ಆ ಪುಸ್ತಕ .....
ಹಿಂದಿನ ದಿನ ನಡೆದ ಕೆಲವು ಘಟನೆಗಳಿಂದ ಬೇಜಾರಾಗಿದ್ದ ನಾನು, ಆ ದಿನ ತುಂಬಾ ದುಃಖ ಪಟ್ಟಿದ್ದೆ. ನಾ ಮಾಡಿದ ಸಣ್ಣ ತಪ್ಪು ನನ್ನನ್ನು ಆ ದಿನ ತುಂಬಾ ಹಿಂಸಿಸಿತ್ತು.ಮಾಡಿದ ಅ ಚಿಕ್ಕ ತಪ್ಪು ನಿಜವಾಗಿಯೂ ನನಗೆ ತುಂಬಾನೇ ಬುದ್ದಿ ಕಲಿಸಿತ್ತು. ಅದೇ ತಪ್ಪನ್ನು ನಾನು ಮತ್ತೆ ಎಂದು ಮಾಡಬಾರದು ಎಂದು ನಿರ್ದರಿಸಿದ ನಾನು ಸ್ವಲ್ಪ ಸಮಾಧಾನಗೊಂಡು, ಒಂದು ಸಣ್ಣ ವಾಕ್ ( walk ) ಮಾಡಲು ನಿರ್ದರಿಸಿದೆ.ಮನೆಯ ಹತ್ತಿರವೇ ಇದ್ದ ನನ್ನ ಸ್ನೇಹಿತ ಕೂಡ ನನ್ನೊಂದಿಗೆ ವಾಕ್ ಬರುವುದಾಗಿ ಹೇಳಿದ. ನಾವಿಬ್ಬರು ಹೀಗೆ ನಡೆದುಕೊಂಡು ಹೋಗುತ್ತಿರುವಾಗ ನನ್ನ ಎದುರಿಗೆ ಬರುವ ಚಿಕ್ಕ ಹುಡುಗನೊಬ್ಬ ಒಂದು ಪುಸ್ತಕವನ್ನು ರಸ್ತೆಗೆ ಎಸೆದ, ನಾನು " ಹೇ ಯಾಕೋ ಪುಸ್ತಕವನ್ನು ಎಸೆದೆ " ಅಂತ ಕೇಳಿದ, ತಕ್ಷಣ ಆ ಚಿಕ್ಕ ಹುಡುಗ ನನ್ನ ಮುಖವನ್ನೊಮ್ಮೆ ನೋಡಿ , ಏನೂ ಉತ್ತರಿಸದೆ ಅಲ್ಲಿಂದ ಕಾಲು ಕಿತ್ತ. ನಾ ಆ ಪುಸ್ತಕವನ್ನು ಕೈಯಲ್ಲಿ ಎತ್ತಿಕ್ಕೊಳ್ಳುವ ಮೊದಲೇ ಇನ್ನೊಬ್ಬ ಮದ್ಯವಯಸ್ಸಿನ ಯುವಕನೊಬ್ಬನು ಅದರ ಮೇಲೆ ಕಾಲಿಟ್ಟು ನೆಡದೆ ಸಾಗಿದ್ದನು. ಇನ್ನೇನು ಮತ್ತೊಬ್ಬರು ಅದನ್ನು ತುಳಿಯುವ ಮೊದಲೇ ನಾ ಅದನ್ನು ನನ್ನ ಕೈಗೆ ಎತ್ತಿಕೊಂಡಿದ್ದೆ.
ಆ ಪುಸ್ತಕ ಒಂದು ಚಿಕ್ಕ ಇಂಗ್ಲಿಷ್ ಪುಸ್ತಕವಾಗಿತ್ತು. ಅದು ಬಹಳ ಮಟ್ಟಿಗೆ ಈಗಿನ LKG ಅಥವಾ UKG ತರಗತಿಯದಿರಬಹುದು. ನಿಜವಾಗಿಯೂ ಸ್ನೇಹಿತರೆ ಅದರ ಮೇಲೆ ಸುಂದರ ಕಾರ್ಟೂನ್ ತರಹದ ಚಿತ್ರಗಳಿದ್ದವು. ಒಳ್ಳೆಯ ಬಣ್ಣಗಳಿಂದ ಚಿತ್ರಿಸಿದ ಆ ಚಿತ್ರಗಳು ನಿಜವಾಗಿಯೂ ನನ್ನನ್ನು ಸಹಜವಾಗಿ ತನ್ನತ್ತ ಸೆಳೆದವು. ಆ ಪುಸ್ತಕದಲ್ಲಿ ಇದ್ದದ್ದು ಕೇವಲ ಕೆಲವೇ ಪುಟಗಳು. ಎಲ್ಲ ಪುಟಗಳಲ್ಲು ಒಂದೊಂದು ವರ್ಣರಂಜಿತವಾದ ಚಿತ್ರ, ಅದರೊಂದಿಗೆ ಚಿಕ್ಕ ಮಕ್ಕಳಿಗಾಗಿಯೇ ರಚಿಸಿದ ಆರೇಳು ಸಾಲುಗಳ ಮಕ್ಕಳ ಪದ್ಯಗಳು ಕೂಡ ಇದ್ದವು. ಚಿಕ್ಕ ಮಕ್ಕಳ ಪದ್ಯಗಳು ಚಿಕ್ಕದಾಗಿದ್ದರೂ ಪ್ರಾಸಬದ್ದವಾಗಿದ್ದವು ಕೂಡ. ಅದರಲ್ಲಿನ ಒಂದನ್ನು ನಾ 5ನೇ ತರಗತಿಯಲ್ಲಿ ಓದಿದ ನೆನಪು. ನಿಜವಾಗಿಯೂ ಅವೆಲ್ಲವೂ ಎಷ್ಟು ಚಿಕ್ಕವಾಗಿದ್ದವೋ ಅಷ್ಟೇ ಅರ್ಥಗರ್ಬಿತವಾಗಿದ್ದವು. ಅಲ್ಲಿದ್ದ ಹಿತವಾದ ಪ್ರಾಸಗಳು ನನ್ನ ಮುಖದಲ್ಲಿ ಒಂದು ಸಣ್ಣನಗುವುಕ್ಕಲು ಕೂಡ ಕಾರಣವಾಗಿದ್ದವು. ಇಡೀ ನನ್ನ ಬಾಲ್ಯವನ್ನೇ ನನ್ನ ಕಣ್ಮುಂದೆ ತಂದಿಟ್ಟ ಆ 4-5 ಪುಟಗಳ ಆ ಸಣ್ಣ ಪುಸ್ತಕ, ಬೇಜಾರಾಗಿದ್ದ ನನ್ನ ಮನಸ್ಸನ್ನು ತಿಳಿಗೊಳಿಸಿದ್ದಲ್ಲದೆ , ನನಗೆ ನನ್ನ ಬಾಲ್ಯದ ನೆನಪು ತಂದು ಹಿತ ನೀಡಿತು. ಪುಸ್ತಕಗಳಿಗೆ ಈ ಶಕ್ತಿ ನಿಜವಾಗಿಯೂ ಇದೆ ಎಂದು ಮತ್ತೆ ನನಗೆ ಮನವರಿಕೆ ಆಯಿತು. ಅಲ್ಲಿದ್ದ ಚಿತ್ರಗಳು, ನಾ ಚಿಕ್ಕವನಿದ್ದಾಗ ರಚಿಸುತ್ತಿದ್ದ ಚಿತ್ರಗಳ ಹಾಗೆಯೇ ಇದ್ದವು.
ನಾವು ಚಿಕ್ಕವರಿದ್ದಾಗ ಓದಿದ ಪುಸ್ತಕಗಳಲ್ಲಿ ಈ ರೀತಿಯ ವರ್ಣ ರಂಜಿತ ಚಿತ್ರಗಲಿರುತ್ತಿರಲಿಲ್ಲ, ಆದರೂ ಆ ಪದ್ಯಗಳು ನಮ್ಮನ್ನು ಆ ರೀತಿಯ ಪ್ರಪಂಚಕ್ಕೊಂತು ಕೊಂಡೊಯ್ಯುತ್ತಿದ್ದವು. ಚಿಕ್ಕ ಮಕ್ಕಳಿಗೆ ಕಲ್ಪಾನಶಕ್ತಿ ಹೆಚ್ಚಿಸುವ ಈ ರೀತಿಯ ಪದ್ಯಗಳು ಆ ಕ್ಷಣಕ್ಕೆ ನನ್ನನ್ನು ಕೂಡ ಕಲ್ಪನಾ ಲೋಕಕ್ಕೆ ಕರೆದೊಯ್ದವು. ಪುಸ್ತಕಗಳ ಈ ಶಕ್ತಿಯೇ ನನ್ನ ಮತ್ತು ಅವುಗಳ ಸಂಗಕ್ಕೆ ಕಾರಣ. ಕೆಲವರು ಹೇಳುವಂತೆ ಎಲ್ಲ ವಯ್ಯಸಿನ ಮನುಷ್ಯರಲ್ಲೂ ಒಬ್ಬ ಚಿಕ್ಕ ವಯಸ್ಸಿನ ಪುಟ್ಟ ಮಗುವು ಇರುತ್ತಾನೆ ಎಂಬುದು ಅಕ್ಷರಷಃ ನಿಜ ಎಂದು ನನಗೆ ಆ ಪದ್ಯಗಳನ್ನು ಓದಿದಾಗ , ಚಿತ್ರಗಳನ್ನು ನೋಡಿದಾಗ ಅರಿಯಿತು. ನನ್ನಲ್ಲಿದ್ದ ಆ ಚಿಕ್ಕ ಕಂದ ಅದೆಷ್ಟು ಖುಷಿ ಪಟ್ಟ ಎಂದರೆ ನಾ ಮನೆಗೆ ಬಂದು ನನ್ನ ಪಕ್ಕದ ಮನೆಯಲ್ಲಿದ್ದ 1ನೇ ತರಗತಿಯ ಹುಡುಗನ ಪುಸ್ತಕ ಓದಿದೆ.
