" ಹೆಣ್ಣು ಸೌಂದರ್ಯದ ಗಂಟು "
ನಿಜ ಸ್ನೇಹಿತರೆ .......
'ಹೆಣ್ಣು', ನಮ್ಮ ಬ್ರಹ್ಮ ದೇವರು ಕಷ್ಟ ಪಟ್ಟು, ಬೆವರು ಸುರಿಸಿ ನಮಗಾಗಿ ಮಾಡಿಕೊಟ್ಟ ಸೌಂದರ್ಯದಗಂಟು. ಅದಕ್ಕಾಗಿಯೇ ಏನೋ ಹೆಣ್ಣಿನ ಮನಸ್ಸು ನಮಗೆ ಹರಿಯಲು ಸಾದ್ಯವೇ ಇಲ್ಲ, ಏಕೆಂದೆರೆ ಅವಳು ಸೌಂದರ್ಯದ ಗಂಟಲ್ಲವೆ. ಗಂಟಿನ ಒಳಗೆ ಏನಿದೆ ಎಂದು ಒಳಗೆ ನೋಡಿದಾಗಲೇ ನಮಗೆ ತಿಳಿಯುವುದು. ಇದೆಲ್ಲ ನಮಗೆ ಗೊತ್ತಿದ್ದರೂ ಕೂಡ, ಹೆಣ್ಣು ಕನ್ನಡಿಯೊಳಗಿನ ಗಂಟು ಅಂತ ನಮ್ಮ ಹಿರಿಯರು, ಬುದ್ದಿವಂತರು ಹೇಳಿದರೂ ಸಹ, ಹುಡುಗಿ ಎನ್ನುವ ಆ ಸೌಂದರ್ಯದ ಗಂಟೆಂದರೆ ಯಾರಾದರು ಮೂಗು ಮುರಿಯುತ್ತಾರೆಯೇ ?? ಇಲ್ಲವೇ ಇಲ್ಲ .. ಎಲ್ಲರಿಗೂ ಅದೇನೋ ಅಚ್ಚು-ಮೆಚ್ಚು, ಪ್ರೀತಿ ,ವ್ಯಾಮೋಹ . ಅದು ಯಾವುದೇ ಗಂಟಾಗಲಿ, ಅದು ಹೇಗೆಯೇ ಇರಲಿ ನಾವು ಅದನ್ನು ಕದಿಯಬೇಕೆಂದು ಒಮ್ಮೆಯಾದರು ಅಂದುಕೊಳ್ಳುತ್ತೇವೆ. ಅಪ್ಪಿ ತಪ್ಪಿ ಗಂಟೆನಾದರು ಸಿಕ್ಕರೆ ಆ ಗಂಟನ್ನು ಸದಾ ನಮ್ಮ ಬಗಲಲ್ಲೇ ಇಟ್ಟುಕೊಳ್ಳಬೇಕು ಅಂತ ಅಂದುಕೊಳ್ಳುತ್ತೇವೆ. ಗಂಟುಗಳು ಕೂಡ ಹಾಗೆಯೇ , ಕೆಲವು ಚಿಕ್ಕವಿರುತ್ತವೆ, ಕೆಲವು ದೊಡ್ಡವಿರುತ್ತವೆ, ಕೆಲವು ಒಳ್ಳೆಯ ಗಂಟುಗಳು, ಮತ್ತೆ ಕೆಲವು ಕೆಟ್ಟವು. ಎಲ್ಲಾ ಗಂಟುಗಳನ್ನು ನಾವು ಒಮ್ಮೆ ಬಿಚ್ಚಿ ನೋಡಿದಾಗಲೇ ನಮಗೆ ಅವುಗಳ ಸ್ವರೂಪ, ನಿಜವಾದ ಅರ್ಥ ತಿಳಿಯುವುದು. ಇದೇನಪ್ಪ ಇವನ್ನು ಗಂಟು ಗಂಟು ಎಂದು ತುಂಬಾ ಒಗಟಾಗಿ ಮಾತನಾಡುತ್ತಿದ್ದಾನೆ ಅಂದುಕೊಂಡಿರಾ ??? ನಿಜ ನಾನು ಈದಿನ ನಿಮಗೆ ಮತ್ತು ನಮಗೆ ಇರುವ ಗಂಟಿನ ನಂಟಿನ ಬಗ್ಗೆ, ನನ್ನ ಅನುಭವಗಳ ಪುಟ್ಟ ಅಬಿಪ್ರಾಯದ ಗಂಟನ್ನು ನಿಮ್ಮ ಮುಂದೆ ಸ್ಪುಟವಾಗಿ ಬಿಚ್ಚಿಡ ಬಯಸುತ್ತೇನೆ. ನಾ ಹೇಳುವುದು ನಿಮಗೆ ಯಾವುದೇ ಕಾರಣಕ್ಕೂ ಕಗ್ಗಂಟು ಆಗುವುದಿಲ್ಲ ಎಂದು ಭಾವಿಸುತ್ತೇನೆ.
