ಶುಕ್ರವಾರ, ಜನವರಿ 21, 2011

ನಮ್ಮ ಆಫೀಸ್ ಲೈಫ್ !!!!!!!!

                                              ನಮ್ಮ ಆಫೀಸ್ ಲೈಫ್ !!!!!!!!
ಸ್ನೇಹಿತರೆ ,
ಕೆಲವು ವರ್ಷಗಳ ಕಾಲ ಜೊತೆಗಿದ್ದು , ಜೊತೆಗೆ ಕಲಿತು, ಸಾಕಷ್ಟು ತರಲೆ , ಮಸ್ತಿ, ಜಗಳ , ಚೆಲ್ಲಾಟಗಳನ್ನಾಡಿ , ಕಷ್ಟ ಸುಖಗಳನ್ನು ಹಂಚಿಕೊಂಡ ಸ್ನೇಹಿತರು ಒಬ್ಬೊಬ್ಬರಾಗಿ , ಅದು ಪಾರ್ಟಿಗಳನ್ನು ಕೊಟ್ಟು ದೂರವಾಗುತ್ತಿದ್ದರೆನಿಜವಾಗಿಯೂ ಬೇಜಾರಾಗುವುದಿಲ್ಲವೇ ???.   ಚಿಕ್ಕವರಾಗಿದ್ದಾಗ ಶಾಲೆಯಲ್ಲಿ ಹತ್ತನೆ ತರಗತಿ ಮುಗಿಸಿದಾಗ, ಕಾಲೇಜುಗಳಲ್ಲಿ PUC, ಇಂಜಿನಿಯರಿಂಗ್ ಮತ್ತೆ MTech ಕೊನೆಯ ವರ್ಷದಲ್ಲಿ ಆದ ಈ ಅನುಭವ, ಮತ್ತೆ ಈಗ ನನಗೆ ಆಗುತ್ತಿರುವುದು ನಮ್ಮ ಆಫೀಸ್ ಅಲ್ಲಿ. ಕೆಲ ವರ್ಷಗಳ ಹಿಂದೆ ಈ ಕಂಪನಿಗೆ ನಾವು ಸೀರಿದ್ದು ಸುಮಾರು 30 ಜನ, ಬಹುಪಾಲು ನಮ್ಮೆಲ್ಲರಿಗೂ ಇದೆ ಮೊದಲ ಕಂಪನಿಯಾಗಿತ್ತು. ಬೇರೆ ಬೇರೆ ಕಾಲೇಜುಗಳು, ಬ್ರಾಂಚುಗಳು,ಭಾಷೆಗಳು,ಊರುಗಳು ಮತ್ತು ವಯಸ್ಸುಗಳು ಆಗಿದ್ದರು ಸಹ ನಮ್ಮನ್ನು ಬೆಸೆದ  " ಸ್ನೇಹ " ಮಾತ್ರ ಒಂದೇ ಆಗಿತ್ತು. ನಾವು ಆಗತಾನೆ ಕಾಲೇಜು ಮುಗಿಸಿ ಬಂದಿದ್ದರಿಂದ ನಮ್ಮ ತುಂಟತನ ಸ್ವಲ್ಪ ಹಾಗೆಯೇ ಇತ್ತು. ನಾವು ಇಲ್ಲಿ ಟ್ರೈನಿಗಳಾಗಿ ಸೇರಿದ್ದರಿಂದ , ಮೊದಲಿಗೆ ಕೆಲಸದ ಒತ್ತಡ ಕೂಡ ಅಷ್ಟಾಗಿ ಇರದ ಕಾರಣ ಈ ಕಂಪನಿಯಲ್ಲಿ  ಅದು (ತುಂಟತನ) ಇನ್ನೂ ಜಾಸ್ತಿ ಆಯಿತು ಹೊರತು ಕಡಿಮೆ ಆಗಲೇ ಇಲ್ಲ, ಆಡದ ಆಟಗಳಿಲ್ಲ, ಮಾಡದ ತುಂಟಾಟಗಳಿಲ್ಲ,ಒಬ್ಬರಿಗೊಬ್ಬರು ಕಾಲೆಳೆಯದ ದಿನಗಳಂತೂ ಇಲ್ಲವೇ ಇಲ್ಲ.  ನಿಜ ಹೇಳಬೇಕೆಂದರೆ ಸಾಫ್ಟ್ ವೇರ್ ಕಂಪನಿಯಲ್ಲಿ ಇದ್ದರು ಅಲ್ಲಿರುವವರಿಗಿಂತ ಅತೀ ಬಿನ್ನವಾಗಿದ್ದೆವು. ಇಲ್ಲಿಯ ಎಂಜಿನಿಯರುಗಳು ಮತ್ತು ಹಿರಿಯರು ನಮ್ಮನ್ನು ನೋಡಿ ನಗುತ್ತಿದ್ದರು ಮತ್ತು ಕಾಮಿಡಿ ಕಿಲಾಡಿಗಳೆನ್ದು ಅಪರೂಪಕ್ಕೆ ನಮಗೂ ತಮಾಷೆ ಮಾಡುತ್ತಿದ್ದರು. ಆಗಲೇ ನಮಗೂ ಗೊತ್ತಾಗಿದ್ದು ಪರವಾಗಿಲ್ಲ ಇವರು ಕೂಡ ನಗುವರೆಂದು !!!!!!  

