ನೀ ಹೋದದ್ದು ತುಂಬಾ ಒಳ್ಳೆಯದಾಯಿತು..........
ನಾರ್ಮಲ್ ಆಗಿ ಎಲ್ಲರೂ ಯೋಚಿಸುವಂತೆ ನಾನು ಕೂಡ ಈ ಶನಿವಾರ ಮತ್ತು ಬಾನುವಾರ ತುಂಬಾ ನಿದ್ದೆ ಮಾಡಿ, ಸ್ನೇಹಿತರೆಲ್ಲಾ ಹೇಳುವ ರೀತಿಯಲ್ಲಿ ಹತ್ತುಗಂಟೆಗೆ ಎದ್ದು, ಹಾಸಿಗೆಯಲ್ಲೇ, ಹಾಳು ಮುಖದಲಿ ಟೀ ಕುಡಿದು, 11 ಕ್ಕೆ ಅಮ್ಮನಿಂದ ಬೈಸ್ಕೊಂಡು ಹಲ್ಲುಜ್ಜಿ, ಮುಖತೊಳೆದು, 12 ಕ್ಕೊ 1 ಕ್ಕೊ ತಿಂಡಿ ತಿಂದು ಮತ್ತೆ ಮಲಗಿ, ಮತ್ತೆ ಮೂರಕ್ಕೆ ಎದ್ದು ಊಟ ಮಾಡಿ, ಸಂಜೆ ಹೊರಗಡೆ ಹೋಗಬೇಕು, ಅದರಲ್ಲಿ ಅಂತಹ ಸುಖವೇನಿದೆ ? ಅದನ್ನು ಒಮ್ಮೆ ಅನುಭವಿಸಬೇಕು ಅಂತೆಲ್ಲಾ ಯೋಚನೆ ಮಾಡು ಮಾಡುತಿದ್ದಂತೆಯೇ ನಿದ್ರಾದೇವಿಯು ನನ್ನ ಬಳಿಗೆ ಬಂದು, ನನ್ನನ್ನು ನಿದ್ರಾಲೋಕಕ್ಕೆ ಕರೆದೊಯ್ದೆ ಬಿಟ್ಟಳು ಶುಕ್ರವಾರ ರಾತ್ರಿ 10.30 ರ ಹೊತ್ತಿಗೆ. ಬೆಳಿಗ್ಗೆ ಲೇಟ್ ಆಗಿ ಏಳಲೆ ಬೇಕೆಂದು ನಿರ್ಧರಿಸಿದ್ದ ನಾನು ಅಲರಂ ಕೂಡ ಆ ದಿನ ಇಟ್ಟಿರಲಿಲ್ಲ, ಎವೆರೆಡು ದಿನಗಳಲಿ atleast ಒಂದು ದಿನವಾದರೂ ಮೇಲೆ ಹೇಳಿದ " ಆಮೆಯ ಅಥವಾ ಲೇಜಿ " ರೀತಿಯಲ್ಲಿ ಕಳೆಯಲೇ ಬೇಕೆಂದು ದೃಡ ಸಂಕಲ್ಪದಿಂದ, ಮಲಗಿದ್ದ ನನಗೆ ತಕ್ಷಣ ಯಾರೋ ಎಚ್ಚರಿಸಿ, ನನ್ನ ಪಕ್ಕದಿಂದಲೇ ಸರಿದು ಹೋದಂತೆ ಆಯಿತು. ಯಾರು ಅಂದು ನೋಡುವಷ್ಟತ್ತಿಗೆ ಆಕೆ ನಮ್ಮ ಅಣ್ಣಂದಿರ ಕೊಣೆಗಳ ಕಡೆ ಹೊರಟೆ ಹೋದಳು ಎಂದೆನಿಸಿತು. ನಿದ್ರೆಯ ಮಂಪರಿನಲ್ಲಿ ಹಾಗೆ ಬಲಗೈನ್ನೂ ನನ್ನ ತಲೆ ದಿಮ್ಮಿನ ಕಡೆ ಆಡಿಸಿದಾಗ ನನ್ನ ಮೊಬೈಲ್ ಸಿಕ್ಕಿತು, ಅದರಲ್ಲಿ ಟೈಮ್ ನೋಡಿದೆ ಆಗಿನ್ನೂ ಬೆಳ್ಳಿಗೆ 5.20 ಆಗಿತ್ತು. ಛೇ ಇದೇನಪ್ಪ ಇಷ್ಟೊತ್ತಿಗೆನೇ ಎಚ್ಚರವಾಯಿತು ಅಂದುಕೊಂಡು ಹೊದಿಕೆಯನ್ನು ಮತ್ತೆ ಹೊದ್ದುಕೊಂಡು, ನನ್ನನ್ನು ನಾ ತಿರುವಿ ಹಾಕಿಕೊಂಡು ಮಲಗಿದೆ. ನಿದ್ದೆಯೂ ಬಂದಂತೆ ಆಯಿತು.