'ಹೆಣ್ಣು', ನಮ್ಮ ಬ್ರಹ್ಮ ದೇವರು ಕಷ್ಟ ಪಟ್ಟು, ಬೆವರು ಸುರಿಸಿ ನಮಗಾಗಿ ಮಾಡಿಕೊಟ್ಟ ಸೌಂದರ್ಯದಗಂಟು. ಅದಕ್ಕಾಗಿಯೇ ಏನೋ ಹೆಣ್ಣಿನ ಮನಸ್ಸು ನಮಗೆ ಹರಿಯಲು ಸಾದ್ಯವೇ ಇಲ್ಲ, ಏಕೆಂದೆರೆ ಅವಳು ಸೌಂದರ್ಯದ ಗಂಟಲ್ಲವೆ. ಗಂಟಿನ ಒಳಗೆ ಏನಿದೆ ಎಂದು ಒಳಗೆ ನೋಡಿದಾಗಲೇ ನಮಗೆ ತಿಳಿಯುವುದು. ಇದೆಲ್ಲ ನಮಗೆ ಗೊತ್ತಿದ್ದರೂ ಕೂಡ, ಹೆಣ್ಣು ಕನ್ನಡಿಯೊಳಗಿನ ಗಂಟು ಅಂತ ನಮ್ಮ ಹಿರಿಯರು, ಬುದ್ದಿವಂತರು ಹೇಳಿದರೂ ಸಹ, ಹುಡುಗಿ ಎನ್ನುವ ಆ ಸೌಂದರ್ಯದ ಗಂಟೆಂದರೆ ಯಾರಾದರು ಮೂಗು ಮುರಿಯುತ್ತಾರೆಯೇ ?? ಇಲ್ಲವೇ ಇಲ್ಲ .. ಎಲ್ಲರಿಗೂ ಅದೇನೋ ಅಚ್ಚು-ಮೆಚ್ಚು, ಪ್ರೀತಿ ,ವ್ಯಾಮೋಹ . ಅದು ಯಾವುದೇ ಗಂಟಾಗಲಿ, ಅದು ಹೇಗೆಯೇ ಇರಲಿ ನಾವು ಅದನ್ನು ಕದಿಯಬೇಕೆಂದು ಒಮ್ಮೆಯಾದರು ಅಂದುಕೊಳ್ಳುತ್ತೇವೆ. ಅಪ್ಪಿ ತಪ್ಪಿ ಗಂಟೆನಾದರು ಸಿಕ್ಕರೆ ಆ ಗಂಟನ್ನು ಸದಾ ನಮ್ಮ ಬಗಲಲ್ಲೇ ಇಟ್ಟುಕೊಳ್ಳಬೇಕು ಅಂತ ಅಂದುಕೊಳ್ಳುತ್ತೇವೆ. ಗಂಟುಗಳು ಕೂಡ ಹಾಗೆಯೇ , ಕೆಲವು ಚಿಕ್ಕವಿರುತ್ತವೆ, ಕೆಲವು ದೊಡ್ಡವಿರುತ್ತವೆ, ಕೆಲವು ಒಳ್ಳೆಯ ಗಂಟುಗಳು, ಮತ್ತೆ ಕೆಲವು ಕೆಟ್ಟವು. ಎಲ್ಲಾ ಗಂಟುಗಳನ್ನು ನಾವು ಒಮ್ಮೆ ಬಿಚ್ಚಿ ನೋಡಿದಾಗಲೇ ನಮಗೆ ಅವುಗಳ ಸ್ವರೂಪ, ನಿಜವಾದ ಅರ್ಥ ತಿಳಿಯುವುದು. ಇದೇನಪ್ಪ ಇವನ್ನು ಗಂಟು ಗಂಟು ಎಂದು ತುಂಬಾ ಒಗಟಾಗಿ ಮಾತನಾಡುತ್ತಿದ್ದಾನೆ ಅಂದುಕೊಂಡಿರಾ ??? ನಿಜ ನಾನು ಈದಿನ ನಿಮಗೆ ಮತ್ತು ನಮಗೆ ಇರುವ ಗಂಟಿನ ನಂಟಿನ ಬಗ್ಗೆ, ನನ್ನ ಅನುಭವಗಳ ಪುಟ್ಟ ಅಬಿಪ್ರಾಯದ ಗಂಟನ್ನು ನಿಮ್ಮ ಮುಂದೆ ಸ್ಪುಟವಾಗಿ ಬಿಚ್ಚಿಡ ಬಯಸುತ್ತೇನೆ. ನಾ ಹೇಳುವುದು ನಿಮಗೆ ಯಾವುದೇ ಕಾರಣಕ್ಕೂ ಕಗ್ಗಂಟು ಆಗುವುದಿಲ್ಲ ಎಂದು ಭಾವಿಸುತ್ತೇನೆ.
ಕನ್ನಡ ನಿಘಂಟಿನಲ್ಲಿ ಅಥವಾ ರತ್ನಕೋಶ ದಲ್ಲಿ ನಮಗೆ ಗಂಟು ಪದಕ್ಕೆ ಸಿಗುವ ಅರ್ಥವೆಂದರೆ " ದಾರ ಮುಂತಾದುವುಗಳ ಕಟ್ಟು, ಕಂತೆ, ಗಡ್ಡೆ, ಐಶ್ವರ್ಯ, ನಂಟು, ಸಮಸ್ಯೆ". ಗಂಟು ನನ್ನ ದಿನಬಳಕೆಯ ಸರಕಿನಂತೆ ನನ್ನ ಭಾಷಾ ಸರಕಿನ ಒಂದು ಬಹುಮುಖ್ಯ ಶಬ್ದವಾಗಿದೆ. ಅದನ್ನು ನಾನು ಸ್ವಾಭಾವಿಕವಾಗಿ ಎತ್ತೇಚವಾಗಿ ಬಳಸುತ್ತೇನೆ, ಅದರಿಂದ ಅತಿಯಾದ ಹಾಸ್ಯ ಕೂಡ ಹೊರಹೊಮ್ಮುತ್ತದೆ. ಕೆಲವರು ಆ ಹಾಸ್ಯವನ್ನು ಮೆಚ್ಚುತ್ತಾರೆ, ಕೆಲವರು ಮುಖ ಗಂಟು ಹಾಕಿಕೊಳ್ಳುತ್ತಾರೆ.
