ಭಾನುವಾರ, ಜೂನ್ 19, 2011

Just be part of it .........

                                                           ವಿದ್ಯಾರ್ಥಿ-ಮಿತ್ರ........

ಸ್ನೇಹಿತರೆ ,,,

ಬಾರಿ ನನ್ನ ಪ್ರವಾಸದ ಕತೆಗಳನ್ನೋ ಅಥವಾ ಇನ್ನ್ಯಾವುದೋ ಕತೆಯನ್ನು ನಿಮ್ಮ ಮುಂದೆ ಇಡದೆ ಸ್ವಲ್ಪ ಡಿಫೆರೆಂಟ್ ಸಬ್ಜೆಕ್ಟ್ ಬಗ್ಗೆ ಹೇಳ ಬಯಸುತ್ತೇನೆ. ಇದು ಕತೆಯಲ್ಲ ,ರಿಯಾಲಿಟಿ ಬಗ್ಗೆ ಹೇಳುವ ಹಾಗೂ ನಿಮ್ಮ ಅನಿಸಿಕೆಗಳನ್ನು ಕೇಳುವ,ನಿಮ್ಮ ಸಹಾಯವನ್ನು, ನಿಮ್ಮ ಅನುಭವವನ್ನು ಉಪಯೋಗಿಸಿಕೊಂಡು ನಮ್ಮ ಸಮಾಜದಲ್ಲಿನ ಬಡ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ, ಶಿಕ್ಷಣಕ್ಕೆ ಸಹಾಯ ಹಾಗೂ ಅವರಿಗೆ ಒಳ್ಳೆಯ ವಿದ್ಯಾಬ್ಯಾಸ ಕಲ್ಪಿಸುವ ನಿಟ್ಟಿನಲ್ಲಿ ನಮ್ಮ ಪಾತ್ರ ಏನು ಮತ್ತು ಆ ನಿಟ್ಟಿನಲ್ಲಿ ಸ್ಥಾಪಿತವಾಗಿರು "ವಿದ್ಯಾರ್ಥಿ-ಮಿತ್ರ" ಎಂಬ ಒಂದು ಚಿಕ್ಕ ಟ್ರಸ್ಟ್ ಬಗ್ಗೆ ನಾ ಸ್ವಲ್ಪ ನಿಮಗೆ ಹೇಳಲೇ ಬೇಕು.

          ಬೆಳಿಗ್ಗೆಯ ಟ್ರಾಫಿಕ್ ಸಿಗ್ನಲ್ಲುಗಳಲ್ಲಿ ಮಲ್ಲಿಗೆ ಹೂವು ಮಾರುವುದು, ಸಂಜೆ ಅದೇ ಹುಡುಗ ಈ ಸಂಜೆ ಪೇಪರ್ ಮಾರುವುದು, ಆಫೀಸ್ ಕೆಫೆಟೇರಿಯಾದಲ್ಲಿ ಮತ್ತೊಬ್ಬ ಹುಡುಗ ಮಾಣಿಯಾಗಿರುವುದು, ಬಸ್ಸು ನಿಲ್ದಾಣಗಳಲ್ಲಿ ಅನೇಕ ಚಿಕ್ಕ ಚಿಕ್ಕ ಮಕ್ಕಳು ಹುಬ್ಬಳ್ಳಿ,ಧಾರವಾಡ,ಮಂಡ್ಯ,ಮೈಸೂರು,ಮಂಗಳೂರು ಅಂತ ಚೀರಾಡುವುದು ಹೀಗೆ ಅನೇಕ ವಿಧಗಳಲ್ಲಿ ,ಕಲಿಯುವ-ನಲಿಯುವ ವಯಸ್ಸಿನಲ್ಲಿ ಬೀದಿಗೆ ಇಳಿದಿರುವ ಮಕ್ಕಳನ್ನು ನೀವು ನೋಡಿರಲೇಬೇಕು. ಇದೆಲ್ಲ ನಮ್ಮ ಬೆಂಗಳೂರಿನಂತಹ  ಹೈಟೆಕ್ ಸಿಟಿಯಲ್ಲಾದರೆ ಇನ್ನೂ ಹಳ್ಳಿಗಾಡಿನ ಪರಿಸ್ಥಿತಿ ಬಗ್ಗೆ ನೀವೇ ಯೋಚನೆ ಮಾಡಿ. ಹಾಗೆ ನೋಡಿದರೆ ನಮ್ಮ ಹಳ್ಳಿಗಾಡಿನ ಪರಿಸ್ಥಿತಿ ಈ ಮಟ್ಟಕ್ಕೆ ಹೋಗಿರದಿದ್ದರು ಅಲ್ಲಿಯ ವಿದ್ಯಾರ್ಥಿಗಳ ಕೊರತೆಗಳೇ ಬೇರೆ. ಸರಿಯಾದ ಮಾರ್ಗದರ್ಶನ ಹಳ್ಳಿಯ ವಿದ್ಯಾರ್ಥಿಗಳಿಗೆ ಸಿಗುತ್ತಿಲ್ಲ, ಸರ್ಕಾರದ ಯೋಜನೆಗಳು ಅವರಿಗೆ ಸಿಗುತ್ತಿಲ್ಲ. ಉನ್ನತ ಶಿಕ್ಷಣದ ಬಗ್ಗೆ ಮಾಹಿತಿಯ ಕೊರತೆ, ಅನೇಕ ಸಮಸ್ಯೆಗಳಿಂದಾಗಿ ಅನೇಕ ವಿದ್ಯಾರ್ಥಿಗಳು ಇಂದು ಅವಕಾಶವಂಚಿತರಾಗಿದ್ದಾರೆ. ಹಣ ಮತ್ತು ಮಾರ್ಗದರ್ಶನದ ಕೊರತೆಯೇ ಇದಕ್ಕೆಲ್ಲ ಕಾರಣವೆಂದರೆ ತಪ್ಪಾಗಾಲಿಕ್ಕಿಲ್ಲ. ಹಾಗಾಗಿ ಈ ಎಲ್ಲ ಸಮಸ್ಯಗಳಿಗೆ, ಬಡ ವಿದ್ಯಾರ್ಥಿಗಳಿಗೆ  ಸಹಾಯ, ಮಾರ್ಗದರ್ಶನ, ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯಗಳ ಮತ್ತು ದೇಶದ ಬಗ್ಗೆ ಅರಿವು ಮೂಡಿಸುವುದು ನಮ್ಮ ನಿಮ್ಮೆಲ್ಲವರ ಕರ್ತವ್ಯವಾಗಿದೆ. ಅದಕ್ಕಾಗಿಯೇ ಗ್ರಾಮೀಣ ಶಿಕ್ಷಣ  ಮತ್ತು ಸಮಾಜದ ಬಗ್ಗೆ ಕಳಕಳಿ ಇರುವ ಅನೇಕರ ಸಲಹೆ ಪಡೆದು ಮತ್ತು ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿ-ಮಿತ್ರ ಎಂಬ ಟ್ರಸ್ಟ್ ಸ್ಟಾಪಿಸಲಾಗಿದೆ.

