ಶನಿವಾರ, ಡಿಸೆಂಬರ್ 11, 2010

ಸಹ್ಯಾದ್ರಿಯ ಸೊಬಗು....


                                                           
           ಸಹ್ಯಾದ್ರಿಯ ಸೊಬಗು...
oಜು ಮುಸುಕಿದ ವಾತಾವರಣ, ಪೂರ್ಣ ಸೂರ್ಯೋದಯವಾಗಿರದ ಸಮಯ,ಪ್ರಯಾಣಾದುದ್ದಕ್ಕೂ ಬೇಡ ಅಂದರು ಬಿಡೊಲ್ಲ ಅಂತಿದ್ದ ತಣ್ಣನೆ ಗಾಳಿ, ಇಬ್ಬನಿಯಿಂದ ಒದ್ದೆಯಾಗಿದ್ದ ವಿಶಾಲವಾಗಿದ್ದ ರಸ್ತೆ, ರಸ್ತೆಯ ಇಕ್ಕೆಲಗಳಲ್ಲೂ ಬರಿ ಹಸಿರಿನಿದ ಕೂಡಿದ ಬಾರಿ ಮರಗಳು, ಕಣ್ಣಾಯಿಸಿದಷ್ಟೂ ದೂರ ಸಹ್ಯಾದ್ರಿ ಶಿಖರಗಳ ವಿಹಂಗಮ ನೋಟ,ಹಕ್ಕಿ ಪಕ್ಷಿಗಳ ಚಿಲಿಪಿಲಿ ನೀನಾದ, ಅಬ್ಭಾ ಎಂತಹ ವಾತಾವರಣ ಮತ್ತು ಈ ನನ್ನ ಪ್ರಯಾಣ. ನಿಜ ನಾನು  ನೋಡಬೇಕೆಂದಿರುವ ಸ್ಥಳದಷ್ಟೇ ನನ್ನ ಪ್ರಯಾಣವೂ ಸೊಗಸಾಗಿತ್ತು.

