮತ್ತೆ  ಈ ಬೆಟ್ಟವನ್ನೇರುವಾಗ ಮೊದಲಿನಹಾಗೆಯೇ ಶುರುವಾಯಿತು ಬೆವರು.ತೀರಾ ಕಡಿದಾದ ಆ ಜಾಗ ಮಾತ್ರ  ತುಂಬಾ ಪ್ರಯಾಸದಾಯಕವಾಗಿತ್ತು ಹತ್ತುವುದಕ್ಕೆ. ಹಾಗೂ-ಹೀಗೂ ಮಾಡಿ ಪುನೀತ್  ಮತ್ತು ಸ್ನೇಹಿತನ ಪರಿವಾರ ಅದನ್ನು ಕೂಡ ಹತ್ತಿಯೇ ಬಿಟ್ಟರು. ಮೇಲೆ ಹೋಗಿ ನಿಟ್ಟುಸಿರು ಬಿಟ್ಟು " ಗೋವಿಂದ ಗೋವಿಂದ " ಎಂದು ದೇವರನ್ನು ಒಮ್ಮೆ ಪ್ರಾರ್ಥಿಸಿ ಅಡಗಿದ್ದ ತಮ್ಮ ದೇಹ ಶಕ್ತಿಯನ್ನು ಮತ್ತೊಮ್ಮೆ ಕ್ರೋಡೀಕರಿಸಿ "ಇನ್ನೇನು ಬಂದೆ ಬಿಟ್ಟಿತು ದೇವಸ್ಥಾನ "ಎಂದು ಪುನೀತನಿಗೆ ಅವರೆಲ್ಲರೂ ಹೇಳುತ್ತಾ  ಮತ್ತೆ ನಡೆಯತೊಡಗಿದರು.

            ದೇವಸ್ತಾನವೂ ದೂರದಿಂದಲೇ ಕಂಡಿತು. ಎಲ್ಲರೂ ಅಲ್ಲಿಂದಲೇ ಒಮ್ಮೆ ಕೈ ಮುಗಿದು "ಗೋವಿಂದ ಗೋವಿಂದ" ಎಂದರು. ಪುನೀತನು ಅದೇ ರೀತಿ ಮಾಡಿದ. ಹೇಳಿಕೇಳಿ ಅತ್ಯಂತ ಶ್ರೀಮಂತ  ದೇವರು. ಅದ್ಬುತವಾದ ಜಾಗದಲ್ಲಿ ಸುಂದರವಾದ ಅನೇಕ ದೇವಸ್ಥಾನಗಳು, ಮಂಟಪಗಳ ನಡುವೆ ನಿಂತಿದೆ ವೆಂಕಟರಮಣ ದೇವಸ್ಥಾನದ ಆ ಬಾರಿ ಗೋಪುರ. ಪಕ್ಕದಲ್ಲಿ ಒಂದು ದೊಡ್ದ ನೀರಿನ ಪುಷ್ಕರಣಿ. ಎತ್ತ ನೋಡಿದರು ಅತ್ತ ಜನ ಸಾಗರ.ಬಹುಪಾಲು ಜನ ಮುಡಿಕೊಟ್ಟು ಬೋಳು ತಲೆಗಳನ್ನು ಬಿಟ್ಟುಕೊಂಡು ಅಡ್ಡಾಡುತ್ತಿದ್ದಾರೆ, ಕಪ್ಪು ಬಟ್ಟೆಗಳನ್ನು ಧರಿಸಿದ ಅಯ್ಯಪ್ಪ  ಸ್ವಾಮಿಯ ಭಕ್ತರು ಕಣ್ಣಿಗೆ ಕಾಣುತ್ತಿದ್ದಾರೆ.ಬೆಟ್ಟವನ್ನು ಏರಿ ಬೆವರಿ ಬಂದಿದ್ದ ದೇಹಗಳನ್ನು ಅಲ್ಲೇ ದೇವಸ್ಥಾನದ ಪಕ್ಕದಲಿದ್ದ ಪುಷ್ಕರಣಿಯಲ್ಲಿ ಮುಳುಗಿಸೆದ್ದರು.ತಮ್ಮ ದೇಹದ ದಣಿವನ್ನೆಲ್ಲ  ಮೈಯ ಮೇಲೆ ನೀರು ಬಿದ್ದ ಕ್ಷಣವೇ ಮರೆತರು.ಶುಭ್ರ  ಬಟ್ಟೆ ಧರಿಸಿ ದೇವರ ದರುಶನಕ್ಕೆ ಹೊರಟರು.  

        ಇದುವರೆಗೂ ಬೆಟ್ಟ ಏರಿ ದಣಿದರು,ಬೆವರಿದರು,ಸೋತರೂ ಅವುಗಳನ್ನೆಲ್ಲ ಮರೆತು ದೇವರ ದರುಶನಕ್ಕೆ ಕಾತುರರಾಗಿದ್ದರು. ಬಾರಿ ಸಾಲುಗಳಲ್ಲಿ ಜನರು ಕಾಯುತ್ತಾ ನಿಂತಿದ್ದರು. ಸಾವಿರಾರು ಜನರು ಅದೆಷ್ಟು ಗಂಟೆಯಿಂದ ಕಾದಿದ್ದರೋ ಗೊತ್ತಿಲ್ಲ. ಬೆಟ್ಟವನ್ನು ನಡೆದು ಬಂದವರಿಗೆ ಪ್ರತ್ಯೇಕವಾದ ಸಾಲು ಕೂಡ ಇತ್ತು. ಅವರು ಕೂಡ ಅದೇ ಸಾಲಿಗೆ ಸೇರಿಕೊಂಡರು.ಸಾಲಿನಲ್ಲಿ ನಿಂತು ಎಷ್ಟು ಹೊತ್ತು ಕಳೆದರೂ ಅವರ ಸಾಲು ಮುಂದೆ ಹೋಗುತ್ತಿಲ್ಲ. "ಏಕೆ ಹೀಗೆ ಆಗುತ್ತಿದೆ ? ಇಷ್ಟು ಹೊತ್ತಿಗೆ ನಾವು ಸ್ವಲ್ಪ ದೂರ ಹೋಗಿರಲೇ ಬೇಕಿತ್ತು. ಯಾಕೆ ನಿಂತ ಸಾಲುಗಳು ನಿಂತ  ಆಗೆ  ಇವೆ ? " ಎಂದು ಪುನೀತನ   ಸ್ನೇಹಿತನ ತಂದೆಯವರು ಹೇಳಿದರು.ಬೆಟ್ಟ ಏರಿ ಬಂದಿದ್ದ ಅವರ ಕಾಲುಗಳು ಬಹಾಳೋಷ್ಟು  ಅಂದರೆ 2 ಗಂಟೆ ನಿಂತ ಮೇಲೆ ನೋವನ್ನು ತಾಳಲಾರದೆ  ಮಾತಾಡ ತೊಡಗಿದವು. ನೀರಿನಲ್ಲಿ ಮಿಂದೆದ್ದು ಬಂದಿದ್ದ ದೇಹಗಳು ಮರೆತಿದ್ದ ನೋವನ್ನು ಮತ್ತೆ ನೆನಸಿಕೊಂಡವು. ಆದರೆ ಅಲ್ಲಿ ಎಲ್ಲರೂ ಅಸಹಾಯಕರು.ನಾವು ಏನು ಮಾಡಲು ಸಾದ್ಯವೆ  ಇಲ್ಲ. ಎಲ್ಲರೂ ಅವರಂತೆಯೇ ಸಾಮಾನ್ಯ ಭಕ್ತರು. ಆ ಭಕ್ತ  ಸಾಗರದಲ್ಲಿ ಅವರುಗಳು ಕೂಡ ಒಂದು ಸಣ್ಣ ಮೀನುಗಳ ಗುಂಪಷ್ಟೇ. 

        ಬೇಜಾರು ಕಳೆಯಲು ಒಬ್ಬರಿಗೊಬ್ಬರು ಮಾತನಾಡಿಕೊಂಡರು.ಅಕ್ಕ ಪಕ್ಕದಲ್ಲಿದ ಬೇರೆ ಭಕ್ತರನ್ನು ಕೂಡ ಮಾತಾಡಿಸಿದರು. ಮಾತುಗಳೆಲ್ಲ  ಖಾಲಿ ಆದವು.ಸಾಲು ಮಾತ್ರ ನಿಂತಲ್ಲೇ ನಿಂತಿದೆ. ಮುಂದೆ ಒಂದಿಂಚು  ಕೂಡ ಸಾಗುತ್ತಿಲ್ಲ. ಮಾತುಗಳೆಲ್ಲ ಮುಗಿದ ಮೇಲೆ ಹಾಗೆ ಎಲ್ಲರೂ ಅಂತರ್ಮುಖಿಗಳಾದರು. ದಣಿದಿದ್ದ  ದೇಹಗಳೆಲ್ಲ ಸುಮ್ಮನಾಗಿ , ಕುಳಿತು ಕೊಳ್ಳಲು  ಜಾಗಗಳನ್ನು ಬಯಸಿದವು.ಅಷ್ಟರಲ್ಲಿ ಅವರ ಸಾಲು ನಿಧಾನವಾಗಿ ಮುಂದೆ ಚಲಿಸಿತು. ಹೋಗಿದ್ದ ಶಕ್ತಿ ಮತ್ತೆ ಬಂತು."ಇನ್ನೂ ಕನಿಷ್ಟ 2 ಗಂಟೆಯಾದರೂ ಬೇಕು ದರುಶನಕ್ಕೆ" ಎಂದು ಅವನ ಸ್ನೇಹಿತ ಹೇಳಿದಾಗ ಪುನೀತ್  "ಹೌದೇನೋ ? ನಾ ಏನೋ ಮುಗಿದೆ ಹೋಯಿತು,ಇನ್ನೇನು ದರುಶನ  ಆಗಿಯೇ ಬಿಡುತ್ತೆ ಅಂತ  ಅಂದುಕೊಂಡಿದ್ದೆ " ಎಂದು ನಿಟ್ಟುಸಿರು ಬಿಟ್ಟನು. ಅಷ್ಟರಲ್ಲಿ ಸಾಲಿನಲ್ಲಿ ಇದ್ದ ಅವರು ಮುಂದೆ ಹೋಗಿ, ಕೆಲವು ಪಂಜರದಂತಹ ಕೆಲವು ಕೋಣೆಯೊಳಗೆ ಹೋದರು. ಅಲ್ಲಿ ಕೆಲ ನಿಮಿಷಗಳವರೆಗೆ ಕಾಯಬೇಕಿತ್ತು. ಅವುಗಳು ಥೇಟ್  ಪಂಜರಗಳೇ  ಆದರೆ  ಕೂರಲು ಮಾತ್ರ ಮರದ ಬೆಂಚುಗಳಿದ್ದವು.ಅವುಗಳ  ಸಾಮರ್ಥ್ಯಕ್ಕಿಂತಲೂ ಹೆಚ್ಚು ಜನರನ್ನು ಅಲ್ಲಿಗೆ ಕಳಿಸಲಾಗಿತ್ತು. ಪಾಪ ದೇವಸ್ಥಾನದ ಆಡಳಿತ  ಮಂಡಳಿಯವರೇನು  ಮಾಡಿಯಾರು ಈ ಜನ ಸಾಗರವನ್ನು ನಿಯಂತ್ರಿಸಲು. 