ಕನ್ನಡ ನಿಘಂಟಿನಲ್ಲಿ ಗಂಟು ಹೇಗೆ ಶಾಶ್ವತ ಸ್ಥಾನ ಪಡೆದಿದೆಯೋ ಹಾಗೆಯೇ ಬ್ರಹ್ಮ ಗಂಟಾಕಿ ಕರೆತರುವ ಹೆಣ್ಣು ಕೂಡ ನಮ್ಮಲ್ಲಿ ಶಾಶ್ವತವಾಗಿದೆ ನೆಲೆಸುತ್ತಾಳೆ. ನೋಡಿ ಗಂಟು ಹೇಗೆ ನಮಗೆ ಅಂಟಿಕೊಳ್ಳುತ್ತದೆ. ಗಂಟಿನ ನಂಟನ್ನು ನಾವು ಬಿಡಬೇಕೆಂದರು ಅದು ನಮ್ಮನ್ನು ಬಿಡೊಲ್ಲ. ಈ ಗಂಟು ಪದದ ಅರ್ಥವು ಕೂಡ ಹಾಗೆಯೇ. ಹೇಗೆ ಗಂಟಾಕಿಕೊಂಡ ಹೆಣ್ಣು ಬದಲಾಗುತ್ತಾಳೋ, ಹಾಗೆಯೇ ಗಂಟು ಪದದ ಅರ್ಥವು ಸಂದರ್ಭಕ್ಕೆ ತಕ್ಕಹಾಗೆ ಬದಲಾಗುತ್ತಲೇ ಹೋಗುತ್ತದೆ. ಗಂಟಿನ ಎಲ್ಲ ಮಜಲುಗಳನ್ನು ನಾವು ಸರಿಯಾಗಿ ಬಳಸಿದಾಗ ಅದರ ಮಜವೇ ಬೇರೆ. ನಮಗೆ ಒಂದೊಂದು ಸಮಯದಲ್ಲಿ ಒಂದೊಂದು "ಗಂಟು" ಗಳು ಬೇಕೆನಿಸುತ್ತವೆ. ಒಂದು ವಯಸ್ಸಿನಲ್ಲಿ "ಸೌಂದರ್ಯದ ಗಂಟು", "ಅಪ್ಪ-ಅಮ್ಮನ ಗಂಟು", "ಸರ್ಕಾರದ ಗಂಟು", "ಜನರ ಗಂಟು", "ದೇಶದ ಗಂಟು", "ಹೆಂಡತಿಯ ಗಂಟು", "ಮಾವನ ಗಂಟು" ಹೀಗೆ ಒಂದಲ್ಲ ಒಂದು ರೀತಿಯಾಗಿ ಗಂಟಿನ ಮೇಲೆ ಗಂಟುಗಳ ಆಸೆ , ವ್ಯಾಮೋಹ ಕಾಲಘಟ್ಟದಲ್ಲಿ ಬೆಳೆಯುತ್ತಲೇ ಹೋಗುತ್ತದೆ. ಈ ಗಂಟನ್ನು ಪಡೆದು, ಅನುಭವಿಸುವ ಕ್ರಿಯೆಯನ್ನು ನಾವು ಹಾಡು ಭಾಷೆಯಲ್ಲಿ " ಗಂಟು ನುಂಗುವುದು , ಗಂಟು ಕದಿಯುವುದು, ಗಂಟು ತಿನ್ನುವುದು " ಎಂದು ಹೇಳುತ್ತೇವೆ.
