ಕಳ್ಳನೋ , ಸುಳ್ಳನೋ , ಮಳ್ಳನೋ ?
ಸ್ನೇಹಿತರೆ , ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣಾ ಈ ಹಿಂದೆ ಬಂದಂತೆ ಮತ್ತೆ ಬಂತು, ಈ ದಿನ ಮುಗಿಯುತ್ತದೆ ಕೂಡ. ನೀವು ಮತದಾನ ಮಾಡಿದ್ದೀರಿ, ಬದಲಾವಣೆಯನ್ನು ಸಹ ನಿರೀಕ್ಷಿಸುತ್ತಿದ್ದೀರಿ. ಅತಿಯಾದ ನಿರೀಕ್ಷೆಗಳನ್ನೂ ನೀವೇನಾದರು ಇಟ್ಟುಕೊಂಡಿದ್ದಾರೆ ಸ್ವಲ್ಪ ತಾಳಿ, ಈ ಚುನಾವಣೆಯ ಬಗ್ಗೆ ಹೇಳ್ತೀನಿ, ನಂತರ ನೀವೇ ತಿಳಿಸಿ ನಿಮ್ಮ ನಿರೀಕ್ಷೆಗಳ ಗತಿ ಏನಾಗುವುದು ಎಂದು.
ಈಗಿನ ಚುನಾವಣೆಗಳು ಬಂದರೆ ಈ ರಾಜಕೀಯ ಪಕ್ಷಗಳಿಗೆ ಗೆಲ್ಲುವುದು ಒಂದೇ ಗುರಿಯಾದರೆ , ರಾಜಕೀಯ ಪುಡಾರಿಗಳಿಗೆ ಪಕ್ಷಗಳಿಂದ ಸಿಗುವ ಹಣ ಮಾತ್ರವೇ ಮುಖ್ಯ. ಚುನಾವಣೆಯಲ್ಲಿ ಪಕ್ಷಗಳ ಟಿಕೇಟ್ ಸಿಗಬೇಕೆಂದರೆ ಅಭ್ಯರ್ಥಿಯ ಪ್ರಾಮಾಣಿಕತೆ, ವಿದ್ಯಾಭ್ಯಾಸ , ಅವನ ಬುದ್ದಿವಂತಿಕೆ ಯಾವತ್ತು ಮಾನದಂಡ ಆಗುವುದಿಲ್ಲ. ಟಿಕೆಟ್ ಅಕಾಂಕ್ಷಿ ಎಷ್ಟು ದುಡ್ಡು ಮಾಡಿದ್ದಾನೆ, ಅವನ ಹಿಂದೆ ಎಷ್ಟು ರೌಡಿಗಳಿದ್ದಾರೆ , ಪಕ್ಷಕ್ಕೆ ಅವನು ಎಷ್ಟು ದುಡ್ಡು ಕೊಡುತ್ತಾನೆ ಎಂಬುದು ಮಾತ್ರ ಪಕ್ಷಗಳಿಗೆ ಮುಖ್ಯ. ಅಂತವರಿಗೆ ಮಾತ್ರ ಪಕ್ಷದ ಟಿಕೇಟ್ ಖಚಿತ.
ರಾಜಕೀಯ ಪಕ್ಷಗಳಿಗೆ ಕಳ್ಳರುಗಳನ್ನು , ತಲೆಮರೆಸಿಕೊಂಡಿದ್ದ ರೌಡಿಗಳನ್ನು , ಪೊಲೀಸರಿಗೆ ಎಂದೂ ಸಿಗದ ಅಪರಾದಿಗಳನ್ನು ಸಮಾಜಸೇವಕರ ಹೆಸರಲ್ಲಿ ಸಮಾಜದ ಮುಖ್ಯವಾಹಿನಿಗೆ ತರಲು ಈ ಚುನಾವಣೆಗಳು ವೇದಿಕೆ ಆಗುತ್ತಿವೆ. ಪಕ್ಷಗಳು ಅಭ್ಯರ್ಥಿಗಳಿಗೆ ಟಿಕೆಟ್ಟು ನೀಡುವ ನೆಪದಲ್ಲಿ ಕೋಟಿ ಕೋಟಿ ಹಣ ಮಾಡುತ್ತವೆ. ಅಭ್ಯರ್ಥಿಗಳು ಕೋಟಿ-ಕೋಟಿ ಹಣ, ಬ್ಯಾರಲ್ಲುಗಟ್ಟಲೆ ಹೆಂಡ ಹಂಚಿ ಮತದಾರನಿಂದ ಮತಗಳನ್ನು ಖರೀದಿಸುತ್ತಾರೆ. ತಲೆಮರಿಸಿಕೊಂಡಿದ್ದ ಕಳ್ಳ, ಸುಳ್ಳ, ಪಾತಕಿಗಳು ಚುನಾವಣೆಯಲ್ಲಿ ಜನ ನಾಯಕರಾಗಿ ಹೊರಹೊಮ್ಮುತ್ತಾರೆ. ಇಂಥವರಿಗೆ ಜನಪ್ರಿಯ ಪಕ್ಷಗಳ ಆಶಿರ್ವಾದ ಸಿಗುವುದರ ಜೊತೆಗೆ ತಮ್ಮ ಅಕ್ರಮ ಚಟುವಟಿಕೆಗಳಿಗೆ ಅಧಿಕಾರದ ಒಂದು ಭರ್ಜರಿ ಕವಚವೂ ಕೂಡ ಸಿಗುತ್ತದೆ. ಇದಕ್ಕಾಗಿಯೇ ಟಿಕೆಟ್ ಅಕಾಂಷಿಗಳು ಟಿಕೇಟಿಗಾಗಿ ಏನು ಮಾಡಲು ಸಿದ್ದರಿರುತ್ತಾರೆ.
