ಭಾನುವಾರ, ಜೂನ್ 19, 2011

Just be part of it .........

                                                           ವಿದ್ಯಾರ್ಥಿ-ಮಿತ್ರ........

ಸ್ನೇಹಿತರೆ ,,,

ಈ ಬಾರಿ ನನ್ನ ಪ್ರವಾಸದ ಕತೆಗಳನ್ನೋ ಅಥವಾ ಇನ್ನ್ಯಾವುದೋ ಕತೆಯನ್ನು ನಿಮ್ಮ ಮುಂದೆ ಇಡದೆ ಸ್ವಲ್ಪ ಡಿಫೆರೆಂಟ್ ಸಬ್ಜೆಕ್ಟ್ ಬಗ್ಗೆ ಹೇಳ ಬಯಸುತ್ತೇನೆ. ಇದು ಕತೆಯಲ್ಲ ,ರಿಯಾಲಿಟಿ ಬಗ್ಗೆ ಹೇಳುವ ಹಾಗೂ ನಿಮ್ಮ ಅನಿಸಿಕೆಗಳನ್ನು ಕೇಳುವ,ನಿಮ್ಮ ಸಹಾಯವನ್ನು, ನಿಮ್ಮ ಅನುಭವವನ್ನು ಉಪಯೋಗಿಸಿಕೊಂಡು ನಮ್ಮ ಸಮಾಜದಲ್ಲಿನ ಬಡ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ, ಶಿಕ್ಷಣಕ್ಕೆ ಸಹಾಯ ಹಾಗೂ ಅವರಿಗೆ ಒಳ್ಳೆಯ ವಿದ್ಯಾಬ್ಯಾಸ ಕಲ್ಪಿಸುವ ನಿಟ್ಟಿನಲ್ಲಿ ನಮ್ಮ ಪಾತ್ರ ಏನು ಮತ್ತು ಆ ನಿಟ್ಟಿನಲ್ಲಿ ಸ್ಥಾಪಿತವಾಗಿರು "ವಿದ್ಯಾರ್ಥಿ-ಮಿತ್ರ" ಎಂಬ ಒಂದು ಚಿಕ್ಕ ಟ್ರಸ್ಟ್ ಬಗ್ಗೆ ನಾ ಸ್ವಲ್ಪ ನಿಮಗೆ ಹೇಳಲೇ ಬೇಕು.

          ಬೆಳಿಗ್ಗೆಯ ಟ್ರಾಫಿಕ್ ಸಿಗ್ನಲ್ಲುಗಳಲ್ಲಿ ಮಲ್ಲಿಗೆ ಹೂವು ಮಾರುವುದು, ಸಂಜೆ ಅದೇ ಹುಡುಗ ಈ ಸಂಜೆ ಪೇಪರ್ ಮಾರುವುದು, ಆಫೀಸ್ ಕೆಫೆಟೇರಿಯಾದಲ್ಲಿ ಮತ್ತೊಬ್ಬ ಹುಡುಗ ಮಾಣಿಯಾಗಿರುವುದು, ಬಸ್ಸು ನಿಲ್ದಾಣಗಳಲ್ಲಿ ಅನೇಕ ಚಿಕ್ಕ ಚಿಕ್ಕ ಮಕ್ಕಳು ಹುಬ್ಬಳ್ಳಿ,ಧಾರವಾಡ,ಮಂಡ್ಯ,ಮೈಸೂರು,ಮಂಗಳೂರು ಅಂತ ಚೀರಾಡುವುದು ಹೀಗೆ ಅನೇಕ ವಿಧಗಳಲ್ಲಿ ,ಕಲಿಯುವ-ನಲಿಯುವ ವಯಸ್ಸಿನಲ್ಲಿ ಬೀದಿಗೆ ಇಳಿದಿರುವ ಮಕ್ಕಳನ್ನು ನೀವು ನೋಡಿರಲೇಬೇಕು. ಇದೆಲ್ಲ ನಮ್ಮ ಬೆಂಗಳೂರಿನಂತಹ  ಹೈಟೆಕ್ ಸಿಟಿಯಲ್ಲಾದರೆ ಇನ್ನೂ ಹಳ್ಳಿಗಾಡಿನ ಪರಿಸ್ಥಿತಿ ಬಗ್ಗೆ ನೀವೇ ಯೋಚನೆ ಮಾಡಿ. ಹಾಗೆ ನೋಡಿದರೆ ನಮ್ಮ ಹಳ್ಳಿಗಾಡಿನ ಪರಿಸ್ಥಿತಿ ಈ ಮಟ್ಟಕ್ಕೆ ಹೋಗಿರದಿದ್ದರು ಅಲ್ಲಿಯ ವಿದ್ಯಾರ್ಥಿಗಳ ಕೊರತೆಗಳೇ ಬೇರೆ. ಸರಿಯಾದ ಮಾರ್ಗದರ್ಶನ ಹಳ್ಳಿಯ ವಿದ್ಯಾರ್ಥಿಗಳಿಗೆ ಸಿಗುತ್ತಿಲ್ಲ, ಸರ್ಕಾರದ ಯೋಜನೆಗಳು ಅವರಿಗೆ ಸಿಗುತ್ತಿಲ್ಲ. ಉನ್ನತ ಶಿಕ್ಷಣದ ಬಗ್ಗೆ ಮಾಹಿತಿಯ ಕೊರತೆ, ಅನೇಕ ಸಮಸ್ಯೆಗಳಿಂದಾಗಿ ಅನೇಕ ವಿದ್ಯಾರ್ಥಿಗಳು ಇಂದು ಅವಕಾಶವಂಚಿತರಾಗಿದ್ದಾರೆ. ಹಣ ಮತ್ತು ಮಾರ್ಗದರ್ಶನದ ಕೊರತೆಯೇ ಇದಕ್ಕೆಲ್ಲ ಕಾರಣವೆಂದರೆ ತಪ್ಪಾಗಾಲಿಕ್ಕಿಲ್ಲ. ಹಾಗಾಗಿ ಈ ಎಲ್ಲ ಸಮಸ್ಯಗಳಿಗೆ, ಬಡ ವಿದ್ಯಾರ್ಥಿಗಳಿಗೆ  ಸಹಾಯ, ಮಾರ್ಗದರ್ಶನ, ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯಗಳ ಮತ್ತು ದೇಶದ ಬಗ್ಗೆ ಅರಿವು ಮೂಡಿಸುವುದು ನಮ್ಮ ನಿಮ್ಮೆಲ್ಲವರ ಕರ್ತವ್ಯವಾಗಿದೆ. ಅದಕ್ಕಾಗಿಯೇ ಗ್ರಾಮೀಣ ಶಿಕ್ಷಣ  ಮತ್ತು ಸಮಾಜದ ಬಗ್ಗೆ ಕಳಕಳಿ ಇರುವ ಅನೇಕರ ಸಲಹೆ ಪಡೆದು ಮತ್ತು ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿ-ಮಿತ್ರ ಎಂಬ ಟ್ರಸ್ಟ್ ಸ್ಟಾಪಿಸಲಾಗಿದೆ.

       "ವಿದ್ಯಾರ್ಥಿ-ಮಿತ್ರ" ಟ್ರಸ್ಟ್ ಕಳೆದೆರೆಡು ತಿಂಗಳಿಂದ ತನ್ನ ಕಾರ್ಯವನ್ನು ಪ್ರಾರಂಬಿಸಿದೆ. ಇದು ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ತನ್ನ ಕಾರ್ಯ-ಯೋಜನೆಗಳನ್ನು ರೂಪಿಸಿಕೊಂಡಿದೆ. ಸಮಾಜದ ಎಲ್ಲ ವರ್ಗದ ವಿದ್ಯಾರ್ಥಿಗಳಿಗೂ ಮಾರ್ಗದರ್ಶನ, ಬಡ ವಿದ್ಯಾರ್ಥಿಗಳಿಗೆ ಧನಸಹಾಯ, ಅವಕಾಶವಂಚಿಂತರಿಗೆ ಅವಕಾಶ ಕಲ್ಪಿಸುವ, ವಿದ್ಯಾರ್ಥಿಗಳ  ಮೂಲಕ ಸಾಮಾಜಿಕ ಪಿಡುಗುಗಳನ್ನು ಹೋಗಲಾಡಿಸುವ, ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯಗಳನ್ನು ಬಿತ್ತುವುದು, ವಿದ್ಯಾರ್ಥಿಗಳಲ್ಲಿ ನಮ್ಮ ಪರಿಸರದ ಬೆಗ್ಗೆ ಅರಿವು ಮೂಡಿಸುವುದು ವಿದ್ಯಾರ್ಥಿ-ಮಿತ್ರ ಟ್ರಸ್ಟ್ ನ ಮುಖ್ಯ ಗುರಿಯಾಗಿದೆ. ಗ್ರಾಮೀಣ ಶಾಲೆಗಳಲ್ಲಿನ ಹಾಗೂ ಅಲ್ಲಿಯ ವಿಧ್ಯಾರ್ಥಿಗಳ ಕೊರತೆಗಳ ಬಗ್ಗೆ ವಿಶೇಷ ಆಸಕ್ತಿ ಹೊಂದಿರುವ ಈ ಟ್ರಸ್ಟ್ ಅದಕ್ಕಾಗಿಯೇ ಅನೇಕ ಯೋಜನೆಗಳನ್ನು ರೂಪಿಸಿದೆ. ಆ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಅನೇಕ ಸ್ವಯಂ ಸೇವಕರನ್ನು ಒಳಗೊಂಡಿದೆ. ಇದನ್ನು ಇನ್ನೂ ಬಲಪಡಿಸಲು ನಮಗೆ ನಿಮ್ಮೆಲ್ಲರ ಸಹಾಯ ಮತ್ತು ಮಾರ್ಗದರ್ಶನದ ಅವಶ್ಯಕತೆ ಇದೆ. ನನ್ನ ಸ್ನೇಹಿತರಾದ ನೀವು ನಿಜಕ್ಕೂ ಈ ಕಾರ್ಯದಲ್ಲಿ ನಮ್ಮೊಡನೆ ಸದಾ ನೀವು ಇರುತ್ತೀರಿ ಅಂತ ನಾವು ನಂಬಿದ್ದೇವೆ. ನಿಮ್ಮ ಒಂದು ಸಣ್ಣ ಸಹಾಯ, ಅದು ಯಾವುದೇ ರೂಪದಲ್ಲಿ ಇದ್ದರು ಪರವಾಗಿಲ್ಲ, ಅದು ಬಹಳಷ್ಟು ಬದಲಾವಣೆ ತರಬಲ್ಲದು.  ನೀವೆಲ್ಲರೂ ಇದರಲ್ಲಿ ಭಾಗಿಯಾಗ ಬೇಕೆಂದು ನಮ್ಮ ಟ್ರಸ್ಟ್ ತಮ್ಮಲ್ಲಿ ಕಳಕಳಿಯಿಂದ ನಿಮ್ಮನ್ನು ಕೇಳಿಕೊಳ್ಳುತ್ತದೆ.

       ನೀವೂ ವಿದ್ಯಾರ್ಥಿ-ಮಿತ್ರರಾಗಲು, ನಿಮ್ಮ ಅನುಭವಗಳನ್ನು ಅವರಿಗೆ ತಿಳಿಸಲು, ನಿಮ್ಮ ವಿಚಾರಧಾರೆಗಳನ್ನೂ ಅವರಿಗೆ ಮುಟ್ಟಿಸಲು ನಿಮ್ಮ ಕೈಲಾದ ರೀತಿಯಲ್ಲಿ ನೀವು ಅವರಿಗೆ ಸಹಾಯ ಮಾಡಲು ವಿದ್ಯಾರ್ಥಿ-ಮಿತ್ರ ಒಂದು ವೇದಿಕೆಯಾಗಿದೆ. ಸ್ನೇಹಿತರೆ ನೀವು ದಯವಿಟ್ಟು ಇದರಲ್ಲಿ ಭಾಗಿಯಾಗಿ ಸಮಾಜದ ಒಳಿತಿಗಾಗಿ ನಮ್ಮ ಕೈಯಲ್ಲಿ ಎಷ್ಟು ಸಾದ್ಯಾವೋ ಅಷ್ಟು ನಾವು ಮಾಡೋಣ.
         ವಿದ್ಯಾರ್ಥಿ-ಮಿತ್ರರಾಗಲು ಮತ್ತು ವಿದ್ಯಾರ್ಥಿ ಮಿತ್ರ ಟ್ರಸ್ಟ್ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ, ನೀವು ಮಾಡಬೇಕಾಗಿರುವು ಕೆಳಕಂಡವರಿಗೆ ಒಂದೇ ಒಂದು ಫೋನ್ ಕರೆ ಅಥವ  ಇ-ಮೈಲ್.
Email :  vidyarthi.mitraru@gmail.com

ನಿರಂಜನ್ - 9739892642


ಸುರೇಶ್ ನರಸಿಂಹ - 9880689176


ವೆಂಕಟ್ ಕರದಳ್ಳಿ -9900789000


ವೀರೇಶ್ -9945088700


ಚಂದ್ರಶೇಕರ್ ಬ್ಯಾಡಗಿ -9972002340


ರಾಮಕೃಷ್ಣ ಸ್ - 9886058576


ನಿಮಗಾಗಿ.......
ನಿರಂಜನ್




ಸೋಮವಾರ, ಮೇ 30, 2011

Travel experience

                  ನಮ್ಮ ಕಾಕನ್ ಮದ್ವೆ ಮತ್ತು ಉತ್ತರ ಕರ್ನಾಟಕ ಪ್ರವಾಸ...

ಅಂತು ಇಂತು ನಮ್ಮ ಸ್ನೇಹಿತ  ಕಾಕನ ( ವೀರೇಶ್ ) ಮಧುವೆಯ ದಿನ ಬಂದೆ ಬಿಟ್ಟಿತ್ತು, ದೂರದ ಅಂದರೆ ಉತ್ತರ ಕರ್ನಾಟಕ ಒಂದು " ಕೊಡೇಕಲ್ಲ " ಎಂಬ ಹಳ್ಳಿಯಲ್ಲಿ  ನೆಡೆಯುತ್ತಿದ್ದ ಈ ಮಧುವೆಗೆ ಬಾರಿ ಜನ ಸಮ್ಮೂಹವೆ ನೆರೆದಿತ್ತು. ಸುರಿಯುವ ಹುರಿ ಬಿಸಿಲು, ಎತ್ತ ನೊಡಿದರು ಕಲ್ಲಿನಿಂದ ಕಟ್ಟಿದ್ದ ಮಾಳಿಗೆ ಮನೆಗಳು, ಮನೆಯ ಮುಂದೆ ನಿಂತುಕೊಂಡು ವಧು-ವರರಿಗೆ ಅವರು ಅಶೀರ್ವದಿಸುತ್ತಿದ್ದ ರೀತಿ , ವಧು-ವರರನ್ನು ಅಲ್ಲಿಯ ಸಂಪ್ರದಾಯದಂತೆ ಸಿಂಗರಿಸಿದ್ದ ಬಗೆ ನಿಜವಾಗಿಯು ವಿಬಿನ್ನವಾಗಿತ್ತು. ಬೆಂಗಳೂರಿಂದ ಹೋಗಿದ್ದ ನಮಗಿದೊಂದು ಬೇರೆಯ ತರಹನಾದ ಪರಿಸರವೆ ಆಗಿತ್ತು. ಅತಿಯಾದ ಆ ಬಿಸಿಲು ಇದ್ದರು ಸಹ ಕಾಕನ ಮಧುವೆಯ ಬರದಲ್ಲಿ ನಾವು ಸುರಿಯುವ ಬಿಸಿಲನ್ನು ಲೆಕ್ಕಿಸದೆ, ಬೆವೆರನ್ನು ಹರಿಸಿ,ಮಧುವೆಯಲ್ಲಿ , ಮೆರವಣಿಗೆಗಳಲ್ಲಿ ಭಾಗಿಯಾಗಿ ನಗಲೊಲ್ಲದ ಕಾಕನ ಮುಖದಲ್ಲಿ  ಆಗೊಮ್ಮೆ ಈಗೊಮ್ಮೆ ನಗು ತರಿಸುತ್ತ ಮಧುವೆ ಮಾಡಿ ಮುಗಿಸಿಯೇ ಬಿಟ್ಟೆವು :). ಮಹೂರ್ತದ ನಂತರ ಕಾಕ ಮತ್ತು ಅವರ ಧರ್ಮಪತ್ನಿ ಮಿಸಸ್ ಕಾಕ ಅವರನ್ನು ಮಾತಾಡಿಸಿಕೊಂಡು ಉತ್ತರ ಕರ್ನಾಟಕ ಶೈಲಿಯ ಮಧುವೆಯ ಊಟ ,ಸಜ್ಜೆ ರೊಟ್ಟಿ, ಪೂರಿ, ಕಾಳು ಪಲ್ಯ,ಲಾಡು, ಅನ್ನ -ಸಾಂಬಾರು , ಮಜ್ಜಿಗೆ ಎಲ್ಲವನ್ನು ಗಡತ್ತಾಗಿ ಸೇವಿಸಿ, ನಮ್ಮ ಪೂರ್ವ ನಿಯೋಜಿತ  ಉತ್ತರ ಕರ್ನಾಟಕ  ಪ್ರವಾಸಕ್ಕೆ  ಸಜ್ಜಾದೆವು.  