ಎಲ್ಲರೂ ಕೂಡ ಹಾಗೆಯೇ ಒಮ್ಮೆ ಗಂಟಿನ ಮೇಲೆ ಕಣ್ಣಿಟ್ಟರೆ ಆ ಗಂಟನ್ನು ಹೊಡೆಯುವ ತನಕ ಸುಮ್ಮನಿರುವುದಿಲ್ಲ. ಆ ಗಂಟನ್ನು ಕದಿಯಲು ಹಗಲು ರಾತ್ರಿ ಕಷ್ಟ ಪಡುತ್ತಾರೆ. ಅದನ್ನು ಕದಿಯುವ ತನಕ ಅವರು ನಿದ್ದೆ ಕೂಡ ಮಾಡುವುದಿಲ್ಲ. ಅದಕ್ಕೆ ಉತ್ತಮ ಉದಾಹರಣೆ ಎಂದರೆ ನಮ್ಮ ನಾಯಕರುಗಳು. ಅವರು ತಾವು ದೇಶದ, ಸಾರ್ವಜನಿಕರ ಗಂಟನ್ನು ಹೊಡೆಯಲು ಬಳಸುವ ಕಾರ್ಯಕ್ಷೇತ್ರ ರಾಜಕೀಯ ಸಂತೆ. ಇಲ್ಲಿ ನೋಟಿನ ಕಂತೆಯದೇ ಮೇಲುಗೈ. ಆ ಕಂತೆಗಳ ಗಂಟುಗಳನ್ನು ಕದಿಯಲು ಅವರು ಯಾವ ಮಟ್ಟಕ್ಕೆ ಬೇಕಾದರೂ ಏರುತ್ತಾರೆ. ಆಮೇಲೆ ಯಾವ ಮಟ್ಟಕ್ಕಾದರೂ ಮರ್ಯಾದೆ ಎಲ್ಲಿತ್ತೋ ಅಲ್ಲೇ ಬಿಟ್ಟು ಇಳಿಯುತ್ತಾರೆ. ಯಾರು ಏನೇ ಅಂದರು, ಏನೇ ಜರಿದರು, ಗಂಟು ಕದ್ದೆ ಕದಿಯುತ್ತಾರೆ. ಭೂಮಿಯ ಅಂತರಾಳದ ಒಳಪದರದಲ್ಲಿ ಗಂಟು ಇದ್ದರು ಅದನ್ನು ಅಗೆದು-ಬಗೆದು ತಗೆದ ಅದೆಷ್ಟೋ ಉದಾಹರಣೆಗಳು ನಮ್ಮ ಮುಂದೆ ಈಗಲೂ ಇವೆ. ಅದು ನಮ್ಮ ಗಂಟಾದರೂ ನಾವು ಮಾತ್ರ ಬಾಯಿ ಬಿಡದೆ, ಮುಖ ಮಾತ್ರ ಗಂಟು ಹಾಕಿಕೊಂಡು ಕೂತುಬಿಡುತ್ತೇವೆ. ನಮ್ಮ ಜನ ಪ್ರತಿ"ನಿಧಿ"ಗಳು ಮಾತ್ರ ತಮ್ಮ ಕುಟುಂಬದವರಿಗೆ ಮಾತ್ರವಲ್ಲದೇ ಬೇರೆ ಬೇನಾಮಿ ಜನಕ್ಕೆಲ್ಲ "ನಿಧಿ ಗಂಟು"ಗಳನ್ನು ಸಂಗ್ರಹಿಸುತ್ತಾರೆ, ನಮ್ಮ ಮಟ್ಟಿಗೆ ಅದು ಗಂಟು ಕದಿಯುವುದು ಎಂದು ಅನ್ನಿಸುತ್ತದೆ ಅಷ್ಟೇ.
ಇದೇನಪ್ಪ ಬರಿ ಇವನು ರಾಜಕೀಯದವರನ್ನು ಮಾತ್ರ ಕಳ್ಳ ಅಂತ ಅನ್ನುತ್ತಾನೆ, ನಾವೇನೂ ತುಂಬಾ ಸಾಚಗಳ ??? ಹ ಹ ಹ, ನಾವೇನೂ ಸಾಚಗಳಲ್ಲ ನಾವು ಕೂಡ ಕಳ್ಳರೇ. ನಾವು ಕೂಡ ಒಂದು ವಯಸ್ಸಿನ್ನಲ್ಲಿ ಅಂದರೆ ಚಿಕ್ಕವರಿದ್ದಾಗ ಅಪ್ಪ-ಅಮ್ಮ ಮಾಡಿದ ಗಂಟನ್ನು ಕಳೆಯುತ್ತೇವೆ, ದೊಡ್ಡವರಾದ ಮೇಲೆ ಮೀಸೆಗಳು ಚಿಗುರುವ ಸಮಯದಲ್ಲಿ ಮೇಲೆ ಹೇಳಿದ ಹಾಗೆ ಸೌಂದರ್ಯದ ಗಂಟು ಅಂದರೆ ಹೆಣ್ಣನ್ನು ಕದಿಯ ಬಯಸುತ್ತೇವೆ. ಹೀಗೆ ಮೊನ್ನೆ ನನ್ನ ಸ್ನೇಹಿತ ಇದೆ ರೀತಿಯ ಒಂದು ಗಂಟು ಕದಿಯಲು ಹುಡುಗಿಯ ಬಳಿ ಹೋಗಿದ್ದಾಗ ನೆಡೆದ ಒಂದು ಸಣ್ಣ ಸುಂದರ ಘಟನೆಯ ಬಗ್ಗೆ ನಾನು ಹೇಳ ಬಯಸುತ್ತೇನೆ. ಎಷ್ಟೇ ದೈರ್ಯವಾಂತರಾದರೂ, ಎಷ್ಟು ಕೆರೆ ನೀರು ಕುಡಿದಿದ್ದರೂ ಸಹ, ಹುಡಿಗಿಯ ಬಳಿ ಹೋಗಿ ನಮ್ಮ "ಪ್ರೀತಿಯ ಗಂಟು" ಬಿಚ್ಚಿಡಲು ನಿಜವಾದ ಗಂಡೆದೆ ಬೇಕೇ ಬೇಕು. ಅದೇ ರೀತಿ ನಮ್ಮ ಹುಡುಗ ಹುಡುಗಿ ನೋಡಿದ, ನಿಜವಾಗಿಯೂ ಅವಳು ಸೌಂದರ್ಯದ ಗಂಟೆ ಆಗಿದ್ದಳು. ಆ ಗಂಟನ್ನು ಗಂಟು ಹಾಕಿಕೊಳ್ಳಲೇ ಬೇಕು ಎಂದು ನಿರ್ದರಿಸಿದ. ಒಮ್ಮೆ ಒಳ್ಳೆಯ ಸಮಯ ನೋಡಿ, ಒಬ್ಬಳೇ ಇದ್ದಾಗ ತನ್ನ ಪ್ರೀತಿಯ "ಭಾವನೆಗಳ ಗಂಟ"ನ್ನು ಅವನು ಅವಳ ಮುಂದೆ ಸಲೀಸಾಗಿ, ಸುಲಲಿತವಾಗಿ, ಯಾವುದೇ ಸಂಕೋಚವಿಲ್ಲದೇ, ತೊಡಕಿಲ್ಲದೆ ಬಿಚ್ಚಿಟ್ಟ. ಅವಳಿಗೂ ಕೂಡ ತುಂಬಾ ಆಶ್ಚರ್ಯವಾಯಿತು. "ಇದೇನೋ ಇಷ್ಟೊಂದು ಸರಳವಾಗಿ, ನೇರವಾಗಿ ಮನ ಮುಟ್ಟುವಂತೆ ಹೇಳಿಬಿಟ್ಟೆ. ನನಗೆ ನೀನು ನಿನ್ನ ಭಾವನೆಗಳ ಗಂಟನ್ನು ಬಿಚ್ಚಿಟ್ಟ ಪರಿ ತುಂಬಾ ಇಷ್ಟ ಆಯಿತು, ಹೇಗೋ ಇಷ್ಟು ಸಲೀಸಾಗಿ ಹೇಳಿದೆ ನನಗೆ ಇದನ್ನೆಲ್ಲ " ಅಂದಾಗ ಅವನು , "ಅಯ್ಯೋ ಅದರಲ್ಲಿ ಏನಿದೆ ಚಿನ್ನ , ಅದಕ್ಕೆಲ್ಲ ಬಿಚ್ಚಿಡುವ ಅನುಭವ ಬೇಕಮ್ಮ , ನನಗೆ ಈಗಾಗಲೇ ನಾಲ್ಕು ಹುಡುಗಿಯರ ಮುಂದೆ "ಪ್ರೀತಿಯ ಗಂಟು" ಬಿಚ್ಚಿದ ಅನುಭವವಿದೆ ಎಂದು ಹೇಳಿದ. ಆಕೆ ಆಗ ಆ ಕ್ಷಣಕ್ಕೆ "ಮುಖ ಗಂಟು" ಹಾಕಿಕೊಂಡದ್ದಂತೂ ನಿಜ.
ಪ್ರೀತಿಸಿದ ಹುಡುಗ ಅಪ್ಪ-ಅಮ್ಮ ಮಾಡಿದ ಗಂಟನ್ನು ಕಳೆದು ಹುಡುಗಿಯನ್ನು ಗಂಟಾಕಿ ಕೊಂಡರೆ, ಪ್ರೀತಿಸದೇ ಇರುವ ಹುಡುಗ ಗಂಟು ಉಳಿಸಿಕೊಂಡು ಮನೆಯವರ ಸಮ್ಮುಖದಲ್ಲಿ ತನಗೆ ನೀವೇ ಯಾರನ್ನಾದರೂ ಗಂಟು ಹಾಕಿ ಎಂದು ಗೋಗರೆಯುತ್ತಾನೆ. ಅದಕ್ಕೆ ಅವರು ತಮ್ಮ ಪ್ರೀತಿಯ ಮತ್ತು ಐಶ್ವರ್ಯದ ಗಂಟನ್ನು ತಮ್ಮ ನೆಂಟರ ಮುಂದೆ ಬಿಚ್ಚಿಡುತ್ತಾರೆ. ಆ ಗಂಟು ನೋಡಿದ ನೆಂಟನು ಮಗಳನ್ನು ಹುಡುಗನಿಗೆ ಗಂಟಾಕಿ, ತಾನು ಅಂಟಿಕೊಳ್ಳುವ ನೆಂಟನಾಗುತ್ತಾನೆ. ಅಳಿಯನೇನು ಕಡಿಮೆ ಅಲ್ಲ ಹೆಂಡತಿ ತರುವ ಗಂಟು, ಆಮೇಲೆ ಅವನಿಗೆ ಸಿಗುವ ಮಾವನ ಗಂಟಿನ ಮೇಲೆಯೇ ಕಣ್ಣಿಟ್ಟಿರುತ್ತಾನೆ. ಅದು ಸಿಗಲಿಲ್ಲ ಅಂದರೆ ಮುಖ ಗಂಟು ಹಾಕಿ ಕೊರಗುತ್ತಾನೆ. ಒಂದು ರೀತಿಯಲ್ಲಿ ಇಲ್ಲಿ ಎಲ್ಲರೂ ಗಂಟು ಕಳ್ಳರೇ ಮಾವ ಹೆಣ್ಣುಕೊಟ್ಟು INDIRECT ಆಗಿ ಅಳಿಯನ ಗಂಟು ಕಳ್ಳ, ವರದಕ್ಷಿಣೆ ಹಾಳು-ಮೂಳು ಇಸ್ಕೊಂಡು ಮಧುವೆ ಆಗುವ ಅಳಿಯ ಕೂಡ ಮಾವನ ಗಂಟು ಕಳ್ಳ .