ಇಂಥ ಕಳ್ಳರು ಕೊನೆಗೆ ಟಿಕೆಟ್ಟು ಗಿಟ್ಟಿಸಿಕೊಂಡು ಚುನಾವಣೆಯಲ್ಲಿ ನಿಲ್ಲುತ್ತಾರೆ. ಇರುವ ಪಕ್ಷಗಳೆಲ್ಲ ಇಂತವರನ್ನೇ ಚುನಾವಣೆಗೆ ನಿಲ್ಲಿಸುತ್ತವೆ. ಮೂರು ಮುಖ್ಯ ಪಕ್ಷಗಳಿದ್ದರೆ ಚುನಾವಣೆಯ ಕಣದಲ್ಲಿ ಮೂರು ಜನ ಸಮರ್ಥ ರೌಡಿಗಳೋ , ಭ್ರಷ್ಟಚಾರಿಗಳೋ ಕಣದಲ್ಲಿ ಇದ್ದೆ ಇರುತ್ತಾರೆ. ಇಂತವರಲ್ಲಿ ನಾವು ಒಬ್ಬರಿಗೆ ವೋಟು ನೀಡುತ್ತೇವೆ , ಸಮರ್ಥರಿಲ್ಲದ ಕಾರಣ ಇಂತವರಿಗೆ ವೋಟು ನೀಡುವುದು ಅನಿವಾರ್ಯ ಕೂಡ . ಇಂಥಹ ಸನ್ನಿವೇಶದಲ್ಲಿ ಕೆಲವು ಬುದ್ದಿವಂತ ಮತದಾರರು ಚುನಾವಣ ಕಣದಲ್ಲಿರುವ ಮೂವರಲ್ಲಿ ಸ್ವಲ್ಪ ಕಡಿಮೆ ಕಳ್ಳನೋ, ಸ್ವಲ್ಪ ಭ್ರಷ್ಟಚಾರಿಗೋ ವೋಟು ಹಾಕಿದರೆ, ಸಾಮಾನ್ಯ ಜನರು ಪಕ್ಷಗಳನ್ನು ನೋಡಿಯೋ, ಅಭ್ಯರ್ಥಿಗಳ ಆಮಿಶಗಳಿಗೆ ಬಲಿಯಾಗಿಯೋ, ಜಾತಿಯಾದಾರದ ಮೇಲೋ ವೋಟು ಹಾಕುತ್ತಾರೆ. ಅಂತು ಇಂತು ಕೊನೆಗೆ ಗೆಲ್ಲುವುದು ಒಬ್ಬ ಕಳ್ಳನೇ. ಇಂಥವರಿಂದ ನಾವೇನು ನಿರೀಕ್ಷಿಸಲು ಸಾದ್ಯ ??. ಚುನಾವಣೆಯಲ್ಲಿ ಗೆಲ್ಲಲು ಅಭ್ಯರ್ಥಿ ಕೋಟಿಗಟ್ಟಲೆ ಹಣ ಖರ್ಚು ಮಾಡಿರುತ್ತಾನೆ, ಗೆದ್ದಮೇಲೆ ಅವನು ಆ ಹಣವನ್ನು ವಾಪಾಸು ಪಡೆಯಲು ಭ್ರಷ್ಟಾಚಾರದಲ್ಲಿ ಭಾಗಿಯಾಗುತ್ತಾನೆ. ಇಂಥಹ ಭ್ರಷ್ಟರಿಗೆ ನಮ್ಮ ಇಡೀ ವ್ಯವಸ್ತೆಯೇ ಜನರ ಹಣ ಕದಿಯಲು ಇಂಬು ನೀಡುತ್ತದೆ. ಈ ಪ್ರಕ್ರಿಯೇ ನಮ್ಮ ಸಮಾಜದ ಅಥವಾ ವ್ಯವಸ್ತೆಯ ಒಂದು ಭಾಗವಾಗಿಯೆ ಹೋಗಿದೆ.
