ಭಾನುವಾರ, ನವೆಂಬರ್ 28, 2010

ತಿಮ್ಮಪ್ಪನಿಗೆ ನಾ ಚಾಲೆಂಜ್ ಮಾಡಿದ್ದು .........


ತಿಮ್ಮಪ್ಪ ಚಾಲೆಂಜಲ್ಲಿ ಗೆದ್ದದ್ದು !!!!!!!

ಗೆಳೆಯರೇ ,
ನಾ ಇಂದು ನನಗಾದ ಎರಡು ಅನುಭವಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕೆಂದುಕೊಂಡಿದ್ದೇನೆ, ನಿಜವಾಗಿಯೂ ಈ ಎರೆಡು ಅನುಭವಗಳಲ್ಲಿ ಮೊದಲನೆಯದು ನಂಬಿಕೆಗೆ ಸಂಬಂಧಿಸಿದ್ದು ಹಾಗೂ ಕಾಕತಾಳೀಯವಾದದ್ದು, ಮತ್ತೊಂದು ವಿಬಿನ್ನವಾದ ಒಂದು ನೃತ್ಯರೂಪಕ ಕಾರ್ಯಕ್ರಮದ ಬಗ್ಗೆ.

        ಅನೇಕ ದಿನಗಳಿಂದ ತಿರುಪತಿಗೆ ಹೋಗುವ ನನ್ನ ಬಯಕೆ ಯಾವ್ಯಾವುದೋ ಕಾರಣಗಳಿಂದ ಈಡೇರುತ್ತಿರಲಿಲ್ಲ.ಅದರಂತೆಯೇ ಅಲ್ಲಿಯ ಸಾಮಾನ್ಯ ಹಾಗೂ  VIP  ದರ್ಶನಗಳ ಬಗ್ಗೆ ಸ್ವಲ್ಪ ಅಸಮಾಧಾನವಿದ್ದ  ನನಗೆ  ತಿಮ್ಮಪ್ಪನ ಮೇಲೆ ಸಿಟ್ಟು ಕೂಡ ಇತ್ತು :). ಸದಾ ಆತನನ್ನು ನೆನಪಿಸಿಕೊಂಡಾಗಲೆಲ್ಲ ನೀನು ನಿಜವಾಗಿಯೂ ಇದ್ದರೆ ಅಥವಾ ನಿನ್ನ ಶಕ್ತಿ ಈ ಪ್ರಪಂಚದಲ್ಲಿ  ಇದ್ದರೆ ನನಗು ಕೂಡ ಒಮ್ಮೆ  VIP ದರ್ಶನ ಕೊಡು ನೋಡೋಣ ಎಂದು ತಿಮ್ಮಪ್ಪನಿಗೆ ನಮಸ್ಕರಿಸುವ ಬದಲು ಪದೇ ಪದೇ ಚಾಲೆಂಜ್ ಮಾಡಿ,ದೇವರನ್ನೇ ಒಮ್ಮೆ ಪರೀಕ್ಷಿಸಲು ಮುಂದಾಗಿದ್ದೆ !!!!!.  ಅಂದಿನಿಂದಲೂ ನಾನು ಯಾವುದೇ ವೆಂಕಟೇಶ್ವರನ ದೇವಸ್ಥಾನಕ್ಕೂ ಹೋಗಿರಲಿಲ್ಲ. ನಂಬಿಕೆ ಎಂಬ ಒಂದು ಶಕ್ತಿಗೆ ಚಾಲೆಂಜ್ ಮಾಡಿ ಮನಸ್ಸಿನಲ್ಲೇ  ಆತನನ್ನು ನೆನೆಯುತ್ತಿದ್ದೆ ಹಾಗೂ ನೋಡಿ ನಗುತ್ತಿದೆ.