       "ವಿದ್ಯಾರ್ಥಿ-ಮಿತ್ರ" ಟ್ರಸ್ಟ್ ಕಳೆದೆರೆಡು ತಿಂಗಳಿಂದ ತನ್ನ ಕಾರ್ಯವನ್ನು ಪ್ರಾರಂಬಿಸಿದೆ. ಇದು ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ತನ್ನ ಕಾರ್ಯ-ಯೋಜನೆಗಳನ್ನು ರೂಪಿಸಿಕೊಂಡಿದೆ. ಸಮಾಜದ ಎಲ್ಲ ವರ್ಗದ ವಿದ್ಯಾರ್ಥಿಗಳಿಗೂ ಮಾರ್ಗದರ್ಶನ, ಬಡ ವಿದ್ಯಾರ್ಥಿಗಳಿಗೆ ಧನಸಹಾಯ, ಅವಕಾಶವಂಚಿಂತರಿಗೆ ಅವಕಾಶ ಕಲ್ಪಿಸುವ, ವಿದ್ಯಾರ್ಥಿಗಳ  ಮೂಲಕ ಸಾಮಾಜಿಕ ಪಿಡುಗುಗಳನ್ನು ಹೋಗಲಾಡಿಸುವ, ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯಗಳನ್ನು ಬಿತ್ತುವುದು, ವಿದ್ಯಾರ್ಥಿಗಳಲ್ಲಿ ನಮ್ಮ ಪರಿಸರದ ಬೆಗ್ಗೆ ಅರಿವು ಮೂಡಿಸುವುದು ವಿದ್ಯಾರ್ಥಿ-ಮಿತ್ರ ಟ್ರಸ್ಟ್ ನ ಮುಖ್ಯ ಗುರಿಯಾಗಿದೆ. ಗ್ರಾಮೀಣ ಶಾಲೆಗಳಲ್ಲಿನ ಹಾಗೂ ಅಲ್ಲಿಯ ವಿಧ್ಯಾರ್ಥಿಗಳ ಕೊರತೆಗಳ ಬಗ್ಗೆ ವಿಶೇಷ ಆಸಕ್ತಿ ಹೊಂದಿರುವ ಈ ಟ್ರಸ್ಟ್ ಅದಕ್ಕಾಗಿಯೇ ಅನೇಕ ಯೋಜನೆಗಳನ್ನು ರೂಪಿಸಿದೆ. ಆ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಅನೇಕ ಸ್ವಯಂ ಸೇವಕರನ್ನು ಒಳಗೊಂಡಿದೆ. ಇದನ್ನು ಇನ್ನೂ ಬಲಪಡಿಸಲು ನಮಗೆ ನಿಮ್ಮೆಲ್ಲರ ಸಹಾಯ ಮತ್ತು ಮಾರ್ಗದರ್ಶನದ ಅವಶ್ಯಕತೆ ಇದೆ. ನನ್ನ ಸ್ನೇಹಿತರಾದ ನೀವು ನಿಜಕ್ಕೂ ಈ ಕಾರ್ಯದಲ್ಲಿ ನಮ್ಮೊಡನೆ ಸದಾ ನೀವು ಇರುತ್ತೀರಿ ಅಂತ ನಾವು ನಂಬಿದ್ದೇವೆ. ನಿಮ್ಮ ಒಂದು ಸಣ್ಣ ಸಹಾಯ, ಅದು ಯಾವುದೇ ರೂಪದಲ್ಲಿ ಇದ್ದರು ಪರವಾಗಿಲ್ಲ, ಅದು ಬಹಳಷ್ಟು ಬದಲಾವಣೆ ತರಬಲ್ಲದು.  ನೀವೆಲ್ಲರೂ ಇದರಲ್ಲಿ ಭಾಗಿಯಾಗ ಬೇಕೆಂದು ನಮ್ಮ ಟ್ರಸ್ಟ್ ತಮ್ಮಲ್ಲಿ ಕಳಕಳಿಯಿಂದ ನಿಮ್ಮನ್ನು ಕೇಳಿಕೊಳ್ಳುತ್ತದೆ.