                                                        
              ಇದಕ್ಕೂ ಮೊದಲು ಮಧುವೆ ನೆಡೆದ "ಕೊಡೇಕಲ್ಲ" ಗ್ರಾಮದ ಬಸವಣ್ಣನ ದೇವಸ್ತಾನ ಮತ್ತು ಲಿಂಗಸೂರಿನಿಂದ ಈ ಊರಿಗೆ ಬರುವ ದಾರಿಯಲ್ಲಿ ನಾವು ನೋಡಿದ ಮೌನೇಶ್ವರ ದೇವಾಲಯಗಳು ಪಕ್ಕಾ ಹಿಂದೂ ದೇವಾಲಯಗಳಾದರೂ ಸಹ, ಅವು ಇದ್ದದ್ದು ಮಾತ್ರ ಮುಸ್ಲಿಮ್ ದೇವಾಲಯಗಳಂತೆ. ಇಂಡೊ-ಇಸ್ಲಾಮಿಕ್ ಶೈಲಿಯೆಂದರೆ ತಪ್ಪಾಗುವುದಿಲ್ಲ. ಅವು ಈ ರೀತಿ ಕಟ್ಟಿರುವುದಕ್ಕೆ ಕಾರಣಗಳು ಅನೇಕ ಇವೆ. ಕೆಲವು ಇತಿಹಾಸಕಾರರ ಪ್ರಕಾರ ಇವು ಸುಲ್ತಾನರ ಆಳ್ವಿಕೆಯ ಸಮಯದಲ್ಲಿ , ಮುಸ್ಲಿಮರ ಪ್ರಭಾವದಿಂದ ಈ ರೀತಿಯಾಗಿ ಬದಲಾವಣೆಗೊಂಡಿರುವುವು ಎಂಬ ವಾದ ಒಂದುಕಡೆ, ಆದರೆ ಇನ್ನೊಂದೆಡೆ ಇದು ಹಿಂದೂ-ಮುಸ್ಲಿಮರ ಭಾವೈಕೈತೆಯ ಸಂಕೇತ ಎಂಬ ಇತಿಹಾಸವು ಇದೆ. ಅದೇನೇ ಇರಲಿ ನಾವು ಅವುಗಳನ್ನು ನೋಡಿ ಆಶ್ಚರ್ಯಚಕಿತರಾದದಂತು ನಿಜ.  ಸಮಯ ಮಧ್ಯಾನ 2.30 ರ ಸಮಯ. ನಾವೆಲ್ಲರೂ ನಮ್ಮ ಕಾಕನ ಸಂಭಂದಿಕರಿಗೆ ನಮಸ್ಕಾರಗಳನ್ನು ತಿಳಿಸಿ , ಕೊಡೇಕಲ್ಲ ಗ್ರಾಮಕ್ಕೆ ವಿಧಾಯ ಹೇಳಿ, ನಾವು ಹೊರಟಿದ್ದು ಬಿಜಾಪುರದ ಕಡೆಗೆ. 

                                                        
           ಬಿಜಾಪುರ ಆ ಗ್ರಾಮದಿಂದ ಸುಮಾರು 100 km ಗಳು. ಪ್ರಯಾಣವನ್ನು ಆರಂಬಿಸಿದಾಗ, ಹೊರಗಡೆ ಉತ್ತರ ಕರ್ನಾಟಕದ ಬಾರಿ ಬಿಸಿಲು, ಗಾಡಿಯಿಂದ ಹೊಳಗೆ ನುಗ್ಗುತ್ತಿರುವ ಬಿಸಿಗಾಳಿ, ನೋಡಿದಷ್ಟು ದೂರ ಕಾಣುವ ಖಾಲಿ ಹೊಲಗಳು, ಅಲ್ಲೊಂದು ಇಲ್ಲೊಂದು ಬೇವಿನ ಮರಗಳು, ರಸ್ತೆಯ ಬದಿಯಲ್ಲಿ ಇದ್ದ ಜೀಕ್-ಜಾಲಿ ಅಥವಾ ಬಳ್ಳಾರಿ- ಜಾಲಿ, ನಮಗೆಲ್ಲ ನೀರು ಇಳಿಸುತ್ತಿದ್ದವು. ಸಂಜೆ 4.30ರ ಸಮಯಕ್ಕೆ ನಾವು ಬಿಜಾಪುರ ತಲುಪುತಿದ್ದಂತೆ ನಮಗೆ ಕಣ್ಣಿಗೆ ಕಂಡಿದ್ದು ಬಿಜಾಪುರದ "ಗೋಳಗುಮ್ಮಟ" ಬೃಹದಾಕಾರವಾದ ಆ ಬಾರಿ ಸಂಕೀರ್ಣ ನಿಜಕ್ಕೂ ನನಗೆ ಅಚ್ಚರಿ ಮೂಡಿಸುವುದರ ಜೊತೆಗೆ ನಾವು ಚಿಕ್ಕವರಾಗಿದ್ದಾಗ ಓದಿದ "ಬಿಜಾಪುರದ ಗೋಳಗುಮ್ಮಟ" ಪಾಠವನ್ನು ನೆನಪಿಸಿತು.ಆಗ ನಮಗೆ ಪಾಠ ಓದಿದಾಗ ಆದ ಅನುಭವವೇ ಈಗಲೂ ಆಯಿತು. ಒಬ್ಬ ಗೈಡ್ ಸಹಾಯಾದಿಂದ ಅಲ್ಲಿಯ ಇತಿಹಾಸವನ್ನು ತಿಳಿದು. ಅದನ್ನು ಕಟ್ಟಿದವರ ಗಟ್ಟಿತನವನ್ನು ಮೆಚ್ಚಿ , ಬಸವಣ್ಣನವರು ಐಕ್ಯವಾದ "ಕೂಡಲ-ಸಂಗಮ"ದ ಕಡೆಗೆ ಹೋಗಬೇಕೆಂದು ನಿರ್ಧರಿಸಿ, ಅಲ್ಲಿಯೇ ಇದ್ದ ಕುದುರೆಗಾಡಿ ಹೇರಿ ಬಸ್ ನಿಲ್ದಾಣಕ್ಕೆ ಹೋಗುವ ದಾರಿಯುದ್ದಕ್ಕೂ ಒಂದು ಕಡೆ ಕುದುರೆಗೆ ಹಿಂಸೆ ಕೊಡುತ್ತಿದ್ದ ಪಾಪಪ್ರಜ್ಞೆ, ಮತ್ತೊಂದೆಡೆ ಕುದುರೆಗಾಡಿ ಚಾಲಕರ ಹೊಟ್ಟೆಪಾಡು ಎಂಬ ಧರ್ಮಸಕಟ. ಇದನ್ನು ಯೋಚಿಸುತ್ತಿರುವಷ್ಟರಲ್ಲಿ ನಿಲ್ದಾಣವೂ ಬಂದೆ ಬಿಟ್ಟಿತ್ತು. ಮೊದಲು ಗಾಡಿಯಿಂದಿಳಿದು , ಅಲ್ಲಿಯೇ ಇದ್ದ ಹೊಟೆಲ್ನಲ್ಲಿ ಟೀ ಕುಡಿದು, ಕೂಡಲ ಸಂಗಮಕ್ಕೆ ಬಸ್ ಹತ್ತಿ ಹೊರಟಾಗ ನಮ್ಮ ಪುಣ್ಯವೋ , ಅಲ್ಲಿಯ ಜನರ ಪುಣ್ಯವೋ ತುಂತುರು ಮಳೆ ಬರ ತೊಡಗಿತು. ಸುಮಾರು 2.30 ಗಂಟೆಗಳ ಪ್ರಯಾಣ ಮುಗಿಸಿ ಕೂಡಲ ಸಂಗಮ ತಲುಪಿದಾಗ ನಿಜಕ್ಕೂ ವಾತಾವರಣ ತಂಪಾಗಿ ಬಿಸಿಲಿನಿಂದ ದಗೆ ಮತ್ತು ಸೆಕೆ ಇಂದ ಕೊಂಚ ರಿಲೀಫ್ ನೀಡಿತ್ತು. ಅಷ್ಟೊತ್ತಿಗೆ ರಾತ್ರಿ 9 ಗಂಟೆ, ನಾವು ಅಲ್ಲಿಯೇ ಇದ್ದ ಯಾತ್ರಿ ನಿವಾಸದಲ್ಲಿ ರೂಮ್ ಬಾಡಿಗೆ ಪಡೆದು , ಚೆನ್ನಾಗಿ ನಿದ್ದೆ ಮಾಡಿ ಬೆಳ್ಳಿಗ್ಗೆ 7 ರ ಹೊತ್ತಿಗೆ ಸಂಗಮದ ಕಡೆ ವಾಕ್ ಮಾಡಿದ್ದಂತೂ ಒಂದು ಸುಂದರ ಅನುಭವ. ಒಂದು ಕಡೆ ಕೃಷ್ಣ ಮತ್ತು ಘಟಪ್ರಭ ನದಿಗಳು, ಮತ್ತೊಂದೆಡೆ ಮಲಪ್ರಭ ನದಿ, ಸುತ್ತಲು ಮರ ಗಿಡಗಳು, ಆಗತಾನೆ ಬಂದು ಹೋಗಿದ್ದ ಮಳೆ, ಇನ್ನೂ ಮರಗಳ ಎಲೆಗಳಿಂದ ಬೆಳುತಿದ್ದ ಹನಿಗಳು ಕೂಡಲ ಸಂಗಮಕ್ಕೆ ಒಂದು ಎಫೆಕ್ಟ್ ನೀಡಿದ್ದವು. ದೇವಾಲಯವನ್ನೆಲ್ಲ ವೀಕ್ಷಿಸಿ, ದೋಸೆ, ಅಜ್ಜಿ ಮಾಡಿದ್ದ ಗಟ್ಟಿ ಮೊಸರು, ತೋಯಿಸಿದ ಒಗ್ಗರಣೆ ಮಂಡಕ್ಕಿ- ಮೆಣಸಿನಕಾಯಿ ತಿಂದು, ನಾಲಿಗೆ ತುದಿ ಚುರ್ ಅನ್ನುವಂತೆ ಬಿಸಿ ಚಹಾ ಕುಡಿದು ಅಲ್ಲಿಂದ ನಾವು ಹೊರಟು,  ಐಹೊಳೆ,ಪಟ್ಟದಕಲ್ಲು,ಮಹಕೂಟ,ಬನಶಂಕರಿ ಮತ್ತು ಬಾದಾಮಿ ನೋಡಲು ಅಲ್ಲಿಯೇ ಇದ್ದ ಒಂದು ವಾಹನವನ್ನು ಬಾಡಿಗೆ ಮಾಡಿಕೊಂಡು ನಮ್ಮ ಪ್ರಯಾಣವನ್ನು ಮುಂದುವರೆಸಿದೆವು.


    
  







    


