ಹನಿಗವನಗಳು .......
ಸ್ನೇಹಿತರೆ.....
ನಾ ಚಿಕ್ಕವನಾಗಿದ್ದಾಗಿನಿಂದಲೂ , ಅನೇಕ ಲೇಖಕರ ಲೇಖನಗಳಿಗೆ, ಮಾರು ಹೋಗಿದ್ದೇನೆ, ಅವುಗಳಿಂದ ಪ್ರಭಾವಿತನಾಗಿದ್ದೇನೆ, ಕಲಿತಿದ್ದೇನೆ, ಎಷ್ಟೋ ಬಾರಿ ಅವರಿಂದಲೇ ಪ್ರೇರೇಪಿತನಾಗಿ ಅವರನ್ನೇ ಅನುಕರಿಸಿದ್ದೇನೆ ಕೂಡ. ಅವರ ಶೈಲಿಗಳಲ್ಲೇ ಬರಹಗಳನ್ನು ಸಹ ಬರೆದಿದ್ದೇನೆ. ಅವರ ರೀತಿಯಲ್ಲೇ ಮಾತು ಕೂಡ ಆಡುತ್ತೇನೆ. ನಾನು ಅವರನ್ನು ಅನುಕರಿಸುತ್ತೇನೆ ಅನ್ನುವುದಕಿಂತ ಅವರ ಬರವಣಿಗೆ, ಶೈಲಿ ಹಾಗು ಅವರ ಚಿಂತನೆಗಳಿಂದ ನಾನು ಅಷ್ಟೊಂದು ಪ್ರಭಾವಿತನಾಗಿದ್ದೇನೆ. ಸದಾ ನಗುವ, ನಗಿಸುವ , ನಾಲ್ಕೇ ನಾಲ್ಕು ಸಾಲುಗಳಲ್ಲೇ ಜೀವನ , ಪ್ರೀತಿ , ಸ್ನೇಹ, ಸಂಬಂದಗಳನ್ನು ಹಾಗು ವಿಡಂಬನೆಗಳನ್ನು ಹಾಸ್ಯದ ರೂಪದಲ್ಲಿ ಬಿಚ್ಚಿಡುವ ನಮ್ಮ ನೆಚ್ಚಿನ ಕವಿ ಚುಟುಕ ಬ್ರಹ್ಮರೆಂದೇ ಪ್ರಸಿದ್ದಿಯಾಗಿರುವ ಶ್ರೀ ದುಂಡಿರಾಜ್ ರವರ ಪ್ರಭಾವ ಕೂಡ ನನ್ನ ಮೇಲೆ ಅಷ್ಟಿಷ್ಟಲ್ಲ. ಇಂತಹ ದೊಡ್ಡ ಹಾಸ್ಯ ಕವಿ ದುಂಡಿರಾಜ್ ಸಾಹಿತ್ಯದ ಪ್ರಭಾವಕ್ಕೆ ಸಾಕ್ಷಿಯೇ ಈ ಕೆಳಗಿನ ನನ್ನ ಕೆಲವು ಹನಿಗವನಗಳು. ಈ ನನ್ನ ಹನಿಗವನಗಳನ್ನು ನಾನು ನನ್ನ ಮಾನಸ ಗುರುವಾದ ದುಂಡಿರಾಜ್ ರವರಿಗೆ ಅರ್ಪಿಸುತ್ತಿದ್ದೇನೆ.
ಆಸೆ ಅಪರೂಪಕ್ಕೆ ಹತ್ತಿರ ಬಂದ
ನನ್ನವಳ ನಾ ಕೇಳಿದೆ
ಕೈ ಹಿಡಿದು
ಒಂದೇ ಒಂದು 'ಕೊಡುವೆಯ' .....
ಅದಕ್ಕವಳು ಹೇಳಿದಳು
ಸದ್ಯಕ್ಕೆ ಕೈ ಬಿಟ್ಟು ಬಿಡು'WAY"ಯ....
ನಿರಾಸೆ
ನನ್ನವಳ ಒಡಲು
ಪ್ರೀತಿಯ ಬಾರಿ 'ಕಡಲು'
ಅಂತ ತಿಳಿದಿದ್ದೆ....
ಅದು ನಿಜ ತಾನೇ
ಬಿದ್ದ ಮೇಲೆ ನನಗೆ ಆಗುತ್ತಲೇ
ಇಲ್ಲ , ಇನ್ನು ಮೇಲೆ 'ಏಳಲು'....
ಕಾಮನ ಬಿಲ್ಲು
ಮದುವೆಯ ಮೊದಲು
ಮಾತು ಮಾತಿಗೂ ಬಿಡುತ್ತಿದ್ದಳು
ಪ್ರೀತಿಯ ಬಾಣಗಳನ್ನು, ಹೂಡಿ ನಗು ಮುಖದ ಬಿಲ್ಲು
ಈಗಲೂ ಕೊಡುತ್ತಾಳೆ ಮಾತು ಮಾತಿಗೂ
ಶಾಕ್ ಕೊಡುವ ಕರೆಂಟ್ ಬಿಲ್ಲು, ನೀರು ಬಿಲ್ಲು
ಮೊದಮೊದಲು
ಮದುವೆಗೂ ಮೊದಲು
ನನ್ನವಳ ಗಲ್ಲ
ಸಿಹಿ ಬೆಲ್ಲ....
