ಭಾನುವಾರ, ನವೆಂಬರ್ 28, 2010

ತಿಮ್ಮಪ್ಪನಿಗೆ ನಾ ಚಾಲೆಂಜ್ ಮಾಡಿದ್ದು .........


ತಿಮ್ಮಪ್ಪ ಚಾಲೆಂಜಲ್ಲಿ ಗೆದ್ದದ್ದು !!!!!!!

ಗೆಳೆಯರೇ ,
ನಾ ಇಂದು ನನಗಾದ ಎರಡು ಅನುಭವಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕೆಂದುಕೊಂಡಿದ್ದೇನೆ, ನಿಜವಾಗಿಯೂ ಈ ಎರೆಡು ಅನುಭವಗಳಲ್ಲಿ ಮೊದಲನೆಯದು ನಂಬಿಕೆಗೆ ಸಂಬಂಧಿಸಿದ್ದು ಹಾಗೂ ಕಾಕತಾಳೀಯವಾದದ್ದು, ಮತ್ತೊಂದು ವಿಬಿನ್ನವಾದ ಒಂದು ನೃತ್ಯರೂಪಕ ಕಾರ್ಯಕ್ರಮದ ಬಗ್ಗೆ.

        ಅನೇಕ ದಿನಗಳಿಂದ ತಿರುಪತಿಗೆ ಹೋಗುವ ನನ್ನ ಬಯಕೆ ಯಾವ್ಯಾವುದೋ ಕಾರಣಗಳಿಂದ ಈಡೇರುತ್ತಿರಲಿಲ್ಲ.ಅದರಂತೆಯೇ ಅಲ್ಲಿಯ ಸಾಮಾನ್ಯ ಹಾಗೂ  VIP  ದರ್ಶನಗಳ ಬಗ್ಗೆ ಸ್ವಲ್ಪ ಅಸಮಾಧಾನವಿದ್ದ  ನನಗೆ  ತಿಮ್ಮಪ್ಪನ ಮೇಲೆ ಸಿಟ್ಟು ಕೂಡ ಇತ್ತು :). ಸದಾ ಆತನನ್ನು ನೆನಪಿಸಿಕೊಂಡಾಗಲೆಲ್ಲ ನೀನು ನಿಜವಾಗಿಯೂ ಇದ್ದರೆ ಅಥವಾ ನಿನ್ನ ಶಕ್ತಿ ಈ ಪ್ರಪಂಚದಲ್ಲಿ  ಇದ್ದರೆ ನನಗು ಕೂಡ ಒಮ್ಮೆ  VIP ದರ್ಶನ ಕೊಡು ನೋಡೋಣ ಎಂದು ತಿಮ್ಮಪ್ಪನಿಗೆ ನಮಸ್ಕರಿಸುವ ಬದಲು ಪದೇ ಪದೇ ಚಾಲೆಂಜ್ ಮಾಡಿ,ದೇವರನ್ನೇ ಒಮ್ಮೆ ಪರೀಕ್ಷಿಸಲು ಮುಂದಾಗಿದ್ದೆ !!!!!.  ಅಂದಿನಿಂದಲೂ ನಾನು ಯಾವುದೇ ವೆಂಕಟೇಶ್ವರನ ದೇವಸ್ಥಾನಕ್ಕೂ ಹೋಗಿರಲಿಲ್ಲ. ನಂಬಿಕೆ ಎಂಬ ಒಂದು ಶಕ್ತಿಗೆ ಚಾಲೆಂಜ್ ಮಾಡಿ ಮನಸ್ಸಿನಲ್ಲೇ  ಆತನನ್ನು ನೆನೆಯುತ್ತಿದ್ದೆ ಹಾಗೂ ನೋಡಿ ನಗುತ್ತಿದೆ.

