ನಾ ನೊಂದೆ.....
ನಗುವಿನಲಿ ನಲಿವಿದೆ ,ನಯನದಲಿ ನಾಚಿಕೆಯಿದೆ
ನೋಡಿ ಸುಮ್ಮನಿರದೆ, ನಯವಾಗಿ ನಾ ನೊಂದೆ..
ಬೀಸುವ ತಂಗಾಳಿಯು ನಿನ್ನ ಬಳಸಿ ಬಳಿ ಬಂದು
ಸ್ಪರ್ಶದಿ ಬಳುಕಿದ ನಿನ್ನ ನಡುವ ವರ್ಣಿಸುತಿಹುದು..
ಮೈಮೇಲೆ ಮುಗಿಬಿದ್ದು ನಿನ್ನ ಎಳೆಯ ಯವ್ವನಕೆ
ಬಿಸಿ ತಾಗಿಸಿದ ಬೆಳ್ಳಿ ಬೆಳಕು ತಾ ನಾಚುತಿಹುದು..
ನೀನುಟ್ಟ ಆ ವಸ್ತ್ರಗಳು ನಿನ್ನಪ್ಪಿ ಬಿಟ್ಟ ಆ ಕುಹಕ
ನಗೆಯ ಬಾಣಗಳೆನ್ನ ಹೃದಯದಾಳಕ್ಕೆ ನಾಟಿವೆ..
ಮೂದಲಿಸುತಿಹವು ಪಂಚಬೂತಗಳೆನ್ನ, ಪ್ರೀತಿ
ಯಿಂದಲೇ ಶರಣಾದವು ನನ್ನ ಅರಿಷಡ್ವರ್ಗಗಳು..
ಮಣ ಬೆಲ್ಲವ ನೊಣ ಮುತ್ತುವಂತೆ ನಿನ್ನನ್ನೊಮ್ಮೆ
ಮುತ್ತಲು ಹಾತೊರೆಯುತ್ತಿವೆ ನನ್ನ ಈ ಕಣ್ಣುಗಳು..
ನಗುವಿನಲಿ ನಲಿವಿದೆ ,ನಯನದಲಿ ನಾಚಿಕೆಯಿದೆ
ನೋಡಿ ಸುಮ್ಮನಿರದೆ, ನಯವಾಗಿ ನಾ ನೊಂದೆ..
ನಿಮಗಾಗಿ
ನಿರಂಜನ್
ನಗುವಿನಲಿ ನಲಿವಿದೆ ,ನಯನದಲಿ ನಾಚಿಕೆಯಿದೆ
ನೋಡಿ ಸುಮ್ಮನಿರದೆ, ನಯವಾಗಿ ನಾ ನೊಂದೆ..
ಬೀಸುವ ತಂಗಾಳಿಯು ನಿನ್ನ ಬಳಸಿ ಬಳಿ ಬಂದು
ಸ್ಪರ್ಶದಿ ಬಳುಕಿದ ನಿನ್ನ ನಡುವ ವರ್ಣಿಸುತಿಹುದು..
ಮೈಮೇಲೆ ಮುಗಿಬಿದ್ದು ನಿನ್ನ ಎಳೆಯ ಯವ್ವನಕೆ
ಬಿಸಿ ತಾಗಿಸಿದ ಬೆಳ್ಳಿ ಬೆಳಕು ತಾ ನಾಚುತಿಹುದು..
ನೀನುಟ್ಟ ಆ ವಸ್ತ್ರಗಳು ನಿನ್ನಪ್ಪಿ ಬಿಟ್ಟ ಆ ಕುಹಕ
ನಗೆಯ ಬಾಣಗಳೆನ್ನ ಹೃದಯದಾಳಕ್ಕೆ ನಾಟಿವೆ..
ಮೂದಲಿಸುತಿಹವು ಪಂಚಬೂತಗಳೆನ್ನ, ಪ್ರೀತಿ
ಯಿಂದಲೇ ಶರಣಾದವು ನನ್ನ ಅರಿಷಡ್ವರ್ಗಗಳು..
ಮಣ ಬೆಲ್ಲವ ನೊಣ ಮುತ್ತುವಂತೆ ನಿನ್ನನ್ನೊಮ್ಮೆ
ಮುತ್ತಲು ಹಾತೊರೆಯುತ್ತಿವೆ ನನ್ನ ಈ ಕಣ್ಣುಗಳು..
ನಗುವಿನಲಿ ನಲಿವಿದೆ ,ನಯನದಲಿ ನಾಚಿಕೆಯಿದೆ
ನೋಡಿ ಸುಮ್ಮನಿರದೆ, ನಯವಾಗಿ ನಾ ನೊಂದೆ..
ನಿಮಗಾಗಿ
ನಿರಂಜನ್