ಪುಸ್ತಕವನ್ನು ಬೀದಿಗೆ ಎಸೆದ ಆ ಹುಡುಗನ ಮೇಲೆ ಕ್ಷಣ ಕಾಲ ಸಿಟ್ಟು ಬಂದಿದ್ದ ನನಗೆ "ಹೋಗ್ಲಿ ಬಿಡು ಅವನಿಗೆ ಗೊತ್ತಿಲ್ಲ ಅದರ ಬೆಲೆ " ಅಂತ ಅಂದುಕೊಂಡಿದ್ದೆ . ನಾನು ಪುಸ್ತಕವನ್ನು ಓದಿದ ಮೇಲೆ ನನಗೆ ತಿಳಿಯಿತು , ಆ ಹುಡುಗ ಅವನಿಗೆ ಅರಿಯದೆಯೇ ನನಗೆ ಒಂದು ರೀತಿಯಲ್ಲಿ ಸಹಾಯ ಮಾಡಿದ್ದ. ಯಾವುದೋ ವಿಷಯಕ್ಕೆ ಬೇಜಾರಾಗಿದ್ದ ನಾನು ಬೇರೆಯ ವಿಷಯದ ಬಗ್ಗೆ ಗಮನಹರಿಸಲು ಒಂದು ರೀತಿಯಲ್ಲಿ ಕಾರಣನಾಗಿದ್ದ. ನಿಜವಾಗಿಯೂ ಸ್ನೇಹಿತರೆ ನಿಮಗೂ ಕೂಡ ಸ್ವಲ್ಪ ಸಮಯ ಸಿಕ್ಕರೆ ಚಿಕ್ಕ ಮಕ್ಕಳ ಪುಸ್ತಕಗಳನ್ನು ಓದಿ ನೋಡಿ, ಅವುಗಳೇನು ಬಾರಿ ಕತೆ-ಕಾದಂಭರಿಗಳಾಗಿರುವುದಿಲ್ಲ ಆದರೂ ಹಲವು ವಿಷಯಗಳ್ಳನ್ನ ಅವು ಸಾರಿ ಹೇಳುತ್ತವೆ. ನಿಮ್ಮನ್ನು ನಿಮ್ಮ ಭಾಲ್ಯಕ್ಕೆ ಮತ್ತೊಮ್ಮೆ ಕರೆದೊಯ್ಯುತ್ತವೆ. ನೆನಪುಗಳಲ್ಲೆಲ್ಲ ನಮ್ಮ ಭಾಲ್ಯದ ನೆನಪುಗಳೇ ಅತೀ ಹಿತ ನೀಡುವುವು. "ನೋಡಿ , ನಿಮ್ಮ ಮನೆಯ ಹತ್ತಿರವಿರುವ ಅಥವಾ ನಿಮ್ಮ ಮನೆಯಲ್ಲಿಯೇ ಇರುವ ಚಿಕ್ಕ ಮಕ್ಕಳ ಪುಸ್ತಕದ ಮೇಲೆ ಒಮ್ಮೆ ಕಣ್ಣಾಡಿಸಿ, ನಾವು ಕಲಿಯೋದು ಬೇಜಾನ್ ಇದೆ "
ನಿಮಗಾಗಿ
ನಿರಂಜನ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