              ಆರ್ದ ಗಂಟೆ ಕಳೆಯಿತು, ಒಂದು ಗಂಟೆ ಕಳೆಯಿತು,ಎರೆಡು, ಮೂರು ಮತ್ತು ನಾಲ್ಕೂ ಗಂಟೆಗಳು ಕಳೆದರೂ ಇನ್ನೂ ಆ ಪಂಜರದಿಂದ ಅವರಿಗೆ  ಮುಕ್ತಿ ಸಿಗಲಿಲ್ಲ. ಅಲ್ಲೇ ಕೂತು ಕಾಲ ಕಳೆಯಲು ಕಷ್ಟವಾಯಿತು. ಜನರಿಗೆ ದೇವರ ದರುಶನದ ಕಾತರ ಹೆಚ್ಚಿತು.ಎಷ್ಟೋ ಮಂದಿ ದೇವರ ಸ್ಮರಣೆಯಲ್ಲಿ ಕೂತಿದ್ದಾರೆ. ಕೆಲವರಿಗೆ ಕಾದು ಕಾದು  ದೇವರ ಮೇಲೆ ಭಕ್ತಿಯು  ಹೊರಟು ಹೋಗಿ ಕೇವಲ ಆತನನ್ನು ನೋಡಬೇಕು, ನೋಡಿದರೆ ಸಾಕು ಅಷ್ಟೇ ಎನ್ನುವ ಮನೋಭಾವ ಬೆಳೆಯಿತು. ಕೆಲವರಿಗೆ ಅಲ್ಲಿಯ ಆಡಳಿತ ಮಂಡಳಿಯ ಬಗ್ಗೆ ಅಸಹನೆ ಮೂಡಿತು. ಅಲ್ಲಿ ಭಕ್ತರನ್ನು ಕೇಳುವವರು ಯಾರು ಇಲ್ಲ. ಆಡಳಿತ ಮಂಡಳಿಯು ಭಕ್ತರ  ಮೊರೆ ಕೇಳಲು, ಭಕ್ತರೇನು ಒಬ್ಬರೇ ಇಬ್ಬರೇ.ಲಕ್ಷಾಂತರ ಮಂದಿ.ಆ ಭಕ್ತರಲ್ಲಿ ಪುಂಡ ಪೋಲಿಗಳು ಕೂಡ ಇದ್ದರು, ವೃದ್ದರು, ಹೆಣ್ಣುಮಕ್ಕಳು,ಚಿಕ್ಕಮಕ್ಕಳೂ  ಅನೇಕರು. ಅಲ್ಲೇ ಪಂಜರದೊಳಕೆ ನೀಡಿದ ಪ್ರಸಾದವನ್ನು ಎದ್ದೋ ಬಿದ್ದೋ ಕೆಲವು ಗಟ್ಟಿ ಭಕ್ತರು  ಗಿಟ್ಟಿಸಿಕೊಂಡು ತಿಂದರು. ತಮ್ಮ ತಮ್ಮ ಹೆಂಡತಿ ಮಕ್ಕಳಿಗಾಗಿ  ಬೇರೆ ಬೇರೆ ವಯಸ್ಸಾದವರನ್ನು, ಹೆಂಗಸರನ್ನು , ಮಕ್ಕಳನ್ನು ದೂಡಿ  ಬೀಳಿಸಿ ಪ್ರಸಾದವನ್ನು ಪಡೆದು ತಮ್ಮ ಹೆಂಡಿರು ಮಕ್ಕಳಿಗೆ ಕೊಟ್ಟರು . ಪಾಪ ಕೆಲವರು ಏನು ಸಿಗದೆ ಹಾಗೆಯೇ   ಕುಳಿತರು.ಅಷ್ಟರಲ್ಲಿ  ಅಲ್ಲಿ ನಡೆಯುತಿದ್ದ ಅನೇಕ ಘಟನೆಗಳನ್ನು ನೋಡಿ ಪುನೀತ್  ಮನಸ್ಸಿಗೆ ಬಲು ಬೇಜಾರಾಯಿತು. ಅವನ ಆಸ್ತಿಕ ಭಾವ ಕಡಿಮೆ ಆಗುತ್ತಾ ನಾಸ್ತಿಕ ಭಾವ ಅವನನ್ನು ಆಳಲು ಶುರು ಮಾಡಿತ್ತು. " ನಿಜವಾಗಿಯು  ಏಕೆ  ಹೀಗೆ ?? ಏಕೆ  ಈ ರೀತಿ  ಜನರು ಒಬ್ಬರನ್ನೊಬ್ಬರು ತುಳಿದು, ಹೆಂಗಸರು,ಚಿಕ್ಕ ಮಕ್ಕಳೂ  ಎಂದು ಲೆಕ್ಕಿಸದೆ. ಆ ಪ್ರಸಾದ ತಮಗೆ ಸಿಗಬೇಕೆಂದು   ಒಬ್ಬರನ್ನೊಬ್ಬರು ತುಳಿದು, ಎಳೆದಾಡಿ  ಪ್ರಸಾದ ಪಡೆಯುತ್ತಿದ್ದಾರೆ. ಇವೆಲ್ಲದರ ನಡುವೆ  ಮಕ್ಕಳಿಗೆ, ಆ ಹೆಂಗಸರಿಗೆ ಆಗುವ ನೋವುಗಳನ್ನು ಯಾಕೆ ಅವರೆಲ್ಲ ಅರ್ಥ ಮಾಡಿಕೊಳ್ಳುತ್ತಿಲ್ಲ. ಇಲ್ಲಿ ಇರುವರೆಲ್ಲರೂ ಮನುಷ್ಯರೇ. ಎಲ್ಲರೂ ಆ ದೇವರ ದರುಶನಕ್ಕಾಗಿಯೇ ಬಂದಿರುವುದು. ಏಕೆ  ಇವರೆಲ್ಲರು  ಸಮಾಧಾನದಲ್ಲಿ ವರ್ತಿಸುತ್ತಿಲ್ಲ.ಒಬ್ಬ ಸ್ವಲ್ಪ ಮುಂದ ಹೋದರೆ ಸಾಕು ಇನ್ನೊಬ್ಬ ಆವಾಚ್ಯಾ ಶಬ್ದಗಳಿಂದ ಮತ್ತೊಬ್ಬನನ್ನು ಬಯ್ಯುತ್ತಾನೆ. ಹೇಗೆ ಬೇಕೋ ಹಾಗೆ ಒಬ್ಬರ ಮೇಲೊಬ್ಬರು ಬೀಳುತ್ತಾರೆ . ಎರೆಡು  ನಿಮಿಷ ತಡವಾಗಿ ಹೋದರೆ ಅವರಿಗೆ ದೇವರು ಕಾಣುವುದಿಲ್ಲವೇನು ?. ಇಷ್ಟು ಕಷ್ಟ ಪಟ್ಟು, ಇನ್ನೊಬ್ಬರನು ನೋಯಿಸಿ, ಚಿಕ್ಕ ಮಕ್ಕಳು, ಹೆಂಗಸರನ್ನು ತುಳಿದು ಮುನ್ನುಗ್ಗಿ ದೇವರನ್ನು ಕಂಡು ನಾವು ಮಾಡಬೇಕಾಗಿರುವುದಾರು ಏನು ?. ದೇವರು ನಿಜವಾಗಿಯೂ ಇದನ್ನೆಲ್ಲ ನೋಡುವುದಿಲ್ಲವೇ. ದೇವರು ನಿಜವಾಗಿಯೂ ಇದ್ದಿದ್ದರೆ ಹೀಗೆಲ್ಲ ಆಗುತ್ತಿದ್ದರೂ, ಅಲ್ಲೇ ಯಾಕೆ ಕೂತಿದ್ದಾನೆ. ಭಕ್ತ ರಕ್ಷಕನೆಂದು ಕರೆಸಿಕೊಳ್ಳುವ ಅವನು, ಅವನ ಅನೇಕ  ಭಕ್ತರಿಗೆ ಇಲ್ಲಿ ಆಗುವ ನೋವುಗಳಿಗೆ ಏಕೆ  ಸ್ಪಂದಿಸುತ್ತಿಲ್ಲ ?  ನಿಜವಾಗಿಯೂ ದೇವರು ಇರುವನೇ ? ಬೇರೆಯವರಿಗೆ ನೋವುಂಟು ಮಾಡಿ ದೇವರನ್ನು ಕಂಡು ನಾವು ಪಡಬೇಕಾಗಿರುವ ಸುಖವಾದರೂ ಏನು ? ಅದರಿಂದ ನಮಗೆ ತೃಪ್ತಿ ಆಗಲು ಸಾದ್ಯವೇ ?. ಶಾಂತಿ, ಸಮಾಧಾನ ಪ್ರೀತಿಗಳಲ್ಲವೇ ದೇವರು. ಅವು ಸಿಗದಿದ್ದರೆ ನಾವಿಲ್ಲಿಗೆ ಬಂದದ್ದಾದರೂ ಏಕೆ ?. ಅವುಗಳನ್ನರಸಿ ಇಲ್ಲಿಗೆ ಬಂದರೂ  ಅವು ನಮಗೆ ಇಲ್ಲಿ ಸಿಗಲಿಲ್ಲ ಅಂದರೆ ಹೇಗೆ ?" ಹೀಗೆ ಅನೇಕ ಪ್ರಶ್ನೆಗಳು, ತರ್ಕಗಳು  ಪುನೀತನನ್ನು ಕೆರಳಿಸಿದವು,ಯೋಚನೆಯ ಹಾದಿಗೆ ದೂಡಿದವು.ಹಾಗೂ-ಹೀಗೂ ಬಹಳಷ್ಟು ಸಮಯ ಕಾದ ನಂತರ , ಕೊನೆಗೊಮ್ಮೆ ಆ ಪಂಜರಗಳಿಂದ  ಮುಕ್ತಿಯೂ ಸಿಕ್ಕಿತು. ದೇವರ ದರುಶನವೂ ಆಯಿತು. 

      ನಿಜವಾಗಿಯೂ ದೇವರ ಮೂರ್ತಿ ಅದ್ಭುತವಾಗಿತ್ತು. ಒಂದು ಕ್ಷಣ ಪುನೀತ್ ದೇವರಲ್ಲಿ ಲೀನನಾಗಿ, ಎಲ್ಲವನ್ನು ಮರೆತು "ಶಾಂತಿ, ಸಮಾಧಾನ ಕೊಡಪ್ಪಾ ನನಗೂ ಮತ್ತು ನನ್ನಂಥಹ ಎಲ್ಲಾ ಭಕ್ತರಿಗು" ಎಂದು ಬೇಡಿಕೊಂಡನು.ತನಗೆಂದು ಏನು ಕೇಳಲಾಗಲಿಲ್ಲ, ಕೇಳಲು ಮನಸ್ಸು ಬರಲಿಲ್ಲ , ತನಗಾಗಿ ಏನಾದರು ಕೇಳಿ ಕೊಳ್ಳುವೊಷ್ಟು ಆಸ್ತಿಕ ಭಾವನೆಯು  ಹೊರಟು ಹೋಗಿ, ಸ್ವಾಮಿಯ ವಿಗ್ರಹದ ಮುಂದೆ ಮಾತು ಬರದವನಂತೆ  ಮೂಕನಾಗಿದ್ದನು. ಅಷ್ಟೊತ್ತಿಗೆ ತಡ ರಾತ್ರಿಯೂ ಆಗಿತ್ತು. ಗೊಂದಲದ ಗೂಡಾಗಿದ್ದ ಮನಸ್ಸಿಗೆ ದೇವರ ದರ್ಶನ, ಅದರ ಸೌಂದರ್ಯ ಸ್ವಲ್ಪ ನೆಮ್ಮದಿ ತಂದಿತ್ತು. ಆದರೂ ಅವನ ಮನಸ್ಸಿನಲ್ಲಿ  ಎಲ್ಲೋ ಒಂದು ಬಗೆಯ ಬೇಸರ ಇತ್ತು. ದೇವಸ್ಥಾನದ  ಆಡಳಿತ ಮಂಡಳಿಯವರು ಅಷ್ಟೊಂದು ವ್ಯವಸ್ಥೆ  ಮತ್ತು ಉತ್ತಮ ಸೌಕರ್ಯಗಳನ್ನು ಕಲ್ಪಿಸಿದ್ದರೂ ಭಕ್ತರೆ ಸಹನೆ ಕಳೆದುಕೊಂಡು ಅಸ್ತವ್ಯಸ್ತಕ್ಕೆ ಕಾರಣರಾಗುತ್ತಾರೆ. ಹೇಗೋ ಒಮ್ಮೆ ದೇವರ ದರ್ಶನ ಮಾಡಿದರೆ ಸಾಕು ಎಂಬ ಸಣ್ಣ ಯೋಚನೆಯಲ್ಲಿ ನಿಜವಾದ ಭಕ್ತಿ ಮತ್ತು ಪ್ರಾರ್ಥನೆಗಳ ಸ್ವರೂಪವನ್ನೇ ಬದಲಿಸಿಕೊಳ್ಳುತ್ತಾರೆ. " ಇಲ್ಲಿ ನಾವು  ದೇವರನ್ನು ಬೈದುಕೊಂಡು, ಅವನ ಇರುವಿಕೆಯನ್ನೇ ಪ್ರಶ್ನೆ ಮಾಡಬೇಕೋ ? ಅಥವಾ ಮಹಾ ಭಕ್ತರುಗಳಾದ ನಮ್ಮ ತೀರಾ ಕೆಟ್ಟ ವರ್ತನೆಗಳನ್ನು ಬದಲಾಯಿಸಿಕೊಳ್ಳಬೇಕೋ ? ಏಕೆ ಹೀಗೆ ?? " ಎಂದು ಪುನೀತ್   ಮನಸ್ಸಿನಲ್ಲಿ  ಸಾವಿರಾರು  ಪ್ರಶ್ನೆಗಳೆದ್ದವು. ಆದರೂ ಆ ದೇವರಿಗೆ ನಮಸ್ಕಾರ ಸಲ್ಲಿಸಿ ಜೀವನದಲ್ಲಿ ಒಮ್ಮೆಯಾದರೂ ವೆಂಕಟೇಶನ ದರ್ಶನ ಮಾಡಬೇಕು, ಅದನ್ನು ನೋಡಬೇಕು  ಅಂತ ಅಂದುಕೊಂಡಿದ್ದ ಅವನ ಆಸೆ ಈಡೇರಿದ  ಮೇಲೆ ಅವನ ಸ್ನೇಹಿತನಿಗೆ ದನ್ಯವಾದ ತಿಳಿಸಿ, " ನಿನ್ನ ದೆಸೆಯಿಂದ ನಾನು ಈ ದಿನ ಇಲ್ಲಿಗೆ ಬಂದೆ. ಇಲ್ಲಿ ಅನೇಕ ವಿಷಯಗಳು ನನ್ನ ಮನಸ್ಸಿನಲಿ ಸುಳಿದಾಡಿದವು, ದೇವರು ನಿಜವಾಗಿಯೂ ಇದಾನೋ ಇಲ್ಲವೋ ಗೊತ್ತಿಲ್ಲ, ಆದರೂ ಇಲ್ಲಿ ಏನೋ ಒಂದು ಬಗೆ ಶಕ್ತಿ ಇದೆ, ಬೆಳಿಗ್ಗೆ ತಿರುಪತಿಯ ಬೆಟ್ಟ ಹತ್ತಿ ಬಂದ ಅನುಭವವೊಂದು ಅದ್ಭುತ. ಅದನ್ನು ನಾ ಎಂದಿಗೂ ಮರೆಯುವುದಿಲ್ಲ " ಎಂದು ಅವನಿಗೆ  ಕೃತಜ್ಞತೆ ಸಲ್ಲಿಸದನು. 

ನಿಮಗಾಗಿ 
ನಿರಂಜನ್

ಗುರುವಾರ, ಫೆಬ್ರವರಿ 16, 2012

ಪುಟ್ಟನ LOVE ಸ್ಟೋರಿ


                                                      ಪುಟ್ಟನ LOVE ಸ್ಟೋರಿ 

ಅಂತು ಇಂತೂ ವಿಶ್ವಾಮಿತ್ರನ ತರ ಇದ್ದ ನಮ್ಮ ಪುಟ್ಟ ಅಲಿಯಾಸ್ ಪುಟ್ಟರಾಜನಿಗೆ ಮೊಟ್ಟ ಮೊದಲ ಬಾರಿಗೆ  ಒಬ್ಬ ಹುಡುಗಿಯ ಮೇಲೆ ನಿಜವಾದ ಲವ್ ಆಗಿಯೇ ಬಿಟ್ಟಿತ್ತು. ಅವಳ ಬಗ್ಗೆ ತಲೆಯನ್ನು  ಕೆಡಿಸಿಕೊಂಡ, ಹೆಚ್ಚು ಹೆಚ್ಚು  ಪ್ರೀತಿಯ ಹುಚ್ಚು ಅವನ ನೆತ್ತಿಗೆ ಏರಿಯೂ ಬಿಟ್ಟಿತ್ತು. " ಮದುವೆ ಅಂತ ಆದ್ರೆ ಅದು ಅವಳನ್ನೇ "  ಅನ್ನುವಷ್ಟು ಅಗಾಧವಾಗಿ ಬೆಳೆದು ಬಿಟ್ಟಿತು ಅವನ ಆ ಪ್ರೀತಿ. ಈ ಪ್ರೀತಿ ಅಂದ್ರೆ  "ಮದುವೆಯ ತನಕ ಮಾತ್ರ ಮಾಡುವುದಷ್ಟೇ" ಅಂತ ತಿಳಿಯುವ ಈ ಕಾಲದಲ್ಲಿ , ಪ್ರೀತಿ ಅಂದರೆ "ಸುಮ್ಮನೆ ಹಾಗೆ ಆಯಿತು ಈಗ ಹೋಯಿತು" ಅನ್ನೋ ಜನರ ನಡುವೆ , "ಅವಳನ್ನೇ ಮದುವೆ ಆಗಬೇಕು " ಅನ್ನೋ ಮಟ್ಟಿಗೆ  ಪ್ರೀತಿಸಿದ್ದ  ಪುಟ್ಟನಿಗೆ , ಅವನ ಸ್ನೇಹಿತರು " ಶಿಷ್ಯ ಬೇಡ ಕಣೋ ಇದೆಲ್ಲ , ಪ್ರೀತಿಸಿ ಮದುವೆ ಆಗುವುದೆಂದರೆ ಏನು ಸುಲಭದ ಮಾತಲ್ಲ , ಅದು ಅನ್ಯ ಜಾತಿಯ ಹೆಣ್ಣು ಮಗಳನ್ನ ಅಂದರೆ ಇನ್ನೂ ಕಷ್ಟ , ಯಾಕೋ ಬೇಕು ಇದೆಲ್ಲ ತಲೆ ನೋವು , ಬಿಟ್ಟು ಬಿಡೋ, ಸುಮ್ಮನೇ ಮನೆಯವರು ತೋರಿಸಿದ ಹುಡುಗಿಯನ್ನ ಮದುವೆ ಮಾಡಿಕೊಂಡು, ರಾಜಾರೋಷವಾಗಿ ಮಾವನ ಮನೆಯಲ್ಲಿ ಅಳಿಯೂಟ  ಹೋಡ್ಕೊಂಡು ಇದ್ದು ಬಿಡೋ" ಅಂತೆಲ್ಲಾ ಪರಿ ಪರಿಯಾಗಿ ಹೇಳಿದ್ರೂ , ಅವಳನ್ನು ಪ್ರೀತಿಸುವ, ಅವಳನ್ನೇ ಮದುವೆ ಆಗುವ ಅವನ ನಿರ್ಧಾರ ಅಚಲವಾಗಿಯೇ ಇತ್ತು.

     ಪುಟ್ಟ ಪ್ರೀತಿಸಿದ ಹುಡುಗಿಯ ಹೆಸರು ಸ್ನೇಹಲತ, ಎಲ್ಲರೊಂದಿಗೆ  ಬೇಗ ಬೆರೆಯುತ್ತಿದ್ದ ಹುಡುಗಿ. ಸ್ವಲ್ಪ ಬೇಗನೆ ಸ್ನೇಹಿತರನ್ನು  ತುಂಬಾ ಹಚ್ಚಿಕೊಳ್ಳುವ ಸ್ವಭಾವ ಅವಳದು. ಹಾಗೆಯೇ ಇವನೊಂದಿಗು ಸ್ನೇಹ ಶುರುವಾಗಿ ಸುಮಾರು ೪-೫ ತಿಂಗಳು ಆಗಿದ್ದವು. ಚೆನ್ನಾಗಿ ಮಾತನಾಡಿಕೊಂಡು ಇದ್ದರು ಪುಟ್ಟ ಮತ್ತು ಸ್ನೇಹ. ಅದೇನೋ ಇನ್ನು ಗೊತ್ತಿಲ್ಲ, ಅನೇಕ ದಿನಗಳು ಜೊತೆಗೆ ಕಳೆದಿದ್ದರು ಪುಟ್ಟನ ಮನಸ್ಸಿನಲ್ಲಿ ಇಷ್ಟೆಲ್ಲಾ ಅವಳ ಬಗ್ಗೆ ಪ್ರೀತಿ ಇದ್ದರು ,ಏನೆಲ್ಲಾ ಅವನು ಅಂದುಕೊಂಡಿದ್ರು , ಅವಳಿಗೆ ಇನ್ನು ಪುಟ್ಟ ಏನು ಹೇಳಿರಲಿಲ್ಲ. ಅವಳು ಹಾಗೆಯೇ ಇದ್ದಳು. ಅವರಿಬ್ಬರ ನಡುವೆ ಏನು ಇಲ್ಲವೆಂಬಂತೆ ಅವರು ವರ್ತಿಸುತ್ತಿದ್ದರು, ಆದರೂ  ಅವರ  ಕಣ್ಣುಗಳು ಒಮ್ಮೊಮ್ಮೆ ನಿಜ ಹೇಳುತ್ತಾ ಇದ್ದವು. ಗೊತ್ತಾದರೂ ಏನು ಅರ್ಥವಾಗಿಲ್ಲವೇನೋ ಅನ್ನೋ ರೀತಿ ವರ್ತಿಸುತ್ತಿದ್ದಳು  ಸ್ನೇಹ. ಈಗಲೂ ಅವನನ್ನು ಸ್ನೇಹದಿಂದಲೇ ನೋಡುತ್ತಿದ್ದಾಳೆ. ಅವನು ಕೂಡ ಹಾಗೆಯೇ,  ಎಂದು ತಾನಾಗಿಯೇ ಬಾಯಿ ಬಿಟ್ಟು "ನಾನು ನಿನ್ನ ಇಷ್ಟ ಪಡ್ತೀನಿ , ಪ್ರೀತಿಸ್ತೀನಿ , ನೀ ಇಲ್ಲದೆ ನನ್ನ ಜೀವನವೇ ಇಲ್ಲ , ನನ್ನ ಪ್ರೀತಿ ಹಾಗೆ ನನ್ನ ಪ್ರೀತಿ ಹೀಗೆ " ಎಂದು ಯಾವಾಗಲು ಹೇಳದೆ ಇದ್ರೂ ತನ್ನ ಬಗೆಗೆ ಅವನಲ್ಲಿ ಇದ್ದ ಆ ಸುಮಧುರ ಭಾವನೆಗಳು ಅವಳ ಮನಸ್ಸಿಗೆ ಮೊದಲಿನಿಂದಲೂ  ಅರ್ಥ ಆಗಿದ್ದವು. ಅವನು ಮನಸೋ ಇಚ್ಛೆ ಅವಳನ್ನು ಪ್ರೀತಿಸುವ ವಿಷಯವನ್ನು ಬಹು ದಿನಗಳ ಹಿಂದೆಯೇ ಅರಿತಿದ್ದಳು. ಸಹಜವಾಗಿ ಎಲ್ಲ ಹುಡುಗಿಯರ ತರ ಅದನ್ನು ತೋರಪಡಿಸದೆ, ಅವನ ಬಾಯಿಯಿಂದಲೇ ಆ ವಿಷಯವನ್ನು ಕೇಳಬೇಕೆಂದು ಅವಳು ಸುಮ್ಮನಿದ್ದಳು.

            ಬಹಳಷ್ಟು ಧೈರ್ಯ ಮಾಡಿ, ಒಂದು ದಿನ ಪುಟ್ಟ ಸ್ನೇಹಾಳ ಮೊಬೈಲ್ ಗೆ ಒಂದು ಸಂದೇಶ ಕಳಿಸಿ  ನಗರದ ಪೂರ್ವಕ್ಕಿರುವ  ರಾಗಿಗುಡ್ಡಕ್ಕೆ ಅವಳನ್ನು ಬರಹೇಳಿ,ಅವಳಿಗಾಗಿ ತಾನು ಕಾಯುವುದಾಗಿ ಸಂದೇಶವನ್ನು ಟೈಪ್ ಮಾಡಿ ಕಳಿಸಿದ.ಅವಳ ಉತ್ತರ ಏನು ಅಂತ ಬರುತ್ತೋ , ಅದು ಹೇಗೆ ಇರುತ್ತೋ ಅಂತ ಯೋಚಿಸುತ್ತ ಕಾಯ ತೊಡಗಿದ, ಸಂದೇಶ ಕಳುಹಿಸಿ ಎರಡೇ ನಿಮಿಷದಲ್ಲಿ ಬೆವರಿದ, ನಾಚಿದ. ಅಷ್ಟೊತ್ತಿಗೆ ಅವಳ ಉತ್ತರವೂ ಬಂತು " ಸರಿ ಯಾವಾಗ ಸಿಗುವುದು ?  ಯಾಕೆ ಈ ಬೇಟಿ  ?  ಅದು ಅಲ್ಲಿ ರಾಗಿ ಗುಡ್ಡದಲ್ಲಿ ,  ಅಂತ ಕೇಳಿದ್ದಳು " . " ನೀ ಅಲ್ಲಿಗೆ ಬಾ, ನಿನಗೆ ಎಲ್ಲಾ ಅರ್ಥ ಆಗುತ್ತೆ ಅಂತ ಹೇಳಿ " ಬಂದಿದ್ದ ಎರೆಡು  ಬೆವರು ಹನಿಗಳನ್ನು ಪುಟ್ಟ ಒರೆಸಿಕೊಂಡು , "ಇಲ್ಲೇ ಹೀಗೆ  ಹೆದರಿಕೆ ಆಗ್ತಿದೆ, ಇನ್ನು ಅವಳೆದಿರು ಈ ವಿಷಯ ತಿಳಿಸಬೇಕಾದರೆ ಇನ್ನು ಹೇಗೋ" ಅನ್ನುವ ಭಯ ಕೂಡ ಶುರುವಾಗಿ , ಮೈಯಲ್ಲಿ ಒಂದು ರೀತಿಯ ಹಿತವಾದ ನಡುಕ ಪ್ರಾರಂಭವಾಗಿತ್ತು.

          ಹೇಳಿದ ಸಮಯಕ್ಕೂ ಮೊದಲೇ ರಾಗಿ ಗುಡ್ಡಕ್ಕೆ ಬಂದಿದ್ದ  ಸ್ನೇಹ ತೋರಿಸಿಕೊಳ್ಳದಿದ್ದರು ಅವಳ ಮುಖದಲ್ಲೊಂದು ಮುಗ್ದ ನಗುವಿತ್ತು, ನಾಚಿಕೆಯಿತ್ತು ಹಾಗೆ ಏನೋ ಒಂದು ತರಹದ ಮಧುರ ಭಾವನೆಯೂ ಇತ್ತು. ಪುಟ್ಟನ ಮನಸ್ಸಿನಲ್ಲೂ ಏನೆಲ್ಲಾ ಭಾವನೆಗಳು ಇದ್ದರು , ತನ್ನ ಪ್ರೀತಿಯನ್ನು ವ್ಯಕ್ತಪಡಿಸುವ ಭಯವು ಅವನಲ್ಲಿದ್ದ ಎಲ್ಲ ಭಾವನೆಗಳನ್ನು ಮುಚ್ಚಿಹಾಕಿತ್ತು.

           ಗುಡ್ಡದ ಹನುಮ ದೇವರ ದೇವಸ್ತಾನದ ಹಿಂದಿನ  ಬಂಡೆಯ ಮೇಲೆ ಕೂತಿದ್ದರು, ಇಬ್ಬರು ದಿಟ್ಟಿಸಿ ಏನನ್ನೋ ನೋಡುತ್ತಾ ಇದ್ದರು , ಏನನ್ನೋ ಯೋಚಿಸುತ್ತ ಇದ್ದರು. ಯಾರು ಮಾತನ್ನು ಶುರು ಮಾಡಲಿಲ್ಲ. ಕೊನೆಗೆ ಪುಟ್ಟ  ಪಕ್ಕದಲ್ಲಿ ಕುಳಿತಿದ್ದ ಅವಳ ಮುಖ ನೋಡಿ "ಈ ದಿನ ನೀ ತುಂಬಾ ಚೆನ್ನಾಗಿ ಕಾಣುಸ್ತ  ಇದ್ದೀಯ" ಅಂದು ಸುಮ್ಮನಾದ. ಅವಳ ಮುಖ ಕೆಂಪೇರಿತು, ಮತ್ತೆ ಅವನ ಮಾತಿಗೆ ಕಾಯ ತೊಡಗಿದಳು . 2  ನಿಮಿಷ ಯಾರು ಮತ್ತೆ ಮಾತಾಡಲಿಲ್ಲ. ಮತ್ತೆ ದೈರ್ಯ ಮಾಡಿ ಅವಳೇ "ಏನೋ ಹೇಳ್ಬೇಕು ಅಂತ ನೀನು ಹೇಳಿದೆ , ಅದೇನು ಅಂತ ಈಗ ಹೇಳು " ಎಂದಳು. ಪುಟ್ಟ ತಡವರಿಸ ತೊಡಗಿದ."ಒಂದು ವೇಳೆ ನಾ ಇಲ್ಲಿಗೆ ಬರದಿದ್ದರೆ ನೀ ಏನು ಮಾಡಿರುತ್ತಿದ್ದೆ ?? " ಎಂದು ಸ್ನೇಹ ಪುಟ್ಟನನ್ನು ಕೇಳಿದಾಗ,  ಪುಟ್ಟ " ಹಾಗೆ ಕಾದುಕೊಂಡು ಕೂತಿರುತ್ತ ಇದ್ದೆ " ಅದಕ್ಕೆ ಸ್ನೇಹ " ಎಷ್ಟೊತ್ತು  ಕಾದಿರುತ್ತಿದ್ದೆ ??? " ಎಂದಾಗ ದೈರ್ಯ ಮಾಡಿ " ಒಂದು ದಿನ , ಎರೆಡು ದಿನ , ತಿಂಗಳು, ವರ್ಷ , ನಾ ಸಾಯೋತನಕ  ನಿನಗಾಗಿ ಕಾದಿರುತ್ತ ಇದ್ದೆ"  ಅಂತ ಅವಳ ಕಡೆ ತಿರುಗಿ ಹೇಳಿದ. ಅವಳ ಮುಖವನ್ನು ನೇರವಾಗಿ ದಿಟ್ಟಿಸಿ ನೋಡುವ ಶಕ್ತಿ ಆಗಲೇ ಅವನಲ್ಲಿ ಭಯಕ್ಕೆ ಕುಗ್ಗಿ ಹೋಗಿತ್ತು. ಅವಳು ಏನು ಅಂದುಕೊಳ್ಳುವಳೋ ಅನ್ನುವ ಭಯ ಪುಟ್ಟನಿಗೆ ಶುರುವಾಗಿತ್ತು. ಅವನ ಮನಸ್ಸಿನಲ್ಲಿ ಏನಿದೆ , ಪುಟ್ಟ ಈಗ ಏನು ಹೇಳ ಬಯಸುತ್ತಿದ್ದಾನೆ ಎಂದು ಮೊದಲೇ ತಿಳಿದಿದ್ದ ಅವಳು ನಿಧಾನವಾಗಿ ಅವಳ ಪಕ್ಕದಲ್ಲೇ ಇದ್ದ  ಅವನ  ಬಲಗೈ  ಮೇಲೆ ತನ್ನ ಎಡಗೈ ಇಟ್ಟಳು. ಅವಳ ಆ ಸ್ಪರ್ಶ ಪುಟ್ಟನಿಗೆ ಸಹಿಸಲಾರದ ಮುದ ನೀಡಿತು. " ಅದೇನು ಹೇಳು ಪುಟ್ಟ, ಯಾಕೆ ಹೀಗಿದಿಯಾ , ಏನ್ ಆಗ್ತಿದೆ ನಿನಗೆ ? " ಎಂದಾಕ್ಷಣ, ಅವಳ ಕೈಯನ್ನು  ತನ್ನ ಎರೆಡು ಕೈಗಳಿಂದ ಬಿಗಿಯಾಗಿ ಹಿಡಿದು " ನಿಜವಾಗಿಯೂ , ನಿನಗೆ ನನ್ನ ಮನಸ್ಸಿನಲ್ಲಿ ಏನಿದೆ  ಅಂತ ನಿಂಗೆ ಅರ್ಥ ಆಗಿಲ್ಲವೇ ಸ್ನೇಹ ?? " ಎಂದನು.  ಅವಳು ತುಂಬಾ ಭಾವುಕಳಾದಳು, ಗೊತ್ತಿಲ್ಲದೇ ಅವಳ ಕೈಗಳು ಅವನ ಕೈಗಳನ್ನು ಗಟ್ಟಿಯಾಗಿ ಇಡಿದಿದ್ದವು. ಇಬ್ಬರು ಒಂದು ಕ್ಷಣ ತಾವು ಏನು ಮಾಡ್ತಾ ಇದೀವಿ,ಯಾವ್ ಮಾತ್ ಆಡ್ತಾ ಇದೀವಿ ಅನ್ನೋದನ್ನೇ ಮರೆತು ಒಬ್ಬರೊನ್ನೊಬ್ಬರು ನೋಡತೊಡಗಿದರು. ಇಬ್ಬರು ದೂರ ದೂರ ಕೂತಿದ್ದರು ಸಹ ತುಂಬಾ ಹತ್ತಿರವಾಗಿದ್ದರು. ಅವರಿಬ್ಬರ ಎಲ್ಲ ಭಾವನೆಗಳು  ಬೆರೆತಿದ್ದವು. ಪ್ರೀತಿಯಲ್ಲಿ ಯಾವುದೋ ಲೋಕಕ್ಕೆ ಹೋಗಿ ಎಲ್ಲವನ್ನು ಮರೆತರು, ಗಂಟೆ ಕಳೆಯಿತು, ಸೂರ್ಯ ಕಣ್ಣಿಗೆ ಕಾಣಿಸದಾದ, ಇಳಿ  ಸಂಜೆಯ ಸಮಯವಾದ್ದರಿಂದ ಅವಳು ಮನೆಗೆ ಹೊರಟಳು. ಗುಡ್ಡದ ಹನುಮನಿಗೆ ಇಬ್ಬರು ವಂದಿಸಿ, ಅಲ್ಲಿಂದ ಮನೆಗೆ ಹೊರಟರು. ಅಲ್ಲಿಯವರೆಗೂ ಯಾವುದೋ ಭ್ರಮೆಯೋ , ಸ್ವಪ್ನ ಲೋಕದಲ್ಲೋ , ಕಲ್ಪನೆಯ ಲೋಕದಲ್ಲೋ ಇದ್ದ ಸ್ನೇಹಳು    ಮನೆಗೆ ಹೋಗುವ ಹಾದಿಯಲ್ಲಿ  ವಾಸ್ತವಕ್ಕೆ ಬಂದಳು. ಒಂದು ಕಡೆ ಅವಳಪ್ಪ, ಅಮ್ಮ ಮತ್ತು ಪ್ರೀತಿಯ ತಂಗಿ. ಇನ್ನೊಂದು ಕಡೆ ಪುಟ್ಟರಾಜು. ಪುಟ್ಟನ ನಿಷ್ಕಲ್ಮಶ ಮತ್ತು ಪ್ರಾಮಾಣಿಕ ಪ್ರೀತಿಯನ್ನು ತಿರಸ್ಕರಿಸಲು ಸಾದ್ಯವಿಲ್ಲದ ಅವಳ  ಮನಸ್ಥಿತಿ. ಪ್ರೀತಿಸಿ ಮದುವೆಯಾದರೆ ಆಗುವ ಸಮಸ್ಯಗಳು, ಅಪ್ಪ ಅಮ್ಮನಿಗೆ ಆಗುವ ಸಂಕಟ, ತಂಗಿಯ ಮದುವೆಯ ಮೇಲೆ ಆಗಬಹುದಾದ ಪರಿಣಾಮ. ನಾ ಏನಾದರು ಪುಟ್ಟನನ್ನು ಪ್ರೀತಿಸಿದರೆ ಏನೆಲ್ಲಾ ಆಗಬಹುದು ಎನ್ನುವ ಘಟನೆಗಳ ಸಣ್ಣ ಚಿತ್ರಣ  ಆ ಕ್ಷಣಕ್ಕೆ ಅವಳ ಕಣ್ಣುಗಳ ಮುಂದೆ ಬಂದಿತು. ಯಾವುದು ಸರಿ, ಯಾವುದು ತಪ್ಪು. ಏನೇನೋ ಯೋಚನೆಗಳು ಬಂದರು ಪುಟ್ಟ ಮತ್ತು ಪುಟ್ಟನ ಪ್ರೀತಿ ನೆನೆಸಿಕೊಂಡ ತಕ್ಷಣ ಎಲ್ಲವನ್ನು  ಮರೆತಳು. ಅವನಿಗಾಗಿ ಅವಳು ತನ್ನ ಪ್ರೀತಿಯನ್ನು ಅರ್ಪಿಸಿದಳು. ಅವನ ಅಗಾಧವಾದ ಆ ಪ್ರೀತಿಗೆ ಸಹಜವಾಗಿಯೇ ಸ್ಪಂದಿಸ ತೊಡಗಿದಳು.  ಹೀಗೆ  ಕಾಲವು  ಸರಿದು ಹೋಯಿತು.      
      

          ಒಂದು ದಿನ ತಮ್ಮ  ಮದುವೆಯ ವಿಚಾರವನ್ನು ಅವನು ತನ್ನ ಪ್ರೇಯಸಿ ಸ್ನೇಹಳಿಗೆ  ತಿಳಿಸಿದ. ಅವಳು ಅದಕ್ಕೆ "ಪ್ರೀತಿಯನ್ನು ಬೇಕು ಬೇಕಂತಲೇ ತ್ಯಾಗ ಮಾಡಿ , ಪ್ರೀತಿ ಮಧುರ ತ್ಯಾಗ ಅಮರ ಅನ್ನೋ  ಹುಡುಗರು ಈ ಕಾಲದಲ್ಲಿ ಇರುವಾಗ ಪುಟ್ಟರಾಜು ನನ್ನನ್ನು ಮದುವೆ ಆಗೋ ಮಟ್ಟಿಗೆ ಇಷ್ಟ ಪಡ್ತಾನೆ , ಪ್ರೀತಿಸಿದ ಹುಡುಗಿಗೆ ಬೇರೊಬ್ಬ ಹುಡುಗ ಬಂದು ಬಾಳು ಕೊಡುವ ಅವಕಾಶವನ್ನು ಬೇಕಾಂತಲೇ ಸೃಷ್ಟಿಸುವ ಹುಡುಗರ ಮಧ್ಯೆಯೂ , ಅವನೆ  ಮದುವೆ ಆಗ್ತೀನಿ ಅನ್ನುತ್ತಾ ಇರುವಾಗ ನಾನು ಹೇಗೆ ಅವನನ್ನು ತಿರಸ್ಕರಿಸಲಿ" ಅಂತ ಮನಸ್ಸಿನಲ್ಲೇ ಯೋಚಿಸಿ, ಹಿಂದು ಮುಂದು ನೋಡದೆ ಅವಳು ಮಧುವೆಗೆ ಸಮ್ಮತಿ ನೀಡಿದಳು. ಯುದ್ದದ ಮೊದಲ ಹಂತವನ್ನ ಗೆದ್ದವನಂತೆ ಪುಟ್ಟನು ಬೀಗುವಾಗ ಅವಳು ಮುಂದಿನ ಹಂತದ ಬಗ್ಗೆ, ಮುಂದಿನ ನಡೆಯ ಬಗ್ಗೆ ಬಿಡಿಸಿ ಹೇಳಿ, "ನಿಮ್ಮ ಮತ್ತೆ ನಮ್ಮ ಅಪ್ಪ ಅಮ್ಮನನ್ನು ಮೊದಲು ಒಪ್ಪಿಸಿ ಆಮೇಲೆ ನಮ್ಮ ಮದುವೆ" ಎಂದಳು. ಅದಕ್ಕೆ ಏನೋ ಒಂದು ವಿಶ್ವಾಸದಿಂದ  " ಎಲ್ಲರನ್ನು  ಒಪ್ಪಿಸಿಯೇ  ಒಪ್ಪಿಸುತ್ತೇನೆ , ಒಪ್ಪಿಸಿಯೇ ಮಧುವೆ  ಆಗೋಣ " ಅಂತ ಹೇಳಿದ. 

             ಸ್ನೇಹಳ ತಂದೆ ಸಕತ್ ಘಾಟಿ ಮನುಷ್ಯ, ವಯಸ್ಸಾದರೂ ಗಟ್ಟಿತನ ಮಾತ್ರ ಕಡಿಮೆ ಆಗಿಲ್ಲ. ಅವಳಿಗೂ ಅವರಪ್ಪ ಅಮ್ಮನನ್ನು ಒಪ್ಪಿಸದೇ ಮಧುವೆ ಆಗುವ ಮನಸ್ಸಿಲ್ಲ. ಒಂದು ಹೆಣ್ಣಾಗಿ ಈ ವಿಷಯವನ್ನು ತಾನಾಗಿಯೇ  ನಾಚಿಕೆ ಬಿಟ್ಟು ಪ್ರೀತಿಯ ವಿಷಯ ಹೇಳುವುದು ಕಷ್ಟದ ವಿಷಯವು ಹೌದು, ಅದೇ ರೀತಿ ಸ್ನೇಹಾಳಿಗು ಕೂಡ ತನ್ನ ಪ್ರೇಮದ ವಿಚಾರವನ್ನು ತನ್ನ ತಂದೆ ತಾಯಿಗಳ ಮುಂದೆ ತಾನೇ ಬಾಯಿ  ಬಿಟ್ಟು ಹೇಳಲು ಭಯದ ಜೊತೆಗೆ ನಾಚಿಕೆಯು ಇತ್ತು. ಅದಕ್ಕೆ ಸ್ನೇಹ ಈ ಒಪ್ಪಿಸುವ  ಜವಾಬ್ದಾರಿಯನ್ನು ಪ್ರಿಯತಮ ಬುದ್ದಿವಂತ ಪುಟ್ಟರಾಜುಗೆ ಬಿಟ್ಟಿದ್ದಳು. ಪುಟ್ಟನು ಕೂಡ ಅದಕ್ಕೆ ರೆಡೀ ಆಗಿ ಅವರ ಅಪ್ಪ ಅಮ್ಮರನ್ನು ಒಪ್ಪಿಸುವ ತಯ್ಯಾರಿ ಕೂಡ ಮಾಡಿದ. ಸ್ನೇಹಳ ಅಪ್ಪ ಪಕ್ಕಾ ಸಂಪ್ರದಾಯವಾದಿ, ಚಿಂತಕ, ಬಸವ ತತ್ವ ಪ್ರತಿಪಾದಕರೆಂದು ಅವನು ಮೊದಲೇ ಸೂಕ್ಷ್ಮವಾಗಿ ಅರಿತಿದ್ದ,  ಇವರಿಬ್ಬರ  ಜಾತಿಗಳು ಒಂದು ತರಹ  ಎಣ್ಣೆ ಶೀಗೆಕಾಯಿ ತರ ಆಗಿವೆ ಈಗಿನ ಜಾತಿವಾದಿಗಳಿಗೆ ಕೈಗೆ ಸಿಕ್ಕು. ಒಬ್ಬರು ಶೈವರಾದರೆ ಮತ್ತೊಬ್ಬರು ವೈಷ್ಣವರು. ವೈಷ್ಣವನಾದ ಪುಟ್ಟನಿಗೆ ಪ್ರತೀತಿಯಂತೆ ವಿದ್ಯಬ್ಯಾಸವೇ ಆಸ್ತಿ , ಮಾತೆ ಬಂಡವಾಳ, ಬುದ್ದಿವಂತಿಕೆಯೇ ಅಂತಸ್ತು. ಊರಿನಲ್ಲಿರುವ ಒಂದು ಹಳೆಯ ಮನೆ ಬಿಟ್ಟರೆ ಈ ಪೇಟೆಯಲ್ಲಿ ಅವನಿರುವುದು ಒಂದು ಹುಡುಗರ PG ಅಲ್ಲಿ. ಆಸ್ತಿ ಇಲ್ಲದ ಅವನಿಗೆ  ಸ್ನೇಹಾಳ ಅಪ್ಪ, ಅಮ್ಮನನ್ನು ಒಲಿಸಿಕೊಳ್ಳ ಬೇಕೆಂದರೆ ಅದು ತನ್ನ ಬುದ್ದಿವಂತಿಕೆಯಿಂದಲೇ ಎಂದು ಚೆನ್ನಾಗಿಯೇ ಅರಿತು ಅದಕ್ಕೆ ತಕ್ಕಷ್ಟು ತಯಾರಿ ಕೂಡ ಮಾಡಿದ್ದ.ಸ್ನೇಹಾಳ ತಂದೆ ಶಿವಪ್ಪನವರು ಬಸವ ತತ್ವ ಪ್ರತಿಪಾದಕರಾಗಿದ್ದರಿಂದ ಅವನಿಗೆ ಎಲ್ಲೋ ಒಂದು ಕಡೆ ನಮ್ಮ ಮಧುವೆಗೆ ಈ ಜಾತಿಯ ವಿಷಯ ಅಡ್ಡ ಬರುವುದಿಲ್ಲ ಅಂತ ಅಂದುಕೊಂಡಿದ್ದ . 
      
          ಇತ್ತೀಚಿನ ಹುಡುಗಾರದ ನಾವು ದೊಡ್ಡವರ ಆದರ್ಶಗಳನ್ನು ನಮ್ಮ ನಮ್ಮ  ಕೆಲಸಕ್ಕೆ ಮತ್ತು ನಡವಳಿಕೆಗೆ ಪೂರಕವಾಗಿ, ನಮ್ಮ ನಮ್ಮ ಅನುಕೂಲಕ್ಕೆ ತಕ್ಕಂತೆ  ಅರ್ಥೈಸಿಕೊಳ್ಳುತ್ತೇವೆ ಎಂಬುದು ಅಕ್ಷರಶ: ಸತ್ಯ. ಹೇಗೆ ಕುಡುಕನಿಗೆ ಕುಡಿಯಬೇಡ ಅಂದರೆ ಕುಡಿಯುವುದರಿಂದ ದೇಹಕ್ಕೆ ಒಳ್ಳೇದು ಅದನ್ನ doctors ಕೂಡ ಹೇಳ್ತಾರೆ ಅನ್ನೋದು, ಪ್ರೇಮ ವಿವಾಹದ ವಿಷಯ  ಬಂದಾಗ ಮಾತ್ರ  ಜಾತಿ ಪದ್ದತಿಯನ್ನು ವಿರೋದಿಸುವ ಆದರ್ಶಗಳನ್ನು ಎತ್ತಿ ಹಿಡಿಯುವುದು ಹಾಗೆ ಪುಟ್ಟನು ಕೂಡ ಈಗ ಜಾತಿ ಪದ್ದತಿಯ ಪಕ್ಕ ವಿರೋದಿಯಾಗಿದ್ದಾನೆ. ಪಕ್ಕ  ವಿಶ್ವಮಾನವ ಸಂದೇಶ ಸಾರಲು ಸಿದ್ದನಾಗಿದ್ದಾನೆ. ಅದಕ್ಕೆ ಪೂರಕವಾದ ಭಾಷಣವನ್ನು ಸ್ನೇಹಾಳ ತಂದೆ ಮುಂದೆ ಒಪ್ಪಿಸಲು ರೆಡಿ  ಆಗಿದ್ದಾನೆ.    
         