       ನೀವೂ ವಿದ್ಯಾರ್ಥಿ-ಮಿತ್ರರಾಗಲು, ನಿಮ್ಮ ಅನುಭವಗಳನ್ನು ಅವರಿಗೆ ತಿಳಿಸಲು, ನಿಮ್ಮ ವಿಚಾರಧಾರೆಗಳನ್ನೂ ಅವರಿಗೆ ಮುಟ್ಟಿಸಲು ನಿಮ್ಮ ಕೈಲಾದ ರೀತಿಯಲ್ಲಿ ನೀವು ಅವರಿಗೆ ಸಹಾಯ ಮಾಡಲು ವಿದ್ಯಾರ್ಥಿ-ಮಿತ್ರ ಒಂದು ವೇದಿಕೆಯಾಗಿದೆ. ಸ್ನೇಹಿತರೆ ನೀವು ದಯವಿಟ್ಟು ಇದರಲ್ಲಿ ಭಾಗಿಯಾಗಿ ಸಮಾಜದ ಒಳಿತಿಗಾಗಿ ನಮ್ಮ ಕೈಯಲ್ಲಿ ಎಷ್ಟು ಸಾದ್ಯಾವೋ ಅಷ್ಟು ನಾವು ಮಾಡೋಣ.
         ವಿದ್ಯಾರ್ಥಿ-ಮಿತ್ರರಾಗಲು ಮತ್ತು ವಿದ್ಯಾರ್ಥಿ ಮಿತ್ರ ಟ್ರಸ್ಟ್ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ, ನೀವು ಮಾಡಬೇಕಾಗಿರುವು ಕೆಳಕಂಡವರಿಗೆ ಒಂದೇ ಒಂದು ಫೋನ್ ಕರೆ ಅಥವ  ಇ-ಮೈಲ್.
Email :  vidyarthi.mitraru@gmail.com

ನಿರಂಜನ್ - 9739892642


ಸುರೇಶ್ ನರಸಿಂಹ - 9880689176


ವೆಂಕಟ್ ಕರದಳ್ಳಿ -9900789000


ವೀರೇಶ್ -9945088700


ಚಂದ್ರಶೇಕರ್ ಬ್ಯಾಡಗಿ -9972002340


ರಾಮಕೃಷ್ಣ ಸ್ - 9886058576


ನಿಮಗಾಗಿ.......
ನಿರಂಜನ್




1 ಕಾಮೆಂಟ್‌:

  1. ತುಂಬಾ ಚೆನ್ನಾಗಿದೆ ನಿರಂಜನ್.
    ವಿಧ್ಯಾರ್ಥಿ ಜೀವನವನ್ನು ನಾವು ಮುಗಿಸಿ ಬಂದಿದ್ದೇವೆ.. ನಾವು ಕೂಡ ಕೆಲ ಕಷ್ಟಗಳನ್ನ ಪಟ್ಟಿದ್ದೇವೆ, ಕೆಲ ಅವಕಾಶಗಳನ್ನ ಕಳೆದುಕೊಂಡಿದ್ದೇವೆ.. ಈಗ ಪ್ರಸ್ತುತ ಇರುವ ವಿಧ್ಯಾರ್ಥಿ ಮಿತ್ರರ ಕಷ್ಟಗಳನ್ನ ನೋಡ್ತಿದ್ದೇವೆ, ಕೇಳ್ತಿದ್ದೇವೆ.. ಇವುಗಳಿಗೆ ತಕ್ಕಮಟ್ಟಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ನಾವು ಪ್ರಯತ್ನಿಸೋಣ..

    ಪ್ರತ್ಯುತ್ತರಅಳಿಸಿ