ಭ್ರಷ್ಟಾಚಾರ ಹೋರಾಟದ ಹಾದಿ ತಪ್ಪಿಸದಿರಿ ......
ಸ್ನೇಹಿತರೆ ದೇಶದಲ್ಲೆಲ್ಲ ಭ್ರಷ್ಟಾಚಾರದ ವಿರುದ್ದ ಜನತೆಯಲ್ಲಿ ಜಾಗೃತಿ ಮೂಡುತ್ತಿದೆ, ಅದನ್ನು ಬೇರು ಸಹಿತ ಕಿತ್ತೊಸೆಯಲು ಸಾದ್ಯವಾಗದಿದ್ದರು ಅದನ್ನು ಸಾಕಷ್ಟು ಕಡಿಮೆ ಮಾಡಲು ಸಿಕ್ಕಿರುವ ಕಡೆಯ ಅವಕಾಶ ಇದು ಎಂದು ಇಡೀ ಭಾರತವೇ ನಂಬಿದೆ, ಭ್ರಷ್ಟಾಚಾರದ ವಿರುದ್ದದ ಈ ಸಮರ ನಿಜವಾಗಿಯೂ ಒಂದು ಒಳ್ಳೆಯ ಬೆಳವಣಿಗೆ. ಸಾಕಷ್ಟು ಜನರು ಇದರಲ್ಲಿ ಅವರದೇ ಆದ ರೀತಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದಾರೆ. ನಿಜಕ್ಕೂ ನಾವೆಲ್ಲರೂ ಭ್ರಷ್ಟಾಚಾರದ ವಿರುದ್ದ ಎತ್ತಿರುವ ಈ ಕೂಗು ನಮ್ಮ ಸರಕಾರಕ್ಕೆ ಒಂದಲ್ಲ ಒಂದು ದಿನ ಮುಟ್ಟುತ್ತದೆ ಎಂಬ ನಂಬಿಕೆ ನಮಗಿದೆ, ನಮ್ಮ ಈ ಕೂಗನ್ನು ಸರಕಾರಕ್ಕೆ ಮುಟ್ಟಿಸಲೇ ಬೇಕು ಎಂದು ಪಣ ತೊಟ್ಟಿರುವ ನಮ್ಮ ಅನೇಕ ಬ್ರಷ್ಟಾಚಾರ ವಿರೋಧಿ ನಾಯಕರಲ್ಲಿ ಅಣ್ಣ ಹಜಾರೆ ಯವರು ಹಿರಿಯರು ಮತ್ತು ಮೊದಲಿಗರು.ಇತ್ತೀಚಿನ ದಿನಗಳಲ್ಲಿ ಅಣ್ಣ ಮತ್ತು ಅವರ ಸಂಗಡಿಗರನ್ನು ಇಡಿ ದೇಶವೇ ಬೆಂಬಲಿಸುತ್ತಾ ಇರುವ ಸಂದರ್ಭದಲ್ಲಿ ಕೆಲವು ರಾಜಕೀಯ ಪಕ್ಷಗಳು ಮತ್ತು ಕೆಲವೇ ಬುದ್ದಿಜೀವಿಗಳು ಮಾತ್ರ ಈ ಹೋರಾಟಗಾರರ ಯೋಗ್ಯತೆ, ಅವರ ನಿಷ್ಠೆ ,ಅವರ ಸಿಧ್ಧಾಂತಗಳನ್ನೇ ಪ್ರಶ್ನಿಸುತ್ತ, ಅವರ ಬಾಯಿಗೆ ಬಂದಂತೆ ಮಾತನಾಡುತ್ತಿರುವುದು ನಿಜವಾಗಿಯೂ ಬೇಸರದ ಸಂಗತಿ.
ಸತತ 42 ವರ್ಷಗಳಿಂದ ಸದ್ದಿಲ್ಲದೇ ನೆಡೆಯುತ್ತಿರುವ ಈ ಹೋರಾಟದ ತೀವ್ರತೆ ಈಗಷ್ಟೇ ಹೆಚ್ಚುತ್ತಿದೆ, ಅದರ ಬಲ ಈಗಷ್ಟೇ ಹಿಗ್ಗುತಿದೆ, ಹೋರಾಟಕ್ಕೆ ನಾಡಿನ ಹಿರಿಯರು, ಚಿಂತಕರು,ವಿದ್ಯಾರ್ಥಿಗಳು, ಕಾರ್ಮಿಕರು,ರೈತರು ಇನ್ನೂ ಅನೇಕ ವರ್ಗದ ಜನರು ತಮ್ಮನು ತಾವು ತೊಡಗಿಸಿಕೊಂಡು ಹೋರಾಟಕ್ಕೊಂದು ಬಲವನ್ನು ತಂದಿದ್ದಾರೆ. ಇಂತಹ ಸಂದರ್ಭದಲ್ಲಿ, ನಾವು ನಮ್ಮ ಹೋರಾಟದ ವಿಷಯದ ಬಗ್ಗೆ ಚರ್ಚಿಸಬೇಕು, ಹೋರಾಟದ ಹಾದಿಯ ಬಗ್ಗೆ ಯೋಚಿಸಬೇಕು,ಹೋರಾಟದ ಬಗ್ಗೆ ತಗೆದುಕೊಳ್ಳುವ ನಿಲುವುಗಳ ಬಗ್ಗೆ ಗಮನ ಹರಿಸಬೇಕೆ ಹೊರತು ಹೋರಾಟದಲ್ಲಿ ಪಾಲ್ಗೊಂಡಿರುವ ನಾಯಕರ ಯೋಗ್ಯತೆಯ ಬಗ್ಗೆ ಕೀಳುಮಟ್ಟದ ಚರ್ಚೆಗೆ ಇಳಿಯಬಾರದು. ಹೋರಾಟದಲ್ಲಿ ಭಾಗಿಯಾಗಿರುವ ಸಾಮಾಜಿಕ ಕಾರ್ಯಕರ್ತರ ಯೋಗ್ಯತೆಯನ್ನು ಪ್ರಶ್ನಿಸುವ ಮೊದಲು ಸಾಕಷ್ಟು ಬಾರಿ ಯೋಚಿಸಲೇ ಬೇಕು ಮತ್ತು ಅವರ ಬಗ್ಗೆ ಸರಿಯಾಗಿ ತಿಳಿದುಕೊಂಡಿರಬೇಕು. " ಈ ಹೋರಾಟವನ್ನು ನಾನೇ ಆರಂಬಿಸಿರುವು, ನಾನೇ ಇದರ ನಾಯಕ, ನೀವೆಲ್ಲ ನನ್ನ ಆಜ್ಞೆಗಳನ್ನು ಪಾಲಿಸಲೇಬೇಕು " ಎಂದು ಅಣ್ಣ ಹಜಾರೆಯವರು ಯಾವತ್ತೂ ಹೇಳಿಲ್ಲ. ಅಣ್ಣ ಅವರ ಯೋಗ್ಯತೆಯನ್ನು ಅರಿತ ನಾವು ಅವರನ್ನು ಗೊತ್ತಿಲ್ಲದಂತೆ ಅವರನ್ನು ನಮ್ಮ ನಾಯಕರೆಂದು ಒಪ್ಪಿಕೊಂಡು, ನಮ್ಮ ಮನದಲ್ಲೇ ಇದ್ದ ಬಹುದಿನದ ಕೂಗಿಗೆ ಅವರನ್ನು ದ್ವನಿಯಾಗಿಸಿಕೊಂಡಿದ್ದೇವೆ.
ದೃಶ್ಯ ಮಾಧ್ಯಮಗಳು ಮತ್ತು ಪತ್ರಿಕಾ ಮಾಧ್ಯಮಗಳು ಹೆಚ್ಚು ವಿಷಯಾಧಾರಿತ ಚರ್ಚೆಗಳಿಗೆ ಹೊತ್ತು ನೀಡಬೇಕೆ ಹೊರತು ವ್ಯಕ್ತಿಗತ ಚರ್ಚೆಗಳಿಗೆ ಅವಕಾಶ ಕೊಡಬಾರದು. ಕೆಲವು ಬುದ್ದೀಜೀವಿಗಳು, ಚಿಂತಕರು ಕೂಡ ಅಣ್ಣ ಅವರ ಯೋಗ್ಯತೆಯನ್ನು ಪ್ರಶ್ನಿಸುವುದರ ಬದಲಾಗಿ ಹೋರಾಟದ ವಿಷಯದ ಬಗ್ಗೆ ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು, ತಮ್ಮ ಚಿಂತನೆಯಿಂದ ಹೋರಾಟಗಾರರಿಗೆ ಮಾರ್ಗದರ್ಶಕರಾಗಬೇಕು.ಈ ಹೋರಾಟದಲ್ಲಿ ಬ್ರಷ್ಟಾಚಾರವೆಂಬ ವಿಷಯವಷ್ಟೆ ಮುಖ್ಯವಾದದ್ದು, ನಾವು ಅದರ ಕಡೆ ಗಮನ ಹರಿಸಬೇಕೆ ಹೊರತು ಅದರ ಸ್ವರೂಪ ಮತ್ತು ಭಾಗಿಯಾದವರ ವಯ್ಯಕ್ತಿಕ ವಿಚಾರಗಳನ್ನು ಚರ್ಚಿಸಿವುದರಿಂದ ಹೋರಾಟದ ಹಾದಿ ಬದಲಾಗುವುದು ಮತ್ತು ಈ ಹೋರಾಟಕ್ಕೆ ಅಡ್ಡಗಾಲು ಹಾಕುತ್ತಿರುವ ರಾಜಕೀಯ ಪಕ್ಷಗಳಿಗೆ ನಾವೇ ಹೋರಾಟವನ್ನು ಅತ್ತಿಕ್ಕಲು ಅವಕಾಶ ಮಾಡಿಕೊಟ್ಟಂತಾಗುತ್ತದೆ.
ನಿಜ ನಾವು ಒಪ್ಪುತ್ತೇವೆ ನಾಯಕರು ತೆಗೆದುಕೊಳ್ಳುವ ಎಲ್ಲ ನಿರ್ಧಾರಗಳು ಮತ್ತು ನಿಲುವುಗಳು ನೂರಕ್ಕೆ ನೂರರಷ್ಟು ಸರಿಯಾಗಿರಬೇಕೆಂದೇನಿಲ್ಲ, ಅವುಗಳನ್ನು ನಾವು ಒಪ್ಪಲೇ ಬೇಕೆಂದು ಕೂಡ ಎಲ್ಲಿಯೂ ಇಲ್ಲ, "ಇವನ್ನೇ ಒಪ್ಪಿ" ಎಂದು ಯಾವ ನಾಯಕರು ನಮಗೆ ಹೇಳುವಂತೆಯೂ ಇಲ್ಲ, ಸ್ವಾತಂತ್ರ ಪೂರ್ವದಲ್ಲೂ ಮಹಾತ್ಮ ಗಾಂಧೀಜಿಯವರ ನಿಲುವುಗಳನ್ನು ವಿರೋದಿಸುವವರಿದ್ದರು, ಸ್ವಾತಂತ್ರದ ನಂತರ ನೆಡೆದ ಜಯಪ್ರಕಾಶ್ ನಾರಾಯಣರ ಹೋರಾಟಕ್ಕೂ ಸಾಕಷ್ಟು ವಿರೋಧಿಗಳು ಕೂಡ ಇದ್ದರು. ಹಾಗಾಗಿ ನಾಯಕರುಗಳ ನಿರ್ಧಾರಗಳನ್ನು ಮಾದ್ಯಮಗಳು ಮತ್ತು ಜನರು ಸರಿಯಾಗಿ ಚರ್ಚಿಸಿ, ಸಾಕಷ್ಟು ಅವಲೋಕಿಸಿ, ತಮ್ಮ ತಮ್ಮ ನಿಲುವುಗಳನ್ನು ನಾವು ಸರಿಯಾದ ರೀತಿಯಲ್ಲಿ ವ್ಯಕ್ತಪಡಿಯಬೇಕೆ ಹೊರತು ಮನಬಂದಂತೆ Twitter,Facebook,TV ಮಾಧ್ಯಮಗಳಲ್ಲಿ ನಾಯಕರ ಬಗ್ಗೆ ಮತ್ತು ಅವರ ಯೋಗ್ಯತೆ ಬಗ್ಗೆ ಚರ್ಚಿಸಬಾರದು. ಬುದ್ದೀಜೀವಿಗಳು, ಚಿಂತಕರು,ರಾಜಕೀಯ ನಾಯಕರು ಬೇಜಾವಾಬ್ದಾರಿಯಿಂದ ನೀಡುವ ವ್ಯಕ್ತಿಗತ ಹೇಳಿಕೆಗಳು, ವಿಚಾರಗಳನ್ನು ತಮ್ಮ ಬುದ್ದಿ ಮಟ್ಟಕ್ಕೆ ತಾವು ಅರ್ಥೈಸಿಕೊಂಡು ಹಾಡುವ ಒಂದೊಂದು ಮಾತುಗಳು, ಮಾಡುವ ಒಂದೊಂದು ಅಪಪ್ರಚಾರಗಳು ಸಮಾಜಕ್ಕೆ ಕೆಟ್ಟ ಸಂದೇಶಗಳನ್ನು ರವಾನಿಸುತ್ತವೆ. ಹಾಗಾಗಿ ಇಲ್ಲಿ ವಿಷಯದ ಬಗ್ಗೆ, ಹೋರಾಟದ ವಿಚಾರದ ಬಗ್ಗೆ, ಹೋರಾಟಕ್ಕೆ ಬಳಸಿಕೊಂಡಿರುವ ದಾರಿಯ ಬಗ್ಗೆ, ಮುಂದಿನ ಕಾರ್ಯತಂತ್ರಗಳ ಬಗ್ಗೆ, ಹೋರಾಟದ ಬಗ್ಗೆ ಜಾಗೃತಿ ಮೂಡಿಸುವುದರ ಬಗ್ಗೆ ಚರ್ಚೆಯಾಗಲಿ, ವ್ಯಕ್ತಿಗಳ ಬಗ್ಗೆ ಚರ್ಚೆಗಳು ಬೇಡವೇ ಬೇಡ.
ನಿಮಗಾಗಿ.......
ನಿರಂಜನ್
You are right about avoiding social networking sites to discuss the character of politician or others.Because this movement is not against politician it is to strengthen the current system with bringing in new clauses,taking certain agencies out of government monitoring.Anna & his team is talking about current problem,solution for them and consequences after bringing these modification.Though it may not 100% eradicate problem but surely it does major impact in breaking all level of scams.We are also equal responsible for corruption in all ways. whatever law,constitutional amendments you brings in to curb corruption it would be ineffective until each of us is matured enough to clean our self first.