              ಸ್ನೇಹಾಳ ಮನೆಗೆ ಬಂದ ಕದ ತಟ್ಟಿಯೇ ಬಿಟ್ಟ , ಮೊದಲ ಭಾರಿಗೆ ಯಾರು ಕದ ತೆರೆಯಲಿಲ್ಲ, ಸ್ನೇಹ ಅಂತ ಹೆಸರಿಡಿದು ಕೂಗುವುದಕ್ಕೆ ಮುಜುಗರವಾಗಿ , " ಅಂಕಲ್  ಅಂಕಲ್ " ಅಂತ ಕೂಗಿ ಮತ್ತೆ ಅಲ್ಲೇ ಇದ್ದ calling ಬೆಲ್ ಕೂಡ ಒತ್ತಿದ . ತಕ್ಷಣ ಒಳಗಿನಿಂದ ಯಾರೋ ಕದ ತೆರೆಯುವ ಸದ್ದಾಯಿತು, ತಕ್ಷಣಕ್ಕೆ  ಅವನಿಗೆ ಒಂದು ತರಹದ ಮಿಂಚು ಮೈಯಲ್ಲಿ ಸಂಚರಿಸಿದಂತಾಗಿ ದಂಗು ಬಡಿದವನಂತಾದ . ಭಾಗಿಲು  ತಗೆದ ತಕ್ಷಣ ಎದುರಿಗೆ ಕಂಡಿದ್ದು ಸ್ನೇಹಾಳ ತಂದೆ ಶಿವಲಿಂಗಪ್ಪನವರು. ಸಾಕ್ಷಾತ್ ಪರಶಿವನ ಅಪರಾವತಾರ  ಎಂಬತ್ತೆ ಕಾಣುತ್ತಿದ್ದರು  ಹಣೆಗೆ ವಿಭೂತಿ   ಹಚ್ಚಿಕೊಂಡು. ವಯಸ್ಸಾದರೂ ಅವರ ದೇಹವು ಹಾಗೆ ನೀಳ ಹಾಗು ಸದೃಡವಾಗಿ  ಇತ್ತು. ಅವರನ್ನು ನೋಡಿದ ತಕ್ಷಣ ಪುಟ್ಟನಿಗೆ ಕೈ ಕಾಲುಗಳಲ್ಲಿ ಸ್ವಲ್ಪ ನಡುಕ ಹುಟ್ಟಿತ್ತು. ಆದರೂ  ಧೈರ್ಯ  ತಂದುಕೊಂಡು " ಅಂಕಲ್ ನನ್ನ ಹೆಸರು ಪುಟ್ಟರಾಜು ಅಂತ, ನಾನು ಸ್ನೇಹಾಳ ಜೊತೆಯಲ್ಲೇ ಕೆಲಸ ಮಾಡೋದು, ನಾನು ಅವಳ ಸ್ನೇಹಿತ " ಎಂದಾಕ್ಷಣ ಶಿವಪ್ಪನವರು ಸಂತೋಷದಿಂದಲೇ " ಬನ್ನಿ ಬನ್ನಿ, ಒಳಗೆ ಕೂತ್ಕೊಳ್ಳಿ ಸ್ನೇಹ ಒಳಗೆ ಇದಾಳೆ ಕರೀತಿನಿ " ಅಂತ ಸಹಜ ಮಾತುಗಳಲ್ಲೇ  ಅವನನ್ನು ಕರೆದು ಕೂರಿಸಿದರು. ಅಲ್ಲೇ ಇದ್ದ ಸೋಫಾ ಮೇಲೆ ಕೂತು ಜೇಬಿನಿಂದ ಕರವಸ್ತ್ರ ತೆಗೆದು ಹಣೆಯ ಮೇಲಿದ್ದ  ಬೆವರನ್ನು ಒರೆಸಿಕೊಂಡು ಕೂತುಕೊಂಡ. ಅಪ್ಪ ಕೂಗಿದರು ರೂಮಿನಲ್ಲೇ ಇದ್ದ ಸ್ನೇಹ ಮಾತ್ರ ಹೊರಗೆ ಬರಲಿಲ್ಲ ಭಯದಿಂದ.ಸ್ನೇಹಾಳಿಗೆ ಪುಟ್ಟ ಮನೆಗೆ ಬರುವ ವಿಷಯ ಮೊದಲೇ ತಿಳಿದಿತ್ತು.   ಶಿವಪ್ಪನವರಿಗೆ ನಾನು ಕರೆದರೂ  ಯಾಕೆ ಅವಳು ಹೊರಗೆ ಬರುತ್ತಾ ಇಲ್ಲ ಎಂಬುದನ್ನು ಯೋಚಿಸುತ್ತ ಕೋಣೆ ಬಳಿ ಹೋಗಲು ಎದ್ದಾಕ್ಷಣ  , ಪುಟ್ಟ ರಾಜು " ಅಂಕಲ್ ನಾ ನಿಮ್ಮ ಬಳಿಯೇ ಮಾತು ಆಡಲು ಬಂದಿರುವೆ " ಅಂದನು ಸ್ವಲ್ಪ ನಡುಗುವ ದನಿಯಿಂದ. ಅಷ್ಟೊತ್ತಿಗೆ ಸ್ನೇಹಾಳ ತಾಯಿ ಬಂದು ಅಡುಗೆ ಮನೆಯ ಬಾಗಿಲ ಬಳಿ ನಿಂತಳು. ಸ್ನೇಹಾಳ  ತಂಗಿ ರಮ ದೂರದಲ್ಲೇ ರೂಮಿನ ಮಂಚದಮೇಲೆ ಕೂತಿರುವುದು ಇವನಿಗೆ ಕಂಡಿತು. " ಹೇಳಪ್ಪ ಅದೇನು ವಿಚಾರ " ಅಂತ ಶಿವಪ್ಪನವರು ಹೇಳುತ್ತಿರುವಂತೆಯೇ "ಕಾಫೀ ಕುಡಿತಿರೋ   ಅಥವಾ  ಟೀ ಕುಡಿತಿರೋ" ಅಂತ ಸ್ನೇಹಾಳ ತಾಯಿ ಕೇಳಿದ ತಕ್ಷಣ " ಏನು ಬೇಡ ಆಂಟಿ , ನನ್ನದೆಲ್ಲ ಆಗಿದೆ , ನಿಮ್ಮ ಬಳಿಯಲ್ಲಿ ಒಂದು ಮುಖ್ಯವಾದ ವಿಷಯ ಹೇಳಬೇಕು ಅಂತ ಬಂದಿದೀನಿ,ನೀವು ಕೂಡ  ಕುಳಿತುಕೊಳ್ಳಿ " ಎಂದನು. ಶಿವಪ್ಪನವರಿಗೆ ಮಗಳು ಕೂಗಿದರು ಹೊರಗೆ ಬಾರದ್ದು, ಪುಟ್ಟರಾಜು ಹೀಗೆಲ್ಲ ಮಾತನಾಡುತ್ತಿರುವುದು ಮನಸ್ಸಿಗೆ  ಒಂದು ರೀತಿಯ ಕಸಿವಿಸಿಯಾಗಿ, ಗೊಂದಲಕ್ಕೆ ದಾರಿಯು ಮಾಡಿಕೊಟಿತ್ತು , ಶಿವಪ್ಪನವರ ತಲೆಯಲ್ಲಿ ಅನೇಕ ವಿಷಯಗಳು ಹಾಗೆ ಸುಳಿದಾಡತೊಡಗಿದವು. ಅಷ್ಟರಲ್ಲೇ ಸುಮ್ಮನೆ ಕುಳಿತಿದ್ದ ಶಿವಪ್ಪನವರಿಗೆ  " ಅಂಕಲ್ ತಾವು ದಯವಿಟ್ಟು ನನ್ನನ್ನು ತಪ್ಪು ತಿಳಿಯ ಬಾರದು, ನಾನು ನಿಮಗೆ ಒಂದು ವಿಷಯ ಹೇಳ್ತೀನಿ, ನಾನು ಆ ವಿಷಯವನ್ನು ಮಾತ್ ಆಡೋದು ಅದೆಷ್ಟು ಸರಿಯೋ ತಪ್ಪೋ ನನಗೆ ಗೊತ್ತಿಲ್ಲ , ಆದರು ಅದನ್ನ ತಮ್ಮ ಬಳಿ ಹೇಳ್ತೀನಿ, ದಯವಿಟ್ಟು ನೀವು ಬೇಜಾರು ಮಾಡಿಕೊಬಾರದು" ಎಂದಾಕ್ಷಣ ಶಿವಪ್ಪನರಿಗೆ ಎಲ್ಲವೂ ಅರ್ಥವಾಗಿಯೇ ಬಿಟ್ಟಿತು. ಮತ್ತೆ ಮೌನವಾಗಿಯೇ ಅವನ ಮುಖ ನೋಡಿದರು. ಪುಟ್ಟನು ಮಾತನ್ನು ಮುಂದುವರೆಸುತ್ತ " ನಾನು ಸ್ನೇಹ ಬಹಳ ದಿನದಿಂದ ಒಬ್ಬರನ್ನು ಒಬ್ಬರು ನೋಡಿದ್ದೇವೆ , ಜೊತಗೆ ಕೆಲಸವನ್ನು ಕೂಡ ಮಾಡಿದ್ದೇವೆ, ಅವಳು ತುಂಬಾ ಬುದ್ದಿವಂತಳು, ಒಳ್ಳೆಯವಳು ಹಾಗಾಗಿ ಸಹಜವಾಗಿಯೇ ನಾನು ಅವಳನ್ನು ಇಷ್ಟ ಪಡಲು ಶುರು ಮಾಡಿದೆ. ಈ ವಿಷಯವನ್ನು ಅವಳಿಗೂ ಹೇಳಿದೀನಿ. ಅದಕ್ಕೆ ಅವಳು ನಿಮ್ಮ ಬಳಿಯೇ ಮಾತನಾಡಿ ಅಂದಳು" ಎಂದು ಸುಮ್ಮನಾದನು . ಅದಕ್ಕೆ  ಗಾಬರಿ , ಬೇಜಾರು ಜೊತೆಗೆ ಕೋಪದಿಂದ  " ಅದಕ್ಕೆ ನಾನು ಏನು ಮಾಡಬೇಕು  ? " ಅಂದರು ಶಿವಪ್ಪನವರು. ಪುಟ್ಟ ಸ್ವಲ್ಪ  ಧೈರ್ಯ  ತಂದುಕೊಂಡು " ನೀವು ಒಪ್ಪಿದರೆ ನಾನು ಅವಳನ್ನು ಮದುವೆ ಆಗ್ತೀನಿ, ನಾವಿಬ್ಬರು ಪರಸ್ಪರ ಪ್ರೀತಿಯಿಂದ ಸಾಯೋತನಕ ಜೊತೇಲಿ ಇರ್ತಿವಿ " ಅಂದು ಸುಮ್ಮನಾದ.               
             
             ಸಹಜವಾಗಿಯೇ ಎಲ್ಲ ಹುಡುಗಿಯರ ಅಪ್ಪನವರಿಗೆ ಇಂತಹ ಸಂದರ್ಬದಲ್ಲಿ ಸಿಟ್ಟು ಬರುವಂತೆ ,ಶಿವಪ್ಪನವರಿಗೂ   ಕೋಪ ಬಂದಿತು. ಅದೆಲ್ಲವನ್ನು ಹಾಗೆ ನುಂಗಿಕೊಂಡು ಶಿವಪ್ಪನವರು " ನಿಮ್ಮ ಊರು ಯಾವುದು? ಯಾವ ಜಾತಿ ನಿಮ್ಮದು ?" ಅಂದರು. ಪುಟ್ಟನು" ಅಂಕಲ್ ನಮ್ಮದು ಹಾಸನದ ಹತ್ರ ಇರುವ ಒಂದು ಪುಟ್ಟ ಅಗ್ರಹಾರ, ನಾನು ಬ್ರಾಹ್ಮಣ ಜಾತಿಯವನು"ಎಂದದ್ದೆ ತಡ , ಅಲ್ಲಿತನಕವೂ  ಕೋಪವನ್ನೆಲ್ಲ ತನ್ನೊಳ್ಳಗೆ ನುಂಗಿಕೊಂಡಿದ್ದ ಶಿವಪ್ಪನವರು,ಬಾಯಿ ಬಿಟ್ಟು ಜೋರಾಗಿ " ಎದ್ದೇಳೋ ಮೇಲೆ , ಹೋಗೋ ಹೊರಗಡೆ , ಒಂದು ಕ್ಷಣವೂ ಇಲ್ಲಿ ನಿಲ್ಲಬೇಡ " ಎಂದರು. " ನೀನು ಯಾರು ?  ನಿನ್ನ ಜಾತಿ ಏನು ? ನಿನಗೆ ಏನಿದೆ ಈ ಶಿವಪ್ಪನ ಮಗಳನ್ನು   ಮದುವೆ  ಆಗಲು ಅರ್ಹತೆ ? " ಅಂದಾಕ್ಷಣ ಪುಟ್ಟನಿಗೆ ಭಯವಾಗಿ  ಏನು ಮಾಡುವುದೆಂದು ತಿಳಿಯದೆ ಹೊರಗೆ ನಡೆದೆ ಬಿಟ್ಟನು. ಸ್ನೇಹಳು   ರೂಮಿನಲ್ಲೇ ಈ ಮಾತನ್ನು ಕೇಳಿಸಿಕೊಂಡು ಪುಟ್ಟನನ್ನು ಮಧುವೆ ಆಗೋದು ಅಸಾದ್ಯ ಎಂದು ಕಣ್ಣೀರು ಇಟ್ಟಳು. ಪುಟ್ಟನು ದಾರಿಯುದ್ದಕ್ಕೂ " ಛೇ  ಏನು ಮಾಡೋದು ? ನನ್ನನ್ನು ಹೊರಗೆ ಹೋಗು ಎಂದು ನಿರ್ದಾಕ್ಷ್ಯಣ್ಯವಾಗಿ  ನನ್ನನ್ನು  ಹೊರಹಾಕಿದ    ಅವರನ್ನು ಮತ್ತೆ ಹೇಗೆ ಹೋಗಿ ಮಾತಾಡಿಸಲಿ ,ಅವರು ನನ್ನನು ಮತ್ತೆ ಹೊಳಗೆ ಕರೆದು ಮಾತಾಡಿಸುತ್ತಾರೆಯೇ ? ನಾ  ಮದುವೆಯ ಬಗ್ಗೆ ಹೇಳಿದರೆ ಕೇಳುತ್ತಾರೆಯೇ ???  ಏನು ಮಾಡಲಿ ??? " ಅಂತ ಯೋಚಿಸುತ್ತ ನಡೆಯ ತನ್ನ  PG  ಕಡೆಗೆ   ಕಡೆಗೆ    ನಡೆಯ ತೊಡಗಿದ.

                ಸ್ನೇಹಳಿಗೆ  ತನ್ನ ಮೊಬೈಲ್ ಇಂದ ಒಂದು ಸಂದೇಶವನ್ನು  ಕಳುಹಿಸಿದ , ಯಾವುದೇ ಉತ್ತರ ಬರಲಿಲ್ಲ ಅವಳ ಕಡೆ ಅವಳಿಂದ. ಎಷ್ಟು ಹೊತ್ತು ಕಾದರು ಯಾವುದೇ ಉತ್ತರವಿಲ್ಲ ಸ್ನೇಹಾಳ ಕಡೆಯಿಂದ. ದುಃಖ ಇಮ್ಮಡಿಯಾಗಿ ಬಂದರು ನುಂಗಿಕೊಂಡು ಅನೇಕ ಯೋಚನೆಗಳೊಂದಿಗೆ ಮುನ್ನೆಡೆಯ ತೊಡಗಿದ. "ಯಾಕೆ ನಮ್ಮನ್ನು  ಅವರು ಅರ್ಥ  ಮಾಡಿಕೊಳ್ಳುತ್ತಿಲ್ಲ ?  ಬೆಳೆಯುವಾಗ ಅಡ್ಡ ಬಾರದ , ಓದುವಾಗ ಅಡ್ಡ ಬಾರದ , ಪ್ರೀತಿಸುವಾಗಲು ಅಡ್ಡ ಬಾರದ , ಈ ಜಾತಿ ಮತ್ತು  ಅಂತಸ್ತುಗಳು ಈ ಮದುವೆಯ ವಿಷಯಕ್ಕೆ ಮಾತ್ರ  ಯಾಕೆ ಅಡ್ಡ ಬರುತ್ತವೆ ??? ಇಷ್ಟೊಂದು ಬಸವ, ಸರ್ವಜ್ಞ , ಗಾಂಧಿ, ಕುವೆಂಪುರವರ ತತ್ವ , ಮಾನವತಾವಾದವನ್ನು ಕೇವಲ ನಾವು ಒಪ್ಪಿದ್ದೇವೆ ಹೊರತು ಯಾಕೆ ಅನುಸರಿಸುತ್ತ ಇಲ್ಲ ??? ನಾವು ಎಷ್ಟೇ ಓದಿದರೂ , ತಿಳಿದುಕೊಂಡರೂ, ಏಕೆ  ಹೀಗೆ ಮದುವೆ ವಿಷಯದಲ್ಲಿ ಮಾತ್ರ  ವಿಚಿತ್ರವಾಗಿ  ವರ್ತಿಸುತ್ತೇವೆ ??? "  ಎಂಬ  ನೂರಾರು ಯೋಚನೆಗಳು  ತಲೆಯಲ್ಲಿ ತುಂಬಿಕೊಂಡವು   ಮನೆ ಸೇರುವಷ್ಟರಲ್ಲಿ " ಸ್ನೇಹ ನನ್ನನ್ನು ಇನ್ನು ಮುಂದೆ ಮಾತಾಡಿಸುವುದಿಲ್ಲ , ಅವಳು ನನ್ನನ್ನು ಅವಳಪ್ಪ , ಅಮ್ಮನ ವಿರೋಧ ಕಟ್ಟಿಕೊಂಡು ಹೇಗೆ ಪ್ರೀತಿಸಿಯಾಳು ?? ಅವರಪ್ಪನನ್ನು ಒಪ್ಪಿಸದೆ ಹೇಡಿಯಾಗಿ ಬಂದೆನಲ್ಲ...  ಛೇ ನಾನೆಂತ ಮೂರ್ಖ , ಇನ್ನು ಅವಳು ನನಗೆ ಸಿಗುವುದೇ ಇಲ್ಲ, ಅವಳು  ಇಲ್ಲದೇ ನಾನು ಹೇಗೆ ಬಾಳಲಿ ಅಂತ ಭಾರವಾದ ಹೃದಯವನ್ನು ಹೊತ್ತು ಹೇಗೆ ನಾನು ಜೀವನ ಕಳೆಯಲಿ  , ಮೊದಲ ಬಾರಿಗೆ ಬಂದ ಕಣ್ಣೀರ ಹನಿಗಳನ್ನು ಒರೆಸಿಕೊಂಡು ಸ್ನೇಹ ನನಗಿನ್ನೂ ಗಗನ ಕುಸುಮ ಮಾತ್ರ ಅಂತ ಅಂದುಕೊಳ್ಳುತ್ತ , ಕೂತಲ್ಲಿಯೇ ಯೋಚನೆಯಲ್ಲಿ  ಮುಳುಗಿದ. ಅವನ ಮನದೊಳಗಿನ ಆ ಪ್ರಶ್ನೆಗಳಿಗೆ ಉತ್ತರ ಇನ್ನು ಈ ಸಮಾಜದೊಳಗೆ ನನಗೆ ಸಿಗುವುದಿಲ್ಲ ಎಂದು ತನ್ನನ್ನು  ಮತ್ತು ಸಮಾಜವನ್ನು ಶಪಿಸುತ್ತಿರುವಂತೆಯೇ ಕಣ್ಣುಗಳು ಕಣ್ಣೀರಿಂದ ಮಂಜಾಗತೊಡಗಿದವು , ತಾನು ಸುಸ್ತಾಗಿ , ಜಾರಿ ಕುಳಿತಿದ್ದ  ತನ್ನ  ಮಂಚದ ಒಂದು ತುದಿಗೆ ಹಾಗೆ ಹೊರಗಿ , ಪ್ರಪಂಚದ ಪರಿವೆ ಇಲ್ಲದೆ ಕಣ್ಣು ಮುಚ್ಚಿದನು.        