            ಮೊನ್ನೆ ಶನಿವಾರ ನನ್ನ ತಮ್ಮ ಮಧುಸೂಧನ ನನಗೆ  
ISKCON ನಲ್ಲಿ ನೆಡೆಯುತ್ತಿರುವ ಒಂದು ನೃತ್ಯರೂಪಕದ ಬಗ್ಗೆ ಹೇಳಿ,ನನಗೆ ಅಲ್ಲಿಗೆ ಬರಲು ಆಹ್ವಾನವಿತ್ತ. ಅಂದು ಶನಿವಾರವಾಗಿದ್ದರಿಂದ ನಾ ಮರುಮಾತನಾಡದೇ ಸರಿ ಎಂದು, ಅದೇ ನೀರಸವಾದ ವಾರಾಂತ್ಯದ ಚರ್ಚೆಗಳು,ಟೀವಿ ಪ್ರೋಗ್ರಾಂಗಳು,ರೌಂಡ್ಸ್ಗಗಳನ್ನೆಲ್ಲ ಬಿಟ್ಟು   ISKCON ಮುಟ್ಟುವಷ್ಟೊತ್ತಿಗೆ ಸರಿಯಾಗಿ ಸಂಜೆ 6 ಗಂಟೆಯಾಗಿತ್ತು. ಮಧು ಅಷ್ಟೊತ್ತಿಗೆ ಅಲ್ಲಿಗೆ ಬಂದ ತನ್ನ ಸ್ನೇಹಿತೆ ರಂಜೀತಾಳನ್ನ ನಮಗೆ ಪರಿಚಯ ಮಾಡಿಕೊಟ್ಟ.ಅವಳು ಕೊಟ್ಟ ಪಾಸುಗಳನ್ನು ಜೇಬಿಗೇರಿಸಿದ ನಾವು ಕಾರ್ಯಕ್ರಮಕ್ಕೆ ಹೊರಟೆವು. ಯಾವುದೇ ಪೂರ್ವನಿರ್ಧಾರವಿಲ್ಲದೇ ಹೋಗಿದ್ದ ನಮಗೆ ಆ ಕಾರ್ಯಕ್ರಮ ಇನ್ನೂ ಆರಂಭವಾಗಿರದ ಕಾರಣ, ರಂಜಿತ ನಮ್ಮನ್ನು ದೇವರ ದರ್ಶನ ಮಾಡಲೇ ಬೇಕು ಎಂದು ಒತ್ತಾಯಿಸಿ ನಮ್ಮನ್ನು ಅವಳಿಂದೆ ಬರುವಂತೆ ಹೇಳಿ ಮುಂದೆ ಮುಂದೆ ನೆಡೆಯ ತೊಡಗಿದಳು.ಸರಿ ಎಂದು ನಾವು ಅವಳಿಂದೆ ಹೊರಟೆವು, ಮೊದಲು ಸಿಕ್ಕ ದೇವರಿಗೆ ನಮಸ್ಕರಿಸಿ ಮುಂದೆ ನೆಡೆದ ನನಗೆ ಅಚ್ಚರಿಯೊಂದು ಕಾದಿತ್ತು. ಆ ಅಚ್ಚರಿ ಎಂದರೆ ನನಗಾದ ತಿಮ್ಮಪ್ಪನ ದರ್ಶನ ಹಾಗೂ ಅದು ಆದ ರೀತಿ. ನಮ್ಮನು ರಂಜೀತ ಕರೆದೊಯ್ದದ್ದು VIP ದಾರಿಯಲ್ಲೇ !!!!!!!!  ಹತ್ತಿರದಿಂದಲ್ಲೇ ನೋಡಿ, ಆತನ್ನನ್ನು ನಮಸ್ಕರಿಸಿದ ನಾನು, ಮನಸಿನ್ನಲ್ಲೇ ಅಂದುಕೊಂಡದ್ದು " ಶಹಬಾಸ್ ತಿಮ್ಮಪ್ಪ, ತಿರುಪತಿಯಲ್ಲಿ ನನಗೆ VIP ದರ್ಶನ ಕೊಡು ಅಂದ್ರೆ ಬೆಂಗಳೂರಿನಲ್ಲೇ ಕೊಟ್ಟು ಬಿಟ್ಟೆ, ನೀನು ಸಾಮಾನ್ಯನಲ್ಲ ". ನಂತರ ಒಂದು ದೊಡ್ಡ ನಮಸ್ಕಾರ ಮಾಡಿ, ಹೊರನೆಡೆದಾಗ ನನಗಂತು ಒಂದು ರೀತಿಯ ನಗು ಬರುತ್ತಿತ್ತು ಹಾಗೂ ತಿಮ್ಮಪ್ಪ ಚಾಲೆಂಜಲ್ಲಿ ಗೆದ್ದು ಬಿಟ್ಟನಲ್ಲ ಎಂದೆನಿಸಿ !! ಅವನ ಮೇಲಿದ್ದ ನಂಬಿಕೆ ಇನ್ನೊಷ್ಟ ಜಾಸ್ತಿ ಕೂಡ ಆಗಿತ್ತು. ಅಷ್ಟೊತ್ತಿಗೇ ನಾವು ಹೋಗಿದ್ದ ಇನ್ನೊಂದು ಅದ್ಭುತ ಕಾರ್ಯಕ್ರಮ ಶುರುವಾಗುವುದರಲ್ಲಿತ್ತು. ಅದನ್ನು ನೋಡೊಲು ರಂಜಿತ ಕೊಟ್ಟ ಪಾಸ್ ತೋರಿಸಿ ಹೊಳಗೆ ಹೋಗಿ ಕೂತೆವು. ಆ ನೃತ್ಯರೂಪಕದ ಬಗ್ಗೆ ನಾ ನಿಮಗೆ ಹೇಳಲೇ ಬೇಕು. ಆದರೆ ಮುಂದಿನ ಲೇಖನದಲ್ಲಿ ಅದರ ಬಗ್ಗೆ ಹೇಳುವುದು ಒಳ್ಳೆಯದೆಂದು ನಾ ಯೋಚಿಸಿ, ಶನಿವಾರ ಮಾಡದಿದ್ದ, ಮತ್ತೆ ಅದೇ ಚರ್ಚೆಗಳಿಗೆ,ಟೀವೀ ಪ್ರೋಗ್ರಾಂಗಳಿಗೆ, ರೌಂಡ್ಸ್ ಗಳಿಗೆ ಸಿದ್ದನಾಗಲು,ನಮ್ಮಮ್ಮನ " ಬೆಣ್ಣೆ" ಹಾಕದ ದೋಸೆ ತಿನ್ನಲು ಹೊರಟೆ.......

ನಿಮಗಾಗಿ.......
ನಿರಂಜನ್

2 ಕಾಮೆಂಟ್‌ಗಳು: