ಪ್ರೇಮ
ನಮ್ಮಲ್ಲಿ ಕೆಲವರಿಗೆ ಮದುವೆ ಆಗಿರಬಹುದು, ಕೆಲವರು ಇನ್ನೇನು ಇಷ್ಟರಲ್ಲೇ ಆಗಬಹುದು. ಈ ಮದುವೆ ಆಗದವರು, ಆದವರನ್ನು "ಹೇಗಿರುತ್ತೆ ??" ಅದರ ಸವಿಯೆಂದು ಕೇಳಿದಾಗ , ಮದುವೆಯಾದವರ ಉತ್ತರ "ಆಗಿ ನೋಡಿ", "ಆರಮಾಗಿರೋ ಯಾಕೋ ನಿಂಗೆ ಅದೆಲ್ಲ ?? " , "ಇನ್ನು ಸ್ವಲ್ಪ ದಿನ ಹೀಗೆ ಇರೋ, ಯಾಕೆ ಮೈಯ್ಮೇಲೆ ಎಳೆದು ಕೊಳ್ತಿಯ " . ಇನ್ನು ಕೆಲವರು "ಎಷ್ಟೋ ನಿನ್ ವಯಸ್ಸು , ಆಗು ಸ್ವಲ್ಪ ವರ್ಷ ಬಿಟ್ಟು ಆಗು, ಈಗಲೇ ಯಾಕೆ ಬೇಕು ಅದೆಲ್ಲ ". ಹೀಗೆ ಇನ್ನೂ ಅನೇಕ , ಚಿತ್ರ ವಿಚಿತ್ರ ಉತ್ತರಗಳು ಬಹುವಾಗಿ ಸಿಗುತ್ತವೆ. ಕೆಲವರಂತೂ "ಮೊದ್ಲು ಮೊದ್ಲು ಎಲ್ಲ soooper ಆಗಿ ಇರುತ್ತೆ , ಆಮೇಲೆ ನೋಡು ಶುರುವಾಗೋದು" ಅಂತೆಲ್ಲ ಹೇಳುತ್ತಾರೆ. ಅದೇನು ಮೊದ್ಲು ಮೊದ್ಲು ಸಕತ್ ಆಗಿರುತ್ತೆ , ಆಮೇಲೆ ಅದೇನು ಶುರುವಾಗುತ್ತೆ , ಅದರ ಕಷ್ಟ ಏನು , ಅದೇಗಿರುತ್ತೆ ಅದರ ಸುಖ ಎಂದು ಯಾರು ಹೇಳೋಲ್ಲ. ಹೇಳುವಷ್ಟು ಹಿತವಾಗಿರುತ್ತೋ ಇಲ್ಲವೋ ನನಗೊಂತು ಗೊತ್ತಿಲ್ಲ. ಇಲ್ಲ ಹೇಳದಿರುವಷ್ಟು ಮಜವಾಗಿರುತ್ತೋ ಏನೋ ಅದೂ ಕೂಡ ನನಗೆ ಗೊತ್ತಿಲ್ಲ. ಅದನ್ನು ನಾವೇ ಖುದ್ದು ಅನುಭವಿಸಿದ ಮೇಲೆಯೇ ನಮಗೆ ತಿಳಿಯಬಹುದು. ಆದರೂ ಕೆಲವರು ತೀರ ಹತ್ತಿರದವರು ಅಷ್ಟು-ಇಷ್ಟು ಹೇಳುವವರು ಇದ್ದೆ ಇರುತ್ತಾರೆ. ಕೆಲವರ ಪ್ರಕಾರ ಶುರುವಿನಲ್ಲಿ ಎಲ್ಲವು ಈ ರೀತಿ ಇರುತ್ತಂತೆ.
ತುಂಬಿದೆ ಚೆಲುವೆ ಜೇನು ನಿನ್ನ ತುಟಿಗಳಲಿ
ಸುಮ್ಮನೆ ಹೇಗಿರಲಿ ನಾನು,
ಹಾಗೆ ನೋಡುತಲಿ.....
ಚಿಮ್ಮುತಿಹವು ನಿನ್ನ ಕಂಗಳು ಕಾಂತಿಯನು
ಬೆಳದಿಂಗಳಲ್ಲದೆ ಅದು ನನಗೆ ಮತ್ತೇನು ....
ಸುರಿದಂತೆ ಸಿಹಿಯಾದ ಸೋನೆ ನೀ ನಕ್ಕರೆ
ಹೃದಯದಾಳವ ಒಡ್ಡದೆ ನಾ ಸುಮ್ಮನಿರೆ ....
ಮಾತಲ್ಲವೇ ಅಲ್ಲವವು,ಮುತ್ತಿನ ಸರಮಾಲೆ
ಪ್ರೇಮ ಮೂರ್ತಿ ನಾ,ಸಿಂಗಾರಗೊಳ್ಳದಿರಲೇ..
ನೀ ನನಗೆ ಸಂಪೂರ್ಣ ಸದಾ ಚೇತನುತ್ತೇಜನ
ತುಂಬಿರು ನನ್ನದಲ್ಲದ ಹೃದಯದಲಿ ಅನುದಿನ..
ಸ್ವಲ್ಪ ದಿನ ಕಳೆದ ಮೇಲೆ , ಅವರಿಬ್ಬರ ನಡುವೆ ಬೇಸಗೆ ಬಂದು , ಭಾವನೆಗಳು ಬಿಸಿಲಿಗೆ ಬತ್ತಿದ ಮೇಲಂತೂ ಇಬ್ಬರಿಗೂ ಯಾಕೋ ಒಬ್ಬರ ಮೆಲೋಬ್ಬರಿಗೆ ಅಷ್ಟಕ್ಕೇ ಅಷ್ಟೇ ಆಗಿ. ಇಬ್ಬರಲ್ಲಿ ಒಬ್ಬರು ಅಥವಾ ಇಬ್ಬರು ಹೀಗೆ ಅನ್ನುತಾರಂತೆ .
ಮೊದ ಮೊದಲು ಸುರಿಯುತಿದ್ದೆ ಜೇನಹನಿ
ಈಗೇಕೆ ಹರಿಯುವಂತೆ ಮಾಡುವೆ ಕಣ್ಣೀರಹನಿ...
ಹೇಳುತಿದ್ದೆ ನೀನೆ ನನಗೆ , ನಿನ್ನದೆಲ್ಲವು ಇಷ್ಟ
ಮತ್ತೇಕೆ ಪಡುವೆ ಈಗ ಜೊತೆಯಲಿರಲು ಕಷ್ಟ ....

" ನಾನು ನೀನೆನ್ನದಿರಬೇಕು, ಪ್ರೀತಿಗಳೊಂದಾಗ ಬೇಕು
ಜೊತೆಕಳೆದಂತೆ ಪ್ರೀತಿಯು ಬೆಳೆದು ಹಿರಿದಾಗ ಬೇಕು
ಇಬ್ಬರು ಕಲೆತು, ಆ ಪ್ರೀತಿಯೋಳಗೊಂದಾಗ ಬೇಕು "
ನಿಮಗಾಗಿ
ನಿರಂಜನ್
Mast ide ... Really nice thought...:-)
ಪ್ರತ್ಯುತ್ತರಅಳಿಸಿkanditha,nija preethi..."bari kannige sambandhisodhu alla
ಪ್ರತ್ಯುತ್ತರಅಳಿಸಿeradu hrudhayagala bhavanegala spandhisodhu..
adake bhashe illa ...
mounadalli koodi kannnugallali mathadodu.."
preethi athi madhura endu kareyuthare....