ನಿಮಗಾಗಿ 
ನಿರಂಜನ್ 

ಬುಧವಾರ, ಜನವರಿ 18, 2012

ನನ್ನವಳ ಆ ಬೆಳದಿಂಗಳು

                                                " ನನ್ನವಳ ಆ ಬೆಳದಿಂಗಳು "

ಹುಣ್ಣಿಮೆಯ ರಾತ್ರಿ , ಆಫೀಸಿನಿಂದ ಮನೆಗ ಬಂದಾಗ ರಾತ್ರಿ ಸುಮಾರು 10.30 ರ ಸಮಯ, ಮನೆಗೆ ಬರುವ ಹಾದಿಯುದ್ದಕ್ಕೂ ಅವಳು ನನ್ನನ್ನು ಹಿಂಬಾಲಿಸಿ ಕೊಂಡೆ ಬಂದಿದ್ದಳು. ಬಹು ದೂರದಿಂದ, ದೊಡ್ಡ ದೊಡ್ಡ ಕಟ್ಟಡಗಳ ನಡುವಿನಿಂದ, ಮರಗಿಡಗಳ  ನಡುವಿನಿಂದ ನನ್ನನ್ನು ಅವಳು ತಿನ್ನುವಂತೆಯೇ ನೋಡಿದ್ದಳು. ನನಗೂ ಅವಳು ತುಂಬಾ ಸುಂದರವಾಗಿ ಕಾಣುತ್ತಾ ಇದ್ದಳು, ಏಕೆಂದರೆ ಅದು ಅವಳ ರಾತ್ರಿ, ಪ್ರಕೃತಿಯು ಅವಳಿಗಾಗಿಯೇ ಮೀಸಲಿಟ್ಟ ರಾತ್ರಿ. ಸುಂದರವಾಗಿ ಕಾಣುವ ಅವಳು ಶುಭ್ರವಾದ ಬಿಳಿ ವಸ್ತ್ರ ಧರಿಸಿ, ದೂರದಿಂದಲೇ ನನ್ನನ್ನು ನೋಡುತ್ತಿದ್ದಾಗ ಸಹಜವಾಗಿಯೇ ನಾನು ಕೂಡ ಅವಳನ್ನು ಒಮ್ಮೆ ದಿಟ್ಟಿಸಿ ನೋಡಿ,  ಅವಳ ಅಂದಕ್ಕೆ ಮರುಳಾಗಿ ಮನಸ್ಸಿನಲ್ಲೇ ಎಷ್ಟೊಂದು ಸುಂದರವಾಗಿ ಇರುವಳೆಂದೂ ಅಂದುಕೊಂಡಿದ್ದೆ ತಡ ನೋಡಿ, ಅವಳು ನನ್ನ ಬೆನ್ನು ಹತ್ತಿಯೆ  ಬಿಟ್ಟಳು. ಅವಳ ಆ ಸೊಬಗಿಗೆ ಸೋಲದವರು ಯಾರು ಇಲ್ಲ ಅಂತ ನನಗೆ ಗೊತ್ತಿತ್ತು. ಅದೇ ರೀತಿ ನಾನು ಕೂಡ ಸೋತಿದ್ದೆ. ಆದರೆ ಒಮ್ಮೆ ಗುರಾಯಿಸಿದ್ದೆ ತಡ  ಅವಳು ನನ್ನ ಬಿಡಲೇ ಇಲ್ಲ. ಅವಳ ನೇರ ನೋಟ ನನ್ನ ಮೇಲೆಯೇ ಇತ್ತು ಎಂದೆನಿಸುತ್ತಿತ್ತು.  ಅಂತೂ ಇಂತೂ ಅವಳಿಂದ ತಪ್ಪಿಸಿಕೊಂಡು ಮನೆಗೆ ಸೇರಿದ್ದರು ಅವಳ ಗುಂಗಿನಲ್ಲೇ ಇದ್ದೆ. ಊಟ ಮಾಡುತ್ತಾ ಇರುವಾಗ ಮನೆಯ ಪೂರ್ವ ದಿಕ್ಕಿನ ದೊಡ್ಡ ಕಿಟಕಿಯಲ್ಲಿ ಪರದೆಯ ಹಿಂದೆಯೇ ಅವಳು ಬಚ್ಚಿಟ್ಟುಕೊಂಡು ನನ್ನ ಕಡೆ ಮತ್ತೆ ಕದ್ದು ಕದ್ದು ನೋಡುತಿದ್ದದ್ದು ಕಂಡಿತು. ಅವಳನ್ನು ನೋಡು ನೋಡುತ್ತಾ ನಾನು ಆ ದಿನ ಒಂದು ರೊಟ್ಟಿ ಜಾಸ್ತಿಯೇ ತಿಂದಿದ್ದೆ. ಪ್ರೀತಿಯಲ್ಲಿ ಬಿದ್ದವರಿಗೆ ಊಟ ಸೇರುವುದಿಲ್ಲ ಅಂತ ಕೇಳಿದ್ದೆ , ಆದರೆ ಅವಳ ಪ್ರೀತಿಯಲಿದ್ದ ನಾನು ಆ ದಿನ ಅವಳನ್ನು ನೋಡು ನೋಡುತ್ತಾ ಜಾಸ್ತಿನೇ ಊಟ ಮಾಡಿದ್ದೆ. ಊಟ ಮುಗಿಸಿ, ಹಾಸಿಗೆ ಹಾಸಿ , ದೀಪ ಆರಿಸಿ , ಕಿಟಕಿಯಲ್ಲಿದ್ದ ಅವಳನ್ನೇ ದಿಟ್ಟಿಸುತ್ತಾ ನಾ ಮಲಗಲು ಪ್ರಯತ್ನಿಸಿದಾಗ ಅವಳ ಆ ಹಾಲು  ನಗೆಯ ಬೆಳಕು ನನ್ನ ಕಣ್ಣಿಗೆ ಕುಕ್ಕುತ್ತಾ ನನ್ನೇ ನೋಡು ಎಂದು ಅವಳು ಹೇಳಿದಂತೆ ಆಗುತ್ತಿತ್ತು. ಅವಳ ಆ ಬೆಳದಿಂದಳು ನನ್ನ ಮೇಲೆಲ್ಲಾ ಬಿದ್ದಿತ್ತು. 

     
            ಅವಳನ್ನೇ ನೋಡುತ್ತಿದ್ದ ನನಗೆ ಅದು ಯಾವಾಗ ನಿದ್ದೆ ಬಂದಿತೋ ನಾ ಅರಿಯೆ, ಮಾರನೆಯ ದಿನ ಮುಂಜಾನೆ ಎದ್ದಾಗ ಬೆಳಿಗ್ಗೆ 5 ಗಂಟೆ. ಕಿಟಕಿಯಲ್ಲಿ  ರಾತ್ರಿ  ಕಾಣುತ್ತಾ ಇದ್ದ ಅವಳು ಈಗ  ಕಾಣಿಯಾಗಿದ್ದಳು. ಅವಳನ್ನೇ ನೆನೆಸಿಕೊಳ್ಳುತ್ತಾ  ರಾತ್ರಿಯ ಆ ಅನುಭವವನು ನೆನೆದು ಅವಳಿಗೆ ನೀ ಅದೆಷ್ಟು ಸುಂದರ ಅಂತ ಮತ್ತೊಮ್ಮೆ ಮನಸ್ಸಿನಲೇ ಅಂದುಕೊಳ್ಳುತ್ತ, ನನ್ನ ಕೆಲಸಗಳನ್ನೆಲ್ಲ ಮುಗಿಸಿ, ಪ್ರತಿ ದಿನದಂತೆ ಹೊರಗೆ ಹೋಗಲು ಹೊರಟು ನಿಂತಾಗ 5.30  ಸಮಯವಿರಬಹುದು. ಕೈಯಲ್ಲಿ ಒಂದು ಲೋಟ ನೀರು ಇಡಿದು , ಭಾಗಿಲು ತೆಗೆದಾಕ್ಷಣ ತಣ್ಣನೆ ಗಾಳಿ ಬಾಚಿ ನನ್ನನ್ನು ತಬ್ಬಿದಾಗ " ಆಹಾ " ಎನ್ನುವಂತ ಸುಂದರ  ಅನುಭವ. ಇದು ಮುಂಬರುವ ಸಂಕ್ರಾಂತಿಯ ಚಳಿಯ  ಮುನ್ಸೂಚನೆ ಎಂದು ನನಗೆ ಅನ್ನಿಸಿತು. ಅದೇ ಕ್ಷಣ ನನ್ನ ಗಮನ ಹರಿದಿದ್ದು ಪಶ್ಚಿಮದಲ್ಲಿ ಮತ್ತೆ  ನನ್ನನ್ನು ನೋಡಿ ನಗುತ್ತಿದ್ದ ನನ್ನ ಕಿಟಕಿಯಿಂದ ಕಾಣೆಯಾಗಿದ್ದ  ಆ ನನ್ನ ಶಶಿಯ ಕಡೆ. ಅವಳು ರಾತ್ರಿ ಹೇಗೆ ಇದ್ದಳೊ ಹಾಗೆಯೇ ಕಾಣುತ್ತಿದ್ದಳು, ಸ್ವಲ್ವೂ ಬಳಲಿರಲಿಲ್ಲ. ಆದರೆ ರಾತ್ರಿ ಪೂರ್ವದಲ್ಲಿ ಇದ್ದವಳು ಈಗ ಪಶ್ಚಿಮದ ನೆತ್ತಿಯ ಮೇಲೆ ಮಿನುಗುತ್ತಿದ್ಡಳು. 

            ನನಗೋಸ್ಕರವಾಗಿಯೇ ಅವಳು ಕಾದಿದ್ದಳೇನೋ ಅನ್ನುವ ಅನುಭವ ಆ ಕ್ಷಣಕ್ಕೆ ನನಗೆ ಆಯಿತು. ಹಾಗೆ ಹೊರಾಂಡದಲ್ಲಿ ಅವಳನ್ನು ನೋಡುತ್ತಲೇ, ಚಳಿಯಲ್ಲಿ , ಕೈಲಿ ಇದ್ದ ನೀರನ್ನು ಕುಡಿದಾಕ್ಷಣ ಹಲ್ಲುಗಳು ಜುಮ್ಮ್ ಎಂದು ಮೈ ಮೇಲೆ ಚಳಿಗುಳ್ಳೆಗಳೆದ್ದವು . ಪಕ್ಕದ ಅಪಾರ್ಟ್‌ಮೆಂಟ್ ಮೇಲೆ "ಗುಟ್ರ್ ಗುಟ್ರ್ " ಅನ್ನುತ್ತಾ  ಗಂಡು ಪಾರಿವಾಳ ಹೆಣ್ಣು ಪಾರಿವಾಳವನ್ನು ಸುತ್ತುವುದು,  ದೂರದ ಮರದ ಮೇಲೆ ಕಾಗೇಯೊಂದು ಕಾ ಕಾ ಎಂದು ತನ್ನ ಬಳಗವನ್ನು ಕರೆಯುತ್ತಾ ಇದ್ದದ್ದು ಬಿಟ್ಟರೆ ಬೇರೆ ಯಾರು ಇರಲಿಲ್ಲ ,  ನನ್ನ ಮತ್ತು ಆ ಶಶಿಯನ್ನು ಬಿಟ್ಟು ಅಲ್ಲಿ.  ಆಗ ಸಮಯ ಇನ್ನೂ ೫.೩೦ ಆಗಿದ್ದರಿಂದ , ಸಂಕ್ರಾಂತಿಯ ಚಳಿಯೂ ಜೋರಿದ್ದರಿಂದ ಖಗ ಸಂಕುಲವು ಇನ್ನೂ ಹೊರಗೆ ಬರದೇ ಸೂರ್ಯನ್ನನ್ನು ಕಾಯುತ್ತಿದ್ದವು ಅನ್ನಿಸಿತು .ಅಷ್ಟೊತ್ತಿಗೆ ಆಗಲೇ ನಮ್ಮ ಅಮ್ಮ ಅಲ್ಲಿದ್ದ ತುಳುಸಿ ಕಟ್ಟೆ ಸಾರಿಸಿ, ಕುಂಡಕ್ಕೆ ಕುಂಕುಮವಿತ್ತು, ದೀಪ ಹಚ್ಚಿದ್ದರು. ಪಶ್ಚಿಮದಲ್ಲಿ ಚಂದ್ರ , ಹೊರಾಂಡದಲ್ಲಿ ತುಳಸಿ ಕಟ್ಟೆ, ಚಿಕ್ಕದಾಗಿ ಉರಿಯುತಿದ್ದ  ದೀಪ,  ಅತ್ತ ಆ  ಪಾರಿವಾಳಗಳ ಪ್ರಣಯ ಇದೆಲ್ಲ ನೋಡಿ ನನಗೆ ತಕ್ಷಣ ನೆನೆಪಾದದ್ದು ಪ್ರೇಮಕವಿ ಕೆ.ಎಸ್ ನರಸಿಂಹಸ್ವಾಮಿಯವರ ಈ ಸಾಲುಗಳು.
"  ಬೃಂದಾವನದ ಹಣೆಗೆ ಕುಂಕುಮವನಿಡುವಾಗ
   ಕಾಣುವುವು ಶ್ರೀತುಳಸಿ ಕೃಷ್ಣತುಳಸಿ
   ನೀಲಾಂಬರನ ನಡುವೆ ಚಂದಿರನು ಬಂದಾಗ
   ರೋಹಿಣಿಯು ಬೆಳಗುವಳು ಸನ್ನಿಧಿಯಲಿ " 
   
