Generic Love !!!!!!
ವಯೋಸಹಜ ಭಾವನೆಗಳಾದ ಪ್ರೀತಿ ಮತ್ತು ಆಕರ್ಷಣೆಗಳು ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಸಾರಿ ಬಂದೆ ಬರುತ್ತವೆ, ಇದಕ್ಕೆ ಒಂದು ವಯಸ್ಸಿನ ಹುಡುಗ-ಹುಡುಗಿಯರ ಯೋಚನೆಗಳು , ಸ್ನೇಹಿತರು ಹಾಗೂ ಅವರ ಸುತ್ತಮುತ್ತಲಿನ ವಾತಾವರಣವು ಕೂಡ ಇದಕ್ಕೆಲ್ಲ ಕಾರಣವಾಗುತ್ತವೆ. ಸಹಜವಾಗಿಯೇ ಬರುವ ಈ ಭಾವನೆಗಳಿಗೆ ಹುಡುಗರಂತು ಬಹಳ ಬೇಗ ಸ್ಪಂದಿಸುತ್ತಾರೆ !. ಇಲ್ಲಿ ಹುಡುಗಿಯರ ಬಗ್ಗೆ ಸಂಪೂರ್ಣವಾಗಿ ನನಗೆ ಗೊತ್ತಿರದ ಕಾರಣ , ಹುಡುಗರ ದೃಷ್ಟಿಕೋನವನದಿಂದ ಈ ಲೇಖನವನ್ನು ಬರೆಯುತ್ತಿದ್ದೇನೆ. ಎಲ್ಲರಲ್ಲೂ ಇದೆ ರೀತಿ ಆಗುತ್ತದೆ ಅಂತ ಅಲ್ಲ, ಬಹುಪಾಲು ಹುಡುಗ-ಹುಡುಗಿಯರ ಜೀವನದಲ್ಲಿ ಈ ರೀತಿ ಆಗಬಹುದು ಅಥವ ನೆಡೆದಿರಲೂಬಹುದು.
ಪ್ರೀತಿ, ಆಕರ್ಷಣೆಗಳಿಗೆ ಬೇಗ ತುತ್ತಾಗುವ ಹುಡುಗ ನಾನು ತುಂಬಾ Bold, Strong, Not emotional and Very intelligent ಅಂತ ಅಂದುಕೊಂಡು ಒಬ್ಬ ಹುಡುಗಿಯನ್ನು ನೋಡಿ , ಅವಳ ಜೊತೆ ಸ್ನೇಹ ಸಂಪಾದಿಸಿಕೊಳ್ಳುವ ಹುಡುಗ , ತನ್ನ ಎಲ್ಲ ಭಾವನೆಗಳನ್ನು ಅವಳೊಂದಿಗೆ ಅಂಚಿಕೊಳ್ಳಲು ಶುರು ಮಾಡುತ್ತಾನೆ . ಪಾಪ ಅವಳು ಕೂಡ ಅವನೊಂದಿಗೆ ಸಕತ್ ಸಹಜವಾಗಿ, ಸರಿಯಾಗಿಯೇ ಸ್ಪಂದಿಸುತ್ತಾಳೆ. ಆದರೆ ಇದು ಬಹಳ ದಿನ ಹೀಗೆ ಇರಲು ಹೇಗೆ ಸಾದ್ಯ ? . ಒಂದು ದಿನ ಆ ಹುಡುಗ ಅವಳಿಗೆ ತನ್ನ ಪ್ರೀತಿಯ ಬಗ್ಗೆ ಹೇಳುತ್ತಾನೆ, ಹುಡುಗನ ಹಣೆಬರಹ ಚೆನ್ನಾಗಿದ್ದರೆ ಬರುವ ಉತ್ತರ , " I too love u " ಇಲ್ಲ ಅಂದರೆ " U r my good friend yaar " , ಹುಡುಗಿಯರು ಹುಡುಗರ ಪ್ರೀತಿಯನ್ನು ತಿರಸ್ಕರಿಸಲು ಹಲವು ಕಾರಣಗಳನ್ನು ಕೊಡುತ್ತಾರೆ, ಹುಡುಗನನ್ನು convince ಕೂಡ ಮಾಡುವುದರಲ್ಲಿ ಅವರು ನಿಪುಣರು ಹಾಗೂ ಅದು ದೇವರು ಅವರಿಗೆ ಕೊಟ್ಟ ಬುದ್ದಿವಂತಿಕೆ ಅಥವ ವರ ಎಂಬುದು ನನ್ನ ಅಬಿಪ್ರಾಯ.