           ಗುಂಪು ಗುಂಪಾಗಿ ಊಟಕ್ಕೆ ಹೋಗುತಿದ್ದದ್ದು, ಊಟ ಮುಗಿದ ಮೇಲೆ ಕೋಲ್ ಮಂಜನ ಅದ್ಯಕ್ಷತೆಯಲ್ಲಿ  ನಾವು ಮಾಡುತ್ತಿದ್ದ  "ಮೀಟಿಂಗು" ಅದ್ಭುತವಾಗಿರುತಿತ್ತು, ಅಲ್ಲಿ ನಾವು ಮಾಡದ ಚರ್ಚೆಗಳೇ ಇಲ್ಲ, ಇದಕ್ಕಾಗಿಯೇ ಎಷ್ಟೇ ಕೆಲ್ಸವಿದ್ದರು ಒಂದು ಗಂಟೆ ಅಲ್ಲಿ ನಾವೆಲ್ಲ ಸೇರಿ ಕಷ್ಟ ಸುಖ, ಕೆಲಸದ ವಿಷಯಗಳು, ಗಾಸಿಪ್‌ಗಳು, ಹುಡುಗಿಯರ-ಹುಡುಗರ ಬಗ್ಗೆ , ಸಿನಿಮಾಗಳ ಬಗ್ಗೆ ಇನ್ನೂ ಅನೇಕ ವಿಷಯಗಳ ಬಗ್ಗೆ ಚರ್ಚೆ ಮಾಡುತ್ತಾ ಇದ್ದ್ವಿ. ಕಾಲೇಜುಗಳಲ್ಲಿ ಅಡ್ಡ ಹೆಸರು ಇಡುವ ಹಾಗೆ ಇಲ್ಲಿಯೂ ಕೂಡ ಅಡ್ಡೆಸರುಗಳು , ಕೂಗಾಟಗಲು, ಟಪಾನ್ ಗುಚ್ಚಿ ಡ್ಯಾನ್ಸುಗಳು ಮತ್ತು ಕಾಲಿ ಮತ್ತು ಪೋಲಿ ಮಾತುಗಳು ಇನ್ನುಮುಂದೆ ಇರುವುದಿಲ್ಲವಲ್ಲ ಎಂಬ ಹಾಗೂ ಇಲ್ಲಿಯ ಹಿರಿಯರೊಂದಿಗೆ ಗಂಬೀರವಾಗಿರಬೇಕಲ್ಲಪ್ಪಾ ಎಂಬ ಬಾರಿ ಬೇಸರವಿದೆ.

              ನಮ್ಮ ಮೂಸು (ಕಿರಣ್) ಮೀಮೀಕ್ರಿ , ಸ್ಲೋ ಮಂಜನ ಮುಗ್ದ ನಗು, ಡ್ಯೂಡ್ ಪ್ರಭುವಿನ ವಸ್ತ್ರಾಲಾಂಕಾರ,  ಅಮ್ಮನ ಮಗ ವಿನಯನ ನಗು ಮತ್ತು ತುಂಟತನ, ಮಾರಿಯ ( ಆರಿಫ್) ಸೈರನ್ , ಜ್ಯೋತಿಯ ಸಣ್ಣ ನಗು, ರೆಡ್ಡಿಯ ಅದೇ ಗಾತ್ರದ ನಗು,  ಇನ್ನೂ ಮೇಲೆ ನನಗೆ ನೆನಪುಗಳಾಗೇ ಉಳಿಯಲಿವೆ. ಸ್ನೇಹಿತರೆ ನಿಜವಾಗಿಯೂ ನಿಮ್ಮೊಂದಿಗೆ ನಾ ಕಳೆದೆ ಇಷ್ಟು ದಿನಗಳು ನಿಜಕ್ಕೂ ಮರೆಯಲಾಗದ ದಿನಗಳು. ನಿಮ್ಮನ್ನು ಹಾಗೂ ನಿಮ್ಮ ನೆನಪುಗಳನ್ನು ಸದಾ ನನ್ನೊಡನೆ ಇರಿಸಿಕೊಂಡು , ನಿಮ್ಮನ್ನು ಮರೆಯದೇ , ನಿಮ್ಮ ಮಾತುಗಳನ್ನು ಸದಾ ನೆನಪಿಸಿಕೊಂಡು ನಾ ಒಬ್ಬನೇ ನಗುತ್ತಿರಲು ಇಷ್ಟಪಡುತ್ತೇನೆ. ನೀವೆಲ್ಲರೂ ಒಳ್ಳೇ ಒಳ್ಳೇ ಕಂಪನಿಗೆ ಸೇರಿಕೊಳ್ಳುತ್ತಿರುವಿರಿ ನಿಮಗೆಲ್ಲ ಒಳ್ಳೆಯದಾಗಲಿ ಎನ್ನುತ್ತಾ ಸದಾ ನಿಮ್ಮ ನೆನೆಪಿನಲ್ಲಿ ನನ್ನಿಂದ ಈ ಲೇಖನ ನಿಮಗಾಗಿ :)      
ನಿಮಗಾಗಿ.......
ನಿರಂಜನ್

8 ಕಾಮೆಂಟ್‌ಗಳು:

  1. ha ha ha :) ಚೆಲ್ಲಾಟ means aata atiyaaguvudu or hatotiyalli iradiruvudu !!!!! if a player plays a game in ground its called Aata otherwise it Chellaata !!!!!!!

    ಪ್ರತ್ಯುತ್ತರಅಳಿಸಿ