ಆಗೊಮ್ಮೆ ಈಗೊಮ್ಮೆ , ಎಲ್ಲೋ ಮತ್ತೆ ಪರ-ಪರ ಕೆರೆಯುವ ಸದ್ದು, ದೂರದ ಇನ್ನೆಲ್ಲೋ ಕೇಳಿಬರುತ್ತಿದ್ದ ತೆಳುವಾದ ಸಂಗೀತ ಮತ್ತೆ ಸ್ವಲ್ಪ ಬೆಳಕು, ಮೇಲಿಂದ ಕೆಳಗೆ ಬೀಳುತಿದ್ದ ನೀರಿನ ಹನಿಗಳ ಸಪ್ಪಳಗಳು ಎಲ್ಲೋ ದೂರದಲ್ಲಿ ಕೇಳಿ ಬರುತ್ತಿರುವ ಶಬ್ದಗಳ ಹಾಗೆ ಅನ್ನಿಸತೊಡಗಿದವು , ಅಷ್ಟೊತ್ತಿಗೆ ನನಗೆ ನಿದ್ದೆ ನನ್ನಿಂದ ಸರಿಯುತ್ತ ಹೋದಂತೆ, ಸ್ವಲ್ಪ ಸ್ವಲ್ಪ ಎಚ್ಚರವಾಗತೊಡಗಿತು, ಕಣ್ಣುಬಿಟ್ಟು ಸ್ವಲ್ಪ ನಿದ್ದೆ ಕಡಿಮೆ ಆದಾಗ, ಮೇಲೆ ಹೇಳಿದ ಎಲ್ಲ ಶಬ್ದಗಳು, ಇನ್ನೂ ಜೋರಾಗಿ ಕೇಳತೊಡಗಿದವು. ಅಡುಗೆ ಮನೆಯಲ್ಲಿ ಅಮ್ಮ ಮೂಲಂಗಿಯ ಮೇಲ್ಪಾದರವನ್ನು ತಗಿಯುತ್ತಾ ಇದ್ದ ಆ ಸೌಂಡು ಇನ್ನೂ ಜೋರಾಗಿ ಪರ, ಪರ ಎಂದು ನನ್ನ ಕಿವಿಯ ಬಳಿಯೇ ಕೆಳತೊಡಗಿತು, ನಮ್ಮ ಮನೆಯ ರೇಡಿಯೋದಲ್ಲಿ ಬರುತಿದ್ದ ಸುಬ್ಬಲಕ್ಷ್ಮಿ ಸುಪ್ರಭಾತ ಯಾಕೋ ಆ ಸಮಯಕ್ಕೆ ನಮ್ಮೂರಿನ ರುದ್ರದೇವರ ಜಾತ್ರೆಯಲ್ಲಿ ಬಾರಿಸೋ ಚಂಡೆ-ಮದ್ದಲೆ, ಡೊಳ್ಳು-ಸಮಾಳಗಳ ರೀತಿಯಲ್ಲಿ ಕೇಳ ತೊಡಗಿದ್ದವು, ಇನ್ನೂ ನಮ್ಮ ನಡು ಮನೆಯ ಟ್ಯೂಬ್ ಲೈಟು, ಲಾರಿಗಳ ಹೈ ಬೀಮ್ ಲೈಟ್ ತರ ನನ್ನ ಕಣ್ಣನ್ನು ಕುಕ್ಕತೊಡಗಿತು , ಮತ್ತೆ ಬಾತ್ ರೂಮಲ್ಲಿ ಅಮ್ಮ ಆನ್ ಮಾಡಿದ್ದ "ನಲ್ಲಿ", ಅದರಿಂದ ಬರುತ್ತಿದ್ದ ನೀರು ಕಿವಿಗೆ ಏನೋ ಜಲಪಾತ ಬೋರ್ಗರೆತದ ರೀತಿ ಭಾಸವಾಗಿ ನನ್ನ ನಿದ್ದೆ ನಂದಿ ಹೋಗಿ, ರಾತ್ರಿಯಿಂದಲೂ ನನ್ನ ಬಳಿಯೇ ಇದ್ದ, ನನ್ನ ಜೊತೆಯೇ ಕಾಲ ಕಳೆದ . ನನ್ನ ನಿದ್ರಾದೇವಿಗೆ ಯಾಕೋ ನನ್ನ ಸಕ್ಯ ಸಾಕೆನಿಸಿ ಅಲ್ಲಿಂದ ಅವಳೇ ಸ್ವಲ್ಪ ಸಮಯದ ಹಿಂದೆ ನಮ್ಮ ಅಣ್ಣಗಳ ರೂಮಿನ ಕಡೆ ಹೋದದ್ದು ಎಂದು ನನಗೆ ಆಗ ಸಂಪೂರ್ಣವಾಗಿ ಎಚ್ಚರವಾದಾಗ ಅನಿಸಿತು.
ಆಮೇಲೆ ಎಷ್ಟೇ ಕಷ್ಟ ಪಟ್ಟರು, ಆಕಡೆ-ಈಕಡೆ,ಮೇಲೆ-ಕೆಳಗೆ, ಏನೇ ತಿರುವಿ-ಮುದಿರಿ ಹಾಕಿಕೊಂಡು ಮಲಗಿದರು ನಿದ್ದೆ ಮತ್ತೆ ಬಾರಲೆ ಇಲ್ಲ. ಆ ತರದ ವಾತಾವರಣದಲ್ಲಿ, ಒಂದು ಕ್ಷಣ ಇದೆಲ್ಲ ನೆನೆದು ಸಿಟ್ಟು ಬಂತಾದರೂ ನಾನು ಏನು ಮಾಡುವಂತಿರಲಿಲ್ಲ. ನಮ್ಮ ಅಮ್ಮ ಪ್ರತಿದಿನ ನನಗೆ ಅಷ್ಟೊತ್ತಿಗೆ ಎದ್ದು ಅಡುಗೆ ಮಾಡುತ್ತಾರೆ, ಆಗೆಲ್ಲ ಸರಿ ಅನಿಸುವ ಇದೆಲ್ಲ ನನಗೆ ಇಂದು ಯಾಕೆ ಬೇಜಾರ್ ಆಗಬೇಕೆಂದುಕೊಂಡು ಸಮಾದಾನ ಮಾಡಿಕೊಂಡು, ನನ್ನ ಮುಂದಿನ ಕೆಲ್ಸಾ ಕಾರ್ಯಗಳಲ್ಲಿ ಮಗ್ನನಾದೆ. ಆಗ ಸಮಯ ಇನ್ನೂ 6.15AM ಮುಖ ತೊಳೆದುಕೊಂಡಿದ್ದೆ, ತಣ್ಣೀರಿನ ಹನಿಗಳು ಇನ್ನೂ ನನ್ನ ಕೈ ,ಮತ್ತೆ ಕಾಲಿನ ಮೇಲೆ ಇನ್ನೂ ಇದ್ದವು, ಸಂಪೂರ್ಣವಾಗಿ ಹೊರೆಸಿಕೊಂಡಿರಲಿಲ್ಲ, ಕೈ ಅಲ್ಲಿ ಒಂದು ಲೋಟ ನೀರನ್ನು ಹಿಡುಕೊಂಡು ತಗೆದಿದ್ದ ಭಾಗಿಲಿನಿಂದ ನಮ್ಮ ಮನೆಯ ಮುಂದೆ ಹೋಗಿ ನಿಂತುಕೊಂಡೆ, ಗಮ್ಮೆನ್ನುವ ಉದಿನಕಡ್ಡಿ ವಾಸನೆ ನಮ್ಮ ಮನೆಯ ಕೆಳಗಿನ ಮನೆಯಿಂದ ಬರುತ್ತಿತ್ತು ಅನ್ಸುತ್ತೆ, ನಮ್ಮ ಅಮ್ಮ ನೀಟ್ ಆಗಿ ಸಣ್ಣ ರಂಗೋಲಿ ಬಿಟ್ಟಿದ್ದರು ಎದುರಿನಲ್ಲಿ, ಪಕ್ಕದಲ್ಲೇ ಇದ್ದ ತುಳುಸಿ ಗಿಡಕ್ಕೆ ನೀರು ಹಾಕಿ,ಅದಕ್ಕೆ ಕುಂಕುಮ ಹಚ್ಚಿ , ಅದರ ಬುಡದಲ್ಲಿ ಒಂದು ದೀಪ ಹಚ್ಚಿಟ್ಟು ಸ್ವಚ್ಛ ಮಾಡಿದ್ದರು ನಮ್ಮ ಹೊರಾಂಡವನ್ನು. ನೀರನ್ನು ಕೈಯಲ್ಲೇ ಹಿಡಿದು ಹಾಗೆ ಆಕಾಶ ನೋಡಿದಾಗ ಮಳೆಗಾಲದ ಕಾರ್ಮೋಡಗಳು ಬೆಳ್ಳ ಬೆಳ್ಳಿಗ್ಗೆನೇ ಭೂಮಿಯನ್ನು ಯಾವಾಗ ಸೇರುತ್ತೇವೋ ಎನ್ನುವ ತವಕದಿಂದ ಅಲ್ಲಿಂದ-ಇಲ್ಲಿಗೆ , ಇಲ್ಲಿಂದ-ಅಲ್ಲಿಗೆ ಹಾರಾಟ ನೆಡೆಸಿದ್ದವು, ಸೂರ್ಯನ ಸುಳಿವಿಲ್ಲದಿದ್ದರು, ಅವನ ಬೆಳಕು ಮಾತ್ರ ಎಲ್ಲೆಡೆ ಆವರಿಸಿತ್ತು, ತಣ್ಣನೆ ಗಾಳಿ ಮೋಡಗಳನ್ನು ಆಟ ಆಡಿಸುವುದರ ಜೊತೆಗೆ, ಬರಿ ಬನಿಯಾನಿನಲಿದ್ದ ನನ್ನ ಭುಜಗಳಿಗೆ ತಗುಲಿದಾಗ ಚಳಿಯ ಜೊತೆಗೆ ರೋಮಾಂಚನವು ಆಗತೊಡಗಿತು. ಎತ್ತ ನೋಡಿದರು ಅತ್ತ ಕಾಣುವ ಹಸಿರು ಮರಗಳು, ದೂರದಲ್ಲಿ ಕಾಣುವ ದುರ್ಗಪರಮೇಶ್ವರಿ ದೇವಸ್ತಾನದ ಬಾರಿ ಗೋಪುರಕ್ಕೆ ಮಂಜು ಸುತ್ತಿಕೊಂಡತ್ತೆ ಕಾಣುತ್ತಾ ಇತ್ತು, ಅಲ್ಲೊಂದು-ಇಲ್ಲೊಂದು ಹಾರುವ ಪಕ್ಷಿಗಳು, ನಮ್ಮ ಪಕ್ಕದ ಮನೆಯ ಮೇಲ್ಛಾವಣಿಯ ಮೇಲೆ ಅದೇನನ್ನೋ ಹುಡುಕುತ್ತಾ, ಹಾಗೊಮ್ಮೆ-ಹೀಗೊಮ್ಮೆ ಏನೇನೋ ತಿನ್ನುತ್ತಾ ಇದ್ದ ಚಿಕ್ಕ ಅಳಿಲು ಮರಿ, ಚೀಕ್-ಚೀಕ್ ಅನ್ನುತ್ತಾ ಅದರ ಬಾಲ ಎತ್ತುತ್ತಿದ್ದ ಆ ಪರಿ, ಕಾಲವಲ್ಲದ ಕಾಲದಲ್ಲಿ ಒಂದೆರೆಡು ಸಾರಿ ಕುಹೂ-ಕುಹೂ ಎಂದು ಕೂಗಿದ ಕೋಗಿಲೆ, ನನಗೆ ಏನೋ ಒಂದು ರೀತಿಯ ಆಗಿದ್ದ ಬೇಜಾರಿಗೆ ಫುಲ್ ಸ್ಟಾಪ್ ಹಾಕಿದ್ದವು.