            ನಿಜವಾಗಿಯೂ ನಮಗೆ ಕರ್ನಾಟಕದ ಇತಿಹಾಸ ತಿಳಿಯಬೇಕಾದರೆ, ಇಲ್ಲಿ ಆಡಳಿತ ಮಾಡಿದ ರಾಜ-ಮಹಾರಾಜರ ಸಾಧನಗಳನ್ನು ತಿಳಿಯಲು ಐಹೊಳೆಯನ್ನು ನಾವು ನೋಡಲೇ ಬೇಕು. ಹೇಗೆ ನಮ್ಮಲ್ಲಿರುವ ದೇವಾಲಯಗಳು, ಅರಮನೆಗಳು, ಕೋಟೆ-ಕೊತ್ತಲಗಳು ಬೆಳೆದು ಬಂದವು, ಹೇಗೆ ಶಿಲ್ಪಿಗಳು, ಕಲಾವಿದರು ತಮ್ಮ ಕಲೆಯಲ್ಲಿ, ಕೆಲಸದಲ್ಲಿ ನಿಪುಣತೆ ಸಾಧಿಸಿದರು ಎಂಬುದಕ್ಕೆ ಉತ್ತರ ನಮಗೆ ಐಹೊಳೆಯಲ್ಲಿ ಸಿಗುತ್ತದೆ. ಕ್ರಿ.ಶ 3,4,5 ಶತಮಾನದಲ್ಲೇ ಚಾಲುಕ್ಯ ಹಾಗೂ ಹೊಯ್ಸಳರು ಕಟ್ಟಿದ ಆ ದೇವಾಲಯಗಳು, ನಿಜಕ್ಕೂ ಅದ್ಭುತವಾಗಿವೆ. ಇವೆ ಮುಂದೆ ಹಂಪಿಯ ವಿಜಯನಗರ ದೇವಾಲಗಳಿಗೂ, ಬೇಲೂರು-ಹಳೆ ಬೀಡುಗಳಿಗೂ ಸ್ಪೂರ್ತಿಯಾಗುತ್ತವೆ.  ಒಂದು ರೀತಿಯಲ್ಲಿ ಐಹೊಳೆ ಒಂದು ದೇವಾಲಯಗಳ ಕಟ್ಟುವ ಪ್ರಯೋಗಾಲಯದಂತೆ ಇತ್ತೆಂದು ಇತಿಹಾಸ ಹೇಳುತ್ತದೆ. ಅಲ್ಲಿ ಎತ್ತ ನೋಡಿದರು ಕಾಣುವುದು ಸುಂದರ ದೇವಾಲಯಗಳು  ಮಾತ್ರ. ಹೊಲಗಳ ನಡುವೆ, ಊರಿನ ಮದ್ಯ,  ಮನೆ-ಮನೆಗಳ ನಡುವೆಯೂ ಬರಿ ದೇವಾಲಯಗಳು. ನಿಜ ಹೇಳಬೇಕೆಂದರೆ ಇವುಗಳನ್ನೆಲ್ಲ ನೋಡಲು ಕೆಲ ದಿನಗಳೆ ನಮಗೆ ಬೇಕಾಗಬಹುದು.ಅವಸರದಲ್ಲೇ ಕೆಲವು ದೇವಾಲಯಗಳನ್ನು ಮಾತ್ರ ನೋಡಿ , ಅವುಗಳ ಬಗ್ಗೆ ತಿಳಿದುಕೊಂಡು ನಾವು ಅಲ್ಲಿಂದ ಪಟ್ಟದಕಲ್ಲಿ ಗೆ ನೆಡೆದೆವು.
          ಇಹೊಳೆ ನಂತರ ನಾವು ನೋಡಿದ ಪಟ್ಟದಕಲ್ಲು,ಮಹಕೂಟ ಮತ್ತು ಬಾದಾಮಿಗಳು ಕೂಡ ಅಷ್ಟೇ ಸುಂದರ ಮತ್ತು ಶ್ರೀಮಂತ ಇತಿಹಾಸವುಳ್ಳ ಜಾಗಗಳು. ಇವುಗಳ ಬಗ್ಗೆ ಅನೇಕರು ಬರೆದಿದ್ದಾರೆ, ಅವುಗಳ ವೈಭವವನ್ನು ವರ್ಣಿಸಿದ್ದಾರೆ , ನಿಜಕ್ಕೂ ನಮಗೆ ಆ ದೇವಾಲಯಗಳನ್ನು ನೋಡಿ ತುಂಬಾ ಸಂತೋಷವಾಯಿತು ಹಾಗೆ ಇನ್ನೂ ಇವುಗಳ ಬಗ್ಗೆ ತಿಳಿಯುವ ಹಂಬಲವು ಕೂಡ  ಹೆಚ್ಚಾಯಿತು.
       ಸ್ನೇಹಿತರೆ ನಿಜ ಹೇಳಬೇಕೆಂದರೆ, ಆ ದೇವಾಲಯಗಳನ್ನು ವರ್ಣಿಸಲು ಅಸಾಧ್ಯ. ಅಷ್ಟೊಂದು ಸುಂದರವಾದ ದೇವಾಲಯಗಳು ನಿಜಕ್ಕೂ ನಮ್ಮ ನಾಡಿನಲ್ಲಿ ಇರುವುದು ನಿಜಕ್ಕೂ ಹೆಮ್ಮೆಯ ಸಂಗತಿ. ಆ ಕಲಾವಿದರ ಬುದ್ದಿವಂತಿಕೆ,ಕೌಶಲ್ಯ ಎಲ್ಲವೂ ನಮ್ಮ ಯೋಚನೆಗೂ ನಿಲುಕದಂತವು . ಇವೆಲ್ಲ ಸೇರಿ ನಮ್ಮ ಕರ್ನಾಟಕಕ್ಕೆ ಒಂದು ರೀತಿಯ ಸೊಬಗು ಮತ್ತೆ ಗೌರವ ತಂದುಕೊಟ್ಟಿರುವುದಂತೂ ನಿಜ. ಆದರೆ ಎಲ್ಲೋ ಒಂದು ಕಡೆ ನಾವು ಅವುಗಳನ್ನು ಸಂರಕ್ಷಿಸುವುದರಲ್ಲಿ ಸಂಪೂರ್ಣ ವಿಪಲರಾಗಿದ್ದೇವೆ ಮತ್ತು ಅವುಗಳನ್ನು ಜನರಿಗೆ ಪರಿಚಯಿಸುವುದರಲ್ಲಿ ಕೂಡ ನಮ್ಮ ಪ್ರವಾಸೋದ್ಯಮ ಇಲಾಖೆಯು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬುದು ಬಹುಪಾಲು ಪ್ರವಾಸಿಗರ ನೋವಾಗಿದೆ. ಅದೇನೇ ಇರಲಿ ನಾವಂತೂ ಈ ಪ್ರವಾಸದಿಂದ ತುಂಬಾ ತಿಳಿದುಕೊಂಡೆವು ಎಂಬುದರಲಿ ಎರೆಡು ಮಾತಿಲ್ಲ. ನಿಜಕ್ಕೂ ಈ ಪ್ರವಾಸ ನಾ ಮಾಡಿದ ಅನೇಕ ಪ್ರವಾಸಗಳಿಗಿಂತ ಬಿನ್ನಾವೂ ಆಗಿತ್ತು. ಬರಿ ಮನೋರಂಜನೆಗಾಗಿ ಮಾಡುತಿದ್ದ ಪ್ರವಾಸಕ್ಕು ಹಾಗೂ ಇದಕ್ಕೂ ತುಂಬಾ ವ್ಯತ್ಯಾಸವು ಇತ್ತು.  ಬಾದಾಮಿ ನೋಡುವಷ್ಟರಲ್ಲಿ  ಸಂಜೆಯಾಗುತ್ತಾ ಬಂದಿತ್ತು. ನಾವು ಅಲ್ಲಿಂದ ಬಾಗಲಕೋಟೆಗೆ ಬಂದು ಅಲ್ಲಿಂದ ಬಸ್ಅಲ್ಲಿ ಬೆಂಗಳೂರಿಗೆ ಬರಬೇಕಿತ್ತು. ಹಾಗಾಗಿ ಸಂಜೆ ೬ ಕ್ಕೆ ಅಲ್ಲಿಂದ ಹೊರಟು, ಬಾಗಲಕೋಟೆಯಲ್ಲಿ ರೊಟ್ಟಿ ಊಟ ಮುಗಿಸಿ , ಬೆಂಗಳೂರಿನ ಕಡೆ ಹೊರಟೆವು.




    









ನಿಮಗಾಗಿ.......
ನಿರಂಜನ್

ಭಾನುವಾರ, ಮೇ 15, 2011

Travel experience

                                       ಮಡಿಕೇರಿಯಲ್ಲಿ ನಾವು ಮತ್ತು ಮಂಜು........

ಸಂಜೆಯ ಸಮಯ , ಸೂರ್ಯ ಇನ್ನೇನು ಮುಳುಗಬೇಕು ಅನ್ನುವಷ್ಟರಲ್ಲಿ, ಆಗಸದ ತುಂಬಾ ಕಾರ್ಮೋಡಗಳು, ಜೋರಾದ ಗಾಳಿ, ಗೂಡು ಸೇರಲು ಗಾಳಿಯ ಜೊತೆಗೆ ಮತ್ತು ವಿರುದ್ದವಾಗಿ ಹಾರುತ್ತಿರುವ ಪಕ್ಷಿಗಳು, ಜೊತೆಗೆ ಕೋಲ್ಮಿಂಚುಗಳು , ಗುಡುಗಿನ ಆರ್ಭಟ, ಇವೆಲ್ಲ ಬಾರಿ ಮಳೆಯ ಮುನ್ಸೂಚನೆ  ನೀಡುತ್ತಿದ್ದವು. ಅಷ್ಟರಲ್ಲಿ ಅಮ್ಮನಿಂದ ಫೋನ್ ಬಂತು “ ಎಲ್ಲಿದಿಯೋ ಮಳೆ ಬರೋ ಹಾಗಿದೆ ಬೇಗ ಮನೆಗೆ ಬಾ” ಎಂಬ ಆತಂಕದ ಮಾತುಗಳು. ಅಷ್ಟೊತ್ತಿಗಾಗ್ಲೇ ಆಫೀಸ್ ಕ್ಯಾಬ್ ಹಿಳಿದು ಮನೆಯ ಹತ್ತಿರವಿದ್ದ ನನಗೆ ಮಳೆಯ ಹನಿಗಳ ಚುಂಬನುವು ಹಾಗಿಯೇ ಬಿಟ್ಟಿತು. ಮನೆ ಸೇರಿದ ತಕ್ಷಣವೇ ಮಳೆಯ ಆರ್ಭಟ ಇನ್ನೂ ಜೋರಾಯಿತು. ಸದ್ಯ ಮಳೆ ಆರಂಭಕ್ಕೂ ಮೊದಲೇ ಬಂದ್ಯಲ್ಲ ಅಂತ ಅಮ್ಮ ನಿಟ್ಟುಸಿರು ಬಿಟ್ಟರು. ಒಂದು ಹತ್ತು ನಿಮಿಷ ಟೀ ಕುಡಿಯುತ್ತಾ  ಕಿಟಕಿಯಿಂದಲೆ ಮಳೆಯನ್ನು ನೋಡಿ, ನನ್ನ ಮುಂದಿನ ಕಾರ್ಯಕ್ರಮಕ್ಕೆ ಅಣಿಯಾಗತೊಡಗಿದೆ.
        ನಾ ಇನ್ನೂ ಅಮ್ಮನಿಗೆ ಏನು ಕೂಡ ಹೇಳಿರಲಿಲ್ಲ. ನಾನು ತಯಾರಿ ನೆಡೆಸುತ್ತಿರುವುದನ್ನು ಆಶ್ಚರ್ಯದಿಂದ ನೋಡಿ, ಆತಂಕದಿಂದಲೇ ಕೇಳಿದರು " ಏನು ಇದೆಲ್ಲ ಅಂತ" . ಅದಕ್ಕೆ ನನ್ನ ಉತ್ತರ “ ನಾ ನನ್ನ ಸ್ನೇಹಿತರೊಂದಿಗೆ ಮಡಿಕೇರಿಗೆ ಟ್ರಿಪ್ ಹೋಗುತ್ತಾ ಇದೀನಿ “ ಅಂದೇ. ತಕ್ಷಣ ಅಮ್ಮ " ಇದೇನೋ... ಹೊರಗಡೆ ಜೋರಾಗಿ ಮಳೆ ಬರ್ತ ಇದೆ, ಏಕಾಏಕಿ ಏನು ಇದೆಲ್ಲ"  ಅಂತ ಕೇಳಿದರು, ನಾ ಹೇಗೋ ಸಮಾಜಾಹಿಶಿ ನೀಡಿ. ಪ್ರವಾಸಕ್ಕೆ ಹೊರಡಲು ಶುರು ಮಾಡಿದೆ. ಅಮ್ಮನು ಕೂಡ ನಮಗೆ " ಸರಿ ಹೋಗು ಆದರೆ ಹುಷಾರಾಗಿರು ಅಂತೆಲ್ಲಾ ಹೇಳಿ ಅಪ್ಪಣೆ ನೀಡಿದರು :) " , ಅಲ್ಲೇ ಇದ್ದ ನನ್ನ ಬಟ್ಟೆಗಳನ್ನು ಒಂದು ಬ್ಯಾಗಿಗೆ ತುಂಬಿಕೊಂಡು , ಅಮ್ಮ ಮಾಡಿದ ಬಿಸಿ ಮುದ್ದೆಯನ್ನು ಗುಳುಮ್ ಮಾಡಿ , ಮಳೆಯಲ್ಲಿಯೇ ವಿಜಯನಗರದ ಕಡೆ ಹೊರಟಾಗ ರಾತ್ರಿ 9 ಗಂಟೆ ಆಗಿತ್ತು.

           ನಾವೆಲ್ಲ ಸ್ನೇಹಿತರು ವಿಜಯನಗರದಲ್ಲಿ ಸಿಗಬೇಕು , ಅಲ್ಲಿಂದ ಸರಿಯಾಗಿ ರಾತ್ರಿ 10 ಕ್ಕೆ ಪ್ರಯಾಣ ಶುರು ಮಾಡಬೇಕು ಅಂತ ಮಾತಾಗಿತ್ತು. ಸಂಜೆ ಶುರುವಾಗಿದ್ದ ಮಳೆ ಇನ್ನೂ ನಿಂತಿರದ ಕಾರಣ ನಮ್ಮ ಪ್ಲಾನ್ ಸ್ವಲ್ಪ ಹೆಚ್ಚು ಕಮ್ಮಿಯಾಗುವ ಎಲ್ಲಾ ಸಾದ್ಯತೆಗಳು ಇದ್ದವು. ದೊ ಎಂದು ಸುರಿಯುತ್ತಾ ಇದ್ದ ಮಳೆ ನಿಲ್ಲಲೇ ಇಲ್ಲ, ಆದರೆ ನಾ ವಿಜಯನಗರಕ್ಕೆ ಹತ್ತಿದ್ದ ಬಸ್ಸು ನಿಂತ್ತೇ ಬಿಟ್ಟಿತ್ತು . ಮಳೆಯಲ್ಲೇ ಓಡುತ್ತಾ ಅಲ್ಲೇ ಇದ್ದ ಒಂದು ಅಂಗಡಿಯ ಬಳಿ ಹೋಗಿ ನಿಂತೆ. ನೀರ ಹನಿಗಳು  ಅಂಗಡಿಯ ಸೂರಿನಿಂದ ನನ್ನ ಮೇಲೆ  ತೊಟ-ತೊಟ  ಅನುಕುತ್ತಲೆ ಇದ್ದವು. ಆಗ ರಾತ್ರಿ 10 ಗಂಟೆ ಆಗಿತ್ತು, ನನ್ನ ಸ್ನೇಹಿತರ ಸುಳಿವು ಇನ್ನೂ ಇರಲೇ ಇಲ್ಲ .ಕಾಲ ಕಳೆಯುವುದು ಹೇಗೆ ಎಂದು ಯೋಚಿಸುವಷ್ಟರಲ್ಲಿ ಕೈ ಗೆ ಮೆಹೇಂದಿ ಹಾಕಿಸಿಕೊಳ್ಳುತ್ತ, ಚಿಟ-ಪಟ ಮಾತನಾಡುತ್ತಾ ಇದ್ದ ಹುಡುಗಿಯರ ಗುಂಪನ್ನು ನೋಡುತ್ತಾ ಕಾಲ ಕಳೆಯಲು ಶುರು ಮಾಡಿದೆ :) . ಅಷ್ಟರಲ್ಲಿ ರಸ್ತೆಯ ಆ ತುದಿಯಲ್ಲಿ " ನೀರಿ,ನೀರಿ " ಅಂತ ಕೂಗುತ್ತಾ ಬಂದ ನನ್ನ ನೆಚ್ಚಿನ ಸ್ನೇಹಿತ ಮಂಜು ಜೊತೆಗೆ ಮಳೆಯಲ್ಲಿಯೇ ಅವನ ರೂಮಿಗೆ ನೆಡೆದೆವು. ಮಳೆಯ ಕಾರಣ ಕ್ಯಾಬ್ ಬರುವುದು ಸ್ವಲ್ಪ ಲೇಟ್ ಆಗುತ್ತೆ ಅಂತ ಪ್ರಭುಗಳು ಫೋನ್ ಮಾಡಿ ತಿಳಿಸಿದರು. ಮಂಜು ಕೂಡ ಅವಸರ ಅವಸರದಲ್ಲಿ ಬಟ್ಟೆ ಬರೆ ಜೋಡಿಸಿಕೊಂಡು ರೆಡಿ ಆಗಿಯೇ ಬಿಟ್ಟ. ಅಷ್ಟೊತ್ತಿಗೆ ವಿಜಯನಗರ ತಲುಪಿದ ಪ್ರಭುಗಳು ಕ್ಯಾಬಿನಿಂದ ನಮ್ಮನ್ನು ಕೂಗಿ " ಬರ್ರೋ " ಎಂದರು. ಜೋರಾಗಿ ಸುರಿಯುತ್ತಿದ್ದ ಮಳೆ ಇನ್ನೂ ಕಡಿಮೆ ಆಗಿರಲೇ ಇಲ್ಲ. ಅಲ್ಲಿಂದ ಹೊರಟ ನಾವು ಜ್ಯೋತಿರ್ಲಿಂಗನ ಮನೆಯಕಡೆ ಹೊರಟು ಪಪ್ಯ ಅಲಿಯಾಸ್ ಪ್ರದೀಪ್ ಮತ್ತು ಜ್ಯೋತಿಯನ್ನು ಕರೆದುಕೊಂಡು ನಮ್ಮ ಪ್ರಯಾಣವನ್ನು ಕೆಂಗೇರಿ ಕಡೆ ಬೆಳೆಸಿದೆವು. ಅಲ್ಲಿ ನಮ್ಮ ಕಿಲಾಡಿ ಕಿರಣ್ ಅಲಿಯಾಸ್ ಮೂಸು ಹತ್ತಬೇಕಾಗಿತ್ತು. ಕೆಂಗೇರಿಯಲ್ಲಿ ಮೂಸು ನಮ್ಮ ಜೊತೆ ಸೇರಿದಾಗ ರಾತ್ರಿ ೧೧ ರ ಸಮಯ, ನಾವು ನಮ್ಮ ಪ್ರವಾಸದ ಪ್ರಯಾಣವನ್ನು ಶುರು ಮಾಡಿಯೇ ಬಿಟ್ಟೆವು. ಎಲ್ಲರೂ ತಮ್ಮ ಕುಶಲೋಪರಿಗಳನ್ನು ವಿಚಾರಿಸುತ್ತಾ, ಈ ಪ್ರವಾಸದ ಪೂರ್ವ ಯೋಜನೆ ಮತ್ತು ಯಾವುದೇ ಸಿದ್ದತೆಗಳಿಲ್ಲದೇ ಹೊರಟ ಬಗ್ಗೆ ಮಾತನಾಡುತ್ತಾ, ಮೈಸೂರು ರಸ್ತೆಯಲ್ಲಿ ಸಾಗತೊಡಗಿದೆವು. ಬಾರಿ ಮಳೆ , ರಸ್ತೆಯಲೆಲ್ಲ ನೀರು, ಮಳೆಯಲ್ಲಿ 20 ಅಡಿಗಳಷ್ಟು ದೂರ ಬಿಟ್ಟರೆ ಮತ್ತೇನು ಕಾಣುತ್ತಿಲ್ಲ.ರಸ್ತೆಯ ತುಂಬಾ ನೀರಿದ್ದ ಕಾರಣ ಒಂದು ರೋಡ್ ಹಂಪ್ ಹಾರಿಸಿದ ನಮ್ಮ ಡ್ರೈವರ್ ಗೆ ನಾವು ಹೇಳಿದ್ದು “ ತಮ್ಮ ಹುಷಾರಾಗಿಯೇ ಹೋಡಿಸಪ್ಪ, ನಮಗೇನೂ ಅವಸರವಿಲ್ಲ, ನಮ್ಮದೆನೂ ಸಾದನೆಯಾಗಿಲ್ಲ ಇನ್ನೂ, ಯಾರು ಮದುವೆ ಕೂಡ ಆಗಿಲ್ಲ, ಕಿರಣ್ ಮದುವೆ ಈಗ ತಾನೇ ಸೆಟ್ ಆಗಿದೆ, ಜ್ಯೋತಿ ಹುಡುಗಿ ನೋಡಿಕೊಂಡು ಬಂದು ಇನ್ನೂ ಅವನ ಅಬಿಪ್ರಾಯ ಕೂಡ ಅವರಿಗೆ ಹೇಳಿಲ್ಲ, ಆರಾಮಾಗಿಯೇ ಹೋಗು, ಬಹಳ ಆಸೆಗಳಿವೆ ಎಂದಾಗ “ ಡ್ರೈವರ್ ನಸು ನಕ್ಕ ಸರಿ ಸಾರ್ ನೀವು ಹೇಳಿದ ಹಾಗೆಯೇ ಹಾಗಲಿ ಎಂದು ನಿದಾನವಾಗಿ ಡ್ರೈವ್ ಮಾಡಲು ಶುರು ಮಾಡಿದ. ಅಷ್ಟರಲ್ಲಿ ನಮ್ಮ ಮೂಸು ನಾ ಊಟ ಮಾಡಿಲ್ಲ ಏನಾದರೂ ತಿನ್ನಲೆಬೇಕು ಅಂತ ಹೇಳತೊಡಗಿದ. ಸ್ವಲ್ಪ ದೂರಕ್ಕೆ ಹೋಗಿ ಅಲ್ಲಿಯೇ ರಸ್ತೆ ಬದಿಯಲ್ಲಿದ್ದ  ಒಂದು ಟೀ ಹೋಟೆಲ್ ಬಳಿ ಗಾಡಿ ನಿಲ್ಲಿಸಿ ಎಲ್ಲರೂ ಬೀಳುವ ಮಳೆಯಲ್ಲಿಯೇ ಬಿಸಿ ಬಿಸಿ ಚಹಾ ಹೀರಿದೆವು. ನಾನು,ಮಂಜು,ಜ್ಯೋತಿ ಪ್ರಯಾಣಾದುದ್ದಕ್ಕೂ ತಿನ್ನಲು ತಿಂಡಿ ತೆಗೆದುಕೊಂಡರೆ, ಪ್ರಭುಗಳು,ಪಪ್ಯ ಮತ್ತು ಮೂಸು ತೀರ್ಥಗಳನ್ನು ತೆಗೆದುಕೊಂಡರು ... !!!! . ಇದೆಲ್ಲದರ ಜೊತೆಗೆ ಮತ್ತೆ ಗಾಡಿಯನ್ನೇರಿದ ನಾವು ಪ್ರಯಾಣಾದುದ್ದಕ್ಕೂ ಮಲಗದೇ ಬರಿ ಹಳೆಯ ನೆನಪುಗಳು, ಮುಂದಿನ ಕಾರ್ಯಕ್ರಮಗಳ ಬಗ್ಗೆ ಮಾತನಾಡುತ್ತಾ ಮುನ್ನೆಡೆದೆವು.
               ಅತೀಯಾಗಿ ಮಾತನಾಡುತ್ತಾ ಇದ್ದ ಮೂಸು ಈ ಬಾರಿ ಸುಮ್ಮನೇ ಇರುವುದು ನಮಗೆ ತುಂಬಾ ಆಶ್ಚರ್ಯ ತರಿಸಿತ್ತು, ಅದಕ್ಕೆ ಕಾರಣವಾದ ಅವನ ಅಕ್ಕನ ಮಗಳನ್ನು ಹೋಗಳುತ್ತ ಅವನ ಕಾಲೆಳೆಯುತ್ತಿದ್ದೆವು , ಹೀಗೆ ಪೋಲಿ ಮಾತುಗಳು, ಹಾಸ್ಯ ಚಟಾಕಿಗಳು ನೆಡೆಯುತ್ತಲೇ ಇದ್ದವು, ಮಳೆಯೋಂತು ನಿಂತಿರಲೇ ಇಲ್ಲ. ಇನ್ನೇನು ಕುಶಾಲನಗರದ ಹತ್ತಿರ ಬಂದಂತೆ ಮಳೆ ತುಂಬಾ ಜೂರಾಗತೊಡಗಿತು.ನಾವು ಮಾತಾಡಿ ಮಾತಾಡಿ ತುಂಬಾ ಸುಸ್ತಾಗಿದ್ದರಿಂದ , ಡ್ರೈವರ್ ಗೆ ಗಾಡಿ ಪಕ್ಕಕ್ಕೆ ಹಾಕುವಂತೆ ಹೇಳಿ , ಸ್ವಲ್ಪ ಸಮಯ ಕ್ಯಾಬ್ಅಲ್ಲಿ ಮಲಗಿದೆವು.
       ಸ್ವಲ್ಪ ವಿಶ್ರಾಂತಿಯ ನಂತರ ಕಣ್ಣು ಬಿಟ್ಟಾಗ ಬೆಳ್ಳಿಗ್ಗೆ 5.45 ರ ಸಮಯ, ಮಳೆ ಸ್ವಲ್ಪ ಕಡಿಮೆ ಆಗಿತ್ತು , ಮತ್ತೆ ಪ್ರಯಾಣ ಆರಂಬಿಸಿದ ನಾವು ಬೆಳ್ಳಿಗ್ಗೆ 6.15 ರ ಹೊತ್ತಿಗೆ "ಕುಶಾಲನಗರ" ಮುಟ್ಟಿದ್ದೆವು. ಅಲ್ಲಿ ಮತ್ತೆ ಇಳಿದು ಮೊದಲ ಮಲೆನಾಡಿನ ಬಿಸಿ ಕಾಫೀ ಕುಡಿದು, ಬೆಳಗಿನ ಪ್ರಯಾಣವನ್ನು ಮುಂದುವರೆಸಿದೆವು. ಅಷ್ಟೊತ್ತಿಗೆ ಸಂಪೂರ್ಣವಾಗಿ ನಿಂತಿದ್ದ ಮಳೆ ಪ್ರಕೃತಿಗೊಂದು ಅಂದ ತಂದುಕೊಟ್ಟಿತ್ತು. ಕಿಟಕಿಯಿಂದ ತಣ್ಣನೆ ಗಾಳಿ, ಎತ್ತ ನೋಡಿದರತ್ತ ಹಸಿರು ತೋಟ-ತುಡಿಕೆಗಳು, ಗುಡ್ಡ-ಬೆಟ್ಟಗಳು ನಮ್ಮ ಪ್ರಯಾಣಕೊಂದು ಚೈತನ್ಯ ನೀಡಿದ್ದವು. ಅಕಾಲಿಕವಾಗಿ ಆ ವಾರವೆಲ್ಲ ಬಂದಿದ್ದ ಮಳೆಯು ಮಡಿಕೇರಿಯ ಸೌಂದರ್ಯಕ್ಕೆ ಬೇರೆಯ ಲುಕ್ ನೀಡಿತ್ತು. ಬೇಸಿಗೆಯಲ್ಲಿ ಕೂಡ ಮಡಿಕೇರಿ ಆ ವಾರದ ಮಳೆಯಿಂದ, ಮಳೆಗಾಲದಲ್ಲಿ ಇರುವ ರೀತಿ ಹಚ್ಚ ಹಸಿರಿನಿದ ಕಂಗೊಳಿಸುತ್ತ ಇತ್ತು. ಹೀಗೆ ಮುಂದೆ ಸಾಗುತ್ತಾ ಇರುವಾಗ  ಕೆಲವು ಸುಂದರವಾದ ಜಾಗಗಳಲ್ಲಿ ಇಳಿದು ಅಲ್ಲಿಯ ವಾತಾವರಣವನ್ನು ಸವಿದೆವು. ಅಷ್ಟೊತ್ತಿಗೆ ನಮ್ಮ ಹುಡುಗರ ಫೋಟೋ ಸೆಶನ್ಸ್ ಆರಂಬವಾಗಿಯೇ ಬಿಟ್ಟವು. ಸ್ವಲ್ಪ ಮುಂದೆ ನೆಡೆದಾಗ ನಮಗೆ ಅತ್ಯಂತ ಆಶ್ಚರ್ಯ ತರಿಸುವಂತ ಸುಂದರ ದೃಶ್ಯ, ಬೆಟ್ಟದ ಸಾಲುಗಳು, ಬೆಟ್ಟಗಳಿಗೆ ಮುದ್ದಿಡಲು ತವಕಿಸುತ್ತಿರುವ ಮೋಡಗಳು, ಎತ್ತ ನೋಡಿದರು ಮಡಿಕೇರಿಯ ಮಂಜು , ಗಾಳಿ ಬೀಸಿದಾಗ ಸ್ವಲ್ಪ ಸರಿಯುತಿದ್ದ ಮೋಡಗಳು. ನಾವು ಈ ರೀತಿಯ ವಾತಾವರಣವನ್ನು ಈ ಬೇಸಿಗೆಯಲ್ಲಿ ಯೋಚಿಸಿಯೂ ಕೂಡ ಇರಲಿಲ್ಲ. ಒಟ್ಟಾರೆ ಹೇಳುವುದಾದರೆ ನನಗೆ ಅಲ್ಲಿಯ ಈ ರೀತಿಯ ವಾತಾವರಣ ತುಂಬಾ ಸರ್ಪ್ರೈಸ್ ಆಗಿತ್ತು.


         ಅಲ್ಲಿ ಇಲ್ಲಿ ಇಳಿದು ಫೋಟೋ ಕ್ಲಿಕ್ಕಿಸಿ ಮಡಿಕೇರಿ ತಲುಪಿದ್ದು ಸರಿಯಾಗಿ 8 ಗಂಟೆ ಆಗಿತ್ತು.  ಅತ್ಯಂತ ಸುಂದರ ಮತ್ತು ಶಾಂತ ರೂಪದಲ್ಲಿ ಕಾಣುತಿದ್ದ ಆ ಊರು, ಅಲ್ಲಿಯ ಜನ , ಹುಡುಗೆ ತೊಡಿಗೆಗಳು  ನಮಗೆ ಹೊಸ ಎಫೆಕ್ಟ್ ಕೊಟ್ಟವು. ಮಡಿಕೇರಿಯಲ್ಲಿ ನಾವು ನೇರವಾಗಿ ಹೋಗಿದ್ದು "ರಾಜಸೀಟ್"ಗೆ. ಅಲ್ಲಿಯ ಮುಂಜಾನೆಯ ದೃಶ್ಯವಂತು ವರ್ಣಿಸಲಸಾದ್ಯ. ಎತ್ತ ನೋಡಿದರು ಮಡಿಕೇರಿಯ ಮಂಜು, ಬಿಳಿ ಮೋಡಗಳು, ದೂರದಲ್ಲಿ ಕಾಣುವ ಬೆಟ್ಟಗಳ ತುದಿಗಳು, ಅವುಗಳಿಗೆ ಸುತ್ತಿಕೊಂಡಿದ್ದ ಮೋಡಗಳು, ಬಾರಿ ಪ್ರಪಾತಗಳು, ಇದೆಲ್ಲ ನಿಜಕ್ಕೂ ನಮಗೆ ಮುದ ನೀದಿದವು.ಎದೆಲ್ಲ ನಮಗೆ ಒಂದು ರೀತಿಯಲ್ಲಿ ಹಿಮದ ರಾಶಿಗಳಂತೆ ಕಾಣುತ್ತಿದ್ದವು. ಸ್ವಲ್ಪ ಸಮಯ ಕಳೆದು ಫೋಟೋಗಳನ್ನು ಕ್ಲಿಕ್ಕಿಸಿ ಅಲ್ಲಿಂದ ಹೊರಟು ನಾವು, ಅಲ್ಲಿಯೇ ಇದ್ದ ಒಂದು ಹೋಮ್ ಸ್ಟೇ ಬುಕ್ ಮಾಡಿ, ನಮ್ಮ ಬ್ಯಾಗುಗಳನ್ನ ಅಲ್ಲಿ ಇಟ್ಟು, ಸ್ನಾನ ಮುಗಿಸಿ, ಫ್ರೆಶ್ ಆಗಿ, ಬಟ್ಟರ ಹೋಟೆಲ್‍ಗೆ ಹೋಗಿ 4 ಇಡ್ಲಿ, 1 ಪ್ಲೇಟ್ ಪುಳಿಯೋಗರೆ, ನಾಲಿಗೆ ಚುರ್ ಅನ್ನುವಷ್ಟು ಬಿಸಿಯಾದ ಕಾಫೀ ಕುಡಿದು.ತಲಕಾವೇರಿಗೆ ಹೊರಡಲು ನಿರ್ಧರಿಸಿ, ಅಲ್ಲಿಂದ ಹೊರಟೆವು.