ಹೀಗೆ ಒಬ್ಬಬ್ಬರು ಒಂದೊಂದು ರೀತಿಯಲ್ಲಿ ಗಂಟು ಕಳ್ಳರು ಮತ್ತು ಗಂಟು ಮಾಲೀಕರು. ಕವಿಗಳಿಗೆ ಗಂಟು ಎಂದರೆ ಅವರ ಭಾವನೆಗಳು,ಕಲ್ಪನೆಗಳು ಮತ್ತು ಕನಸುಗಳು. ವಾಗ್ಮಿಗಳಿಗೆ ಗಂಟು ಎಂದರೆ ಮಾತುಗಳು. ಕೇಳುವವರು ಸಿಕ್ಕರೆ ಸಾಕು ಹಾಗೆ ಇಂದು-ಮುಂದು ಕೇಳದೇ, ಒಡಕು ಸ್ವಾರೆ, ತೆರೆದ ಪುಸ್ತಕದಂತೆ, ಆ ಭಾರಿ ಗಂಟುಗಳ ಮೊನಚಾದ ಬಾಣಗಳನ್ನು ನಮ್ಮ ಮೇಲೆ ಪ್ರಯೋಗಿಸಿ, ನಮ್ಮನ್ನು ಕೆಲವೊಮ್ಮೆ ಸಂತೋಷಗೊಳಿಸಿ, ಮತ್ತೊಮ್ಮೆ ಪೇಚಿಗೂ ಸಿಗಿಸುತ್ತಾರೆ. ಅದೇ ರೀತಿ ಒಬ್ಬ ಕವಿ ಹೃದಯಿ ಒಮ್ಮೆ ಒಂದು ಕವಿತೆ ಬರೆದು ತನ್ನ ಹೆಂಡತಿ ಬಳಿ ಹೋಗಿ ಅದನ್ನು ಲಯಬದ್ದವಾಗಿ ಬಿಚ್ಚಿಟ್ಟನಂತೆ, ಆಗ ಅವಳಿಗೆ ಅರ್ಥವಾಗದೆ , ಅದರ ಅರ್ಥ ಕಗ್ಗಂಟಾಗಿ , ಮುಖ ಗಂಟು ಹಾಕಿಕೊಂಡಳಂತೆ. ಕವಿಗೆ ಕವನವನ್ನು ಯಾರಾದರೂ ತಿರಸ್ಕರಿಸಿದರೆ ಕವಿಯನ್ನೇ ತಿರಸ್ಕರಿಸಿದಂತೆ ಎಂದು ಭಾವಿಸುತ್ತಾನೆ. ಅದೇ ರೀತಿ ಈ ಕವಿಗೂ ತುಂಬಾ ಬೇಜಾರಾಗಿ ಬೇರೆ ದಾರಿಯಿಲ್ಲದೇ ಅದೇ ದಾರಿಯ ಕೊನೆಯ ಮನೆಯ ಸಾವಿತ್ರಯನ್ನು ಯಾರಿಗೂ ಗೊತ್ತಿಲ್ಲದೇ ಗಂಟು ಹಾಕಿಕೊಂಡನಂತೆ.
ಈ "ಗಂಟು" ಸ್ನೇಹಿತರೆ ನಮ್ಮ ಭಾಷೆಯ ಅತ್ಯಂತ ಅದ್ಬುತ , ಹಾಸ್ಯಮಾಯವಾದ ಅರ್ಥ ಕೊಡುವ ಒಂದು ಶಬ್ದವಾಗಿದೆ. ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಇದನ್ನು ಉಪಯೋಗಿಸುತ್ತೇವೆ. ಹಳ್ಳಿಗಳಲ್ಲೋಂತೂ ಇದರ ಪ್ರಯೋಗ ಮತ್ತು ಭಾವ ವಿಬಿನ್ನವಾಗಿರುತ್ತೆ. ಹಳ್ಳಿಗರು ಅನ್ಯಾಯವಾದಾಗ ಇದನ್ನು ಇನ್ನೊಬ್ಬರನ್ನು ನಿಂದಿಸಲು ಸುಂದರವಾಗಿ ಉಪಯೋಗಿಸುತ್ತಾರೆ. " ಅಯ್ಯೋ ನಿನ್ ಮನೆ ಕಾಯ್ವಾಗ್ ಹೋಗಾ, ನನ್ನ ಗಂಟು ತಿಂದ ನೀ ಮುಂಡಮೋಸಿ ಹೋಗಾ " "ಬೇರೆ ಜನದ್ ಗಂಟು ತಿಂದ ನೀ ಉದ್ದಾರ ಆಗ್ತೀಯ ಎನ್ಲಾ ??? " ಹೀಗೆ ಇನ್ನೂ ಅನೇಕೆ ಅದ್ಬುತ ಬೈಗುಳಗಳಿವೆ. ನೀವ್ ಹಳ್ಳಿಗಳಲ್ಲಿ ನಿಮ್ಮ ಕಿವಿಗಳಲ್ಲೇ ಅವುಗಳನ್ನು ಖುದ್ದಾಗಿ ಕೇಳಿದ್ರೆ ತುಂಬಾ ಮಜ ಬರುತ್ತೆ. ನಾ ಏನೇ ಹೇಳಿದ್ರು ಅದು ಅಷ್ಟೊಂದು ಎಫೆಕ್ಟ್ ಕೊಡೋಲ್ಲ ಬಿಡಿ. ಹಳ್ಳಿಯಲ್ಲಿ ಗಂಟುಗಳು ಮತ್ತೊಂದು ಬಗೆಯಲ್ಲೂ ಹಿತ ಕೊಡುತ್ತೆ ನೋಡಿ. ಬಿಸಿಲಲ್ಲಿ ತನಗಾಗಿ ದುಡಿಯುವ ತನ್ನ ಗಂಡನಿಗೆ ಅವನ ಪ್ರೀತಿಯ ಹೆಂಡತಿ ಹೊಲದ ಬದುವಿನ ಮೇಲೆ ಬಳುಕುತ್ತಾ "ಬುತ್ತಿ ಗಂಟ"ನ್ನು ತರುತ್ತಾಳೆ. ಆಕೆ ಬರುವುದನ್ನು ನೋಡಿದ ತಕ್ಷಣ ಆ ಬಳಲಿದ ರೈತ ತನ್ನೆಲ್ಲ ಬವಣೆಗಳನ್ನು ಮರೆತು, ಗಮ್ ಎನ್ನುವ ಬುತ್ತಿ ಗಂಟು ಬಿಚ್ಚಿ ಅದರ ಸವಿ ಸವಿಯುತ್ತಾನೆ. ಹೀಗೆ ಗಂಟಿಗೂ ಬವಣೆಗಳನ್ನು ಮರೆಸುವ ಶಕ್ತಿ ಇದೆ ನೋಡಿ. ನಮಗೆ ಆ ಹಳ್ಳಿಗನ ಆ ಸಹಜ ಸುಖ ಅಥವಾ ಆ ಪುಣ್ಯ ಇಲ್ಲವೇ ಇಲ್ಲ ಅಲ್ಲವೇ ??? ಏಕೆಂದರೆ ನಮ್ಮದು ಜಾಮ್ ರಸ್ತೆಗಳು, ಲಂಚ್ ಬಾಕ್ಸ್ಗಳು ಮೇಲಾಗಿ ಸೆಲ್ಫ್ ಸರ್ವೀಸ್ ....
ನಮಗೆಲ್ಲ ಗೊತ್ತಿರೋ ಹಾಗೆ ಇತ್ತೀಚಿಗೆ ಒಂದು ಭಾರಿ ಗಂಟುಗಳ್ಳರ ವಿರುದ್ದ ಅಂಧೊಲನವೂ ನಮ್ಮ ದೇಶದಲ್ಲಿ ಆಯಿತು. ಅದರಲ್ಲಿ ನಮ್ಮ ಅಣ್ಣ ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಂಡರು. ಬಹಳೋಶ್ಟು ಆದಿಕಾರಿಗಳು, ರಾಜಕಾರಿಣಿಗಳು ಇನ್ನೂ ಅನೇಕರು, ಜನರ ಹಾಗು ದೇಶದ ಗಂಟು ತಿಂದು ನೀರು ಕುಡಿಯುತ್ತಿದ್ದಾರೆಂದು, ಪಾಪ ನಮ್ಮ ಅಣ್ಣ ಅವರು ತಮ್ಮ ಅನ್ನ-ನೀರು ಬಿಟ್ಟು ಸ್ವಲ್ಪ ದಿನ ಉಪವಾಸ ಮಾಡಿಯೂ ಬಿಟ್ಟರು. ಆದರೆ ಗಂಟುಗಳ್ಳರೂ ಮಾತ್ರ ಇನ್ನೂ ಗಂಟು ಕದಿಯುತ್ತಲೇ ಇದ್ದಾರೆ, ಗಂಟು ನುಂಗುತ್ತಲೇ ಇದ್ದಾರೆ. ಪಾಪ ಅಣ್ಣ ಇದನ್ನೆಲ್ಲ ನಿಲ್ಲಿಸಲು ಇನ್ನೂ ಏನೇನು ಮಾಡಬೇಕೋ ಯಾರಿಗೂ ಗೊತ್ತಿಲ್ಲ. ಒಂದಲ್ಲ ಒಂದು ರೀತಿಯಲ್ಲಿ ನಾವೆಲ್ಲರೂ ಗಂಟು ಕಳ್ಳರೆ. ಚಿಕ್ಕವರಿದ್ದಾಗ ಅಪ್ಪ ಅಮ್ಮನ ಗಂಟು, ದೊಡ್ಡವರಾದಾಗ ದೇಶದ ಗಂಟು, ಇನ್ನೋಬರ , ಮತ್ತೊಬ್ಬರ ಗಂಟುಗಳನ್ನು ನಾವು ಕದಿಯುತ್ತಲೇ, ನುಂಗುತ್ತಲೇ ಇರುತ್ತೇವೆ. ನಮಗೆ ಅಲ್ಲದೇ ನಮ್ಮ ಮಕ್ಕಳು, ಮೊಮ್ಮಕ್ಕಳಿಗೂ ಗಂಟು ಮಾಡೋ ಮುಂದಾಲೋಚನೆ ಮಾಡುತ್ತೇವೆ. ಅದೇ ರೀತಿ ಗಂಟು ಗುಳಮ್ ಮಾಡಲು ಶತಾಯಾಗತ ಪ್ರಯತ್ನವನ್ನು ಮಾಡುತ್ತೇವೆ. ನಾವು ಮಾಡದಿದ್ದರೂ ನಮ್ಮ ಸಮಾಜ ನಮ್ಮ ವಾತಾವರಣ ನಮ್ಮನ್ನು ಗಂಟುಗಳ್ಳಾರನ್ನಾಗಿ ಮಾಡುತ್ತದೆ. ಹೀಗೆ ಈ ಹಾಳಾದ ಗಂಟು ನಾವು ಬಿಡಲು ಇಚ್ಛಿಸಿದರು ಅದು ಮಾತ್ರ ನಮ್ಮನ್ನು ಬಿಡದೆ ನಮಗೆ ಅಂಟಿಕೊಂಡು ಬಿಡಿಸಲಾಗ ಕಗಂಟಾಗಿದೆ.
