ಹೃದಯ ದಡ
ಜಡಡಿ ನಿಂತ ಹೃದಯ
ದಡಕ್ಕೆ
ಹರಿವ ನಿನ್ನ ಪ್ರೀತಿ
ನದಿಯ
ನರಿಗೆಯಂತ ಒಲವಿನಲೆ
ಬಂದು ನನ್ನ ತಬ್ಬಿತು .....
ನಗೆಯಾಲು
ಒಲವಿನ ಮಾತುಗಳಿಗೆ
ನಗೆಯಾಲಿನ
ಅಮೃತವ ಸೇರಿಸಿ ನೀಡುವೆ ನೀ
ನನಗೆ ಪ್ರತಿದಿನ
ಅದು ಬಲು ಚೆನ್ನ ...
ಮರೆಯೋಲ್ಲ
ಪ್ರಿಯ ಅದೇಗೆ
ನಾ ಮರೆಯಲಿ ನಿನ್ನ ,
ಮರೆತರು ಮರೆಯದು
ಈ ಹೃದಯ
ಅನುದಿನವು ಚಿನ್ನ ...
ನಿಜ ಸ್ಪೂರ್ತಿ
ಅಂಚಿಗೆ ಸರಿದಿತ್ತು
ಆ ನನ್ನ ಅಧಮ್ಯ
ಸ್ಪೂರ್ತಿ ....
ಕಣ್ಣಂಚಿನಲ್ಲೇ ಮತ್ತೆ
ನೀ ಹೊತ್ತುತಂದೆ
ಪೂರ್ತಿ ....
ಉತ್ತರ ....
ನನ್ನೊಲವಿನ ತೀರದ
ಹಕ್ಕಿ ನೀ ...
ನೀ ಹಾರಿದೊಷ್ಟು
ಎತ್ತರ ..
ಸಿಗುವುದೆನ್ನ ಪ್ರೀತಿಗೆ
ಉತ್ತರ ..
ಮಿಂಚು
ಮೊದುವೆಗು ಮೊದಲು
ನನ್ನವಳು
ಮಿಂಚು .....
ನಂತರ
ಗುಡುಗು-ಸಿಡಿಲು ....
ಆ ತೀರ
ಪ್ರೀತಿಯಲಿ ನಾ
ತೇಲ ಬಯಸಿದಾಗ
ಹುಣ್ಣಿಮೆಯ ಚಂದ್ರನಡಿಯಲ್ಲಿ
ಒಲುಮೆ ದೋಣಿಯಲೆನ್ನ ಕೂರಿಸಿ
ನಿಜಪ್ರೀತಿಯಲಿ ನೀ ನನ್ನ ಈ ದಡಕ್ಕೆ
ತೇಲಿಸಿ , ನೀ ಅಲ್ಲೇ ಬೆಳದಿಂಗಾಳಾಗಿ ಉಳಿದೆ ....
ಪ್ರೀತಿಯಾಕಾಶ
ನಾ ಹೇಳಿದೆ ನನ್ನ
ಪ್ರೀತಿ
ಆಕಾಶದೊಷ್ಟು ವಿಸ್ತಾರ ಎಂದು ...
ನಿರೂಪಿಸಿದೆ ನೀ
ಅದನ್ನೇ
ನನ್ನ ಪ್ರೀತಿಯಾಕಾಶದಲಿ
ಕ್ಷಣಮಾತ್ರ ಮಿಂಚಿ ಮರೆಯಾಗಿ ... ;)
ಪ್ರೀತಿಯ ಗೋಪುರ
ಮೀರದಿರಲಿ ನಿಮ್ಮೆತ್ತರ
ನೋವಾಗಬಾರದಲ್ಲವೇ ಮೇಲಿಂದ ಬಿದ್ದರ .....
ಪ್ರೇಮ ಬೆಳೆ
ಇಳೆಗಿಳಿಯುವ ಈ ಮಳೆ ಹನಿಗಳು
ಗಲ್ಲುಗಲ್ಲೆನ್ನುವ ನಿನ್ನ ಬಳೆ ಸದ್ದುಗಳು
ಮೋಹಿಸುವ ನಿನ್ನ ಮುಖ ಕಳೆ, ಕಂಗಳು
ಹೃದಯದಲ್ಲಿ ಹಾಗೆ ಮೊಳೆತಿವೆ ಪ್ರೇಮ ಬೆಳೆಗಳು .....
ಕಾಣುತಿರು
ಕಾಡದಿರು ಕನಸಲಿ ಕಣ್ಣುಮುಚ್ಚಿದಾಕ್ಷಣ
ಕಾಣದಿದ್ದರು ನೀ ಕನಸಲೂ ಅರೆ ಕ್ಷಣ
ಕೈಜಾರುವುದು ನನ್ನ ಜೀವ ಅದೇ ಕ್ಷಣ ....
ನಿಮಗಾಗಿ
ನಿರಂಜನ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