ಪ್ರೀತಿ, ಆಕರ್ಷಣೆಗಳಿಗೆ ಬೇಗ ತುತ್ತಾಗುವ ಹುಡುಗ ನಾನು ತುಂಬಾ Bold, Strong, Not emotional and Very intelligent ಅಂತ ಅಂದುಕೊಂಡು ಒಬ್ಬ ಹುಡುಗಿಯನ್ನು ನೋಡಿ , ಅವಳ ಜೊತೆ ಸ್ನೇಹ ಸಂಪಾದಿಸಿಕೊಳ್ಳುವ ಹುಡುಗ , ತನ್ನ ಎಲ್ಲ ಭಾವನೆಗಳನ್ನು ಅವಳೊಂದಿಗೆ ಅಂಚಿಕೊಳ್ಳಲು ಶುರು ಮಾಡುತ್ತಾನೆ . ಪಾಪ ಅವಳು ಕೂಡ ಅವನೊಂದಿಗೆ ಸಕತ್ ಸಹಜವಾಗಿ, ಸರಿಯಾಗಿಯೇ ಸ್ಪಂದಿಸುತ್ತಾಳೆ. ಆದರೆ ಇದು ಬಹಳ ದಿನ ಹೀಗೆ ಇರಲು ಹೇಗೆ ಸಾದ್ಯ ? . ಒಂದು ದಿನ ಆ ಹುಡುಗ ಅವಳಿಗೆ ತನ್ನ ಪ್ರೀತಿಯ ಬಗ್ಗೆ ಹೇಳುತ್ತಾನೆ, ಹುಡುಗನ ಹಣೆಬರಹ ಚೆನ್ನಾಗಿದ್ದರೆ ಬರುವ ಉತ್ತರ , " I too love u " ಇಲ್ಲ ಅಂದರೆ " U r my good friend yaar " , ಹುಡುಗಿಯರು ಹುಡುಗರ ಪ್ರೀತಿಯನ್ನು ತಿರಸ್ಕರಿಸಲು ಹಲವು ಕಾರಣಗಳನ್ನು ಕೊಡುತ್ತಾರೆ, ಹುಡುಗನನ್ನು convince ಕೂಡ ಮಾಡುವುದರಲ್ಲಿ ಅವರು ನಿಪುಣರು ಹಾಗೂ ಅದು ದೇವರು ಅವರಿಗೆ ಕೊಟ್ಟ ಬುದ್ದಿವಂತಿಕೆ ಅಥವ ವರ ಎಂಬುದು ನನ್ನ ಅಬಿಪ್ರಾಯ.
