"ನನ್ನಿಂದ ಪ್ರೀತಿಗಾಗಿ"
ಸ್ನೇಹಿತರೆ ಈ ಬಾರಿ ಸ್ವಲ್ಪ ಚೇಂಜ್ ಇರಲಿ ಅಂತ ಲೇಖನಕ್ಕೆ ಬದಲಾಗಿ, "ನನ್ನಿಂದ ಪ್ರೀತಿಗಾಗಿ" ಬರೆದ ನನ್ನ ನಿಜವಾದ ಮತ್ತು ನೈಜ ಭಾವನೆಗಳನ್ನ ಇಲ್ಲಿ ಪೋಸ್ಟ್ ಮಾಡ್ತಾ ಇದೀನಿ !!!!! ನಿದ್ದೇಗೆಟ್ಟು,ಇಷ್ಟಪಟ್ಟು ಬರೆದ ಕೆಲವು ಲೈನುಗಳು ಅಷ್ಟೇ !!! ಒಂದು ವಯಸ್ಸಿನಲ್ಲಿ ಅಥವಾ ಕೆಲವು ವೇಳೆಯಲ್ಲಿ ಇವು ತೀರಾ ಒಬ್ಬರಿಗಾಗಿ ಅಂದರೆ "ನನ್ನಿಂದ-ನಿನಗಾಗಿ"/ಪ್ರೀತಿಗಾಗಿ ಅನಿಸುತ್ತಿದ್ದ ಇವು , ಈಗ ಸ್ವಲ್ಪ ಬದಲಾಗಿ "ನನ್ನಿಂದ-ನಿಮಗಾಗಿ"ಆಗಿವೆ !!!!!
ಸಿಂಧೂರ
ನೂರಾರು ತಾರೆಯರ ನಡುವೆ ನಿನ್ನ
ಮುದ್ದಾದ ಮೊಗ ಚಂದ ..............
ನೀ ಬರುವ ಹೊತ್ತಿಗೆ ಮರೆಯಾಗುವನು ರವಿ
ನಾಚಿ ಮೊರೆ ಮರೆಮಾಚಿ ನಿನ್ನಿಂದ ..........
ಆಗುವನು ಕವಿ ಶೃಂಗಾರ ಕವಿಯಾಗಿ
ನಿನ್ನ ನೊರೆಯಾಲಿನಂತ ಮೈ ಬಣ್ಣದಿಂದ
ನೂರಾರು ತಾರೆಯರ ನಡುವೆ ನಿನ್ನ
ಮುದ್ದಾದ ಮೊಗ ಚಂದ…
ನಿಮಗಾಗಿ.......
ಏಕೆ ಹೀಗೆ !
ಕವಿಯಲ್ಲ ನಾನು, ನಿನ್ನ ನೋಡಿದೊಡನೆ
ಕವನ ಹಾಗೆ ಹೊರಹೊಮ್ಮೂತಿದೆಯಲ್ಲ......
ಕವಿಯಲ್ಲ ನಾನು, ನಿನ್ನ ನೋಡಿದೊಡನೆ
ಕವನ ಹಾಗೆ ಹೊರಹೊಮ್ಮೂತಿದೆಯಲ್ಲ......
ಕಲಾವಿದನಲ್ಲ ನಾನು, ನಿನ್ನ ನೋಡಿದೊಡನೆ
ಚಿತ್ರ ಹಾಗೆ ಗರಿಗೆದರಿದೆಯಲ್ಲ..... .
ಹಾಡುಗಾರನಲ್ಲ ನಾನು, ನಿನ್ನ ನೋಡಿದೊಡನೆ
ಗಾನಸುದೆ ಹರಿಯುತಿದೆಯಲ್ಲ.......
ಕಳ್ಳನಲ್ಲ ನಾನು, ನಿನ್ನ ನೋಡಿದೊಡನೆ
ಹೃದಯ ಕದಿಯಲೆನಿಸುತಿದೆಯಲ್ಲ......
ಹಿಂದೆಂದೂ ಕಂಡಿಲ್ಲ ನಾನು, ನಿನ್ನ ನೋಡಿದೊಡನೆ
ಹೀಗೇಕೆನಿಸುತಿದೆ ನನಗೆ ತಿಳಿದಿಲ್ಲ ......
ನಿಮಗಾಗಿ.......
ನಿಮಗಾಗಿ.......
ನಿರಂಜನ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