ಬಂದ್ ಬೆನ್ನು ಹತ್ತಿ.......
ಸ್ನೇಹಿತರೆ , ದೇಶದ ಅರ್ಥ ವ್ಯವಸ್ಥೆಯ ಬಗ್ಗೆ ಮಾತನಾಡುವ , ದೇಶದ ಏಳಿಗೆಯ ಬಗ್ಗೆ ಕಾಳಜಿ ತೋರಿಸುವ , ದೇಶದ ರಾಜಕೀಯ ವ್ಯವಸ್ತೆಯನ್ನೇ ಪ್ರಶ್ನಿಸುವ ನಾವು , ಮೊನ್ನೆ ನಡೆದ ಬಂದ್ ಬಗ್ಗೆ ಸ್ವಲ್ವುವೂ ಯೋಚಿಸಲಿಲ್ಲ , ಒಂದು ದಿನ ರಜ ಸಿಕ್ಕಿತಲ್ಲ ಎಂದು ಖುಷಿಯಾದೆವೇ ಹೊರತು ಬೇರೆ ಏನನ್ನು ಯೋಚಿಸಲೇ ಇಲ್ಲ. ನಿಜವಾಗಿಯೂ ನಮಗೆ ಆ ಬಂದ್ ಬೇಕಿತ್ತಾ ??? ಯಾರೋ ದೆಹಲಿಯಲ್ಲಿ ತಮ್ಮ ರಾಜಕೀಯ ಸ್ವಾರ್ಥಕ್ಕೆ ಬಂದ್ ಕರೆ ನೀಡಿದರೆ ನಾವು ಅದಕ್ಕೆ ಸ್ಪಂದಿಸಬೇಕಿತ್ತಾ ?? ಆ ದಿನ ಬಂದ್ ಮಾಡಿದ್ದಕ್ಕೆ ನಮಗೆ ಸಿಕ್ಕಿದ್ದಾದ್ರು ಏನು ??? ಕೇಂದ್ರ ಸರ್ಕಾರವೇನು ತಾನು ಮೊದಲು ತೆಗೆದುಕೊಂಡ ನಿರ್ಧಾರಗಳನ್ನು ವಾಪಾಸ್ ಪಡಿಯಿತೆ ??? ನಾವು ಇಂಥಹ ಬಂದ್ ಗಳಿಗೆ ನಿಜವಾಗಿಯೂ ಪ್ರೋತ್ಸಾಹಿಸಬೇಕೆ ???
ನಿಜ , ಸರ್ಕಾರವು ಹೊಸದಾಗಿ ತರುವ ಯೋಜನಗಳನ್ನು ಮತ್ತು ಸಾಮಾನ್ಯ ಜನರ ಜೀವನದ ಮೇಲೆ ಪರಿಣಾಮ ಬೀರುವ ಹೊಸ ಕಾನೂನುಗಳನ್ನು ಜಾರಿಗೊಳಿಸಿದಾಗ , ಅವುಗಳನ್ನು ಪ್ರಶ್ನಿಸುವ , ಆ ಕಾನೂನುಗಳ ಸಾಧಕ ಬಾಧಕಗಳ ಚರ್ಚಿಸುವ , ತಮ್ಮ ಭಾವನೆಗಳನ್ನು ವ್ಯಕ್ತಪಡಿಸುವ ಹಕ್ಕು ಪ್ರತಿಯೊಬ್ಬ ನಾಗರೀಕನಿಗೂ ಇದೆ . ಆದರೆ ಆ ಹಕ್ಕನ್ನು ನಾವು ಹೇಗೆ ಚಲಾಯಿಸಬೇಕು , ಹೇಗೆ ಅದನ್ನು ಸರ್ಕಾರಕ್ಕೆ ತಿಳಿಸಬೇಕು ಎಂಬುದಕ್ಕೆ ಅದರದೇ ಆದ ವಿಧಿವಿಧಾನಗಳಿವೆ. ಆದರೆ ಈ ರೀತಿಯಾಗಿ ಇಡೀ ದೇಶವನ್ನೇ ಬಂದ್ ಮಾಡುವುದರಿಂದ , ಸಾಮನ್ಯ ಜನಜೀವನವನ್ನು ಅಸ್ತವ್ಯಸ್ತಗೊಳಿಸುವುದರಿಂದ , ತನ್ನ ಪಾಡಿಗೆ ತಾನು ನಿಂತ ಬಸ್ಸುಗಳಿಗೆ ಬೆಂಕಿ ಹಚ್ಚುವುದರಿಂದ ನಾವೇನಾದರೂ ಸಾದಿಸಬಹುದೇ ?? ಮೊನ್ನೆ ನಾವು ಮಾಡಿದ ಬಂದ್ ಇಂದ ನಮ್ಮ ದೇಶದ ಅರ್ಥ ವ್ಯವಸ್ತೆಗೆ ದಕ್ಕೆ ಮತ್ತು ನಷ್ಟ ಆಗಿದೆಯೇ ಹೊರತು ಉಪಯೋಗ ವಾಗಿಲ್ಲ , 12,500 ಕೋಟಿ ನಷ್ಟವನ್ನು ನಾವು ಆ ದಿನ ನಮ್ಮ ದೇಶಕ್ಕೆ ನಾವು ಮಾಡಿದ್ದೇವೆ. ನಾವು ಮಾಡಿದ ನಷ್ಟವನ್ನು ನಾವಲ್ಲದೆ ಬೇರೆ ಯಾರು ಭರಿಸಬೇಕು ?? ಆ ನಷ್ಟದ ಪರಿಣಾಮ ನಮ್ಮ ಮೇಲಲ್ಲದೆ ಪಾಕಿಸ್ತಾನಕ್ಕೆ ಬೀಳುತ್ತದೆಯೇ ?? . ಬರುವ ದಿನಗಳಲ್ಲಿ ಸರ್ಕಾರ ಅದರ ಹೊರೆಯನ್ನು ನಮ್ಮ ಮೇಲೆಯೇ ಹೊರಿಸುತ್ತದೆ. ಅದಕ್ಕೆ ತಕ್ಕೆ ಬೆಲೆಯನ್ನು ನಾವೇ ಭರಿಸಬೇಕು. ಬಂದ್ ಮಾಡಿದಾಗ ಬಿಸಿ ತಟ್ಟಿದ್ದು ಸಾಮಾನ್ಯ ಜನರಿಗೆ , ಆ ನಷ್ಟದ ಪರಿಣಾಮವು ಇನ್ನು ಮುಂದೆ ಬೀಳುವುದು ನಮ್ಮ ಮೇಲೆಯೇ.
ಇದನ್ನೆಲ್ಲಾ ಯೋಚಿಸದ ನಾವು ಬಂದ್ ಎಂದಾಕ್ಷಣ ಸ್ವಲ್ಪುವೂ ಯೋಚಿಸದೆ , ಒಂದು ದಿನ ರಾಜ ಸಿಗುತ್ತಲ್ಲ ಅಂತ ಮಾತ್ರ ಯೋಚಿಸುತ್ತೇವೆ. ಆ ದಿನ ಮನೆಯಲ್ಲಿ ಇದ್ದು ಸಂಪೂರ್ಣವಾಗಿ ಮಲಗಿ , ರೆಸ್ಟ್ ತಗಬೇಕು ಅಂತ ಯೋಚಿಸುತ್ತೇವೆ ಹೊರತು ಅದರ ಪರಿಣಾಮದ ಬೆಗ್ಗೆ ಸ್ವಲ್ಪವು ಯೋಚಿಸಲಿಲ್ಲ. ಆ ದಿನ ನಾವು ಮಾಡಿದ್ದು ಅದೇ . ಸಣ್ಣ ಸಣ್ಣ ಅಂಗಡಿ , ಹೋಟೆಲು , ತರಕಾರಿ ಅಂಗಡಿಗಳನ್ನು , ಚಿಲ್ಲರೆ ವ್ಯಾಪಾರಿಗಳ ವ್ಯಾಪಾರವನ್ನು ನಾವು ಒತ್ತಾಯಮಾಡಿ, ಗಲಾಟೆ ಮಾಡಿ ಮುಚ್ಚಿಸಿ , ಅವರ ದಿನದ ದುಡಿಮೆಗೆ ಕುಂದುಂಟು ಮಾಡಿದೇವೆ ಹೊರತು ಇದರಿಂದ ಸರ್ಕಾರಕ್ಕೆ ಯಾವುದೇ ಪರಿಣಾಮ ಬೀರಲಿಲ್ಲ. ಅಲ್ಲಿ ಆ ದಿನ ಒಣಗಿಸಿಕೊಂಡಿದ್ದು ನಾವೇ ಹೊರತು ಸರ್ಕಾರ ಕಳೆದು ಕೊಂಡಿದ್ದು ಏನು ಇಲ್ಲ . ಈ ಎಲ್ಲ ಅಂಶಗಳನ್ನು ಗಮನಿಸಿ ಕೇರಳ ಉಚ್ಚ ನ್ಯಾಯಾಲಯ ಅನೇಕ ಭಾರಿ ಈ ಬಂದ್ ಗಳ ವಿರುದ್ದ ತೀರ್ಪು ನೀಡಿ , ಬಂದ್ ಮಾಡುವುದು ಕಾನೂನು ಬಾಹಿರ , ಬಂದ್ ಕರೆ ನೀಡುವವರ ವಿರುದ್ದ ಶಿಸ್ತು ಕ್ರಮವನ್ನು ಜರುಗಿಸಬಹುದೆಂದು ಮಹತ್ವದ ತೀರ್ಪು ನೀಡಿತ್ತು. ಇದನ್ನೇ ನಮ್ಮ ದೇಶದ ಸರ್ವೋಚ್ಚ್ ನ್ಯಾಯಾಲಯವೂ ಸಮರ್ಥಿಸಿಕೊಂಡಿತ್ತು. ಮಹಾರಾಷ್ಟ್ರದಲ್ಲಿ BJP ಮತ್ತು ಶಿವಸೇನೆಗೆ ಬಂದ್ ಮಾಡಿಸಿದಕ್ಕೆ ತಲಾ 20 ಲಕ್ಷ ದಂಡವನ್ನೂ ವಿದಿಸಿತ್ತು. ಶಾಂತಿಯುತ ಪ್ರತಿಭಟನೆ ನಮ್ಮ ಹಕ್ಕು, ಇದರಲ್ಲಿಯೇ ನಾವು ನಮ್ಮ ನಿಲುವುಗಳನ್ನು ವ್ಯಕ್ತಪಡಿಸುವುದು ಸರಿಯಾದ ಮಾರ್ಗ. ಹಾಗಾಗಿ ನಮ್ಮ ದೇಶದ ಸಮಸ್ಯೆಗಳಿಗೆ ಬಂದ್ ಗಳು ಯಾವಾಗಲು ಪರಿಹಾರ ನೀಡವು. ಚುನಾವಣೆಯ ಸಂದರ್ಭದಲ್ಲಿ ನಾವು ಸ್ವಲ್ಪ ಯೋಚಿಸಿ ಮತ ಚಲಾಯಿಸಿದರೆ ಈ ಎಲ್ಲ ಸಮಸ್ಯೆಗಳಿಗೆ ಸ್ವಲ್ಪ ಮಟ್ಟಿನ ಪರಿಹಾರ ಸಿಕ್ಕರೂ ಸಿಗಬಹುದು ಆದರೆ ಈ ಬಂದ್ ಗಳಿಂದ ನಮಗೆ ನಮ್ಮ ದೇಶಕ್ಕೆ ನಷ್ಟವೇ ಹೊರತು ಮತ್ತ್ಯಾರಿಗೂ ಅಲ್ಲ.
ನಿಮಗಾಗಿ
ನಿರಂಜನ್