            ಮೊನ್ನೆ ಶನಿವಾರ ನನ್ನ ತಮ್ಮ ಮಧುಸೂಧನ ನನಗೆ  
ISKCON ನಲ್ಲಿ ನೆಡೆಯುತ್ತಿರುವ ಒಂದು ನೃತ್ಯರೂಪಕದ ಬಗ್ಗೆ ಹೇಳಿ,ನನಗೆ ಅಲ್ಲಿಗೆ ಬರಲು ಆಹ್ವಾನವಿತ್ತ. ಅಂದು ಶನಿವಾರವಾಗಿದ್ದರಿಂದ ನಾ ಮರುಮಾತನಾಡದೇ ಸರಿ ಎಂದು, ಅದೇ ನೀರಸವಾದ ವಾರಾಂತ್ಯದ ಚರ್ಚೆಗಳು,ಟೀವಿ ಪ್ರೋಗ್ರಾಂಗಳು,ರೌಂಡ್ಸ್ಗಗಳನ್ನೆಲ್ಲ ಬಿಟ್ಟು   ISKCON ಮುಟ್ಟುವಷ್ಟೊತ್ತಿಗೆ ಸರಿಯಾಗಿ ಸಂಜೆ 6 ಗಂಟೆಯಾಗಿತ್ತು. ಮಧು ಅಷ್ಟೊತ್ತಿಗೆ ಅಲ್ಲಿಗೆ ಬಂದ ತನ್ನ ಸ್ನೇಹಿತೆ ರಂಜೀತಾಳನ್ನ ನಮಗೆ ಪರಿಚಯ ಮಾಡಿಕೊಟ್ಟ.ಅವಳು ಕೊಟ್ಟ ಪಾಸುಗಳನ್ನು ಜೇಬಿಗೇರಿಸಿದ ನಾವು ಕಾರ್ಯಕ್ರಮಕ್ಕೆ ಹೊರಟೆವು. ಯಾವುದೇ ಪೂರ್ವನಿರ್ಧಾರವಿಲ್ಲದೇ ಹೋಗಿದ್ದ ನಮಗೆ ಆ ಕಾರ್ಯಕ್ರಮ ಇನ್ನೂ ಆರಂಭವಾಗಿರದ ಕಾರಣ, ರಂಜಿತ ನಮ್ಮನ್ನು ದೇವರ ದರ್ಶನ ಮಾಡಲೇ ಬೇಕು ಎಂದು ಒತ್ತಾಯಿಸಿ ನಮ್ಮನ್ನು ಅವಳಿಂದೆ ಬರುವಂತೆ ಹೇಳಿ ಮುಂದೆ ಮುಂದೆ ನೆಡೆಯ ತೊಡಗಿದಳು.ಸರಿ ಎಂದು ನಾವು ಅವಳಿಂದೆ ಹೊರಟೆವು, ಮೊದಲು ಸಿಕ್ಕ ದೇವರಿಗೆ ನಮಸ್ಕರಿಸಿ ಮುಂದೆ ನೆಡೆದ ನನಗೆ ಅಚ್ಚರಿಯೊಂದು ಕಾದಿತ್ತು. ಆ ಅಚ್ಚರಿ ಎಂದರೆ ನನಗಾದ ತಿಮ್ಮಪ್ಪನ ದರ್ಶನ ಹಾಗೂ ಅದು ಆದ ರೀತಿ. ನಮ್ಮನು ರಂಜೀತ ಕರೆದೊಯ್ದದ್ದು VIP ದಾರಿಯಲ್ಲೇ !!!!!!!!  ಹತ್ತಿರದಿಂದಲ್ಲೇ ನೋಡಿ, ಆತನ್ನನ್ನು ನಮಸ್ಕರಿಸಿದ ನಾನು, ಮನಸಿನ್ನಲ್ಲೇ ಅಂದುಕೊಂಡದ್ದು " ಶಹಬಾಸ್ ತಿಮ್ಮಪ್ಪ, ತಿರುಪತಿಯಲ್ಲಿ ನನಗೆ VIP ದರ್ಶನ ಕೊಡು ಅಂದ್ರೆ ಬೆಂಗಳೂರಿನಲ್ಲೇ ಕೊಟ್ಟು ಬಿಟ್ಟೆ, ನೀನು ಸಾಮಾನ್ಯನಲ್ಲ ". ನಂತರ ಒಂದು ದೊಡ್ಡ ನಮಸ್ಕಾರ ಮಾಡಿ, ಹೊರನೆಡೆದಾಗ ನನಗಂತು ಒಂದು ರೀತಿಯ ನಗು ಬರುತ್ತಿತ್ತು ಹಾಗೂ ತಿಮ್ಮಪ್ಪ ಚಾಲೆಂಜಲ್ಲಿ ಗೆದ್ದು ಬಿಟ್ಟನಲ್ಲ ಎಂದೆನಿಸಿ !! ಅವನ ಮೇಲಿದ್ದ ನಂಬಿಕೆ ಇನ್ನೊಷ್ಟ ಜಾಸ್ತಿ ಕೂಡ ಆಗಿತ್ತು. ಅಷ್ಟೊತ್ತಿಗೇ ನಾವು ಹೋಗಿದ್ದ ಇನ್ನೊಂದು ಅದ್ಭುತ ಕಾರ್ಯಕ್ರಮ ಶುರುವಾಗುವುದರಲ್ಲಿತ್ತು. ಅದನ್ನು ನೋಡೊಲು ರಂಜಿತ ಕೊಟ್ಟ ಪಾಸ್ ತೋರಿಸಿ ಹೊಳಗೆ ಹೋಗಿ ಕೂತೆವು. ಆ ನೃತ್ಯರೂಪಕದ ಬಗ್ಗೆ ನಾ ನಿಮಗೆ ಹೇಳಲೇ ಬೇಕು. ಆದರೆ ಮುಂದಿನ ಲೇಖನದಲ್ಲಿ ಅದರ ಬಗ್ಗೆ ಹೇಳುವುದು ಒಳ್ಳೆಯದೆಂದು ನಾ ಯೋಚಿಸಿ, ಶನಿವಾರ ಮಾಡದಿದ್ದ, ಮತ್ತೆ ಅದೇ ಚರ್ಚೆಗಳಿಗೆ,ಟೀವೀ ಪ್ರೋಗ್ರಾಂಗಳಿಗೆ, ರೌಂಡ್ಸ್ ಗಳಿಗೆ ಸಿದ್ದನಾಗಲು,ನಮ್ಮಮ್ಮನ " ಬೆಣ್ಣೆ" ಹಾಕದ ದೋಸೆ ತಿನ್ನಲು ಹೊರಟೆ.......