        ಮಡಿಕೇರಿಯ ಪುರಾತನ ದೇವಾಲಯ ಶ್ರೀ ಓಂಕಾರೇಶ್ವರ ದೇವಸ್ತಾನಕ್ಕೆ ದಾರಿಯಿಂದಲೇ ಕೈ ಮುಗಿದು ಮಡಿಕೇರಿಯಿಂದ  ತಲಕಾವೇರಿ ಕಡೆಗೆ ಹೊರಟಾಗ ಬೆಳಿಗ್ಗೆ 9 ರ ಸಮಯ. ತಲಕಾವೇರಿ ತಲುಪುತ್ತಿದ್ದಂತೆ , ಮತ್ತೆ ಪ್ರಕೃತಿಯು ಅದರ ಅತ್ಯಂತ ಹೆಚ್ಚಿನ ಸೌಂದರ್ಯದಿಂದ ನಮಗೆ ಚಮಕ್ ಕೊಡುತ್ತಲೇ ಇತ್ತು. ತಲಕಾವೇರಿಯಲ್ಲಿ, ಕಾವೇರಿಯ ಉಗಮ ಸ್ಥಾನಕ್ಕೆ ನಮಿಸಿ, ಅಲ್ಲಿಯೆ ಬೆಟ್ಟದ ಮೇಲಿರುವ "ವ್ಯೂ ಪಾಯಂಟ್" ಇಂದ ತಲಕಾವೇರಿಯ ವೈಭವ ನೋಡುವುದೇ ಒಂದು ವಿಶೇಷವಾದ ಅನುಭವ. ಬೆಟ್ಟವೇರುವುದಂತೂ ಒಂದು ಅತ್ಯಂತ  ಆನಂದದ ಮತ್ತು ಸಾಹಸದ ಕೆಲಸವಾಗಿತ್ತು. ನಮ್ಮ ಮುಂದೆಯೇ ಮೋಡಗಳು ಹೋಗುವ ಅನುಭವ. ಎತ್ತ ನೋಡಿದರು ಪ್ರಪಾತಗಳು, ಹಸಿರು ಬೆಟ್ಟಗಳು ಬಿಳಿ ಮೋಡಗಳ ಸೀರೆಯುಟ್ಟು ನಮಗೆ ತಮ್ಮ ವೈಯ್ಯಾರ ಪ್ರದರ್ಶಿಸಲೆಂದೇ ನಿಂತಿದ್ದಂತೆ ದೃಶ್ಯ. ನಿಜವಾಗಿಯೂ ನಾವೇನೂ ಸ್ವರ್ಗದಲ್ಲಿ ಇದೀವೇನೋ ಅನ್ನೋ ಅನುಭವ. ಅಲ್ಲಿಂದ ಒಲ್ಲದ  ಮನಸ್ಸಿನಿಂದ ಕೆಳಗೆ ಹಿಳಿದು ಸ್ವಲ್ಪ ಸಮಯ ಅಲ್ಲಿಯೇ ಕುಳಿತು, ಪ್ರಕೃತಿಯ ಪೂರ್ಣಾನಂದವನ್ನು ಅನುಭವಿಸಿ , ಭಾಗಮಂಡಲದ ಭಗಂಡೇಶ್ವರಸ್ವಾಮಿ ದೇವಸ್ತಾನಕ್ಕೆ ನಮ್ಮ ಪ್ರಯಾಣ ಬೆಳೆಸಿದೆವು. ಅಷ್ಟೊತ್ತಿಗೆ ತಡ ಮಧ್ಯಾಹ್ನವಾಗಿದ್ದರಿಂದ ದೇವಸ್ತಾನದ ಬಾಗಿಲು ಮುಚ್ಚಿತ್ತು, ದೇವೇರ ದರುಶನ ನಮಗೆ ಆಗಲಿಲ್ಲ, ಆದರೆ ಅಲ್ಲಿಯ ಪ್ರಸಾದ ಮಾತ್ರ ಸಿಕ್ಕಿತು. ಕೊಡಗಿನ ಶೈಲಿಯ  ಪಲ್ಯ,ಪಾಯಸ ಮತ್ತು ಬಿಸಿ ಬಿಸಿ ಅನ್ನ ಸಾಂಬಾರು ಹೊಟ್ಟೆಗಿಳಿಸಿ , ಹೊರಗಿನಿಂದಲೇ ದೇವರಿಗೆ ನಮಸ್ಕಾರ ಮಾಡಿ ಅಲ್ಲಿಂದ ಹೊರಟಾಗ ಸರಿಯಾಗಿ 2 ಗಂಟೆ ಆಗಿತ್ತು. ಅಲ್ಲಿಂದ ನಾವು ನೇರವಾಗಿ ಹೊರಟಿದ್ದು "ಹಬ್ಬಿ" ಜಲಪಾತದ ಕಡೆಗೆ. ಹಬ್ಬಿ ಜಲಪಾತ ಸ್ವಲ್ಪ ನೀರಿಲ್ಲದೇ  ಸಪ್ಪೆಯಾಗಿದ್ದರು ಸಹ ಅಲ್ಲಿಯ ದೃಶ್ಯ ಮಾತ್ರ ರಮಣೀಯವಾಗಿತ್ತು. ತೇಲಾಡುವ ಬ್ರಿಡ್ಜ್, ಕೆಳಗೆ ನೀರು, ಮೇಲಿಂದ ಕೆಳಗೆ ಬೀಳುವ ನೀರಿನ ಶಬ್ದ  ಮತ್ತೆ ಒಂದು ತರದ ಎಫೆಕ್ಟ್ ನೀಡುತ್ತಾ ಇತ್ತು. ಹಬ್ಬಿ ಜಲಪಾತದ ಬಳಿ ಸಾಕಷ್ಟು ಸಮಯ ಕಳೆದ ನಾವು ಮಡಿಕೇರಿಗೆ ಹಿಂತಿರುಗಿದಾಗ ಸಂಜೆಯಾಗಿತ್ತು. ಜಾಸ್ತಿ ಸುಸ್ತಾಗಿದ್ದ ನಮಗೆ ಮತ್ತೆ ಹೊಟ್ಟೆ ಚುರುಕ್ ಅಂದಿತ್ತು, ಅಲ್ಲಿಯೇ ಇದ್ದ ಒಂದು ಉಡುಪಿ ಹೊಟೆಲ್ ಗೆ ಹೋಗಿ ದೋಸೆ ತಿಂದು ಮುಗಿಸಿ, ಸರಿಯಾಗಿ 7 ಗಂಟೆಗೆ ಮತ್ತೆ ರಾಜ ಸೀಟ್‌ಗೆ ಹೊರಟೆವು. ಅಲ್ಲಿಗೆ ಹೋಗುತ್ತಿದ್ದಂತೆಯೆ  ಅಲ್ಲಿ ಮಬ್ಬುಗತ್ತಲಲ್ಲಿ ನಮ್ಮನ್ನು ಸ್ವಾಗತಿಸಿದ್ದು ಸಂಗೀತ ಕಾರಂಜಿಗಳು. 15 ನಿಮಿಷಗಳ ಕಾಲ ನೆಡೆಯುವ ಈ ಕಾರಂಜಿಗಳ  ನೃತ್ಯ ಮಕ್ಕಳನ್ನ ಮತ್ತು ದೊಡ್ಡವರನ್ನು ರಂಜಿಸುವುದರಲ್ಲಿ ಎರೆಡು ಮಾತಿಲ್ಲ. ಇನ್ನೇನು ಆ ಕಾರ್ಯಕ್ರಮ ಮುಗಿಯುವ ವೇಳೆಗೆ ಮತ್ತೆ ಮಡಿಕೇರಿಯ ಮಳೆ ಆರಂಬವಾಗಿಯೇ ಬಿಟ್ಟಿತ್ತು.  ಮಳೆಯಲ್ಲಿ ಮತ್ತೆ ತೊಯ್ದುಹೋದ ನಾವು , ಊಟ-ತಿಂಡಿ ಕಟ್ಟಿಸಿಕೊಂಡು ಹೋಮ್ ಸ್ಟೇ ತಲುಪಿದ ನಾವು, ಆ ದಿನದ ನೆನಪುಗಳನ್ನ ಮೆಲುಕು ಹಾಕುತ್ತಾ, ಒಬ್ಬರಿಗೊಬ್ಬರು ಚುಡಾಯಿಸಿಕೊಳ್ಳುತ್ತ , ನಾವು ತಿಂಡಿ ತಿಂದು ಮುಗಿಸಿದೆವು , ಇನ್ನೂ ಕೆಲವರು ತೀರ್ಥ ಕುಡಿಯುತ್ತಲೇ ಇದ್ದರು, ಮಾತು ಮಾತಲ್ಲೇ ನಿದ್ರರಾಣಿ ನಮ್ಮನ್ನು ಕರೆದಿದ್ದರಿಂದ,  ಆದಿನವನ್ನು ಅಲ್ಲೆಗೆ ಮುಗಿಸಲು ತೀರ್ಮಾನಿಸಿ, ನಿದ್ರೆಗೆ ಜಾರಿದೆವು.

            ಹಿಂದಿನ ದಿನ ಚೆನ್ನಾಗಿ  ದಣಿದಿದ್ದ  ನಮಗೆ ಆ ರಾತ್ರಿ ಹೋದದ್ದೇ ಗೊತ್ತಾಗಲಿಲ್ಲ, ಬೆಳ್ಳಿಗ್ಗೆ 5 ಕ್ಕೆ ಎದ್ದು, ಒಬ್ಬೊಬ್ಬರೇ ಸ್ನಾನ ಮಾಡಿ ಮತ್ತೆ ನಮ್ಮ ಮುಂದಿನ ಪ್ರವಾಸಿ ತಾಣಗಳ ಬೇಟಿಗೆ ರೆಡಿಯಾಗಿ  6.30 ಕ್ಕೆ ರೂಮ್ ಕಾಲಿ ಮಾಡಿ ಅಲ್ಲಿಂದ ನಾವು ಹೊರಟೆವು.
            ನಮ್ಮ ಮುಂದಿನ ತಾಣವು "ದುಭಾರೆ" ಎಲಿಫೆಂಟ್ ಕ್ಯಾಂಪ್ ಆಗಿತ್ತು. ಅಲ್ಲಿ ಸರಿಯಾಗಿ ಉಪಹಾರ ವ್ಯವಸ್ತೆ ಇಲ್ಲದ ಕಾರಣ ಮಡಿಕೇರಿಯಲ್ಲಿಯೇ ಬೆಳ್ಳಿಗ್ಗೆ 7 ಕ್ಕೆ ಸರಿಯಾಗಿ ತಿಂಡಿ ತಿಂದು, ಮಡಿಕೇರಿಯ ಕೊನೆ ಕಾಫಿ ಕುಡಿದು, ಮಡಿಕೇರಿಗೆ ನಮಸ್ಕಾರ ಹೇಳಿ, ಹೋರಾಟ ನಾವು ಸರಿಯಾಗಿ 9-10 ಕ್ಕೆ ದುಬಾರೆ ತಲುಪಿದೆವು. ಅಲ್ಲಿ ಕಾವೇರಿ ನದಿಯಲ್ಲಿ ವಾಟರ್ ರಾಫ್ಟಿಂಗ್ ಮಾಡಿ, ನದಿಯ ಇನ್ನೊಂದು ದಡದಲ್ಲಿ ಇದ್ದ ಆನೆಗಳ ಕ್ಯಾಂಪ್ ಗೆ ಹೋಗಿ ಅಲ್ಲಿಗೆ ಬರುವ ಆನೆಗಳಿಗೆ ಕಾಯುತ್ತಾ ಕುಳಿತೆವು. ಆನೆಗಳು ಅಲ್ಲೆಗೆ ಬಂದಾಗ ಅವುಗಳನ್ನು ನೋಡಿ ಅವುಗಳ ಬಗ್ಗೆ ತಿಳಿದುಕೊಂಡು ಅಲ್ಲಿಂದ ಹೊರಡಲು ತೀರ್ಮಾನಿಸಿದೆವು.  ಅಲ್ಲಿಂದ ಹೊರಟು ನಾವು " ಕಾವೇರಿ ನಿಸರ್ಗದಾಮಕ್ಕೆ"  ಬಂದು ಅಲ್ಲಿ ಸ್ವಲ್ಪ ಸಮಯ ಕಳೆದು, ಆನೆಯ ಮೇಲೆ ಸವಾರಿ ಮಾಡಿ, ಬಾರಿ ಫೋಟೋ ಸೆಶನ್ ಗಳನ್ನು ಮುಗಿಸಿ, ನಿಸರ್ಗಾಧಾಮದಲ್ಲಿ ಅಡ್ಡಾಡಿ ಅಲ್ಲಿಂದ ಹೊರಟಾಗ ಸರಿಯಾಗಿ 11 ಗಂಟೆಯ ಸಮಯವಿರಬಹುದು. ದಾರಿಯಲ್ಲಿಯೇ ಇದ್ದ ಒಂದು "ಚಿಕ್ಲಿಹೊಳೆ" ಜಲಾಶಯ ನೋಡಿಕೊಂಡು, ಅದರ ಸೌಂದರ್ಯವನ್ನೂ ನಮ್ಮ ಕಣ್ಣಿನಲ್ಲಿ ತುಂಬಿಕೊಂಡು ನಮ್ಮ ಪ್ರವಾಸದ ಕೊನೆಯ ತಾಣ "ಬೈಲುಕುಪ್ಪೆಯ" ಟಿಬೆಟ್ ಜನರ " ಗೋಲ್ಡನ್ ಟೆಂಪಲ್ " ಗೆ ಹೋದೆವು. ನಿಜಕ್ಕೂ ಅದೊಂದು ಅಪರೂಪದ ಮತ್ತೆ ಸುಂದರವಾದ ತಾಣ. ಕರ್ನಾಟಕದಲ್ಲಿ ಈ ರೀತಿಯ ಒಂದು ಜಾಗ ಅದು ಇಷ್ಟು ಹತ್ತಿರದಲ್ಲಿ ಇದೆ ಅಂದರೆ ನಂಬಲು ಆಗುವುದಿಲ್ಲ.  ಎಲ್ಲಿ ನೋಡಿದರು ಟಿಬೆಟ್ ಜನರು, ಅವರ ವಿಶೇಷ ಹಾಗೂ ವಿಬಿನ್ನವಾದ ಉಡುಗೆ ತೊಡುಗೆಗಳು, ಅವರ ಶೈಲಿಯ ಆ ದೇವಸ್ಥಾನ, ಬಾರಿ ಗಾತ್ರದ ಸುಂದರ ಆ ಮೂರು ವಿಗ್ರಹಗಳು ನಿಜಕ್ಕೂ ಅವು ನಮ್ಮನ್ನು ಬೇರೆಯ ಲೋಕಕ್ಕೆ ಕರೆದು ಕೊಂಡು ಹೋದಂತಿದ್ದವು . ಅಷ್ಟೊತ್ತಿಗೆ ಸರಿ ಸುಮಾರು 1 ಗಂಟೆ ಆಗಿತ್ತು .
             ಜ್ಯೋತಿ ದರ್ಮಸ್ಥಳಕ್ಕೆ ಮತ್ತು ನಾನು ಶೃಂಗೇರಿಗೆ ನನ್ನ ಸ್ನೇಹಿತ ಶಾಂತೇಷ್ ಮಧುವೆಗೆ ಹೋಗಬೇಕಾಗಿತ್ತು ಅದೇ ದಿನ ರಾತ್ರಿ. ಹಾಗಾಗಿ ಅಲ್ಲಿಂದ ಬೆಂಗಳೂರಿಗೆ ಹೊರಡಲು ಸಿದ್ದರಾದೇವು. ದಾರಿಯುದ್ದಕ್ಕೂ ಟ್ರಿಪ್ ಬಗ್ಗೆ ಮಾತನಾಡುತ್ತಾ , ಮೂಸು( ಕಿರಣ್ ) ಚೇಂಜ್ ಆಗಿರುವುದರ ಬಗ್ಗೆ, ಪಪ್ಯನ ಮುಂದಿನ ಯೋಜನೆಗಳ ಬಗ್ಗೆ ಅವನ ಕಾಲು ಎಳೆಯುತ್ತಾ ಬಂಗಳೂರಿನ ಕಡೆ ಬರತೊಡಗಿದೆವು. ಅಂತೂ ಇಂತೂ ಬೆಂಗಳೂರು ಬಂದೇಬಿಟ್ಟಿತು, ಇಲ್ಲಿಗೆ  ತಲುಪುತಿದ್ದಂತೆಯೇ ಮತ್ತೆ ಮಳೆಯ ಆರ್ಭಟ, ಹೇಗೋ ವಿಜಯನಗರ ಸೇರಿದ ನಾನು, ಅಲ್ಲಿಯೇ ಮಂಜನ ರೂಮಿನಲ್ಲಿ ಕಾಲ ಕಳೆದು ಮತ್ತೆ ನನ್ನ ಶೃಂಗೇರಿ ಪ್ರಯಾಣಕ್ಕೆ ಸಿದ್ದವಾಗಿ, ಅದೇ ಬೆಂಗಳೂರಿನ  ಜನಜಂಗುಳಿಯ ಮೆಜೆಸ್ಟಿಕ್ ಕಡೆ ಹೋಗಿ ಬಸ್ಸನ್ನೇರಿ ಮತ್ತೆ ಮುಂದಿನ ಪ್ರಯಾಣವನ್ನು ಆರಬಿಸಿದೆ ……… .........