            ಪ್ರತಿದಿನದಂತೆ ಹೊರಗೆ ಹೊರಟಾಗ ಮತ್ತೆ ಶುರುವಾಯಿತು ಅವಳ ಹಿಂಬಾಲಿಕೆ. ಇನ್ನೂ ಸೂರ್ಯನ ಸದ್ದಿರಲಿಲ್ಲ ಪೂರ್ವದಲ್ಲಿ, ಆದ್ರೆ ಪಶ್ಚಿಮದಲ್ಲಿ ಮಾತ್ರ ಇವಳು ನಲಿಯುತ್ತಾ  ಮಂಜಿನ ಮರೆಯಲ್ಲಿ ನನ್ನನ್ನೇ ನೋಡಿ ನುಲಿಯುತ್ತಿದ್ದಳು ಎಂದೆನಿಸಿತು. ಮುಂಜಾವಿನ ಆ ಕೊರೆಯುವ ಚಳಿಯಲ್ಲಿ , ಆ ಬೆಳದಿಂಗಳಲ್ಲಿ, ಅವಳೊಂದಿಗೆ ನಾನೊಬ್ಬನೇ ಇದೀನಿ, ನಮ್ಮ ಜೊತೆ ಯಾರು ಇಲ್ಲ, ನಮ್ಮನ್ನು ಇಲ್ಲಿ ಕೇಳುವರು ಯಾರು ಇಲ್ಲವೆಂಬ ಭಾವನೆ ಮಾಡಿತು. ಆ ಭಾವನೆಯನ್ನು ಸಂಪೂರ್ಣವಾಗಿ ನಾನು ಅನುಭವಿಸತೊಡಗಿದೆ. ಅಷ್ಟೊತ್ತಿಗೆ ಆಟದ ಮೈದಾನ ತಲುಪಿದ ನಾನು ಓಡಲು  ಶುರು ಮಾಡಿದೆ, ಅವಳು ಕೂಡ  ನನ್ನ ಜೊತೆಯಲ್ಲೇ ಓಡಲು ಶುರು ಮಾಡಿದಳು. ಎಲ್ಲರೂ ಇಷ್ಟ ಪಡುವ ಅವಳನ್ನು ಈ ದಿನ ಮಾತ್ರ ಯಾಕೋ ಯಾರೊಬ್ಬರೂ ಅವಳನ್ನು ನೋಡದೇ ನನಗಾಗಿಯೇ ಬಿಟ್ಟು ಕೊಟ್ಟಿದ್ದಾರೆ ಅನ್ನಿಸುತ್ತಾ ಇತ್ತು. ಮೈದಾನದಲ್ಲಿ ಸಾಕಷ್ಟು ಜನರಿದ್ದರು ಸಹ, ತಮ್ಮ ಪಾಡಿಗೆ ತಾವು ತಲೆ ತಗ್ಗಿಸಿಕೊಂಡು ವಾಕ್ ಮಾಡುತ್ತಾ ಇದ್ದ ಅಂಕಲ್ ಗಳು, ಅಲ್ಲಿಯೂ ಪಿಸು ಪಿಸು ಮಾತನಾಡುತ್ತಾ ಜೊತೆಯಾಗಿಯೇ ವಾಕ್ ಮಾಡುತ್ತಿದ್ದ ಆಂಟೀ ಗಳು, ಸದ್ದಿಲದ್ದೇ ನಿಧಾನವಾಗಿ ನೆಡೆಯುತ್ತಿದ್ದ ಮುಪ್ಪಿನ ತಾತಂದಿರು, ಯಾರು ನನ್ನ ಮತ್ತು ಅವಳನ್ನು ಗಮನಿಸುತ್ತಲೇ ಇರಲಿಲ್ಲ. ಅವಳು ನನ್ನನ್ನು ನೋಡುತ್ತಾ ಇದ್ದಳು ನಾನು ಅವಳನ್ನು ನೋಡುತ್ತಾ ಇದ್ದೇ. ನಾವಿಬ್ಬರು ಜೊತೆ ಜೊತೆಯಾಗಿ ಓಡಿದೆವು, ನನ್ನ ನೋಡಿ ಅವಳು ನಕ್ಕಳು, ನನ್ನ ಮೇಲೆ ಅವಳ ನಗೆಯ ಬೆಳಕನ್ನು ಚಲ್ಲಿದಳು , ನಾನು ಕೂಡ ಅವಳ ನೋಟದ ಖುಷಿಯನ್ನು  ಮತ್ತೆ ಮತ್ತೆ ಅನುಭವಿಸಿದೆ. ನನ್ನನ್ನು ಹಿಂಬಾಲಿಸುತ್ತಾ  ಬಂದಳು,ನಮ್ಮ ಮನೆಯ ಕಿಟಕಿಯ ಪರದೆಯ ಪಕ್ಕದಲ್ಲೇ ಬಚ್ಚಿಟ್ಟುಕೊಂಡಿದ್ದಳು, ನನ್ನ ಜೊತೆಯೇ ಮಲಗಿದಳು, ಈಗ ನನ್ನ ಜೊತೆಯೇ ಮತ್ತೆ ಓಡಿ ಓಡಿ ಬರುತ್ತ ಇದ್ದಾಳೆ, ಆ ದಿನ ಇವಳು ಇರುವುದು ನನಗಾಗಿಯೇ ನಾ ಇರುವುದು ಇವಳಿಗಾಗಿಯೇ ಎನ್ನೋ ಅನುಭವ. 
ನಿಜ ಹೇಳಬೇಕೆಂದರೆ , ಒಂದು ಹೆಣ್ಣು ಇದೆ ಮೊದಲ ಬಾರಿಗೆ ರಾತ್ರಿಯೆಲ್ಲ ಕಾದು ಕಾದು , ಅದು ಮುಂಜಾನೆಯೇ ನನ್ನೊಂದಿಗೆ ಓಡಿ ಬಂದದ್ದು. ಈ ಹಿಂದೆ ಯಾವ ಹೆಣ್ಣು ಕೂಡ ಈ ರೀತಿಯ ದೈರ್ಯ ನನ್ನೊಡನೆ ಮಾಡಿರಲಿಲ್ಲ.  ಅವಳ ಆ ಬೆಳದಿಂಗಳು ಹೇಗೆ ಇತ್ತೆಂದರೆ ನನ್ನ ನೆರಳು ನನ್ನ ಇಂದೆ ನೀಟಾಗಿ ನನ್ನನ್ನೇ ಹಿಂಬಾಲಿಸುವುದು ನನಗೆ ಕಾಣುತಿತ್ತು. ಅದು ನನ್ನನ್ನು ಹಿಂಬಾಲಿಸುವ ಪರಿ ಹೇಗಿತ್ತು ಎಂದರೆ ಇವರಿಬ್ಬರನ್ನೇ ಬಿಟ್ಟರೆ ಇವನು  ಅವಳಿಗೆ ಏನಾದರು ಮಾಡಿ ಬಿಡುತ್ತಾನೆ  ಎಂದು ಅದು  ನನ್ನನ್ನು ತುಂಬಾ ಜಾಗರೂಕತೆಯಿಂದ  ಗಮನಿಸುತ್ತಿತ್ತು. ಆ ನೆರಳು ನನಗೆ ಆ ಸಮಯದಲ್ಲಿ ಶಿವ ಪೂಜೆಯಲ್ಲಿ ಕರಡಿ ತರ , ಚಲನಚಿತ್ರದ ನಡುವೆ ಬರುವ ಜಾಹೀರಾತಿನ ತರ ಬೇಸರ ತರಿಸಿತ್ತು ಕೂಡ.

               ಅಷ್ಟೊತ್ತಿಗೆ ಸಮಯ 6.15 ಇರಬಹುದು , ಪಕ್ಷಿಗಳ ಚಿಲಿಪಿಲಿ ಇಂಚರ ನನ್ನನ್ನು ಅವಳ ಲೋಕದಿಂದ ಹೊರ ಬರುವಂತೆ ಮಾಡಿದವು. ಮೂಡಣ ಕೆಂಪಾಗಿತ್ತು, ಅಲ್ಪ ಬೆಳಕಲ್ಲಿ ಸ್ವಲ್ಪ ಸ್ವಲ್ಪ ಮಂಜು, ಮಂಜು ಸೀಳಿಕೊಂಡು ಬರುತ್ತ ಇದ್ದ ಸೂರ್ಯನ ರಷ್ಮಿಗಳು, ಮೈಧಾನದ ಪಕ್ಕದಲ್ಲಿದ್ದ ಹುಲ್ಲಿನ ಮೇಲೆ ಹೊಳೆಯಲು ಶುರು ಮಾಡಿದ ಇಬ್ಬನಿಯ ಹನಿಗಳು ಎಲ್ಲವು ಸೇರಿ ನನಗೆ     " ಬಾರಪ್ಪ ಹೊರಗೆ ಬೆಳಗಾಯಿತು, ಅವಳು ಹೋದ್ಲು , ನೀ  ಬಂದ ಕೆಲ್ಸಾ ಕೂಡ  ಆಯಿತು, ಇನ್ನೂ ಇಲ್ಲಿಂದ ಹೊರಡಪ್ಪ" ಅನ್ನುವಂತೆ ಭಾಸವಾಯಿತು.  

               ನೋಡು ನೋಡುತ್ತಿದ್ದಂತೇ ರವಿಯು ನೀಲಾಕಾಶಕ್ಕೆ ಲಗ್ಗೆ ಇಟ್ಟು, ಮೂಡಣದ ಚಿತ್ರಣವನ್ನೇ ಬದಲಾಯಿಸಿ, ಬಣ ಬಣ  ಎನ್ನುತ್ತಾ ಇದ್ದ ಮರ ಗಿಡಗಳಲ್ಲಿ ಹಕ್ಕಿ ಪಕ್ಕಿಗಳ ಇಂಚರ ಬರಲು ಸ್ಪೂರ್ತಿಯಾಗಿದ್ದ. ನಮ್ಮಿಬ್ಬರ ನಡುವೆ ಸೂರ್ಯ ಬಂದದ್ದನ್ನು ಕಂಡ  ನನ್ನ ಶಶಿ, ನಾಚಿಕೆಯಿಂದ ಮಂಜಿನಲ್ಲಿ ಮತ್ತು ಸೂರ್ಯನ ಪ್ರಕರತೆಯಲ್ಲಿ ಮರೆಯಾಗತೊಡಗಿದಳು . ಅದಕ್ಕೆ ನಾನು " ಅಯ್ಯೋ ಬರೋದ್ ಬಂದೆ ಇನ್ನೂ ಸ್ವಲ್ಪ ಹೊತ್ತು ಆದ  ಮೇಲೆ ಬರಬಾರದ " ಅನ್ನುವಷ್ಟರಲ್ಲಿ ಅವಳು ಸಂಪೂರ್ಣ ಮರೆಯಾಗಿದ್ದಳು . ಅವಳ ಆ ಛಾಯೆ ಮಾತ್ರ ನನ್ನ ಮನಸ್ಸಿನ್ನಲ್ಲಿ ಮತ್ತು ಆ ಪಶ್ಚಿಮದ ಒಂದು ತುದಿಯಲ್ಲಿ  ಉಳಿದಿತ್ತು. ನಾನು ಇನ್ನೇನು ಬೇಸರದಿಂದ ಮನೆಗೆ ಹೊರಡುವಾಗ ಮಂಜಿನಲಿ ಅವಿತಿದ್ದ ಆ ಸೂರ್ಯ ಮುಖ ತೋರಿಸಿ " ಹೇ ಶಿಷ್ಯ , ಯೋಚನೆ ಮಾಡಬೇಡ, ನೆನ್ನೆ ತಾನೇ ಹುಣ್ಣಿಮೆ ಆಗಿದೆ, ಇನ್ನೂ ಸ್ವಲ್ಪ ದಿನ ಅವಳು ಇಲ್ಲೇ ಇರುತ್ತಾಳೆ , ಸಂಜೆ ಆದರೆ ಸಾಕು ನಿನಗೆ ಕಂಡೆ ಕಾಣಿಸುತ್ತಾಳೆ , ಬೆಳ್ಲಂಬೆಳ್ಳಿಗ್ಗೆ  ನಿನಗೆ ಕಾಯುತ್ತಾ ಇರ್ತಾಳೆ,  ನಿನ್ನೊಡನೆ ಜಾಗಿಂಗ್ ಕೂಡ ಬರ್ತಾಳೆ , ಈ ಲೆವೆಲ್ಲಿಗೆ ತಲೆ  ಕೆಡಿಸಿಕೊಳ್ಳಬೇಡ, ಸಾಕು ಸಾಕು ಮನೆಗೆ ಹೋಗು , ಕೈಗೆ ಸಿಗದ ಅವಳ ಬಗ್ಗೆ ನೀ ಇಷ್ಟೊಂದು ಯೋಚಿಸಿದರೆ ಹೆಂಗಾಪ್ಪ ಜೀವನ ???? " ಅಂತ ಹೇಳಿದ ಹಾಗೆ ಆಯಿತು. ಅದಕ್ಕೆ ನನ್ನ ಮನಸ್ಸು ಕೂಡ ಹೀಗೆ  ಹೇಳಿತು " ಹೇ ನಿರಂಜನ ನನ್ನ ಮಾತು ಕೇಳು ,  ಆ ಸೂರ್ಯ, ಚಲುವೆ  ಚಂದ್ರೆಯ   ಮೇಲಿರುವ ಹೊಟ್ಟೆ ಕಿಚ್ಚಿನಿಂದ ಹೀಗೆ ಹೇಳ್ತಾ ಇದಾನೆ,  ನೀ ಮಾತ್ರ ಅವಳನ್ನ ಬಿಡ್ ಬೇಡ, ಸೂರ್ಯನ ಮಾತ್ ಕೇಳಬೇಡ , ಅವಳೇ ಬಂದು ನಿನ್ನ ಡೌ ಹೊಡೆದ್ರೆ ನೀ ಅದ್ಯಾಕೆ ಸುಮ್ನೇ ಇರ್ತಿಯ ಮಾಡು ಮಾಡು ಮಜ ಮಾಡು ". 

ನಿಮಗಾಗಿ 
ನಿರಂಜನ್ ......


 

ಭಾನುವಾರ, ಡಿಸೆಂಬರ್ 18, 2011

ಪುಟ್ಟನ ಸುಂದರ ಲೋಕ....

                                             ' ಪಕ್ಷಿ ಲೋಕ '


CAzÉÆAzÀÄ ¢£À ¨ÉùUÉ0iÀÄ ಮಧ್ಯಾಹ್ನ , ºÉÆgÀUÉ  ¸ÀÄqÀĪÀ  ¨Áj ©¹®Ä ¥ÀÅlÖ D ¢£À  DqÀ®Ä ºÉÆgÀUÉ  ºÉÆÃUÀzÉ ªÀÄ£É0iÀįÉèà PÁ® PÀ¼É0iÀÄÄwÛzÀÝ.  ªÀÄ£É0iÀÄ  ªÀÄÄA¨sÁUÀzÀ PÁA¥ËAqï UÉ CAnPÉÆA¢zÀÝ ªÀİèUÉ0iÀÄ §½î ¸ÉÆA¥ÁV  ¨É¼É¢vÀÄÛ. CzÀgÀ ¥ÀPÀÌPÉÌ JgÀqÁ¼ÉvÀÛgÀzÀ ¹ÃvÁ¥sÀ® ªÀÄvÀÄÛ zÀÄAqÁV  ¨É¼É¢zÀÝ zÁ½A¨É VqÀUÀ¼ÀÄ ¨ÉùUÉ0iÀÄ°è ºÀ¹j¤AzÀ  PÀAUÉÆ½¸À®Ä  ¥ÀÅlÖ£À  ¦æÃw0iÀÄ ºÁgÉÊPÉ0iÀÄ  PÁgÀtªÁVvÀÄÛ. ¥ÀÅlÖ£ÀÄ D VqÀUÀ¼À£ÀÄß  ªÀÄvÀÄÛ ªÀİèUÉ §½î0iÀÄ£ÀÄß vÀ£Àß vÁ¬Ä0iÀÄÄ ºÉÃUÉ  ªÀÄPÀ̼À£ÀÄß £ÉÆÃrPÉÆ¼ÀÄîvÁÛ¼ÉÆÃ CµÉÖà ¦æÃw¬ÄAzÀ £ÉÆÃrPÉÆ¼ÀÄîwÛzÀÝ£ÀÄ.
 