         ಸಹ್ಯಾದ್ರಿಯ ಶಿಖರಗಳೆಂದರೆ ನಮಗೆ ತಟ್ಟನೆ ನೆನಪಾಗುವುದು ಶಿವಮೊಗ್ಗ ಜಿಲ್ಲೆ, ಇಲ್ಲಿಯ ಪ್ರಕೃತಿ ಸೌಂದರ್ಯಕ್ಕೆ ಮನಸೋಲದವರಿಲ್ಲ, ಕುವೆಂಪು,ನಿಸಾರ್ ಅಹಮದ್ ಮತ್ತು ಅನೇಕರು ಕವಿಗಳಾಗಲು ಕಾರಣ ಕೂಡ ಇಲ್ಲಿಯ ಪ್ರಕೃತಿ ಮತ್ತು ಮಣ್ಣಿನ ಮಹಿಮೆ !!!! . ಅನೇಕ ಬಾರಿ ಶಿವಮೊಗ್ಗ ಜಿಲ್ಲಾ ಪ್ರವಾಸ ಮಾಡಿದ್ದರು ಕೂಡ ನನಗೆ , ಪ್ರತಿ ಬಾರಿಯೂ ಸುಂಧಾರವಾಗಿಯೇ ಕಾಣುವ ಈ ಜಾಗಗಳು ಪದೇ ಪದೇ ನನ್ನನ್ನು ಸೆಳೆಯುತ್ತಲೇ ಇವೆ. ಸರಿ ಸುಮಾರು ಬೆಳೆಗ್ಗೆ 7.30 ಕ್ಕೆ ಸ್ವಲ್ಪ ಉಪಹಾರ ಅಂದರೆ 4 ಇಡ್ಲಿ, 3 ಉದ್ದಿನವಡೆ ತಿಂದು !!!!!! , ನನ್ನ ಪ್ರಯಾಣವನ್ನು ಎಂಜಾಯ್ ಮಾಡುತ್ತಾ ನಾನೀಗ ಹೊರಟಿರುವುದು ಸಾಗರದಿಂದ 5-6 ಕಿ.ಮೀ ಇರುವ ಇಕ್ಕೇರಿ ಎಂಬ ಪುರಾತನ ದೇವಾಲಯವಿರುವ ತಾಣಕ್ಕೆ .
        ಇನ್ನೂ ಚಳಿಗೆ ಹೊರಗೆ ಬಾರದ ಜನ, ಬಾರಿ ವಿಶಾಲವಾದ ದೇವಾಲಯದ ಪ್ರಾಂಗಣ,ಹಸಿರು ಹುಲ್ಲಿನ ಹಾಸು, ಹಾಸಿನ ಮೇಲೆ ಕುಳಿತಿರುವ ಇಬ್ಬನಿಯ ಹನಿಗಳು, ಅವು ಸೂರ್ಯನ ಬೆಳಕನ್ಣು ಪ್ರತಿಫಲಿಸುತಿದ್ದ ರೀತಿ,ಕಪ್ಪು ಮತ್ತು ಕೆಂಪು ಬಣ್ಣದ ಶಿಲೆಗಳ ಆ ದೇಗುಲ, ದೇಗುಲದೊಳಗಿದ್ದ  ಶಿವನ ಸುಂದರ ವಿಗ್ರಹ,ಎದುರಿಗಿದ್ದ ಬಾರಿ ಕಪ್ಪು ಶಿಲೆಯ ಬಸವ,ಸೂರ್ಯನ ಬಿಸಿಲಿಗೆ ಮಿಂಚುತ್ತಿದ್ದ ಅದರ ಮುಖ,ದೇವಾಲಯದಾವರಣದ ಒಂದು ಮೂಲೆಯಲ್ಲಿದ್ದ ಹಳೆಯ ಬಾವಿ, ಕೇಸರಿ ಮಡಿಯುಟ್ಟ  ಇಳಿವಯಸ್ಸಿನ  ಪೂಜಾರಿ , ಬಾವಿಯಲ್ಲಿ ನೀರು ಸೇದುತ್ತಿದ್ದ ಅವರ ಆ ವೈಖರಿ, ಇದನ್ನೆಲ್ಲ ನೋಡಿ ನಾಚಿ ನರ್ತಿಸುತ್ತಿಸುತ್ತಿದ್ದ ದೇಗುಲದ ಗೋಡೆಯ ಮೇಲಿದ್ದ ಶಿಲ್ಪಗಳು,ದೇವಾಲಯವನ್ನೇ ಮನೆಯಾಗಿಸಿಕೊಂಡಿದ್ದ ಪಾರಿವಾಳಗಳು, ಒಟ್ಟಾರೆ ಇದೊಂದು ಸಖತ್ ಅನುಭವ.

               ನಿಜವಾಗಿಯೂ ನನಗೆ ಆ ದಿನ ,ಈ ರೀತಿಯಾಗಿ ಶುರು ಆಗಿದ್ದು ಖುಷಿ ಕೊಟ್ಟಿತ್ತು ಮತ್ತು ಏನೋ ಒಂದು ಮನ್ನಸಿಗೆ ಚೈತನ್ಯ ತಂದಿತ್ತು. ಸ್ವಲ್ಪ ಸಮಯ ಕಳೆದ ನಾನು ನನ್ನ ಕ್ಯಾಮಾರಾದಲ್ಲಿ ಸಾಕಷ್ಟು ಫೋಟೋಗಳನ್ನು ತೆಗೆದು, ದೇವರ ದರ್ಶನ ಪಡೆದು ಅಲ್ಲಿಂದ ನಾ ಹೊರಟಿದ್ದು ವರಧಪುರ ಎಂಬ ಇನ್ನೊಂದು ತಾಣಕ್ಕೆ, ಅಲ್ಲಿ ನಾ ಕಳೆದ ಒಂದು ದಿನದ ಬಗ್ಗೆ ಹೇಳಲು ಹಾಗಲೇ ಬರೆದಿರುವ “ ಆಶ್ರಮಾದಲ್ಲೊಂದು ದಿನ “ ಎಂಬ ಲೇಖನವನ್ನು ನಾ ಪೋಸ್ಟ್ ಮಾಡಿದ ಮೇಲೆ ನೀವು ಓದಲೇ ಬೇಕು !!!!!!
                                        


















ನಿಮಗಾಗಿ.......
ನಿರಂಜನ್