ಬಿನ್ನಹ
ಬೆಳೆಯುವ ಮುನ್ನವೇ ಅಳಿಯುವ ಸೂಚನೆ
ಕಲೆಯುವ ಮೊದಲೇ ಸರಿಯುವೆ ಎನ್ನುವೆ
ಬೇಡವೆಂದರೂ ಬೆನ್ನುಹತ್ತಿ ನೀ ಬರುವೆನೆನ್ನುವೆ
ಬೇಕೆಂದಾಗ ಬೆನ್ನುಮಾಡಿ ನೀ ಹೋಗುವೆನೆನ್ನುವೆ
ಅರಿಯದೆ ನನ್ನ ನೋವು , ತಿಳಿಯದೆ ಒಲವು
ಸರಿಯದಿರು ನನ್ನಿಂದ ,ಕೂಡಿರಲಿಚ್ಚೆಯು ದಿನವು
ಕಟ್ಟಿರುವ ಕನಸು ಇನ್ನು ಹಸಿಯಾಗಿಯೇ ಇದೆ
ನೆಟ್ಟಿರುವ ಪ್ರೀತಿಯ ಬಳ್ಳಿ ಇನ್ನು ಹಸಿರಾಗಬೇಕಿದೆ
ಯಾಕಿಷ್ಟು ಅವಸರ , ಯಾಕಿಷ್ಟು ಕಾತರ , ಯೋಚಿಸು
ನನ್ನ ಜೊತೆಯಲಿರಲು ಸಹಕರಿಸು , ಅಂಗೀಕರಿಸು , ಪ್ರೀತಿಸು ........
--- ನಿರಂಜನ್