¥ÀÅlÖ£À  CªÀÄä ªÀİèUÉ  CAl£ÀÄß  PÉ®ªÀÅ ªÀµÀðUÀ¼À »AzÉ  ¨ÉÃgÉÆ§âgÀ  ªÀģɬÄAzÀ  vÀAzÀÄ  zÁ½A¨É  VqÀªÀ£ÀÄß  CªÀgÀ  C¥Àà 0iÀiÁjAzÀ¯ÉÆÃ ¥ÀqÉzÀÄ ¥ÀÅlÖ£À PÉʬÄAzÀ¯Éà £Éqɹ ¤ÃgÀÄ  ºÁQ¹zÀÝgÀÄ. CªÀgÀÄ  (vÀAzÉ vÁ¬ÄUÀ¼ÀÄ) »ÃUÉ ªÀiÁrzÀÄÝ ¥ÀÅlÖ¤UÉ VqÀ ªÀÄgÀUÀ¼À ªÉÄÃ¯É ¦æÃw  ºÀÄlÖ¯ÉAzÉ EgÀ¨ÉÃPÀÄ. CzÉà jÃw ¥ÀÅlÖ¤UÀÆ D VqÀUÀ¼À ªÉÄïɠ J°è®èzÀ  CPÀÌgÉ. ¹ÃvÀ¥sÀ®zÀ  VqÀªÀ£ÀÄß ¥ÀÅlÖ vÁ£É  ©Ãd £ÉlÄÖ ªÉƼÀPÉ0iÉÆqÉzÁV¤AzÀ CzÀ£ÀÄß  ¥ÉÇö¹zÀÝ. ªÉƼÀPÉ DzÁV¤AzÀ  ºÀtÄÚ ©qÀĪÀªÀgÉUÀÆ CzÀgÀ  J®è ¨É¼ÀªÀtÂUÉ0iÀÄ£ÀÄß UÀªÀĤ¹, ¦æÃw¹ ¥ÉÇö¹zÀÝ. ªÀİèUÉ0iÀÄ §½î ªÉÆUÀÄÎ ªÀįÉè0iÀÄ£ÀÄß ©mÁÖUÀ CªÀ¤UÁzÀ ¸ÀAvÉÆÃµÀ C¶ÖlÖ®è. eÉÆÃgÁV PÉÃPÉ ºÁQ ºÀÄZÀÑ£ÀAvÉ PÀÄt¢zÀÝ. ¹ÃvÀ ¥sÀ® ¸Àಣ್ಣ ºÀƪÀ£ÀÄß ©lÖUÉÆAvÀÄ ¥ÀÅlÖ ¥Àæ¥ÀAZÀªÀ£Éßà ªÀÄgÉvÀÄ, vÁ£ÀÄ £ÉlÖ VqÀ, ºÀƪÁVzÉ, E£ÉßãÀÄ  PÉ®¢£ÀUÀ¼À°è ºÀtÄÚUÀ¼ÀÄ ¹UÀÄvÀÛªÉ " JAzÀÄ CwêÀ ¸ÀAvÉÆÃµÀ ¥ÀlÄÖ vÀ£Àß ¸ÉßûvÀjUÉ®è  D ºÀƪÀÅUÀ¼À£ÀÄß vÉÆÃj¹zÀÝ.D ºÀƪÀÅUÀ¼À£ÀÄß eÁvÀPÀ ¥ÀQë0iÀÄAvÉ PÁzÀÄ "CªÀÅ JAzÀÄ ºÀÆ«¤AzÀ  FZÁUÀÄvÀÛªÉ0iÉÆÃ, PÁ0iÀiÁUÀÄvÀÛªÉ0iÉÆÃ, ºÀuÁÚUÀÄvÀÛªÉಯೋ " JAzÀÄ ¢£ÀªÀÅ CªÀ£Àß UÀªÀĤ¸ÀÄwÛgÀÄwÛzÀÝ. ¥ÀÅlÖ£À vÀAzÉ vÁ¬ÄUÀ¼ÀÄ PÀÆqÀ CªÀ£À F ¸À¸Àå ¥ÉæÃªÀÄPÉÌ ºÁ¯ÉgÀzÀÄ, ¥ÉÇæÃvÁ컸ÀÄwÛzÀÝgÀÄ. ºÉªÉÄä¬ÄAzÀ J®èjUÀÄ ºÉüÀÄwÛzÀÝgÀÄ. ¥ÀÅlÖ£À  PÉʬÄAzÀ 0iÀiÁªÀÅzÉà VqÀ £ÀqɹzÀgÀÄ CzÀÄ §AzÉà §gÀÄvÀÛzÉ JAzÀÄ, DzÀÝjAzÀ¯Éà ¥ÀPÀÌzÀ ªÀģɠ gÀvÀߪÀÄä£ÀªÀgÀÄ  ಕೂಡ MAzÀÄ ¨Áj ¥ÀÅlÖ£À£ÀÄß  UÀÄtUÁ£À ªÀiÁr  , MAzÀÄ VqÀªÀ£ÀÄß  CªÀ£À PÉʬÄAzÀ¯Éà £ÀqɹzÀÝgÀÄ.

  ªÀļÉUÁ® ªÀÄvÀÄÛ  ¨ÉùUÉ0iÀÄ  ¸ÀĪÀÄ0iÀÄzÀ°è F VqÀ  ªÀÄvÀÄÛ §½îUÀ¼ÀÄ  ¥ÀQëUÀ½UÉ vÀAUÀÄzÁtªÁVzÀݪÀÅ. ºÀ«ÄäAUï §qïðಗಳು §AzÀÄ ¹ÃvÁ¥sÀ®, zÁ½A¨É  ªÀÄvÀÄÛ ªÀİèUÉ0iÀÄ ºÀƪÀÅUÀ¼À ªÀÄPÀgÀAzÀªÀ£ÀÄß  »ÃgÀÄwÛzÀݪÀÅ. C¯Éèà PÀÆvÀÄ " aPï, aPï " J£ÀÄßwzÀÝgÉ, UÀÄ©âUÀ¼ÀÄ " aªï, aªï " J£ÀÄßwÛzÀݪÀÅ.  DUÉÆªÉÄä  FUÉÆªÉÄä  §gÀÄwÛzÀÝ PÉAzÀÄ §tÚzÀ PÁqÀÄ ¥ÁjªÁ¼ÀUÀ¼ÀÄ ¹ÃvÀ ¥sÀ® VqÀzÀ°è PÁ® PÀ¼É0iÀÄÄwÛzÀݪÀÅ. ¥ÀÅlÖ£ÀÄ 0iÀiÁªÁUÀ®Æ EzÀ£Éß®è £ÉÆÃr D£ÀAzÀ¢AzÀ  0iÀiÁªÀÅzÉÆÃ ¯ÉÆÃPÀPÉÌ  ºÉÆÃV ©qÀÄwÛzÀÝ£ÀÄ. VqÀUÀ¼À  eÉÆvÉUÉ  CªÀ¤UÉ  D ºÀQÌ ¥ÀQëUÀ¼À  ªÉÄÃ®Æ CµÉÖà ¦æÃw ¨É¼É¢vÀÄÛ. ಅಲ್ಲಿ §gÀĪÀ J®è ¥ÀQëUÀ¼À  ¥ÀjZÀ0iÀĪÀÅ  DV , CªÀ£ÀÄ CªÀÅUÀ½UÉ  w½0iÀÄzÀAvÉ CªÀÅUÀ¼ÉÆA¢UÉ ಗಾಡವಾದ ¸ÉßúÀ ¨É¼É¹zÀÝ.

 CzÉà jÃw ಆ ¢£À, ¥ÀÅlÖ£À  CªÀÄä  ªÀÄzsÁåºÀßzÀ  ¸ÀªÀÄ0iÀĪÁzÀÝjAzÀ vÀ£Éß®è  PÉ®¸ÀUÀ¼À£ÀÄß  ªÀÄÄV¹PÉÆAqÀÄ ªÀÄ£É0iÀÄ  ªÀÄÄA¢£À dUÀİ0iÀÄ°è  CQÌ Dj¸ÀÄwÛzÀÝgÀÄ. CQÌ0iÀİèzÀÝ £ÀÄZÀÄÑ CQÌ0iÀÄ£ÀÄß  CªÀgÀÄ ¨ÉÃ¥Àðr¸ÀÄvÀÛ ¸Àé®à £ÀÄZÀÄÑ CQÌ0iÀÄ£ÀÄß UÉÃn£À §½ eÉÆÃr¹, £É®PÉÌ ºÁQzÀÝ ZÀ¥Ààr PÀ°è£À ªÉÄÃ¯É ºÁPÀÄwÛzÀÝgÀÄ. D VqÀzÀ°è£À UÀÄ©âUÀ¼ÀÄ  ¸ÀgÀæ£É  §AzÀÄ D £ÀÄZÀÄÑ  CQÌ0iÀÄ£ÀÄß PÀÄQÌ PÀÄQÌ w£ÀÄßತ್ತ, DUÉÆªÉÄä  FUÉÆªÉÄä  aªï aªï J£ÀÄßvÀÛ DqÀÄwÛzÀݪÀÅ. EzÀ£Éß®è  ¥ÀÅlÖ  ¸ÀzÀÄÝ ªÀiÁqÀzÉ PÉÆÃuÉ0iÀÄ QlQ¬ÄAzÀ¯Éà £ÉÆÃqÀÄwÛzÀÝ.

    CµÀÖgÀ°è CªÀgÀªÀÄä ºÉà ¥ÀÅlÖ E¢0iÀÄ K£ÉÆÃ CzÀPÉÌ ¥ÀÅlÖ ¤zsÁ£ÀªÁV E¢Ã£ÀªÀÄä gÀƪÀiï C°è, K£ÉâÃPÀÄ ?? " CAvÀ ನಿಧಾನವಾಗಿ PÉýzÀ£ÀÄ, eÉÆÃgÁV ªÀiÁvÀ£ÁrzÀgÉ J°è UÀÄ©âUÀ¼ÀÄ ºÁj ©qÀÄvÀÛªÉ0iÉÆÃ  JA§ ¨sÀ0iÀÄ¢AzÀ, CzÀPÉÌ  CªÀgÀªÀÄä  ¸Àé®à ¤ÃgÀÄ vÀUÉÆAqÀÄ ¨ÁJAzÀÄ eÉÆÃgÁVಯೇ  PÀÆVzÀgÀÄ. PÀÆVUÉ ºÉzÀjzÀ  UÀÄ©âUÀ¼ÀÄ ¸ÀgÀæ£É  ºÁj VqÀ ¸ÉÃjzÁUÀ PÉÆÃuÉ0iÀÄ QlQ¬ÄAzÀ  CªÀÅUÀ¼À£ÀÄß £ÉÆÃqÀÄwÛzÀÝ ¥ÀÅlÖ¤UÉ  ¹lÄÖ §A¢vÀÄ. ¹nÖ¤AzÀ¯Éà CqÀÄUÉ ªÀÄ£ÉUÉ ºÉÆÃV C°èzÀÝ ¹ÖÃ¯ï ¯ÉÆÃlzÀ°è ¤ÃgÀÄ ತಂದು , ¸À¢Ý®èzÉ CªÀÄä£À  §½ ElÄÖ CªÀÄä  ¤£ÀUÉ  ¸Àé®àªÀÅ ಗೊತ್ತಾಗೊಲ್ಲ, ¤ÃgÀÄ PÉÃ¼ÉÆÃzÀÄ CµÉÆÖAzÀÄ eÉÆÃgÁUÀ? ¤zsÁ£ÀªÁV PÉÃ¼ÉÆÃzÀ®é " JAzÀÄ ¹nÖ¤AzÀ zÀÄBR¨sÀjvÀ£ÁV PÉýzÀನು. CªÀ£À zÀÄBRªÀ£ÀÄß PÀëtzÀ°è  CxÀðªÀiÁrPÉÆAqÀÄ vÁ¬Ä , "¥ÀÅlÖ ನಾ ¤ÃgÀÄ PÉýzÀÄÝ £À£ÀUÉ C®è ಕಣೋ , C°è ¤ÃgÀÄ ºÁPÀÄ, ಪಾಪ ಆ ಗುಬ್ಬಿಗಳಿಗೆ , ¨Áå¸ÀUÉ  ¸ÀÄvÀÛ®Ä ¤ÃgÀÄ E®è" JAzÁPÀët, CªÀÄä£À  ªÉÄðzÀÝ PÉÆÃ¥À vÀtÚUÁV ¥ÀÅlÖ C°èzÀÝ ZÀ¥Ààr PÀ®ÄèUÀ¼À vÀVÎUÉ   ¤ÃgÀÄ ºÁQzÀ. ¤ÃgÀÄ ºÁQ §AzÀ ¤«ÄµÀzÀ°è ªÀÄvÉÛ §AzÀ D UÀÄ©âUÀ¼ÀÄ ¸ÀgÀæ£É ¤ÃgÀ£ÀÄß  PÀÄrzÀÄzÀÝ£ÀÄß £ÉÆÃr ¥ÀÅlÖ¤UÉ CwêÀ  ¸ÀAvÉÆÃµÀªÁ¬ÄvÀÄ. D ¤ÃgÀ£ÀÄß PÀÄrzÀ §½PÀ, CzÉà ¤Ãj£À°è  MAzÀÄ UÀĩ⠫ÄAzÉzÀÄÝ gÉPÉÌ0iÀÄ §rzÀÄ  ªÀÄvÉÛ ¸ÀgÀæ£É ºÁj ¹ÃvÁ¥sÀ®zÀ  VqÀzÀ ªÉÄïɠ PÀÆvÀÄ, vÀ£Àß PÉÆPÀÌ£ÀÄß ZÀÆ¥ÀÅUÉÆ½¸À¯ÉÆÃ JA§AvÉ gÉA¨ÉUÉ ¸ÀªÀjzÁUÀ ¥ÀÅlÖ¤UÉ K£ÉÆÃ ¸ÀA¨sÀæªÀÄ. C¯Éèà EzÀÝ ºÀ«ÄäAUï §qïð ªÀİèUÉ0iÀÄ §½î0iÀÄ ªÉÆVΤAzÀ ªÀÄPÀgÀAzÀ »Ãj zÁ½A¨É  VqÀzÀ ªÉÄÃ¯É PÀÆwzÀÄÝ PÉA¥ÀÅ  PÁqÀÄ ¥ÁjªÁ¼À £ÉgÀ¼À°è PÀÆvÀÄPÉÆAqÀÄ UÀÄlgï.. UÀÄlgï JAzÀÄ ¥Àl ¥Àl gÉPÉÌ §rzÁUÀ ¥ÀÅlÖ F ¯ÉÆÃPÀªÀ£Éßà ªÀÄgÉvÀ. vÁ£ÀÄ ¨É¼É¹zÀ VqÀzÀ°è  ºÀ«ÄäAUï §qïðUÀ¼ÀÄ, ¥ÁjªÁ¼ÀUÀ¼ÀÄ, UÀÄ©âUÀ¼ÀÄ, DUÉÆªÉÄä FUÉÆªÉÄä PÁUÉUÀ¼ÀÄ PÀÆqÀ ಬಂದು ಕೂರುತ್ತವೆ , ಅಬ್ಬಾ JµÉÆÖAzÀÄ G¥À0iÉÆÃUÀªÁUÀÄvÀÛªÉ , F ªÀÄgÀVqÀUÀ¼ÀÄ ºÀtÄÚUÀ¼À£ÀÄß PÉÆqÀÄvÀÛªÉ. ¸ÉÆA¥ÁV ¨É¼ÉzÀÄ, ºÀ¹j¤AzÀ PÀAUÉÆ½¸ÀÄvÀÛ £ÀªÀÄUÉ®è ªÀÄÄzÀ ¤ÃqÀÄvÀÛªÉ. JµÉÆÖAzÀÄ G¥À0iÉÆÃUÀUÀ¼ÀÄJAzÀÄ ªÀÄ£ÀzÀ°è ¸ÀA¨sÀæªÀÄ  ¥ÀqÀÄvÀÛ  ªÉÄÊ ªÀÄgÉvÀÄ C°è0iÀÄ  ¥ÀQëUÀ¼À£ÀÄß  £ÉÆÃqÀÄvÀÛ  PÀĽvÀ. Erà HgÀ¯Éè®è EzÉà jÃw ºÀtÂÚ£À VqÀUÀ¼À£ÀÄß £ÉlÖgÉ JµÉÆÖAzÀÄ  ¸ÀÄAzÀgÀªÁVgÀÄvÀÛzÉ. £ÁªÀÅ J°è ¨ÉÃPÉAzÀgÀÄ C°è ¥ÀQëUÀ¼À£ÀÄß £ÉÆÃqÀ§ºÀÄzÀÄ. DzÀgÉ KPÉ 0iÀiÁgÀÄ EzÀgÀ §UÉÎ vÀ¯É PÉr¹PÉÆAr®è, ªÀÄgÀUÀ½AzÀ £ÉgÀ¼ÀÄ,  UÁ½, ¥ÀQëUÀ½UÉ DªÁ¸À, £ÀªÀÄUÉ®è ºÀtÄÚ ºÀA¥À®ÄUÀ¼ÀÄ, ºÀ¹j¤AzÀ ªÀÄ£À¹ìUÉ ¸ÀAvÉÆÃµÀ DzÀgÀÆ 0iÀiÁPÉ 0iÀiÁgÀÄ CªÀgÀ ªÀÄ£É0iÀÄ ªÀÄÄAzÉ  eÁ¹Û VqÀUÀ¼À£ÀÄß £ÉnÖ®è, EzÀÝ ªÀÄgÀUÀ¼À£ÀÄß  0iÀiÁPÉ PÀr0iÀÄÄvÁÛgÉ "JAzÀÄ 0iÉÆÃa¸ÀÄvÀÛ PÀĽwÛzÁÝUÀ, ¯ÉÆÃ ¥ÀÅlÖ ¨ÁgÉÆÃ HlPÉÌ JAzÁPÀëuÁ ¥ÀÅlÖ ªÀÄvÉÛ D ¸ÀÄAzÀgÀ  ¸À¸Àå ¯ÉÆÃPÀ, ¥ÀQë¯ÉÆÃPÀ ªÀÄvÀÄÛ CzsÀðA§AzsÀð 0iÉÆÃZÀ£À ¯ÉÆÃPÀ¢AzÀ ºÉÆgÀ §AzÀÄ HlPÉÌ NrzÀ£ÀÄ.  

ನಿಮಗಾಗಿ 
ನಿರಂಜನ್ ......