ಪ್ರತ್ಯುತ್ತರಅಳಿಸಿBasavanna great remark in this situation applies better " Lokada donka neeneke thidduve ayya,ninna manava santhaisiko "
-Yogesh
Adding to my previous comments why I insisted not to comment on character of politician in social networking sites because I saw many disappointing comments against Manmohan Singh,Nilekani etc.Please if anyone dont have knowledge about these persons contribution towards India's growth then don't talk loosely on the character of the person.If you are not interested in his comments you dont have to react(if you dont know how to respond).Anna's one of the message is that we should develop patience to accept all level of INSULTS.It is very strong point I personally impressed with Anna way of thinking.
ಪ್ರತ್ಯುತ್ತರಅಳಿಸಿAdding to my previous comments why I insisted not to use social network sites to comment on the characters of politician because I saw many disappointing comments on Manmohan singh,Nilekani etc.If anyone doesn't have enough knowledge on these persons contribution toward India's growth then at least do not show your frustration/anger on the portal.If we are not interested in anyone comments on this movement then lets ignore it we do not have to REACT to what they said(unless if we dont know how to respond).Anna's one of message to all is that you should develop patience to accept all level of INSULTS.It is this message which impressed me more towards Anna.
ಪ್ರತ್ಯುತ್ತರಅಳಿಸಿWhatever law,constitutional amendments you bring in curb corruption it might be ineffective unless each one us follow in our life style.Because I believe system can not be addressed effectively from top down structure it should be from bottom top structure.
-Yogesh
U r true YOGESH,,,,
ಪ್ರತ್ಯುತ್ತರಅಳಿಸಿ