ಇಂತಹ ತಣ್ಣನೆ ವಾತಾವರಣದಲ್ಲಿ ಕೈಯಲ್ಲಿ ಇದ್ದ ಒಂದು ಲೋಟ ನೀರನ್ನು ಬಾಯಿಗೆ ಹಾಕಿಕೊಂಡಾಗಾದ ಅತೀವವಾದ ಆ ಚಳಿ, ಒಂದು ರೀತಿಯಾಗಿ ಮಜ ನೀಡುವುದರ ಜೊತೆಗೆ. ಮೈ ತುಂಬಾ ಚಳಿ ಗುಳ್ಳೆಗಳು, ಹಲ್ಲು ಜುಮು-ಜುಮು ಅನ್ನ ತೊಡಗಿದವು, ಒಂದು ಸಾರಿ ದೇಹವೆಲ್ಲಾ ಪುಳಕಗೊಂಡು ಜಿಲ್ ಎಂದಿತು. ಒಟ್ಟಾರೆ ಇದೆಲ್ಲ ಸಕತ್ ಮಜ ನೀಡತೊಡಗಿದವು. ನಂತರ ಒಳ ಬಂದು ನಮ್ಮ ಮನೆಯ ಹಾಲಿನಲ್ಲಿರುವ ಎರೆಡು ದೊಡ್ಡ ಕಿಟಕಿಗಳಿಂದ ಮತ್ತೆ ಆ ಪ್ರಕೃತಿಯ ಪರಮಾನಂದವನ್ನು ಸವಿಯ ತೊಡಗಿದೆ.ಹಾಗ ಕೈಯಲ್ಲಿ ಬಿಸಿಯಾ ಚಹಾ ಇತ್ತು, ಕಿಟಕಿಯಿಂದ ಒಳ ಬರುತ್ತಿದ್ದ ಆ ತಣ್ಣನೆ ಗಾಳಿ ನನ್ನ ಬಳಿ ಏನೋ ಹೇಳಲು ನನ್ನ ಮೈ ಮೇಲೆಯೇ ಬಂದಂತೆ ಬಾಸವಾಗ ತೊಡಗಿತು. ಅವು " ನೀ ಇನ್ನೂ ಸ್ವಲ್ಪ ಹೊತ್ತು ಹೊದ್ದಿಕೊಂಡು, ತಿರುಗಾಕಿಕೊಂಡು ಮಲಗಿದ್ದರೆ ನನ್ನ ಈ ಸ್ಪರ್ಶ್ಹ್ವನ್ನು ನೀ ಅನುಭವಿಸಲು ಸಾದ್ಯವಾಗುತ್ತಿತ್ತಾ ??? " ಎಂದು ಪ್ರಶ್ನಿಸಿದ ಹಾಗೆ ಅನಿಸಿತು… ಅದೇ ರೀತಿ ಹಾರುವ ಹಕ್ಕಿಗಳು " ನೋಡು ನೋಡು ನಾವು ಎಷ್ಟುಮೇಲೆ ಹಾರುತ್ತ ಇದೀವಿ ನೀ ಯಾಕೆ ಇನ್ನೂ ಮುದುರಿಕೊಂಡು ಮಲಗಬೇಕು ಅನ್ದುಕೊಳುತ್ತೀಯ ??? ". ಹಾಗೆ " ಮೊಡಗಳಾದ ನಾವೇ ಜೋರಾಗಿ ಅಲ್ಲಿಂದ-ಇಲ್ಲಿಗೆ,ಇಲ್ಲಿಂದ-ಅಲ್ಲಿಗೆ ,ಅಲ್ಲಿಂದ-ಇಲ್ಲಿಗೆ, ಇಲ್ಲಿಂದ-ಅಲ್ಲಿಗೆ ಓಡಾಡಿಕೊಂಡು ಆಕ್ಟಿವ್ ಆಗಿ ಇದೀವಿ, ನಿನಗೇನೂ ಬಂದಿದೆ ದಾಡಿ, ಸತ್ತ ಹೆಣದಂತೆ ಮಲಗು ಬೇಕು ಅಂತ ಏಕೆ ಅಂದುಕೊಂಡಿರುವೆ ???? " ಅಂದಹಾಗೆ , ಮನೆಯೆದಿರು ಇರುವ ಸಂಪಿಗೆ ಮರ, " ನಾ ಬಳ್ಳಿಯಲ್ಲದಿದ್ದರು ಈ ಗಾಳಿಗೆ ಆಕೆಡೆಗೊಮ್ಮೆ-ಈಕಡೆಗೊಮ್ಮೆ ಬಳುಕುತ್ತಾ ,ನನ್ನ ವಯ್ಯಾರವನ್ನು ತೋರಿಸುವುದರ ಜೊತೆಗೆ,ನನ್ನ ಹೂವುಗಳು ಸುಗಂಧವನ್ನು ಚೆಲ್ಲುತ್ತಿವೆ ,, ನೀ ಅದರ ಸವಿಯನ್ನು ಸವಿಯುವುದನ್ನು ಬಿಟ್ಟು ಅದ್ಯಾಕೆ ಸಂಪೂರ್ಣವಾಗಿ ಎಚ್ಚರವಿಲ್ಲದಂತೆ ಮಲಗ ಬಯಸುವೆ ??? ನಿನ್ನ ಉಸಿರನ್ನು ನೀ ಕುಡಿಯುವ ಅಷ್ಟೊಂದು ಆಸೆ ಯಾಕೆ ನಿನಗೆ ??? " ಎಂದು ಇಯಾಳಿಸುತ್ತಾ ಇರುವಂತೆ ಭಾಸವಾಗತೊಡಗಿತು. ನಾನು ಇನ್ನೂ ಸ್ವಲ್ಪ ಹೊತ್ತು ಮಲಗಿದ್ದರು ಕೂಡ ನಿಜವಾಗಿಯೂ ಈ ರೀತಿಯ ವಾತಾವರಣ ನೋಡಲು, ಕೋಗಿಲೆಯ ಕೂಗನ್ನು ಈ ಕಾಲದಲ್ಲಿ ಕೇಳಲು, ಸಂಪಿಗೆ ಮರದ ಸುಗಂಧವನ್ನು ಹೀರಲು, ತಣ್ಣನೆ ಗಾಳಿಯ ಎಫೆಕ್ಟ್ ಅನುಭವಿಸಲು ಆಗುತ್ತಿರಲಿಲ್ಲ ಅನ್ನಿಸಿತು.... ಕೈಲಿ ಇದ್ದ ಟೀ ಅನ್ನು ಸುರ್-ಸುರ್ ಅಂತ ನಿಧಾನವಾಗಿ ಕುಡಿದು, ಏನೋ ಒಂದು ಒಳ್ಳೆಯ ಫೀಲ್ ತಗೆದುಕೊಂಡು, ಸಂತೋಷದಿಂದ ಲೇಟ್ ಆಗಿ ಎದ್ದೆಳುವುದು ನನ್ನಂತವನಿಗೆ ಅಲ್ಲ , ಅದು ಕೇವಲ "ಸ್ಪೆಶಲ್ ಜನರಿಗೆ " ಮಾತ್ರ ಸಾದ್ಯ ಎಂದು ಗೊತ್ತಾಗಿ, ನನ್ನ ದೈನಂದಿನ ಚಟುವಟಿಕೆಯಲ್ಲಿ ತೊಡಗಿದೆನು, ಆಕಡೆ ನಿದ್ರಾದೇವಿ ಸಂಪೂರ್ಣವಾಗಿ ಆವರಿಸಿದ್ದ ನಮ್ಮ ಅಣ್ಣಂದಿರಿಗೆ , ನಮ್ಮ ಅಮ್ಮ " ಎದ್ದೆಳ್ರೋ ಎದ್ದೆಳ್ರೋ " ಅಂತ ಎಬ್ಬಿಸುತ್ತಿದ್ದರು, ಅವರು "ತಡಿಯಮ್ಮ, ನಾವೇನೂ ದಿನ ಹೀಗೆ ಮಲಗುತ್ತೇವ,, ? ಸ್ವಲ್ಪಹೊತ್ತು ಬಿಡು,,,,, ಆಮೇಲೆ ಏಳುತ್ತೇವೆ " ಎನ್ನುವಾಗ , ನನಗೆ ಇವರೆಲ್ಲ ಲೇಟ್ ಆಗಿ ಏಳುವುದರ ಜೊತೆಗೆ ಏನೆಲ್ಲಾ ಮಿಸ್ ಮಾಡಿಕೊಳ್ತಾ ಇದ್ದಾರೆ ಅನ್ನೋ ಫೀಲ್ ಆಯಿತು.. ಆದಿನ ಬೇಗ ಎದ್ಡಿದ್ದಕ್ಕೆ ಒಂದಿಷ್ಟು ಬೇಜಾರ್ ಆಗದೆ ಸಕತ್ ಖುಷ್ ಆಗಿ ಮುಂದಿನ ಕಾರ್ಯಕ್ರಮಗಳ ಬಗ್ಗೆ ಮನಸ್ಸು ಕೊಟ್ಟೆ..