ನಾಮಕರಣ
ಅಡುಗೆ ಮನೆಯಲ್ಲಿ ಕೆಲಸ ಮಾಡಿಕೊಳ್ಳುತ್ತಿರುವ ರೂಪ ಈಗಿನ ಕಾಲದ ಹೆಣ್ಣು ಮಗಳು, ಅದೇ ಕೋಣೆಗೆ ಅಂಟಿಕೊಂಡಿರುವ ಸಣ್ಣ ದೇವರಮನೆಯಲ್ಲಿ ಪೂಜೆ ಮಾಡುತ್ತಿರುವ ಹಳೆಕಾಲದ "ದೇವಮ್ಮ" ರೂಪಳ ಅತ್ತೆ. ಈಗಿನ ಕಾಲಕ್ಕೂ ಮತ್ತು ಆಗಿನ ಕಾಲಕ್ಕೂ ಮದ್ಯ ಸಿಕ್ಕಿ ಹಾಕಿಕೊಂಡಿರುವವನು "ಮೋಹನ", ಪಕ್ಕದಲ್ಲೇ ಪೇಪರ್ ಓದುತ್ತಿದ್ದಾನೆ.
ದೇವಮ್ಮ : ರೂಪ , ಸ್ವಲ್ಪ ನೀರು ಕೊಡೆ ...
ರೂಪ : ತಂದೆ ಅತ್ತೆ , ( ನೀರು ತಂದ ರೂಪ ಅತ್ತೆಗೆ) ನೀರು ತಗೋಳಿ ,
ದೇವಮ್ಮ : ನಿಮ್ಮ ಅಣ್ಣನ ಮಗನಿಗೆ ನಾಮಕರಣದ ಮಾಡಿದ್ರೇನೆ ರೂಪ ?
ರೂಪ : ಇನ್ನೂ ಇಲ್ಲ ಅತ್ತೆ, ಅವರು ಹೆಸರು ಚೂಸ್ ಮಾಡೋದ್ರಲ್ಲೇ ಇದ್ದಾರೆ .
ದೇವಮ್ಮ : ಹೌದ ? , ಹೆಸರು ಇಡೋಕೆ ಅಷ್ಟೊಂದು ಯಾಕೆ ತಲೆ ಕೆಡಿಸಿಕೊಂಡಿದ್ದಾರೆ ಅಂತ ?? ಯಾವ್ದೋ ಒಂದು ಹೆಸರು ಇಟ್ಟರೆ ಆಯ್ತಪ್ಪ. ಹೆಸರುಗಳಿಗೇನು ಬರವೆ ??.
ರೂಪ : ಏನೋ ಗೊತ್ತಿಲ್ಲ ಅತ್ತೆ , ಅವರಿಷ್ಟ ಬಿಡಿ...
ದೇವಮ್ಮ : ನನಗೆ ಹುಟ್ಟೋ ಮೊಮ್ಮಕ್ಕಳಿಗೆ ಹೆಸರು ಇಡೋದು, ಇಷ್ಟೊಂದು ಕಷ್ಟ ಆಗೋಲ್ಲ ನೋಡ್ತಾ ಇರು,
ಮೋಹನ : ( ನಗುತ್ತ ) ಮೊದ್ಲು ಮಗು ಆಗ್ಲಿ ತಡಿಯಮ್ಮ ..( ರೂಪಾಳೂ ಕೂಡ ನಸು ನಗುತ್ತಾಳೆ, ಅಡುಗೆ ಮನೆಯಿಂದ )
ದೇವಮ್ಮ : ಇರೋ ಹೆಸರುಗಳನ್ನೂ ಬಿಟ್ಟು , ಎಂತೆಂತವೋ ಹೆಸರನ್ನ ಹುಡಿಕೊಂಡು ಕೂತ್ರೆ ಹಿಂಗೆ ಲೇಟ್ ಆಗುತ್ತೆ ನೋಡು, ಏನೇನೋ ಕೇಳದ ಹೆಸರುಗಳು, ಅರ್ಥ ಆಗದ ಹೆಸರುಗಳೆಲ್ಲ ಇಡ್ತಾರೆ ಈ ಕಾಲದಲ್ಲಿ. ನಾ ಹಿಂಗೆ ಆಗೋಕೆ ಬಿಡೋಲ್ಲ ನೋಡ್ತಾ ಇರು.