ಒಟ್ಟಿನಲ್ಲಿ ಗಂಟು ಯಾವುದೇ ಆಗಿರಲಿ, ಅದು ಹೇಗೆ ಇರಲಿ, ಭಾರ ಕಡಿಮೆ ಇದ್ದರೆ, ಸುಂದರವಾಗಿದ್ದರೆ ನಮಗೆ ಅದನ್ನು ಸಂಪಾದಿಸಲು, ಕದಿಯಲು ಸುಲಭವಾಗುತ್ತೆ. ಸೌಂದರ್ಯದ ಗಂಟು ಕದಿಯಬೇಕಾದಗ ಮಾತ್ರ ಗಾತ್ರದ ಬಗ್ಗೆ ಗಮನ ಕೊಡಿ. ಒಳ್ಳೆಯ ಗಂಟೆ ಬ್ರಹ್ಮ-ಗಂಟಾಗಲಿ. ನಮ್ಮ ಮುಂದಿನ ಪೀಳಿಗೆಗೆ ನಾವು ಒಳ್ಳೆಯ, ಸುಂದರವಾದ, ಸಾತ್ವಿಕವಾದ, ಗಂಟನ್ನು ಬಿಟ್ಟು ಹೋಗುವ . ಆಮೇಲೆ ಅವರಿಗೆ ಬೇಕಾದ ಗಂಟುಗಳನ್ನು ಅವರು ಆರಿಸಿಕೊಳ್ಳುತ್ತಾರೆ. ಮೊದಲು ನಾವು ಒಳ್ಳೆಯ ಗಂಟು ಕದಿಯಲು ಪ್ರಯತ್ನ ಪಡೋಣ.
ಇತೀಚೆಗೆ ನಾನು ಕೂಡ ಬೇಜಾನ್ ಗಂಟುಗಳನ್ನು ತಿಂದೆ , ನುಂಗಿದೆ . ಆದ್ರೆ ಯಾವ ಗಂಟು ನುಂಗಿದೆ, ಯಾರ ಗಂಟು ನುಂಗಿದೆ ಅನ್ನೋದು ಸಕತ್ ಆಗಿ ಇದೆ. ಗಂಟು ತಿಂದಾಗ ಗಂಟು ಕಳೆದು ಕೊಂಡವರು ಸಾಮಾನ್ಯವಾಗಿ ಬೇಜಾರಾಗುತ್ತಾರೆ , ಇಡೀ ಶಾಪವನ್ನೇ ಕೊಡತ್ತಾರೆ. ಆದರೆ ನಾನು ಗಂಟು ನುಂಗಿದಾಗ ಮಾತ್ರ ಎಲ್ಲರೂ ತುಂಬಾ ಖುಷಿ ಪಟ್ಟರು, ಷಹಬ್ಬಾಷ್ ಗಿರಿ ಕೂಡ ಕೊಟ್ರೂ. ಅಂತಹ ಅದೇನು ಆ ಗಂಟು ಅಂತೀರಾ ??? " ನಮ್ಮ ಅತ್ತಿಗೆ ಕಲಿಯುವ ಸಂದರ್ಭದಲ್ಲಿ ಮಾಡಿದ ರಾಗಿ ಮುದ್ದೆಯಲ್ಲಿ ಸಿಕ್ಕ ಹೇರಳವಾದ, ಹರಳು-ಹರಳಾದ, ದುಂಡು-ದುಂಡನೆ ಮುದ್ದೆಯ ಗಂಟುಗಳು "
ಲಂಚಕೋರರು "ದೇಶದ ಗಂಟು"
ನುಂಗಿದ್ದಕ್ಕೆ
ಸಿಡಿಮಿಡಿಗೊಂಡರು "ಅಣ್ಣ"
ನಮ್ಮತ್ತಿಗೆಯ "ಮುದ್ದೆಯ ಗಂಟು"
ನುಂಗಿದ್ದಕ್ಕೆ
ಸಂತೋಷಗೊಂಡನು
ನನ್ನ ಸ್ವಂತ "ಅಣ್ಣ"
ನಿಮಗಾಗಿ
ನಿರಂಜನ್