ಮತ್ತೊಮ್ಮೆ
ನಸು ನಗುವೆಯಾ ಮತ್ತೊಮ್ಮೆ ನನ್ನ ಪ್ರೀತಿಯ ಒಲವೆ
ಚಿಮ್ಮಲಿ ಮಗದೊಮ್ಮೆ ನನ್ನ ಪ್ರೀತಿಯ ಚಿಲುಮೆ
ಮೊದಲ ಆ ನೋಟಗಳು ಪುಟಿದೇಳಿಸುತ್ತಿವೆ
ಮಲಗಿದ್ದ ಮೋಹಕ ಆ ಕನಸುಗಳನ್ನು ,
ಮೊದಲ ಆ ಪಿಸು ಮಾತುಗಳು ಕೆಣಕುತಿವೆ
ಮಂಕಾಗಿ ಬಸವಳೆದ ಆ ಭಾವನೆಗಳನ್ನು ,
ಕಂಗಳಲಿ ಕಂಡ, ಕೈ ಹಿಡಿದು ಕಟ್ಟಿದ ಕನಸುಗಳ
ಗೋಪುರ ಕಾಣೆಯಾಗುವ ಮೊದಲೇ
ನಸು ನಗುವೆಯಾ ಮತ್ತೊಮ್ಮೆ ನನ್ನ ಪ್ರೀತಿಯ ಒಲವೆ
ಚಿಮ್ಮಲಿ ಮಗದೊಮ್ಮೆ ನನ್ನ ಪ್ರೀತಿಯ ಚಿಲುಮೆ
ನಿಮಗಾಗಿ
ನಿರಂಜನ್