ನಿಮಗಾಗಿ.......
ನಿರಂಜನ್








ಶುಕ್ರವಾರ, ಏಪ್ರಿಲ್ 8, 2011

ಬನ್ನಿ ಕೈ ಜೋಡಿಸೋಣ.........

              ಅಣ್ಣನೊಂದಿಗೆ ನಾವು ........... ಬನ್ನಿ ಕೈ ಜೋಡಿಸೋಣ ............

ಭಾರತ ಎದ್ದು ನಿಂತಿದೆ, ಭ್ರಷ್ಟಾಚಾರ ಈಗ ನಿಲ್ಲಲೇಬೇಕಾಗಿದೆ. ಇದೆ ಸುಸಮಯ, ಬನ್ನಿ ಭ್ರಷ್ಟಾಚಾರದ ವಿರುದ್ದ ಹೋರಾಡೋಣ, ಚಳುವಳಿಯಲ್ಲಿ ಭಾಗಿಯಾಗೋಣ, ಇದೆ ನಮಗೆಲ್ಲ ಬದಲಾವಣೆ ತರಲು ಸಿಕ್ಕಿರುವ ಕಡೆಯ ಅವಕಾಶ. ಬರಿ ಚುನಾವಣೆಗಳಲ್ಲಿ ಮತ ಚಲಾಯಿಸಿ ಬದಲಾವಣೆ ತರಲು ಸಾದ್ಯವಿಲ್ಲ, ಬರಿ ರಾಜಕಾರಣಿಗಳ ಹಾಗೂ ಲಂಚಗುಳಿತನದ ಬಗ್ಗೆ ಮಾತನಾಡಿದರೆ ಸಾಲದು, ಇದರ ವಿರುದ್ದ ಹೋರಾಟ ನೆಡಸಬೇಕು. ಹೋರಾಟ ನೆಡೆಸುತ್ತಿರುವ ಗಾಂಧಿವಾದಿ ಅಣ್ಣ ಹಜ಼ಾರೆ ಮತ್ತು ಮಿತ್ರರಿಗೆ ಹಾಗೂ ಎಲ್ಲ ಚಳುವಳಿಗಾರರಿಗೆ ನಮ್ಮ ಬೆಂಬಲ ನೀಡಬೇಕಾಗಿದೆ.

                                   
           ಅಣ್ಣನವರ  ಈ ಚಳುವಳಿ ಬರಿ ಲೊಕಪಾಲ್ ಮಸೂದೆಯ ಜಾರಿಗೆ ಮಾತ್ರ ಸೀಮಿತವಾಗಿಲ್ಲ, ಇದು ಯಾವುದೇ ರಾಜಕೀಯ ಪಕ್ಷದ , ರಾಜಕೀಯ ವ್ಯಕ್ತಿಗಳ  ಅಥವಾ ಸರಕಾರದ ವಿರುದ್ದವೂ ಅಲ್ಲ. ಇದು ಭ್ರಷ್ಟಾಚಾರದ ವಿರುದ್ದ , ಅದು ಯಾರೇ ಮಾಡಲಿ. ಇದೊಂದು ಭ್ರಷ್ಟಾಚಾರದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಒಂದು ಚಳುವಳಿ. ಭ್ರಷ್ಟಾಚಾರಕ್ಕೆ ಕಾರಣ ಬರಿ ರಾಜಕೀಯದವರು ಮಾತ್ರವಲ್ಲ ಅದರಲ್ಲಿ ಸಮನಾದ ಪಾಲು ನಮ್ಮದು ಇದೆ, ಇದನ್ನು ನಾವು ಮೊದಲು ಅರ್ಥ ಮಾಡಿಕೊಳ್ಳಬೇಕಾಗಿದೆ. ಹಾಗಾಗಿ ಇದನ್ನು ಸರಿ ಮಾಡುವ ಕರ್ತವ್ಯ ಕೂಡ ನಮ್ಮದೇ ಆಗಿದೆ. ಈ ಚಳುವಳಿಯನ್ನು ಅರ್ಥ ಮಾಡಿಕೊಂಡು ನಾವು ಕೂಡ ಇದರಲ್ಲಿ ಭಾಗಿಯಾಗಿ ನಮ್ಮ ಸಮಾಜಕ್ಕೆ ಒಂದಿಷ್ಟು ಒಳ್ಳೆಯದನ್ನು ಮಾಡಬೇಕಾಗಿದೆ. ಲೋಕಾಪಾಲ್ ಮಸೂದೆ ಜಾರಿಯಾದರೆ ಮಾತ್ರ ಭ್ರಷ್ಟಾಚಾರ ನಿಲ್ಲುವುದಿಲ್ಲ , ಸಮಾಜದ ಎಲ್ಲ ಸ್ತರದಲ್ಲೂ ನೆಡೆಯುವ ಭ್ರಷ್ಟಾಚಾರವನ್ನು ವಿರೋದಿಸಬೇಕು ಹಾಗೂ ಲಂಚ ಕೊಡದಿರಲು ಹಾಗೂ ತೆಗೆದುಕೊಳ್ಳದಿರಲು ನಿರ್ಧರಿಸಿ,  ಅದರಂತೆ ನೆಡೆಯಲೇಬೇಕಾಗಿದೆ.

          ಭ್ರಷ್ಟಾಚಾರದ ವಿರುದ್ದ ನೆಡೆಯುತ್ತಿರುವ  ಈ ಹೋರಾಟ ಕೇವಲ ಹೋರಾಟವಾಗದೆ , ಇದೊಂದು ದೇಶದ ಬದಲಾವಣೆಗೆ, ಲಂಚ ಮುಕ್ತ ದೇಶವನ್ನು ಕಟ್ಟಲು ಭದ್ರ ಬುನಾದಿಯಾಕಬೇಕಾಗಿದೆ. ಇದಕ್ಕೆಲ್ಲ ನಮ್ಮ ಸಹಕಾರ ಅಣ್ಣನವರಿಗೆ ನಾವು ನೀಡಲೇಬೇಕು. ನಮ್ಮದೇ ಆದ ಶೈಲಿಯಲ್ಲಿ ನಾವು ಈ ಹೋರಾಟದಲ್ಲಿ ಭಾಗಿಯಾಗಬಹುದು, ನಮ್ಮ ಸುತ್ತಮುತ್ತಲಿನ ಜನರಲ್ಲಿ , ಮನೆಯವರಲ್ಲಿ ಇದರ ಬಗ್ಗೆ ಜಾಗೃತಿ ಮೂಡಿಸಿ. ಭ್ರಷ್ಟಾಚಾರ ಮುಕ್ತ ರಾಷ್ಟ್ರ ಕಟ್ಟಲು ನಮ್ಮ ಕೈಲಾದಷ್ಟು ಸೇವೆ ನಾವು ಮಾಡೋಣ, ಬನ್ನಿ ಚಳುವಳಿಯಲ್ಲಿ ಭಾಗವಹಿಸೋಣ,ಸಮಾಜದ ಏಳಿಗೆಗೆ ಕಾರಣವಾಗೋಣ.   
 
ನಿಮಗಾಗಿ.......
ನಿರಂಜನ್

ಭಾನುವಾರ, ಮಾರ್ಚ್ 13, 2011

Generic Love !!!!!!!

                                      Generic Love !!!!!!

ವಯೋಸಹಜ ಭಾವನೆಗಳಾದ ಪ್ರೀತಿ ಮತ್ತು ಆಕರ್ಷಣೆಗಳು ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಸಾರಿ ಬಂದೆ ಬರುತ್ತವೆ, ಇದಕ್ಕೆ ಒಂದು ವಯಸ್ಸಿನ ಹುಡುಗ-ಹುಡುಗಿಯರ ಯೋಚನೆಗಳು , ಸ್ನೇಹಿತರು  ಹಾಗೂ ಅವರ ಸುತ್ತಮುತ್ತಲಿನ ವಾತಾವರಣವು ಕೂಡ ಇದಕ್ಕೆಲ್ಲ ಕಾರಣವಾಗುತ್ತವೆ. ಸಹಜವಾಗಿಯೇ ಬರುವ ಈ ಭಾವನೆಗಳಿಗೆ  ಹುಡುಗರಂತು ಬಹಳ ಬೇಗ ಸ್ಪಂದಿಸುತ್ತಾರೆ !. ಇಲ್ಲಿ ಹುಡುಗಿಯರ ಬಗ್ಗೆ ಸಂಪೂರ್ಣವಾಗಿ ನನಗೆ ಗೊತ್ತಿರದ ಕಾರಣ , ಹುಡುಗರ ದೃಷ್ಟಿಕೋನವನದಿಂದ ಈ ಲೇಖನವನ್ನು ಬರೆಯುತ್ತಿದ್ದೇನೆ. ಎಲ್ಲರಲ್ಲೂ ಇದೆ ರೀತಿ ಆಗುತ್ತದೆ ಅಂತ ಅಲ್ಲ, ಬಹುಪಾಲು ಹುಡುಗ-ಹುಡುಗಿಯರ ಜೀವನದಲ್ಲಿ ಈ ರೀತಿ ಆಗಬಹುದು ಅಥವ ನೆಡೆದಿರಲೂಬಹುದು.

           ಪ್ರೀತಿ, ಆಕರ್ಷಣೆಗಳಿಗೆ ಬೇಗ ತುತ್ತಾಗುವ ಹುಡುಗ ನಾನು ತುಂಬಾ Bold, Strong, Not emotional and Very intelligent ಅಂತ ಅಂದುಕೊಂಡು ಒಬ್ಬ ಹುಡುಗಿಯನ್ನು ನೋಡಿ , ಅವಳ ಜೊತೆ ಸ್ನೇಹ ಸಂಪಾದಿಸಿಕೊಳ್ಳುವ ಹುಡುಗ , ತನ್ನ ಎಲ್ಲ ಭಾವನೆಗಳನ್ನು ಅವಳೊಂದಿಗೆ  ಅಂಚಿಕೊಳ್ಳಲು ಶುರು ಮಾಡುತ್ತಾನೆ . ಪಾಪ ಅವಳು ಕೂಡ ಅವನೊಂದಿಗೆ ಸಕತ್ ಸಹಜವಾಗಿ, ಸರಿಯಾಗಿಯೇ ಸ್ಪಂದಿಸುತ್ತಾಳೆ.  ಆದರೆ ಇದು ಬಹಳ ದಿನ ಹೀಗೆ ಇರಲು ಹೇಗೆ ಸಾದ್ಯ ? . ಒಂದು ದಿನ ಆ ಹುಡುಗ ಅವಳಿಗೆ ತನ್ನ ಪ್ರೀತಿಯ ಬಗ್ಗೆ ಹೇಳುತ್ತಾನೆ, ಹುಡುಗನ ಹಣೆಬರಹ ಚೆನ್ನಾಗಿದ್ದರೆ ಬರುವ ಉತ್ತರ , " I too love u  " ಇಲ್ಲ ಅಂದರೆ " U r my good friend yaar " , ಹುಡುಗಿಯರು  ಹುಡುಗರ ಪ್ರೀತಿಯನ್ನು ತಿರಸ್ಕರಿಸಲು ಹಲವು ಕಾರಣಗಳನ್ನು ಕೊಡುತ್ತಾರೆ,  ಹುಡುಗನನ್ನು  convince  ಕೂಡ ಮಾಡುವುದರಲ್ಲಿ ಅವರು ನಿಪುಣರು ಹಾಗೂ ಅದು ದೇವರು ಅವರಿಗೆ ಕೊಟ್ಟ ಬುದ್ದಿವಂತಿಕೆ ಅಥವ ವರ ಎಂಬುದು ನನ್ನ ಅಬಿಪ್ರಾಯ. 



