Relevant forever ..............its just my opinion !!
"I am filled with hope and inspiration as I have the privilege to view this testament to Gandhi's life. He is a hero not just to India but to the world,"
6 ದಶಕಗಳ ಹಿಂದೆ ನಮ್ಮನ್ನಗಲಿದ ಒಬ್ಬ ನಾಯಕನ ಬಗ್ಗೆ, ಯಾವುದೋ ದೇಶದಿಂದ ಬಂದ, ಅತ್ಯಂತ ಪ್ರಭಾವಿ ಹಾಗೂ ಮುಂದುವರಿದ ರಾಷ್ಟ್ರದ ಮತ್ತೊಬ್ಬ, ಈ ಪೀಳಿಗೆಯ, ಅಗ್ರಗಣ್ಯ ನಾಯಕ ಈ ರೀತಿ ಹೇಳಬೇಕೆಂದರೆ, ಅವರ ತತ್ವ ಮತ್ತು ಆದರ್ಶಗಳಿಂದ ಈತ ಅದೆಷ್ಟು ಪ್ರಭಾವಿತನಾಗಿರಬಹುದು.
ನಿಜ ನಾನು ಹೇಳುತ್ತಿರುವುದು ನಮ್ಮ ಹೆಮ್ಮೆಯ ಮಹಾತ್ಮ ಗಾಂಧೀಜಿಯವರ ಮೇಲಿರುವ ಅಮೇರಿಕಾದ ಅದ್ಯಕ್ಷ ಒಬಾಮನ ಪ್ರೀತಿ ಮತ್ತು ಗೌರವದ ಬಗ್ಗೆ. ಎಲ್ಲೋ ಇರುವ ಒಬಾಮನಿಗೆ,ಎಂದೋ ನಮ್ಮನ್ನಗಲಿದ ಮಹಾತ್ಮರು ಇಂದಿಗೂ ಸ್ಪೂರ್ತಿಯಾಗಬೇಕೆಂದರೆ, ನಿಜಕ್ಕೂ ಆತನ ಮೇಲೆ ನಮ್ಮ ಮಹಾತ್ಮರು ಅದೆಷ್ಟು ಪ್ರಭಾವ ಬೀರಿರಬೇಕು.ನಮ್ಮ ದೇಶಕ್ಕೆ ಬಂದಿಳಿದ ಕೆಲವೇ ಗಂಟೆಗಳಲ್ಲಿ ಆತ ಮೊದಲು ಮಾಡಿದ ಕೆಲಸ ಮುಂಬೈಯಲ್ಲಿರುವ ಮಹಾತ್ಮರು ಎಂದೋ ತಂಗಿ ಹೋಗಿದ್ದ ಜಾಗಕ್ಕೆ ಬೇಟಿ ನೀಡಿ ಅವರಿಗೆ ನಮಿಸಿ ಆಡಿದ ಮಾತುಗಳು ನಿಜಕ್ಕೂ ಮಹಾತ್ಮರ ಬಗ್ಗೆ ಬರಾಕ್ ಒಬಾಮನಿಗೆ ಇದ್ದ ಪ್ರೀತಿಯನ್ನು ತೋರಿಸುತ್ತದೆ.
ಇತ್ತೀಚಿನ ದಿನಗಳಲ್ಲಿ ನಮ್ಮ ದೇಶದಲ್ಲೇ ನಾವೆಲ್ಲರೂ ಗಾಂಧೀಜಿಯವರ ತತ್ವ,ಸಿದ್ಧಾಂತಗಳನ್ನು ಮರೆಯುತ್ತಿರುವ ಹಾಗೂ ಅವೆಲ್ಲವೂ ಈಗಿನ ಕಾಲದಲ್ಲಿ ಉಪಯೋಗಕ್ಕೆ ಬಾರದವು (Irrelevant) ಎಂದು ಯೋಚಿಸುತ್ತಿರುವ ನಮಗೆಲ್ಲರಿಗೂ ಒಬಾಮನ ಈ ಗಾಂಧಿ ಸ್ಮಾರಕ ಬೇಟಿಯಿಂದ ಮತ್ತು ಈತನ ಮಾತುಗಳಿಂದ ನಾವು ಬಹಳಷ್ಟು ಕಲಿಯುವುದಿದೆ. ಕೆಲವು ಇತಿಹಾಸ ತಜ್ಞರು ಹಾಗೂ ಲೇಖಕರು ಇತಿಹಾಸವನ್ನು, ಹಲವಾರು ನಾಯಕರ ತತ್ವ, ಆದರ್ಶಗಳನ್ನು ಅವರವರ ಬುದ್ಧಿಮಟ್ಟಕ್ಕೆ ಅರ್ಥೈಸಿಕೊಂಡು ತಮ್ಮ ಅನೇಕ ಲೇಖನಗಳಲ್ಲಿ ನಮ್ಮ ನಾಯಕರ ಬಗ್ಗೆ ಜನರಲ್ಲಿ ಒಂದು ರೀತಿಯ ತಪ್ಪು ಭಾವನೆಗಳನ್ನು ಮೂಡಿಸಿದ್ದಾರೆ. ನಿಜ ಒಬ್ಬ ಮನುಷ್ಯ ಸಂಪೂರ್ಣ ಒಳ್ಳೆಯವನು ಹಾಗೂ ಆತ ತೆಗೆದುಕೊಳ್ಳುವ ಎಲ್ಲ ನಿರ್ಧಾರಗಳು ಸರಿಯಾಗಿರಬೇಕೆಂದಿಲ್ಲ. ಆತನ ವಿಚಾರಗಳು ನಮ್ಮ ವಿಚಾರಗಳು ಬೇರೆ ಬೇರೆ ಆಗಿರಬಹುದು. ಆದರೆ ನಾವು ಯಾವುದೇ ಮನುಷ್ಯನ ಒಳ್ಳೆಯ ಗುಣಾದರ್ಶಗಳನ್ನು ಬಿಟ್ಟು ಆತನ ವೈಯುಕ್ತಿಕ ಹಾಗೂ ತಪ್ಪುಗಳನ್ನು ಮಾತ್ರ ನೋಡಿದರೆ ನಮ್ಮ ಏಳಿಗೆಗೆ ಏನು ಉಪಯೋಗವಾಗದು.ಮಹಾತ್ಮ ಗಾಂಧಿಯವರ ಸತ್ಯ,ಅಹಿಂಸೆ,ಸರಳತೆ ಮತ್ತು ಪ್ರೀತಿ, ನೂರು ವರ್ಷಗಳ ಹಿಂದೆ ಮತ್ತು ಇನ್ನೂ ನೂರು ವರ್ಷಗಳು ಕಳೆದರು ಅವು ಸಮಂಜಸವಾಗಿರುತ್ತವೆ(Relevant) . ನಾವು ಕೂಡ ಅವಷ್ಟನ್ನೇ ಪಾಲಿಸಿದರು ಸಹ ನಮ್ಮ ವೈಯುಕ್ತಿಕ ಹಾಗೂ ಸಾಮಾಜಿಕ ಜೀವನ ಬಹಳಷ್ಟು ಬದಲಾವಣೆಗಳನ್ನು ಕಾಣಬಹುದು ಎಂಬುದು ನನ್ನ ವೈಯುಕ್ತಿಕ ಅಬಿಪ್ರಾಯ ಅಷ್ಟೇ.
ನಿಮಗಾಗಿ.......
ನಿರಂಜನ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