ಎಲ್ಲೋ ನೋಡುವ ಹುಡುಗಿಯನ್ನು ಮಾತಾಡಿಸಲೇ ಬೇಕು ಅಂದುಕೊಳ್ಳುತ್ತಿದ್ದಂತೆ , ಅಂತಹ ಅವಕಾಶಗಳು ಬಂದೆ ಬಿಡುತ್ತವೆ , " ಏನೋ ಇದೆ ನಮ್ಮಿಬರ ನಡುವೆ" ಅದಕ್ಕೆ ಈ ಅವಕಾಶ ಸಿಕ್ಕಿದೆ ಅಂದುಕೊಳ್ಳುತ್ತಾನೆ ಆ ಹುಡುಗ.ಸಕತ್ ದೈರ್ಯ ಮಾಡಿ ಅವಳನ್ನು ಮೊದಲ ಸಾರಿ ಮಾತನಾಡಿಸುತ್ತಾನೆ, ಪಾಪ ಆ ಹುಡುಗಿ ಕೂಡ ಸರಿಯಾಗಿಯೇ ನಗುತ್ತಾ ಸ್ಪಂದಿಸುತ್ತಾಳೆ, ಇಷ್ಟು ಸಾಕು ಹುಡುಗನಿಗೆ ತಲೆಯಲ್ಲಿ " ಹುಳ " ಬಿಟ್ಟುಕೊಳ್ಳಲು. ಹೇಗೋ ಕಷ್ಟ ಪಟ್ಟು ಅವಳ Mail Id ಮತ್ತು Mobile number ಗಿಟ್ಟಿಸಿಕೊಂಡು, Forward mails ಮತ್ತು messages ಕಳಿಸಲು ಶುರು ಮಾಡುತ್ತಾನೆ. ಅದಕ್ಕೆ ಹುಡುಗಿ ಸ್ಪಂದಿಸಿದರಂತು ಮುಗೀತು ಕತೆ, ನಿಜವಾಗಿಯೂ ಆ ಹುಡುಗಿಗೂ ನನ್ನ ಮೇಲೆ ಪ್ರೀತಿ ಇರಬಹುದೆಂದು ಊಹಿಸಿ Chat ಮಾಡಲು ಶುರು ಮಾಡಿಯೇ ಬಿಡುತ್ತಾನೆ. ತನ್ನ ಪ್ರತಿಯೊಂದು ಭಾವನೆಗಳನ್ನು ಅವಳಲ್ಲಿ ಹೇಳಿಕೊಳ್ಳುತ್ತಾನೆ. ಸಂಪೂರ್ಣವಾಗಿ ತಾನು ಯಾವುದೋ ಒಂದು ಭಾವನ ಲೋಕಕ್ಕೆ ಹೋಗಿ ಬಿಡುತ್ತಾನೆ. ಅವಳೇ ನನ್ನ ಜೀವದ ಗೆಳತಿ ಎಂದು ಯೋಚಿಸುವ ಅವನು, ಸದಾ ಗೆಳತಿಯ messages ಬರುವಿಕೆಗಾಗಿ ಕಾಯುತ್ತಾನೆ. ಮೊಬೈಲ್ ನ್ನು ಕ್ಷಣಾಕೊಮ್ಮೆ ತೆಗೆದು ತೆಗೆದು ತೆಗೆದು ನೋಡುತ್ತಾನೆ, ತನ್ನೆದುರು ಬರುವ ಎಲ್ಲರಲ್ಲೂ ತನ್ನ ಗೆಳತಿಯ ಮುಖವನ್ನೇ ಕಾಣುತ್ತಾನೆ, ಸ್ನೇಹಿತರೊಂದಿಗೆ ಮಾತು ಕಡಿಮೆ ಮಾಡುತ್ತಾನೆ, ಸದಾ ಚಟುವಟಿಕೆಯುಕ್ತನಾಗಿರುತ್ತಿದ್ದ ಆ ಹುಡುಗ ಅವನದೇ ಆದ ಲೋಕದಲ್ಲಿ ಇರಲು ಬಯಸುತ್ತಾನೆ. ನಿಜವಾಗಿಯೂ ಇದೆಲ್ಲ ಏನು ಆ ಹುಡುಗಿಗೆ ತಿಳಿದಿರುವುದಿಲ್ಲ. ಅವಳು ಈತ ಕಳಿಸುವ messages ಗೆ ಹಾಗೂ ಮಾಡುವ call ಗಳಿಗೆ ನಾರ್ಮಲ್ ಆಗಿಯೇ ಸ್ಪಂದಿಸುತ್ತಾಳೆ. ಆದರೆ ಪ್ರತಿ ಬಾರಿ ಅವಳು ಕಳಿಸುವ ಸಾಮಾನ್ಯ k, hmm, gn, sd, tc, tel, bye and :) message ಗಳಲ್ಲಿ ಎಲ್ಲಿಲ್ಲದ ಬಾರಿ ಅರ್ಥಗಳನ್ನು ಹುಡುಕಿಕೊಂಡು ಏನೇನೋ ಅಂದುಕೊಳ್ಳುತ್ತಲೇ ಬರುತ್ತಾನೆ ತಲೆ ಕೆಟ್ಟ ಹುಡುಗ. ಗಂಟೆ ಗಟ್ಟಲೆ ಅವಳಿಗಾಗಿ ಕಾಯುತ್ತಾನೆ, ಅವಳ GN and SD message ಬಂದಮೇಲೆ ಮಲಗುತ್ತಾನೆ, ದಿನಕೊಮ್ಮೆಯಾದರೂ ಅವಳನ್ನು ಮಾತಾಡಿಸಬೇಕು ಎಂಬುವ ಹಂಬಲ. ಆಗಾಗ್ಗೆ ನೆಡೆಯುವ , ಅವನ ಭಾವನೆಗಳನ್ನು ಗಟ್ಟಿ ಮಾಡುವಂತಹ ಕಾಕತಾಳೀಯ ಘಟನೆಗಳು ಅವನ ತಲೆಯಲ್ಲಿದ್ದ ಒಂದು ಸಣ್ಣ ಪ್ರೀತಿಯೆಂಬ " ಹುಳ " ಅವನಿಗೆ ಗೊತ್ತಿಲ್ಲದಂತೆ ದೊಡ್ಡದಾಗಿ ಬೆಳೆದು ಬಿಟ್ಟಿರುತ್ತೆ. ಅವಳನ್ನು ಸಂಪೂರ್ಣವಾಗಿ ನಂಬುತ್ತಾನೆ ಹಾಗೂ ಜೀವಕಿಂತಲೂ ಹೆಚ್ಚು ಪ್ರೀತಿಸಲು ಶುರು ಮಾಡಿಯೇ ಬಿಡುತ್ತಾನೆ. ಅವಳಿಲ್ಲದಿದ್ದರೆ ನನ್ನ ಜೀವನವೇ ಇಲ್ಲ, ಜೀವನ ಶೂನ್ಯ ಅಂತೆಲ್ಲಾ ಯೋಚಿಸತೊಡಗುತ್ತಾನೆ. ಹುಡುಗ ತುಂಬಾ Bold and Straight ನಡೆಯವನಾಗಿದ್ದರೆ ಈ ವಿಷಯವನ್ನು ತನ್ನ ಗೆಳತಿಯ ಬಳಿ ಹೇಳಿಯೇ ಬಿಡುತ್ತಾನೆ. ಕೆಲವರು ಆ ವಿಷಯವನ್ನು ಹೇಳದೇ ಸುಮ್ಮನಾಗಿಬಿಡುತ್ತಾರೆ, ಹೇಳಿದರೆ ಎಲ್ಲಿ ಗೆಳತಿ ನನ್ನನ್ನು ತಪ್ಪು ತಿಳಿದು, ಮಾತು ನಿಲ್ಲಿಸಿ ಬಿಟ್ಟರೆ ಎಂಬ ಭಯದಿಂದ ಹೇಳದೇ ಪ್ರೀತಿಯನ್ನು ತಮ್ಮ ಹೃದಯದಲ್ಲೇ ಹಡಗಿಸಿಟ್ಟು ಬಿಡುತ್ತಾರೆ. ಹುಡುಗ ನೇರವಾಗಿ ಹೇಳಿದರೆ , ಹುಡುಗನ ನಸೀಬು ಚೆನ್ನಾಗಿದ್ದರೆ ಹುಡುಗಿ ಪ್ರೀತಿಯನ್ನು Accept ಮಾಡಬಹುದು ಇಲ್ಲದಿದ್ದರೆ ಹುಡುಗ ಎಷ್ಟೇ ನೇರವಾಗಿ, ಅವನು ಅವಳನ್ನು ಇಷ್ಟಪಡುತ್ತಿರುವ ವಿಷಯವನ್ನು ಹೇಳಿದರೆ ಅಷ್ಟೇ ನೇರವಾಗಿ ಆ ಬಹುದಿನದ ಹುಡುಗನ ಪ್ರೀತಿಯನ್ನು ಅವಳು ತಿರಸ್ಕರಿಸುತ್ತಾಳೆ.