ನಿಮಗಾಗಿ.......
ನಿರಂಜನ್

ಭಾನುವಾರ, ನವೆಂಬರ್ 7, 2010

Relevant forever

                                                         
                                      Relevant forever ..............its just my opinion !!


"I am filled with hope and inspiration as I have the privilege to view this testament to Gandhi's life. He is a hero not just to India but to the world,"

6 ದಶಕಗಳ ಹಿಂದೆ ನಮ್ಮನ್ನಗಲಿದ ಒಬ್ಬ ನಾಯಕನ ಬಗ್ಗೆ, ಯಾವುದೋ ದೇಶದಿಂದ  ಬಂದ, ಅತ್ಯಂತ ಪ್ರಭಾವಿ ಹಾಗೂ ಮುಂದುವರಿದ ರಾಷ್ಟ್ರದ ಮತ್ತೊಬ್ಬ, ಈ ಪೀಳಿಗೆಯ, ಅಗ್ರಗಣ್ಯ ನಾಯಕ ಈ ರೀತಿ ಹೇಳಬೇಕೆಂದರೆ, ಅವರ ತತ್ವ ಮತ್ತು ಆದರ್ಶಗಳಿಂದ ಈತ ಅದೆಷ್ಟು ಪ್ರಭಾವಿತನಾಗಿರಬಹುದು.

          ನಿಜ ನಾನು ಹೇಳುತ್ತಿರುವುದು ನಮ್ಮ ಹೆಮ್ಮೆಯ ಮಹಾತ್ಮ ಗಾಂಧೀಜಿಯವರ ಮೇಲಿರುವ ಅಮೇರಿಕಾದ ಅದ್ಯಕ್ಷ ಒಬಾಮನ ಪ್ರೀತಿ ಮತ್ತು ಗೌರವದ ಬಗ್ಗೆ. ಎಲ್ಲೋ ಇರುವ ಒಬಾಮನಿಗೆ,ಎಂದೋ ನಮ್ಮನ್ನಗಲಿದ ಮಹಾತ್ಮರು ಇಂದಿಗೂ ಸ್ಪೂರ್ತಿಯಾಗಬೇಕೆಂದರೆ, ನಿಜಕ್ಕೂ ಆತನ ಮೇಲೆ ನಮ್ಮ ಮಹಾತ್ಮರು ಅದೆಷ್ಟು ಪ್ರಭಾವ ಬೀರಿರಬೇಕು.ನಮ್ಮ ದೇಶಕ್ಕೆ ಬಂದಿಳಿದ ಕೆಲವೇ ಗಂಟೆಗಳಲ್ಲಿ ಆತ ಮೊದಲು ಮಾಡಿದ ಕೆಲಸ ಮುಂಬೈಯಲ್ಲಿರುವ ಮಹಾತ್ಮರು ಎಂದೋ ತಂಗಿ ಹೋಗಿದ್ದ ಜಾಗಕ್ಕೆ ಬೇಟಿ ನೀಡಿ ಅವರಿಗೆ ನಮಿಸಿ ಆಡಿದ ಮಾತುಗಳು ನಿಜಕ್ಕೂ ಮಹಾತ್ಮರ ಬಗ್ಗೆ ಬರಾಕ್ ಒಬಾಮನಿಗೆ ಇದ್ದ ಪ್ರೀತಿಯನ್ನು ತೋರಿಸುತ್ತದೆ.

