ಇಳಿಮುಖ
ಇಳಿ ಮುಖವಾಗುತ್ತಿಲ್ಲವೇ ನನ್ನಿನಿಯಾ
ನಮ್ಮ ಪ್ರೀತಿಯಲೆಗಳ ಬಾರಿಭೋರ್ಗರೆತ.. ?
ನಾವು ಕಟ್ಟಿದ ಕನಸುಗಳು ನನಸಾಗುವ
ಮುನ್ನವೇ ಮಾಸುತ್ತಿವೆಯಲ್ಲವೇ ಮಾತಿಲ್ಲದೆ ?
ನಾವು ತುಂಬಿಸುತ್ತಿದ್ದ ತುಂಬುಪ್ರೀತಿಯ
ಬಟ್ಟಲು ಒಣಗಿ ಬರಿದಾಗುತ್ತಿದೆಯಲ್ಲವೇ ?
ನಾನರಿಯೆ ಮನದರಸಿ , ಜಾರುತಿಹುದೆನ್ನ
ಮನಸ್ಸು ಮಂಕಾಗಿ, ಕಳೆಯಬಿಡದಿರದನ್ನ
ಅಮೃತದ ಆಕರಗಳಾಗಿದ್ದ ಅದರಗಳು
ಅಂಜಿಕೆಯಿಂದಗಲಿಕೆಗೆ ಹಾತೊರೆಯುತ್ತಿವೆ
ಪ್ರೀತಿಯ ಮಧುವಾಗಿದ್ದ ನಮ್ಮೊಡಲು
ಕೋಪದ ಮಡುವಾಗಿವೆ, ಸಹಕರಿಸಬೇಕು
ನಾವಾಡಿದಾಟ ನಲಿದಾಟಗಳೊಲುಮೆಯ
ಚಿಲುಮೆ ಬತ್ತುವ ಮೊದಲೇ,ಸ್ಫೂರ್ತಿಯಾಗು
ಹುಸಿಯ ಕೋಪದ ಮಾತುಗಳು ಪ್ರೀತಿಯ
ಕಸಿದು ಕೊಳ್ಳುವ ಮೊದಲು , ಹಸಿ ನಗೆಬೀರು
ನಿಮಗಾಗಿ
ನಿರಂಜನ್
Scooper ...nice and difficult words
ಪ್ರತ್ಯುತ್ತರಅಳಿಸಿ