ಪ್ರೀತಿಯ ಸ್ನೇಹಿತರೆ ಹೊಸ ವರುಷದ ಶುಭಾಶಯಗಳು. ಕಳೆದ ವರ್ಷದ ಕಹಿಗಳು ಕಾಣಿಯಾಗಲಿ , ಸಿಹಿ ಮಾತ್ರ ಈ ವರುಷಕ್ಕೆ ಸವಿಯಲು ಸಿಗಲಿ. ಕಳೆದವರ್ಷದ ಅಂತ್ಯ ನನಗಂತೂ ತುಂಬಾ ಆನಂದದಾಯಕವು , ಫಲಪ್ರದವು ಹಾಗು ಸಿಹಿಯಾಗಿಯೂ ಇತ್ತು , ಈ ಹೊಸ ವರುಷದ ಆದಿಯು ಅಷ್ಟೇ ಚೆನ್ನಾಗಿ ಇದೆ. ಇದಕ್ಕೆಲ್ಲ ಕಾರಣವೂ ಈಗಾಗಲೇ ನಿಮಗೆಲ್ಲ ಗೊತ್ತಿರಬಹುದು ಕೂಡ. ನಿಜ ನನ್ನ ಖುಶಿಗಳಿಗೆಲ್ಲ ಕಾರಣ ನನ್ನವಳು....
ಇತ್ತೀಚಿಗೆ ನನ್ನವಳ ಮೇಲೆ ಪ್ರೀತಿಯುಕ್ಕಿ ನಾ ಒಂದು ಕವನ ಗೀಚಿದೆ , ಅದನ್ನು ನಾ ಅವಳ ಮುಂದೆ ಶೃಂಗಾರ ಲಹರಿಯಲ್ಲೇ ವಾಚನವನ್ನೂ ಮಾಡಿದೆ , ನನ್ನವಳು ಸಕತ್ ಖುಷಿ ಪಟ್ಟಳು , ಸಿಹಿ ನಗೆ ಬೀರಿದಳು , ನಾಚಿ ನೀರಾದಳು ಕೂಡ. ಕೆಲ ಕ್ಷಣ ಬಹು ಸಂತೋಷದಿಂದ ಕುಣಿದು ಕುಪ್ಪಳಿಸಿದ ಅವಳು , ಒಂದು ಕ್ಷಣ ಸುಮ್ಮನಾಗಿ "ರೀ... ನಿಜವಾಗಿಯೂ ನೀವು ನನ್ನನ್ನೇ ಮನಸ್ಸಿನಲ್ಲಿ ಇಟ್ಟುಕೊಂಡು ಇದನ್ನ ಬರೆದಿರಾ ??? " ಎಂದಳು . ನಾ ಅದಕ್ಕೆ " ಹೌದು " ಎಂದಾಗ ಅವಳ ಮುಖಭಾವ ಮತ್ತೊಂದು ಕವನಕ್ಕೆ ಸ್ಪೂರ್ತಿಯೂ ಆಯಿತು. ಮರು ಕ್ಷಣವೇ ಅವಳು ನಾ ಗಲಿಬಿಲಿಯಾಗುವ ಮತ್ತೊಂದು ಪ್ರಶ್ನೆ ಹಾಕಿದಳು " ನಿಜ ಹೇಳಿ ಯಾವ ಹುಡುಗಿ ಮೇಲೆ ಈ ಕವನ ಬರೆದ್ರಿ ,, ??? ನಾ ಅಂತು ನೀವು ಹೇಳಿದ ಹಾಗೆ ಇಲ್ಲ , ನನ್ನ ಮೇಲೆ ನೀವು ಈ ರೀತಿ ಕವನ ಬರೆದಿರೋದು ಡೌಟ್ ;) " ಎಂದಳು... ನನಗೋ ಏನು ಹೇಳಬೇಕೋ ತೋಚಲಿಲ್ಲ .. ಅವಳ ಮೇಲೆ ನಾ ಬರೆದ ಸಾಲುಗಳು ಈ ಕೆಳಗಿನವುಗಳಾಗಿದ್ದವು ಅಷ್ಟೇ .....
ಒಡೆಯನು ನಾ ನನ್ನವಳ ಹೃದಯ
ಪ್ರೀತಿಗಳ....
ತಡೆಯನು ನಾ ಉತ್ತರವಾಗರಿಯುವ
ಭಾವನೆಗಳ..
ಜಿನುಗುತ್ತಿವೆ ನಮ್ಮಿಬ್ಬರ ಮನಸ್ಸುಗಳು
ಹಂಬಲಗಳ..
ಜೇನರಿದಂತೆ ಆಕೆ ನನ್ನೊಡೆ ಆಡಿದರೆ
ಮಾತುಗಳ..
ಒಲವಿನೋಲಗದಲ್ಲಿ ನೋಡಿ ನಾಚುವೆ
ನಾ ನನ್ನವಳ..
ಪ್ರೀತಿಯುತ್ಸವದಲ್ಲಿ ಮರೆಸುವಳು ಪ್ರತಿ
ದಿನಗಳ..
ಅವಳ ಆ ಸಿಹಿ ಕಿರುನಗೆ ಬೆಸೆಯುವುದು
ಹೃದಯಗಳ..
ಸಾಮಿಪ್ಯವ ಬಯಸುವುದು ನನ್ನ ಹೃದಯ
ನನ್ನವಳ...
ಸಾಂಗತ್ಯದಿ ಜೀವದಡ ಸೇರಿ ಕಟ್ಟಬೇಕವಳ
ಕನಸುಗಳ..
ನಿಮಗಾಗಿ
ನಿರಂಜನ್
Yaarappa ninnavalu?..
ಪ್ರತ್ಯುತ್ತರಅಳಿಸಿHahaha my fiencee :) :)
ಪ್ರತ್ಯುತ್ತರಅಳಿಸಿOh... Congrats.. Good kavana, keep writing..
ಪ್ರತ್ಯುತ್ತರಅಳಿಸಿ