            ಎಲ್ಲೋ ನೋಡುವ ಹುಡುಗಿಯನ್ನು ಮಾತಾಡಿಸಲೇ ಬೇಕು ಅಂದುಕೊಳ್ಳುತ್ತಿದ್ದಂತೆ , ಅಂತಹ ಅವಕಾಶಗಳು ಬಂದೆ ಬಿಡುತ್ತವೆ  , " ಏನೋ ಇದೆ ನಮ್ಮಿಬರ ನಡುವೆ" ಅದಕ್ಕೆ ಈ ಅವಕಾಶ ಸಿಕ್ಕಿದೆ ಅಂದುಕೊಳ್ಳುತ್ತಾನೆ ಆ ಹುಡುಗ.ಸಕತ್ ದೈರ್ಯ ಮಾಡಿ  ಅವಳನ್ನು ಮೊದಲ ಸಾರಿ ಮಾತನಾಡಿಸುತ್ತಾನೆ, ಪಾಪ ಆ ಹುಡುಗಿ ಕೂಡ ಸರಿಯಾಗಿಯೇ ನಗುತ್ತಾ ಸ್ಪಂದಿಸುತ್ತಾಳೆ, ಇಷ್ಟು ಸಾಕು ಹುಡುಗನಿಗೆ ತಲೆಯಲ್ಲಿ "
ಹುಳ " ಬಿಟ್ಟುಕೊಳ್ಳಲು. ಹೇಗೋ ಕಷ್ಟ ಪಟ್ಟು ಅವಳ Mail Id ಮತ್ತು Mobile number ಗಿಟ್ಟಿಸಿಕೊಂಡು, Forward mails  ಮತ್ತು messages ಕಳಿಸಲು ಶುರು ಮಾಡುತ್ತಾನೆ. ಅದಕ್ಕೆ ಹುಡುಗಿ ಸ್ಪಂದಿಸಿದರಂತು ಮುಗೀತು ಕತೆ,  ನಿಜವಾಗಿಯೂ ಆ ಹುಡುಗಿಗೂ ನನ್ನ ಮೇಲೆ ಪ್ರೀತಿ ಇರಬಹುದೆಂದು ಊಹಿಸಿ Chat ಮಾಡಲು ಶುರು ಮಾಡಿಯೇ ಬಿಡುತ್ತಾನೆ. ತನ್ನ ಪ್ರತಿಯೊಂದು ಭಾವನೆಗಳನ್ನು ಅವಳಲ್ಲಿ ಹೇಳಿಕೊಳ್ಳುತ್ತಾನೆ. ಸಂಪೂರ್ಣವಾಗಿ ತಾನು ಯಾವುದೋ ಒಂದು ಭಾವನ ಲೋಕಕ್ಕೆ ಹೋಗಿ ಬಿಡುತ್ತಾನೆ. ಅವಳೇ ನನ್ನ ಜೀವದ ಗೆಳತಿ ಎಂದು ಯೋಚಿಸುವ ಅವನು, ಸದಾ ಗೆಳತಿಯ messages  ಬರುವಿಕೆಗಾಗಿ ಕಾಯುತ್ತಾನೆ. ಮೊಬೈಲ್ ನ್ನು ಕ್ಷಣಾಕೊಮ್ಮೆ ತೆಗೆದು ತೆಗೆದು ತೆಗೆದು ನೋಡುತ್ತಾನೆ, ತನ್ನೆದುರು ಬರುವ ಎಲ್ಲರಲ್ಲೂ ತನ್ನ ಗೆಳತಿಯ ಮುಖವನ್ನೇ ಕಾಣುತ್ತಾನೆ, ಸ್ನೇಹಿತರೊಂದಿಗೆ ಮಾತು ಕಡಿಮೆ ಮಾಡುತ್ತಾನೆ, ಸದಾ ಚಟುವಟಿಕೆಯುಕ್ತನಾಗಿರುತ್ತಿದ್ದ ಆ ಹುಡುಗ ಅವನದೇ ಆದ  ಲೋಕದಲ್ಲಿ  ಇರಲು ಬಯಸುತ್ತಾನೆ. ನಿಜವಾಗಿಯೂ ಇದೆಲ್ಲ ಏನು ಆ ಹುಡುಗಿಗೆ ತಿಳಿದಿರುವುದಿಲ್ಲ. ಅವಳು ಈತ ಕಳಿಸುವ messages ಗೆ ಹಾಗೂ ಮಾಡುವ call  ಗಳಿಗೆ ನಾರ್ಮಲ್ ಆಗಿಯೇ ಸ್ಪಂದಿಸುತ್ತಾಳೆ. ಆದರೆ ಪ್ರತಿ ಬಾರಿ ಅವಳು ಕಳಿಸುವ ಸಾಮಾನ್ಯ k, hmm, gn, sd, tc, tel, bye and  :)  message ಗಳಲ್ಲಿ ಎಲ್ಲಿಲ್ಲದ ಬಾರಿ ಅರ್ಥಗಳನ್ನು ಹುಡುಕಿಕೊಂಡು  ಏನೇನೋ ಅಂದುಕೊಳ್ಳುತ್ತಲೇ ಬರುತ್ತಾನೆ ತಲೆ ಕೆಟ್ಟ ಹುಡುಗ. ಗಂಟೆ ಗಟ್ಟಲೆ ಅವಳಿಗಾಗಿ ಕಾಯುತ್ತಾನೆ, ಅವಳ GN and SD message  ಬಂದಮೇಲೆ ಮಲಗುತ್ತಾನೆ, ದಿನಕೊಮ್ಮೆಯಾದರೂ ಅವಳನ್ನು ಮಾತಾಡಿಸಬೇಕು ಎಂಬುವ ಹಂಬಲ. ಆಗಾಗ್ಗೆ ನೆಡೆಯುವ , ಅವನ ಭಾವನೆಗಳನ್ನು ಗಟ್ಟಿ ಮಾಡುವಂತಹ ಕಾಕತಾಳೀಯ ಘಟನೆಗಳು ಅವನ ತಲೆಯಲ್ಲಿದ್ದ ಒಂದು ಸಣ್ಣ ಪ್ರೀತಿಯೆಂಬ " ಹುಳ " ಅವನಿಗೆ ಗೊತ್ತಿಲ್ಲದಂತೆ ದೊಡ್ಡದಾಗಿ ಬೆಳೆದು ಬಿಟ್ಟಿರುತ್ತೆ. ಅವಳನ್ನು ಸಂಪೂರ್ಣವಾಗಿ ನಂಬುತ್ತಾನೆ ಹಾಗೂ ಜೀವಕಿಂತಲೂ  ಹೆಚ್ಚು ಪ್ರೀತಿಸಲು ಶುರು ಮಾಡಿಯೇ ಬಿಡುತ್ತಾನೆ. ಅವಳಿಲ್ಲದಿದ್ದರೆ ನನ್ನ ಜೀವನವೇ ಇಲ್ಲ, ಜೀವನ ಶೂನ್ಯ ಅಂತೆಲ್ಲಾ ಯೋಚಿಸತೊಡಗುತ್ತಾನೆ. ಹುಡುಗ ತುಂಬಾ Bold and Straight ನಡೆಯವನಾಗಿದ್ದರೆ ಈ ವಿಷಯವನ್ನು ತನ್ನ ಗೆಳತಿಯ ಬಳಿ ಹೇಳಿಯೇ ಬಿಡುತ್ತಾನೆ. ಕೆಲವರು ಆ ವಿಷಯವನ್ನು ಹೇಳದೇ ಸುಮ್ಮನಾಗಿಬಿಡುತ್ತಾರೆ, ಹೇಳಿದರೆ ಎಲ್ಲಿ ಗೆಳತಿ ನನ್ನನ್ನು ತಪ್ಪು ತಿಳಿದು, ಮಾತು ನಿಲ್ಲಿಸಿ ಬಿಟ್ಟರೆ ಎಂಬ ಭಯದಿಂದ ಹೇಳದೇ ಪ್ರೀತಿಯನ್ನು ತಮ್ಮ ಹೃದಯದಲ್ಲೇ ಹಡಗಿಸಿಟ್ಟು ಬಿಡುತ್ತಾರೆ.  ಹುಡುಗ ನೇರವಾಗಿ ಹೇಳಿದರೆ , ಹುಡುಗನ ನಸೀಬು ಚೆನ್ನಾಗಿದ್ದರೆ ಹುಡುಗಿ ಪ್ರೀತಿಯನ್ನು Accept  ಮಾಡಬಹುದು ಇಲ್ಲದಿದ್ದರೆ ಹುಡುಗ ಎಷ್ಟೇ ನೇರವಾಗಿ,  ಅವನು ಅವಳನ್ನು ಇಷ್ಟಪಡುತ್ತಿರುವ ವಿಷಯವನ್ನು ಹೇಳಿದರೆ ಅಷ್ಟೇ ನೇರವಾಗಿ ಆ ಬಹುದಿನದ ಹುಡುಗನ ಪ್ರೀತಿಯನ್ನು ಅವಳು ತಿರಸ್ಕರಿಸುತ್ತಾಳೆ.ತಿರಸ್ಕರಿಸಲು ಅವಳಿಗೆ ಬೇಕಾದಷ್ಟು ಕಾರಣಗಳು ಇರುತ್ತವೆ. ತಿರಸ್ಕರಿಸಿದರೆ ಅವಳು ಹೇಳುವ simple ಉತ್ತರಗಳೂ " U r my good friend yaar ",  " ನಿನ್ನ ಬಗ್ಗೆ ನಾ ಯಾವತ್ತೂ ಆ ರೀತಿ ಯೋಚಿಸಿಲ್ಲ ", " ನನಗೆ ತುಂಬಾ responsibilities  ಇವೆ ", " ನಾನು ನಿನಗೆ ಸರಿಯಾದ ಜೋಡಿಯಲ್ಲ ", " ನಿನ್ನ ಬಗ್ಗೆ ನನಗೆ ಆ ರೀತಿಯ ಭಾವನೆಗಳು ಎಂದಿಗೂ ಬರುವುದಿಲ್ಲ ", "U wil get a good girl yaar". ಇವುಗಳನ್ನು ಕೇಳಿದ ಹುಡುಗನಿಗೆ ಆಕಾಶವೇ  ಕಳಚಿ ಬದ್ದಂತೆ ಹಾಗಿ ಏನು ಮಾತಾಡಬೇಕೋ  ತಿಳಿಯುವುದಿಲ್ಲ. ಅವಳಿಗೆ ಪದೇ ಪದೇ ಯೋಚಿಸು, ಅರ್ಥ ಮಾಡಿಕೊ , ನಿನ್ನ ಯಾವುದೇ ಸಮಸ್ಸೆಗಳ್ಳಿದ್ದರು ನಾನು ಹೆಗಲು ಕೊಡುತ್ತೇನೆ , ನಿನ್ನ ಏನೇ Conditions ಇದ್ರು ನಾ ಅವುಗಳನ್ನು ಒಪ್ಪುತ್ತೇನೆ ಅಂತ ಅವಳಿಗೆ ಅಭಯ ಹಸ್ತ ನೀಡುತ್ತಾನೆ. ಹುಡುಗಿ ಒಮ್ಮೆ ಪ್ರೀತಿಯನ್ನು ತಿರಸ್ಕರಿಸಿದರೆ ಮುಗೀತು ಅವಳು ಮತ್ತೆ ತೀರ್ಮಾನವನ್ನು ಬದಲಾಯಿಸುವುದಿಲ್ಲ ಎಂಬ ಕಟು ಸತ್ಯ ಅವನಿಗೆ ತಿಳಿಯುವುದೇ ಇಲ್ಲ. ಅವಳು ನನ್ನನ್ನು ಪರೀಕ್ಷೆ ಮಾಡುತ್ತಾ ಇದ್ದಾಳೆ ಎಂದು ಪಾಪ ಹುಡುಗ ಪ್ರೀತಿಯ ನಿವೇದನೆಯನ್ನು ಪದೇ ಪದೇ  ಮಾಡುತ್ತಲೇ ಇರುತ್ತಾನೆ. ಇದನ್ನೆಲ್ಲ ತಾಳಲಾರದೆ ಹುಡುಗಿ ಕೊನೆಯದಾಗಿ ಹುಡುಗನಿಗೆ ಅರ್ಥ ಮಾಡಿಸಲು ಹೂಡುವ ಅಸ್ತ್ರ “ ನಾ ಈಗಾಗಲೇ ಒಬ್ಬರನ್ನು ಪ್ರೀತಿಸುತ್ತಾ ಇದ್ದೇನೆ “ . ಆಗ ಹುಡುಗ ಸ್ವಲ್ಪ ಅರ್ಥ ಮಾಡಿಕೊಂಡು ಬುದ್ದಿವಂತನಾದರೆ  ಆ ವಿಷಯ ಬಿಟ್ಟು ತನ್ನ ಕೆಲಸಗಳಲ್ಲಿ ಮಗ್ನನಾಗುತ್ತಾನೆ. ಇಲ್ಲವಾದರೆ ತನ್ನ ಜೀವನದ ಗತಿಯನ್ನೇ ಬದಲಾಯಿಸುವ ಈ ಬಲೆಯಲ್ಲಿ ಬಿದ್ದು ತುಂಬಾ ಕಷ್ಟ ಪಟ್ಟು ತನ್ನ ಅಮೂಲ್ಯ ಸಮಯವನ್ನು ಹಾಳು ಮಾಡಿಕೊಳ್ಳುತ್ತಾನೆ. ಕಾಲ ಕಳೆದಂತೆ ಎಂತವರನ್ನು ಮರೆಯುವುದು ಮನುಷ್ಯನ ಸಹಜ ಗುಣ, ಅದರಂತೆ ಅವನು ಅವಳನ್ನು ಮರೆಯುತ್ತಾನೆ ಬಿಡಿ. ಆದರೆ ಎಲ್ಲೋ ಒಂದು ಕಡೆ ಅವಳು ಅವನ ಪ್ರೀತಿಯನ್ನು ಅರ್ಥ ಮಾಡಿಕೊಳ್ಳಲಿಲ್ಲವೆಂಬೆ ಬೇಜಾರು ಕೊನೆಯವರೆಗೂ ಸ್ವಲ್ಪ ಇದ್ದೇ ಇರುತ್ತೆ.  ನನ್ನ ಬಗ್ಗೆ ಯಾವ ಭಾವನೆಗಳು ಇರದ ಒಬ್ಬ ಹುಡುಗಿಗೆ ನಾ ಎಷ್ಟೊಂದು ದಿನ ತಲೆಕೆಡೆಸಿಕೊಂಡೆನಲ್ಲ ಎಂಬ ಕೋಪ ಕೂಡ ತನ್ನಮೇಲೆ ಇರುತ್ತೆ.

               ಒಟ್ಟಾರೆ ಹೇಳಬೇಕೆಂದರೆ ಇದೆಲ್ಲ ಒಂದು ರೀತಿಯಲ್ಲಿ, ಭಾವನೆಗಳಿಗೆ ಹುಡುಗ ಅತವ ಹುಡುಗಿ  ಸೋತಾಗ ಆಗುವ, ವಯೊಸಹಜವಾದ ಘಟನೆಗಳು ಅಷ್ಟೇ. ಇದನ್ನೆಲ್ಲ ಅರ್ಥ ಮಾಡಿಕೊಂಡು ಅದೇ ಹುಡುಗಿಯೊಂದಿಗೆ  ಉತ್ತಮ ಸ್ನೇಹಿತನಾಗಿ ಇರುವವರು ಬಹಳಷ್ಟು ಮಂದಿ ಈಗಲೂ ಇದ್ದಾರೆ. ಕೆಲವರು ಒಳ್ಳೇ ಸ್ನೇಹಿತರಿಂದ ಸಲಹೆ ಪಡೆದು ಇವುಗಳಿಂದ ಹೊರ ಬರುತ್ತಾರೆ, ಕೆಲವರು ಯಾರ  ಬಳಿಯೂ ಇವುಗಳನ್ನು ಹೇಳಿಕೊಳ್ಳದೇ ಕೊರಗಿ ಕಷ್ಟ ಪಡುತ್ತಾರೆ ಇನ್ನೂ ಕೆಲವರು ನೀ ಇರದಿದ್ದರೆ " ಇನ್ನೊಬ್ಬಳು " ಅಂತ ಮತ್ತೊಂದು ಪ್ರಯತ್ನದಲ್ಲಿ ತೊಡಗುತ್ತಾರೆ.           

Conclusion 

" Arrange marriage is while ' u r walking, unfortunately a snake bites u'. But Love marriage is dancing in front of the Snake and saying Kadi ba...kadi ba...kadi ba.... :) :) :) "   
ನಿಮಗಾಗಿ.......
ನಿರಂಜನ್


ಮಂಗಳವಾರ, ಮಾರ್ಚ್ 8, 2011

"ವಿಶ್ವ ಕನ್ನಡ ಸಮ್ಮೇಳನ"

                   "ವಿಶ್ವ ಕನ್ನಡ ಸಮ್ಮೇಳನ" ವಿವಾದಗಳು ಬೇಕೆ ???

ಕನ್ನಡ ರಾಜ್ಯೋತ್ಸವ , ಕನ್ನಡ ಸಾಹಿತ್ಯ ಸಮ್ಮೇಳನ ಹಾಗೂ ವಿಶ್ವ ಕನ್ನಡ ಸಮ್ಮೇಳನಗಳು ಕನ್ನಡ ಭಾಷೆ ಹಾಗೂ ರಾಜ್ಯದ ಮೇಲಿರುವ ಗೌರವವನ್ನು ತೋರಿಸುವ, ಹಿರಿಮೆಯನ್ನು ಎತ್ತಿ ಹಿಡಿವ , ನಾಡು-ನುಡಿಯ ಬಗ್ಗೆ ಜಾಗೃತಿ ಮೂಡಿಸುವ ಕನ್ನಡ ಸಂಸ್ಕೃತಿಯನ್ನು ಪ್ರಪಂಚಕ್ಕೆ ತೋರಿಸುವ ಹಬ್ಬಗಳಾಗ ಬೇಕೇ ಹೊರತು,ನಾವು ತಲೆ ತಗ್ಗಿಸುವಂತ ವಿವಾದಗಳನ್ನು ಸೃಷ್ಟಿಸಿ , ಇವುಗಳ ಜೊತೆ ರಾಜಕೀಯ ಮಾಡುವುದು ಅದೆಷ್ಟು ಸರಿ ?  ಇದಕ್ಕೆ ತಾಜಾ ಉದಾಹರಣೆಯೆಂದರೆ ಇನ್ನೂ ಕೆಲವೇ  ದಿನಗಳಲ್ಲಿ ಆರಂಭವಾಗಲಿರುವ  ಬೆಳಗಾವಿ " ವಿಶ್ವ ಕನ್ನಡ ಸಮ್ಮೇಳನ ". ಸಮ್ಮೇಳನದ ಉದ್ಘಾಟನೆ ಯಾರು ಮಾಡಬೇಕೆಂಬುದರ  ಬಗ್ಗೆ ಕೆಲವರು ಸೃಷ್ಟಿ ಮಾಡಿರುವ ವಿವಾದ ನಿಜಕ್ಕೂ ನಾವೆಲ್ಲರೂ ತಲೆ ತಗ್ಗಿಸಬೇಕಾದ ವಿಚಾರವೇ ಸರಿ.