ಇಂಥಹ ವ್ಯವಸ್ತೆಯನ್ನು ನಮ್ಮ ಸಮಾಜವೇ ಒಂದು ರೀತಿಯಲ್ಲಿ ಒಪ್ಪಿಕೊಂಡಿದೆ. ಕೆಲವರು ಇದನ್ನು ವಿರೋದಿಸುತ್ತಾರೆ, ಮತ್ತೆ ಕೆಲವರು ಇದರ ವಿರುದ್ದ ಹೋರಾಟವನ್ನು ಕೂಡ ಮಾಡುತ್ತಾರೆ, ಇನ್ನು ಕೆಲವರು ಈ ಹಾಳು ವ್ಯವಸ್ತೆಯಿಂದ ದೂರವೇ ಉಳಿಯುತ್ತಾರೆ. ಕೆಟ್ಟ ವ್ಯವಸ್ತೆಯ ವಿರುದ್ದ ಹೋರಾಡುವವರಿಗೆ ನಾವು ಕೂಡ ಬೆಂಬಲ ನೀಡುವುದಿಲ್ಲ, ಕೆಲವೊಮ್ಮ ಅವರನ್ನು ನೋಡಿ ನಗುತ್ತೇವೆ. ಮಾದ್ಯಮಗಳು ಮತ್ತು ಜನರು ಕೆಟ್ಟ ವ್ಯವಸ್ತೆಯ ವಿರ್ರುದ್ದ ಹೊರಡುವವರಿಗೆ ಬೆಂಬಲ ನೀಡುವತನಕ, ಬುದ್ದಿವಂತರು, ಪ್ರಾಮಾಣಿಕರು ಚುನಾವಣೆಯಲ್ಲಿ ಭಾಗವಹಿಸುವ ತನಕ ಈ ಕೆಟ್ಟ ವ್ಯವಸ್ತೆ ಕೆಟ್ಟದ್ದಾಗಿಯೇ ಉಳಿಯುತ್ತದೆ.
ಇಂಥಹ ವಾತಾವರಣದಲ್ಲೂ ಕೂಡ ಇತ್ತೀಚಿಗೆ ಬೆರೆಳೆಣಿಕೆಯೊಷ್ಟು ಸಮರ್ಥ ಸಾಮಾಜಿಕ ಕಾರ್ಯಕರ್ತರು , ಬುದ್ದಿವಂತರು, ವಿದ್ಯಾವಂತರು ರಾಜಕೀಯಕ್ಕೆ ಬಂದು ಚುನಾವಣೆಯಲ್ಲಿ ಭಾಗಿಯಾಗುತ್ತಿದ್ದಾರೆ. ಇದು ಬಹು ಆಶಾದಾಯಕ ಬೆಳವಣಿಗೆ. ಇಂತವರನ್ನು ನಾವು ಗುರುತಿಸಿ, ಅಂತವರಿಗೆ ನಮ್ಮ ಅಮೂಲ್ಯ ವೋಟು ಹಾಕಿದರೆ ಮಾತ್ರ ರಾಜಕೀಯ ದುಷ್ಟಶಕ್ತಿಗಳನ್ನು ರಾಜಕೀಯದಿಂದ ನಾವು ದೂರವಿಡಲು ಸಾದ್ಯವಾಗದಿದ್ದರು ಸಹ, ಅಧಿಕಾರದಿಂದ ದೂರವಿಡಬಹುದು. ಇಲ್ಲದಿದ್ದರೆ ನಾವೆನಾದರು "ಯಾರು ಹಿತವರು ನಿಮಗೆ ಈ ಮೂವರೊಳಗೆ , ಕಳ್ಳನೋ , ಸುಳ್ಳನೋ, ಮಳ್ಳನೋ" ಎಂದು ಕೇಳಿದರೆ "ಕಡಿಮೆ ಕಳ್ಳ" "ಸ್ವಲ್ಪ ಸುಳ್ಳ-ಮಳ್ಳ" ಎಂದು ಆಯ್ಕೆ ಮಾಡಿದರೆ, ನಮ್ಮ ನಿರೀಕ್ಷೆಗಳ ಗತಿ ಏನಾಗಬಹುದೆಂದು ನೀವೇ ಯೋಚಿಸಿ.
ನಿಮಗಾಗಿ
ನಿರಂಜನ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