ರೂಪ : ಅದೆಲ್ಲ ಮಕ್ಳು ಅದಮೇಲೆ ಯೋಚನೆ ಮಾಡಿದ್ರೆ ಆಯ್ತು ಬಿಡಿ ಅತ್ತೆ.
ದೇವಮ್ಮ : ಆಗ್ತಾವೆ ಬಿಡೇ , ನಿಮ್ಮಿಬ್ರಿಗೂ ಮದುವೇನೆ ಆಗಿದೆ ಅಂತೆ .
( ರೂಪ ನಗುತ್ತ ಮೋಹನ ಮುಖ ನೋಡುತ್ತಾಳೆ )
ದೇವಮ್ಮ: ಜನಕ್ಕೆ ಈ ಹೆಸರು ಹುಡೋಕೊಕೆ ಯಾಕೆ ಇಷ್ಟು ಕ್ಷಷ್ಟ ಅಂತ ?? ಹೆಸರು ಇಡಬೇಕು ಅಂದ್ರೆನೂ ಎಷ್ಟೊಂದು ಒಳ್ಳೆ ಹೆಸರು ಸಿಗ್ತಾವೆ.. ..
ಮೋಹನ : ಹಾಗಾದ್ರೆ ನಂಗೆ ಗಂಡು ಮಗು ಆದ್ರೆ ಏನು ಹೆಸರು ಇಡೋಣಮ್ಮ ???
ದೇವಮ್ಮ : ಸಕತ್ ಈಸಿ ನೋಡು , ಗಂಡು ಮಗು ಆದ್ರೆ ಈರಭದ್ರ ಅಂತ ಇಟ್ರೆ ಆಯ್ತಪ್ಪ . ಅದು ನಿಮ್ಮ ಮುತ್ತಾತನ ಹೆಸರು .
ಮೋಹನ : ( ಉಕ್ಕಿ ಬರುವ ನಗೆಯನ್ನು ತದೆದುಕೊಳ್ಳುತ್ತ ) " ಈರಭದ್ರ " , ಆಹಾ ಎಷ್ಟೊಂದು ಒಳ್ಳೆ ಹೆಸರು , ಒಂದು ವೇಳೆ ಹೆಣ್ಣು ಮಗು ಆದ್ರೆ ??
ದೇವಮ್ಮ: " ಕಾಳಮ್ಮ" , ಕಾಳಮ್ಮ ನಮ್ಮ ಕುಲ ದೇವಂತೆ ಹೆಸರು , ಪ್ರತಿ ದಿನ ಆ ತಾಯಿ ಹೆಸರು ನಮ್ ಬಾಯಲ್ಲಿ ಬಂದ್ರೆ ಕೋಟಿ ಪುಣ್ಯ ಬರುತ್ತೆ ಕಣೋ.
ರೂಪ : " ಕಾಳಮ್ಮ " (ಭಯದೊಂದಿಗೆ ,,ನಗುತ್ತ) , ಒಂದು ವೇಳೆ ಒಟ್ಟಿಗೆ ಅವಳಿ-ಜವಳಿ ಹೆಣ್ಣು-ಗಂಡು ಮಕ್ಳು ಹುಟ್ಟಿದ್ರೆ ???
ದೇವಮ್ಮ : ನಮ್ಮ ಪುಣ್ಯ ಅಂತ ಅಂದುಕೊಂಡು , ಭದ್ರ ಅಂತ ಗಂಡಿಗೂ ಕಾಳಿ ಅಂತ ಅಂತ ಹೆಣ್ಣಿಗೂ , ಒಟ್ಟಾಗಿ "ಭದ್ರ-ಕಾಳಿ " ಅಂತ ನಾಮಕರಣ ಮಾಡಿದ್ರೆ ಆಯ್ತಪ್ಪ , ಅಷ್ಟೇ ...
ನಿಮಗಾಗಿ
ನಿರಂಜನ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