ತಿರಸ್ಕರಿಸಲು ಅವಳಿಗೆ ಬೇಕಾದಷ್ಟು ಕಾರಣಗಳು ಇರುತ್ತವೆ. ತಿರಸ್ಕರಿಸಿದರೆ ಅವಳು ಹೇಳುವ simple ಉತ್ತರಗಳೂ " U r my good friend yaar ", " ನಿನ್ನ ಬಗ್ಗೆ ನಾ ಯಾವತ್ತೂ ಆ ರೀತಿ ಯೋಚಿಸಿಲ್ಲ ", " ನನಗೆ ತುಂಬಾ responsibilities ಇವೆ ", " ನಾನು ನಿನಗೆ ಸರಿಯಾದ ಜೋಡಿಯಲ್ಲ ", " ನಿನ್ನ ಬಗ್ಗೆ ನನಗೆ ಆ ರೀತಿಯ ಭಾವನೆಗಳು ಎಂದಿಗೂ ಬರುವುದಿಲ್ಲ ", "U wil get a good girl yaar". ಇವುಗಳನ್ನು ಕೇಳಿದ ಹುಡುಗನಿಗೆ ಆಕಾಶವೇ ಕಳಚಿ ಬದ್ದಂತೆ ಹಾಗಿ ಏನು ಮಾತಾಡಬೇಕೋ ತಿಳಿಯುವುದಿಲ್ಲ. ಅವಳಿಗೆ ಪದೇ ಪದೇ ಯೋಚಿಸು, ಅರ್ಥ ಮಾಡಿಕೊ , ನಿನ್ನ ಯಾವುದೇ ಸಮಸ್ಸೆಗಳ್ಳಿದ್ದರು ನಾನು ಹೆಗಲು ಕೊಡುತ್ತೇನೆ , ನಿನ್ನ ಏನೇ Conditions ಇದ್ರು ನಾ ಅವುಗಳನ್ನು ಒಪ್ಪುತ್ತೇನೆ ಅಂತ ಅವಳಿಗೆ ಅಭಯ ಹಸ್ತ ನೀಡುತ್ತಾನೆ. ಹುಡುಗಿ ಒಮ್ಮೆ ಪ್ರೀತಿಯನ್ನು ತಿರಸ್ಕರಿಸಿದರೆ ಮುಗೀತು ಅವಳು ಮತ್ತೆ ತೀರ್ಮಾನವನ್ನು ಬದಲಾಯಿಸುವುದಿಲ್ಲ ಎಂಬ ಕಟು ಸತ್ಯ ಅವನಿಗೆ ತಿಳಿಯುವುದೇ ಇಲ್ಲ. ಅವಳು ನನ್ನನ್ನು ಪರೀಕ್ಷೆ ಮಾಡುತ್ತಾ ಇದ್ದಾಳೆ ಎಂದು ಪಾಪ ಹುಡುಗ ಪ್ರೀತಿಯ ನಿವೇದನೆಯನ್ನು ಪದೇ ಪದೇ ಮಾಡುತ್ತಲೇ ಇರುತ್ತಾನೆ. ಇದನ್ನೆಲ್ಲ ತಾಳಲಾರದೆ ಹುಡುಗಿ ಕೊನೆಯದಾಗಿ ಹುಡುಗನಿಗೆ ಅರ್ಥ ಮಾಡಿಸಲು ಹೂಡುವ ಅಸ್ತ್ರ “ ನಾ ಈಗಾಗಲೇ ಒಬ್ಬರನ್ನು ಪ್ರೀತಿಸುತ್ತಾ ಇದ್ದೇನೆ “ . ಆಗ ಹುಡುಗ ಸ್ವಲ್ಪ ಅರ್ಥ ಮಾಡಿಕೊಂಡು ಬುದ್ದಿವಂತನಾದರೆ ಆ ವಿಷಯ ಬಿಟ್ಟು