ಬಹಳ ದಿನವಾಯಿತಲ್ಲ
ಅದೇ ಸಿಹಿ ಬೆಲ್ಲ
ಅದೇ ಸಿಹಿ ಬೆಲ್ಲ
ಈಗ
ಹುಳಿ ಬೆಲ್ಲ ........
ಹುಳಿ ಬೆಲ್ಲ ........
ಅನ್ವೇಷಣೆ
ಈ ನಮ್ಮ ಪ್ರೀತಿ
ನೆನ್ನೆ ಮೊನ್ನೆಯದಲ್ಲ
ಪ್ರಿಯ
ಜನ್ಮ ಜನ್ಮಾಂತರದು......
ನಿಜ ನಿಜ
ಪ್ರಿಯೆ
ತುಂಬಾ 'ಹಳೆಯದು'
ಅದಕ್ಕೆ ನಾ ಹುಡುಕುತ್ತಿರುವೆ
ಮತ್ತೊಂದು 'ಹೊಸದು'....
ಇರುವೆ
ಮೊದಮೊದಲು ನನಗನ್ನಿಸುತ್ತಿತ್ತು
ನೀ ನನ್ನ ಚಲುವೆ
ನಾ ನಿನಗಾಗಿಯೇ 'ಇರುವೆ'......
ಈಗಲೂ ಕೂಡ ಅನ್ನಿಸುತ್ತಿದೆ
ಇನ್ನೂ ಯಾಕೆ ನೀ
ನನ್ನ ಜೊತೆಯಲ್ಲೇ 'ಇರುವೆ'....
ನಿನ್ನ ನಲ್ಲ
ಹೇ ಹುಡುಗಿ, ನಾ ನಿನ್ನ ನಲ್ಲ
ಕೊಡುವೆಯಾ ನಿನ್ನ ಗಲ್ಲ.....
ಲೊ ಹುಡುಗ, ಅದು ನಿನಗಲ್ಲ
ನನ್ನ ನಲ್ಲ ನೀ ಅಲ್ಲವೇ ಅಲ್ಲ.....
ಬುದ್ದಿವಂತರು
ಮದುವೆಗೂ ಮೊದಲೇ ಹುಡುಗರು
ಕಷ್ಟ ಪಟ್ಟು ಸಂಪಾದಿಸುತ್ತಾರೆ
ಚಿಕ್ಕದೋ ದೊಡ್ಡದೋ ಒಂದು
'ಕೆಲಸ'.....
ಏಕೆಂದರೆ ???
ಖಾಲಿ ಇದ್ರೆ ಕೊಡುವಳಲ್ಲ
ಮುಂದೊಂದು ದಿನ ಮನೆಯ
ಎಲ್ಲಾ 'ಕೆಲಸ'......
ಕಿಲಾಡಿ
ಲೋ ಹುಡುಗ
ನೀ ತುಂಬಾ
ಪೋಲಿ , ಕಿಲಾಡಿ
"ಒಳ್ಳೆನಲ್ಲ".....
ಹೌದು ಹುಡುಗಿ
ನೀ ಹೇಳಿದ
ಹಾಗೆ ನಾ
ಒಳ್ಳೇ 'ನಲ್ಲ'
ಗೊತ್ತಿತ್ತು ಒಂದಲ್ಲ
ಒಂದು ದಿನ
ಹೇಳುವಳು
ನೀ ನನಗೆ ಬರಿ
' ಸ್ನೇಹಿತ '
ಅದಕ್ಕೆ ನಾ ಕೂಡ
ಮಾಡಿದ್ದೆ
ಅವಳಿಗಾಗಿ
ಕರ್ಚು
'ಹಿತ' 'ಮಿತ '
ನಿಮಗಾಗಿ
ನಿರಂಜನ್
ತುಂಬಾ ಸೊಗಸಾಗಿದೆ, ಇದೇ ರೀತಿ ಮುಂದುವರಿಸಿ.....!
ಪ್ರತ್ಯುತ್ತರಅಳಿಸಿThank u so much :) keep reading .......
ಪ್ರತ್ಯುತ್ತರಅಳಿಸಿಹನಿಗವನಗಳು ತುಂಬ ಚೆನ್ನಾಗಿ ಮೂಡಿ ಬಂದಿವೆ, ಇದೆ ರೀತಿ ಬರೆಯುತ್ತ ಇರಿ ನಮ್ಮ ಖುಷಿಗಾಗಿ :) ಧನ್ಯವಾದಗಳು..
ಪ್ರತ್ಯುತ್ತರಅಳಿಸಿ- ಕುಮಾರ್ ಗೌಡ
ತುಂಬಾ ಚನ್ನಾಗಿವೆ
ಪ್ರತ್ಯುತ್ತರಅಳಿಸಿಹನಿ ಗವನ ತುಂಬ ಚನ್ನಾಗಿದೆ.
ಪ್ರತ್ಯುತ್ತರಅಳಿಸಿ