         ಇತ್ತೀಚಿನ ದಿನಗಳಲ್ಲಿ ನಮ್ಮ ದೇಶದಲ್ಲೇ ನಾವೆಲ್ಲರೂ ಗಾಂಧೀಜಿಯವರ ತತ್ವ,ಸಿದ್ಧಾಂತಗಳನ್ನು ಮರೆಯುತ್ತಿರುವ ಹಾಗೂ ಅವೆಲ್ಲವೂ ಈಗಿನ ಕಾಲದಲ್ಲಿ ಉಪಯೋಗಕ್ಕೆ  ಬಾರದವು (Irrelevant) ಎಂದು  ಯೋಚಿಸುತ್ತಿರುವ ನಮಗೆಲ್ಲರಿಗೂ ಒಬಾಮನ ಈ ಗಾಂಧಿ ಸ್ಮಾರಕ ಬೇಟಿಯಿಂದ ಮತ್ತು ಈತನ ಮಾತುಗಳಿಂದ ನಾವು ಬಹಳಷ್ಟು ಕಲಿಯುವುದಿದೆ. ಕೆಲವು ಇತಿಹಾಸ ತಜ್ಞರು ಹಾಗೂ ಲೇಖಕರು ಇತಿಹಾಸವನ್ನು, ಹಲವಾರು  ನಾಯಕರ ತತ್ವ, ಆದರ್ಶಗಳನ್ನು ಅವರವರ ಬುದ್ಧಿಮಟ್ಟಕ್ಕೆ ಅರ್ಥೈಸಿಕೊಂಡು ತಮ್ಮ ಅನೇಕ ಲೇಖನಗಳಲ್ಲಿ ನಮ್ಮ ನಾಯಕರ ಬಗ್ಗೆ ಜನರಲ್ಲಿ ಒಂದು ರೀತಿಯ ತಪ್ಪು ಭಾವನೆಗಳನ್ನು ಮೂಡಿಸಿದ್ದಾರೆ. ನಿಜ ಒಬ್ಬ ಮನುಷ್ಯ ಸಂಪೂರ್ಣ ಒಳ್ಳೆಯವನು ಹಾಗೂ ಆತ ತೆಗೆದುಕೊಳ್ಳುವ ಎಲ್ಲ ನಿರ್ಧಾರಗಳು ಸರಿಯಾಗಿರಬೇಕೆಂದಿಲ್ಲ. ಆತನ ವಿಚಾರಗಳು ನಮ್ಮ ವಿಚಾರಗಳು ಬೇರೆ ಬೇರೆ ಆಗಿರಬಹುದು. ಆದರೆ ನಾವು ಯಾವುದೇ ಮನುಷ್ಯನ ಒಳ್ಳೆಯ ಗುಣಾದರ್ಶಗಳನ್ನು ಬಿಟ್ಟು ಆತನ ವೈಯುಕ್ತಿಕ ಹಾಗೂ ತಪ್ಪುಗಳನ್ನು ಮಾತ್ರ ನೋಡಿದರೆ ನಮ್ಮ ಏಳಿಗೆಗೆ ಏನು ಉಪಯೋಗವಾಗದು.ಮಹಾತ್ಮ ಗಾಂಧಿಯವರ ಸತ್ಯ,ಅಹಿಂಸೆ,ಸರಳತೆ ಮತ್ತು ಪ್ರೀತಿ, ನೂರು ವರ್ಷಗಳ ಹಿಂದೆ ಮತ್ತು ಇನ್ನೂ ನೂರು ವರ್ಷಗಳು ಕಳೆದರು ಅವು ಸಮಂಜಸವಾಗಿರುತ್ತವೆ(Relevant) . ನಾವು ಕೂಡ ಅವಷ್ಟನ್ನೇ ಪಾಲಿಸಿದರು ಸಹ ನಮ್ಮ ವೈಯುಕ್ತಿಕ ಹಾಗೂ ಸಾಮಾಜಿಕ ಜೀವನ ಬಹಳಷ್ಟು ಬದಲಾವಣೆಗಳನ್ನು ಕಾಣಬಹುದು ಎಂಬುದು ನನ್ನ ವೈಯುಕ್ತಿಕ ಅಬಿಪ್ರಾಯ ಅಷ್ಟೇ.  


ನಿಮಗಾಗಿ.......
ನಿರಂಜನ್