ತನ್ನ ಕೆಲಸಗಳಲ್ಲಿ ಮಗ್ನನಾಗುತ್ತಾನೆ. ಇಲ್ಲವಾದರೆ ತನ್ನ ಜೀವನದ ಗತಿಯನ್ನೇ ಬದಲಾಯಿಸುವ ಈ ಬಲೆಯಲ್ಲಿ ಬಿದ್ದು ತುಂಬಾ ಕಷ್ಟ ಪಟ್ಟು ತನ್ನ ಅಮೂಲ್ಯ ಸಮಯವನ್ನು ಹಾಳು ಮಾಡಿಕೊಳ್ಳುತ್ತಾನೆ. ಕಾಲ ಕಳೆದಂತೆ ಎಂತವರನ್ನು ಮರೆಯುವುದು ಮನುಷ್ಯನ ಸಹಜ ಗುಣ, ಅದರಂತೆ ಅವನು ಅವಳನ್ನು ಮರೆಯುತ್ತಾನೆ ಬಿಡಿ. ಆದರೆ ಎಲ್ಲೋ ಒಂದು ಕಡೆ ಅವಳು ಅವನ ಪ್ರೀತಿಯನ್ನು ಅರ್ಥ ಮಾಡಿಕೊಳ್ಳಲಿಲ್ಲವೆಂಬೆ ಬೇಜಾರು ಕೊನೆಯವರೆಗೂ ಸ್ವಲ್ಪ ಇದ್ದೇ ಇರುತ್ತೆ. ನನ್ನ ಬಗ್ಗೆ ಯಾವ ಭಾವನೆಗಳು ಇರದ ಒಬ್ಬ ಹುಡುಗಿಗೆ ನಾ ಎಷ್ಟೊಂದು ದಿನ ತಲೆಕೆಡೆಸಿಕೊಂಡೆನಲ್ಲ ಎಂಬ ಕೋಪ ಕೂಡ ತನ್ನಮೇಲೆ ಇರುತ್ತೆ.
ಒಟ್ಟಾರೆ ಹೇಳಬೇಕೆಂದರೆ ಇದೆಲ್ಲ ಒಂದು ರೀತಿಯಲ್ಲಿ, ಭಾವನೆಗಳಿಗೆ ಹುಡುಗ ಅತವ ಹುಡುಗಿ ಸೋತಾಗ ಆಗುವ, ವಯೊಸಹಜವಾದ ಘಟನೆಗಳು ಅಷ್ಟೇ. ಇದನ್ನೆಲ್ಲ ಅರ್ಥ ಮಾಡಿಕೊಂಡು ಅದೇ ಹುಡುಗಿಯೊಂದಿಗೆ ಉತ್ತಮ ಸ್ನೇಹಿತನಾಗಿ ಇರುವವರು ಬಹಳಷ್ಟು ಮಂದಿ ಈಗಲೂ ಇದ್ದಾರೆ. ಕೆಲವರು ಒಳ್ಳೇ ಸ್ನೇಹಿತರಿಂದ ಸಲಹೆ ಪಡೆದು ಇವುಗಳಿಂದ ಹೊರ ಬರುತ್ತಾರೆ, ಕೆಲವರು ಯಾರ ಬಳಿಯೂ ಇವುಗಳನ್ನು ಹೇಳಿಕೊಳ್ಳದೇ ಕೊರಗಿ ಕಷ್ಟ ಪಡುತ್ತಾರೆ ಇನ್ನೂ ಕೆಲವರು ನೀ ಇರದಿದ್ದರೆ " ಇನ್ನೊಬ್ಬಳು " ಅಂತ ಮತ್ತೊಂದು ಪ್ರಯತ್ನದಲ್ಲಿ ತೊಡಗುತ್ತಾರೆ.
Conclusion
" Arrange marriage is while ' u r walking, unfortunately a snake bites u'. But Love marriage is dancing in front of the Snake and saying Kadi ba...kadi ba...kadi ba.... :) :) :) "
ನಿಮಗಾಗಿ.......
ನಿರಂಜನ್