          












       
             ಕೆಲವು ಜನರು ಅನಾವಶ್ಯಕವಾಗಿ ಇಂತಹ ವಿವಾದಗಳಿಗೆ ನಾಂದಿ ಹಾಡುತ್ತಾ ಮತ್ತು ಜನರನ್ನು ಪ್ರಚೋದಿಸುತ್ತಾ ತಮ್ಮ ತಮ್ಮ ಗೌರವಗಳನ್ನು ತಾವೇ ಕಡಿಮೆ ಮಾಡಿಕೊಳುತ್ತ, ಹಾದಿ ಬೀದಿಗಳಲ್ಲಿ, ಟೀವೀ ಮತ್ತು ಪತ್ರಿಕಾ ಮಾದ್ಯಮಗಳಲ್ಲಿ ತಮ್ಮ ಸಣ್ಣ ತನವನ್ನು ತಾವೇ ತೋರಪಡಿಸುತ್ತಿರುವುದು ನಿಜಕ್ಕೂ ಬೇಸರದ ಸಂಗತಿ. ವಿಶ್ವ ಕನ್ನಡ ಸಮ್ಮೇಳನ ಕೇವಲ ಕನ್ನಡ ಸಾಹಿತಿಗಳಿಗೆ,ಕವಿಗಳಿಗೆ ,ಚಲನ ಚಿತ್ರ ನಟರಿಗೆ ಹಾಗೂ ಕನ್ನಡ ಪರ ಹೋರಾಟಗಾರರಿಗೆ ಮಾತ್ರ ಅಲ್ಲ. ಇದು ಕರ್ನಾಟಕದ ಪ್ರತಿಯೊಬ್ಬ  ನಾಗರೀಕನಿಗೂ, ದೇಶ ವಿದೇಶದಲ್ಲಿರುವ ಪ್ರತಿಯೊಬ್ಬ ಕನ್ನಡಿಗನಿಗೂ  ಕೂಡ ಇದು ಒಂದು ಹಬ್ಬ. ಕನ್ನಡ ಕೇವಲ ಸಾಹಿತಿಗಳ,ಕವಿಗಳ ಹಾಗೂ ಹೋರಾಟಗಾರರ ಸ್ವಂತ ಆಸ್ತಿಯೂ ಅಲ್ಲ ಮತ್ತು ಅವರಿಗೆ ಮಾತ್ರ ಇದು ಸೀಮಿತವಲ್ಲ. ಇದು ಕರ್ನಾಟಕದ ಹೊರಗೆ ಮತ್ತು ಇಲ್ಲಿ  ಇರುವ ಪ್ರತಿಯೊಬ್ಬ ಸಾಮಾನ್ಯ ಕನ್ನಡಿಗನ ಆಸ್ತಿ. ಕನ್ನಡಕ್ಕೆ ದುಡಿಯುವುದೆಂದರೆ ಕನ್ನಡದಲ್ಲಿ ನಾಲ್ಕಾರು ಪುಸ್ತಕಗಳನ್ನು ಬರೆಯುವುದಲ್ಲ, ಕವನಗಳನ್ನು ಗೀಚುವುದಲ್ಲ ಹಾಗೂ ಗಂಟೆಗಟ್ಟಲೇ ಕನ್ನಡದ ಬಗ್ಗೆ ಭಾಷಣ ಮಾಡುವುದಲ್ಲ. ಕನ್ನಡ ಭಾಷೆಯನ್ನು ಮಾತನಾಡುತ್ತಾ, ಕನ್ನಡವನ್ನು ಗೌರವಿಸುತ್ತಾ  , ಕರ್ನಾಟಕದಲ್ಲಿ ದುಡಿಯುವ ಮತ್ತು ಜೀವಿಸುವ ಪ್ರತಿಯೊಬ್ಬರೂ ಕನ್ನಡಿಗರೇ. ಅದೇ ರೀತಿ ನಮ್ಮ ಹೆಮ್ಮೆಯ ಇನ್ಫೋಸಿಸ್ ಸಂಸ್ಥೆಯ ನಾರಾಯಣಮೂರ್ತಿ, ಕವಿ ಅಥವಾ ಲೇಖಕರಾಗದೆ ಇರಬಹುದು, ಆದರೆ ಅವರು ಒಬ್ಬ ಕನ್ನಡಿಗ ಹಾಗೂ ಅದೇ ರೀತಿ ಕನ್ನಡ ಹಬ್ಬದಲ್ಲಿ ಪಾಲ್ಗೊಳ್ಳುವ ಅವರ ಹಕ್ಕನ್ನು ಯಾರು ಪ್ರಶ್ನಿಸುವಂತಿಲ್ಲ. ನೇರವಾಗಿ ಅವರು ಕನ್ನಡ ಭಾಷೆಗೆ ಯಾವುದೇ ಕೊಡುಗೆ ನೀಡದಿರಬಹುದು, ಕನ್ನಡ ಚಳುವಳಿಗಳಲ್ಲಿ ಭಾಗವಹಿಸದೇ ಇರಬಹುದು ಆದರೆ ಕರ್ನಾಟಕಕ್ಕೆ ಅವರದೇ ಆದ ಶೈಲಿಯಲ್ಲಿ ಅವರು ನೀಡಿರುವ ಕೊಡುಗೆಯನ್ನು ನಾವು ಮೆಚ್ಚಲೆ ಬೇಕು.ಅವರ ಕಾರ್ಯ ಕ್ಷೇತ್ರದಲ್ಲಿ  ಅವರ ಬುದ್ದಿ ಮಟ್ಟಕ್ಕೆ ಸರಿಯಾಗಿ ಅವರು ಕಾರ್ಯ ನಿರ್ವಹಿಸಿ , ಯಶಸ್ವಿ ಉದ್ಯಮಿಯಾಗಿ, ಸಾವಿರಾರು ಜನರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸಿ , ಪ್ರಪಂಚವೇ ನಮ್ಮ ದೇಶದ ಕಡೆಗೆ ನೋಡುವಂತೆ ಮಾಡಿದ, ದೇಶದ ಹೆಮ್ಮೆಯಾಗಿರುವ ಅವರು ಕನ್ನಡಿಗರೆಂದರೆ ನಮಗೂ ಹೆಮ್ಮೆಯ ಸಂಗತಿ ಅಲ್ಲವೇ. ಕರ್ನಾಟಕ ಸರಕಾರ ಮತ್ತು ಹಿರಿಯ ಅಧಿಕಾರಿ ವಿಠ್ಠಲಮೂರ್ತಿಯವರ  ಒತ್ತಾಯದ ಮೇರೆಗೆ ಸಮ್ಮೇಳನವನ್ನು ಉದ್ಘಾಟಿಸಲು ಒಪ್ಪಿಕೊಂಡ ನಾರಾಯಣಮೂರ್ತಿಯವರ  ಬಗ್ಗೆ ಹಗುರವಾಗಿ ಮಾತನಾಡುವುದು ಎಷ್ಟು ಸರಿ ???.

                 ನಾರಾಯಣಮೂರ್ತಿಯವರ ಸಾಧನೆಗಳನ್ನು ಪ್ರಶ್ನಿಸುತ್ತಿರುವ ಬುದ್ದಿಜೀವಿಗಳಾದರೂ ನಮ್ಮ ನಾಡಿಗೆ ಕೊಟ್ಟಿರುವುದೇನು ?  ನಾರಾಯಣಮೂರ್ತಿಯವರನ್ನು ಬರಿ ಒಬ್ಬ ಉದ್ಯಮಿ ಮತ್ತು ಹಣಕ್ಕಾಗಿ ಕೆಲಸ ಮಾಡುತ್ತಿದ್ದಾರೆ ಎನ್ನುವ ಅವರು ತಾವು ಬರೆದ ಪುಸ್ತಕಗಳನ್ನೇನು ಉಚಿತವಾಗಿ ಜನರಿಗೆ ಕೊಡುತ್ತಿದ್ದಾರ ? ನಾರಾಯಣಮೂರ್ತಿಯವರನ್ನು ಮತ್ತೊಬ್ಬ ಉದ್ಯಮಿ ಮಲ್ಲ್ಯ ಜೊತೆ ಹೋಲಿಸುವುದು ಅದೆಷ್ಟು ಸರಿ ?. ಕನ್ನಡ ಹಬ್ಬಗಳು ಮೇಲೆ ಹೇಳಿದಂತೆ ಬರಿ ಸಾಹಿತಿ ಮತ್ತು ಕವಿಗಳಿಗೆ ಅಲ್ಲ ಮತ್ತು ಅವರ ಖಾಸಗಿ ಕಾರ್ಯಕ್ರಮಗಳು ಅಲ್ಲ. ಆದ್ದರಿಂದ ನಾರಾಯಣಮೂರ್ತಿಯವರು ವಿಶ್ವ ಕನ್ನಡ ಸಮ್ಮೇಳನವನ್ನು ಉದ್ಘಾಟಿಸುವುದರಲ್ಲಿ ಯಾವ ತಪ್ಪು ಕಾಣಿಸುತ್ತಿಲ್ಲ ಮತ್ತು ಉದ್ಘಾಟಿಸುವ ಎಲ್ಲ ಹಕ್ಕು ಅವರಿಗಿದೆ. ಸರಕಾರ ಮತ್ತು ಸಮ್ಮೇಳನ ಸಮಿತಿಯು ನಾರಾಯಣಮೂರ್ತಿಯವರ ಪರವಾಗಿ ನಿಂತಿರುವುದು ಸರಿ ಎಂದು ನನ್ನ ಭಾವನೆ.

            ರಾಜ್ಯದ ನಾಯಕರು,ಹಿರಿಯರು ಮತ್ತು ನಾವುಗಳು ನಿಜವಾಗಿಯೂ ಭಾಷೆಯನ್ನು, ಕನ್ನಡಿಗರನ್ನು ಹಾಗೂ ಕರ್ನಾಟಕದ ಸಾದಕರನ್ನುಗೌರವಿಸದೇ ಇದ್ದರೆ ಮತ್ತ್ಯಾರೂ ನಮ್ಮನು ಗೌರವಿಸುತ್ತಾರೆ. ವಿವಾದಗಳಿಗೆ ಎಡೆಮಾಡಿಕೊಡದೇ , ಒಬ್ಬರನ್ನೊಬ್ಬರು ಗೌರವಿಸುತ್ತಾ, ಪ್ರೀತಿಸುತ್ತ ಹಬ್ಬಗಳನ್ನು ಅಥವಾ ಸಮ್ಮೇಳನಗಳನ್ನು ಆಚರಿಸಿದರೆ ಮಾತ್ರ ಸಾರ್ಥಕತೆ ದೊರೆಯುವುದೇ ಹೊರತು ವಿವಾದಗಳಿಂದ ಅಲ್ಲ.  

ನಿಮಗಾಗಿ.......
ನಿರಂಜನ್

ಮಂಗಳವಾರ, ಫೆಬ್ರವರಿ 22, 2011

ಗಿರಿಯ ಕೀರ್ತಿ - Sooper Experience

                                       ಗಿರಿಯ ಕೀರ್ತಿ .......

ಚಿಕ್ಕಮಗಳೂರಿನ ಮುಳ್ಳಯ್ಯನಗಿರಿ ನನಗೇನೂ ಹೊಸದಾದ ಪ್ರವಾಸಿ ತಾಣವಾಗಿರಲಿಲ್ಲ, ಆದರೂ ಸ್ನೇಹಿತರೊಂದಿಗೆ ಹೋದಾಗ ಅದರ ಅನುಭವವೇ ಬೇರೆ , ಅದೇ ರೀತಿ ಈ ಬಾರಿ ಅಲ್ಲಿಗೆ  ಹೋದಾಗ ಆದ ಅನುಭವ ಮಾತ್ರ ವಿಬಿನ್ನ . ಅದಕ್ಕೆ ಕಾರಣ ನಾನು ಅಲ್ಲಿ ಬೇಟಿ ಮಾಡಿದ ಒಬ್ಬ ಮನುಷ್ಯ. ಪ್ರತಿಬೆಗೆ ಹಾಗೂ ಬುದ್ದಿವಂತಿಕೆಗೆ ಎಲ್ಲೆಗಳಿಲ್ಲ, ಪೇಟೆ, ಗ್ರಾಮಗಳು ಎಂಬ ಬೇದವಿಲ್ಲ,ಪಧವಿಗಳು ಬೇಕಿಲ್ಲ ಕಲಿಯುವ ಮನಸ್ಸಿದ್ದರೆ ನಾವು ಎಲ್ಲಿದ್ದರೂ,ಹೇಗಿದ್ದರು ಸಾದಿಸಬಹುದು ಎಂಬುದಕ್ಕೆ ಆ ಮನುಷ್ಯನೇ ನಮಗೆ ಉದಾಹರಣೆಯಾಗುತ್ತಾನೆ.
            ನಾ ಕಂಡ ಸುಂದರ ಪ್ರವಾಸಿ ತಾಣಗಳಲ್ಲಿ ಅತ್ಯಂತ ಸುಂದರ ಹಾಗೂ ಎತ್ತರವಾದ ಪ್ರದೇಶಗಳಲ್ಲಿ ಮುಳ್ಳಯ್ಯನಗಿರಿಯು ಒಂದು. ಸಂಜೆಯ ಸಮಯ, ಬೀಸುವ ಗಾಳಿ, ಸೂರ್ಯಾಸ್ತಕ್ಕೆ  ಕೆಲವೇ ಕೆಲವು ಗಂಟೆಗಳು ಬಾಕಿ ಇವೆ, ಗಿರಿಯೆನ್ನೇರುತ ಸಾಗಿದ ನಾವು ಹಾದಿಯುದ್ದಕ್ಕೂ ಫೋಟೋ ಸೆಶೆನ್ನುಗಳು, ಹಾಸ್ಯ ಚಟಾಕಿಗಳು , ಅಲ್ಲಿಯ ವಾತಾವರಣದ ಬಗ್ಗೆ ಮಾತನಾಡುತ್ತಾ ಹೋಗುತ್ತಿದ್ದ ನಮಗೆ ಒಂದು ಕಡೆ ಚಿಕ್ಕಮಗಳೂರಿನ ಸುಂದರ ದೃಶ್ಯ ಮತ್ತೊಂದೆಡೆ ಕಣ್ಣಾಯಿಸಿದಷ್ಟು ದೂರ ಕಾಣುವ ಗಿರಿಸಾಲುಗಳು , ಅವುಗಳಲ್ಲಿ  ಮರೆಯಾಗಲು ಹವಣಿಸುತ್ತಿದ್ದ  ಸೂರ್ಯ , ಗೂಡು ಸೇರಲು ಹಾರುತಿದ್ದ ಹಕ್ಕಿಗಳು ಇದೆಲ್ಲ ಒಂದು ರೀತಿಯಲ್ಲಿ ನಮಗೆ ಮುದ ನೀಡುವಂತಿದ್ದವು. ಗಿರಿ ತುದಿಯನ್ನು ತಲುಪುತ್ತಿದ್ದಂತೆ ದೇವರ ದರ್ಶನಕ್ಕೆ ಮುಂದಾದೆವು, ಅಷ್ಟರಲ್ಲಿ ಎಲ್ಲೋ ಯಾರದೋ ಗಾನ ಸುಧೆ ನಮ್ಮ ಕಿವಿಗೆ ಬೀಳುತಿತ್ತು. ಏನಪ್ಪಾ ಇಲ್ಲಿಯೂ ಕೂಡ ಈ ರೀತಿಯ ಪ್ರತಿಬೆ,ಯಾರಿಗೂ ಅಂಜದೆ ಇಷ್ಟೊಂದು ಇಂಪಾಗಿ ಹಾಡುತ್ತಿದ್ದಾರೆ ಎಂದು ಅಂದುಕೊಳ್ಳುತ್ತ, ಕೈ ಕಾಲು ತೊಳೆಯಬೇಕೆನ್ನುತಿದ್ದಂತೆ ಹಾಡುವ ವ್ಯಕ್ತಿಯೆ ಸಂಗೀತವನ್ನು ನಿಲ್ಲಿಸಿ ಕತ್ತಲ ಕಿಟಕಿಯಿಂದ  “ ಸಾರ್ ದಯವಿಟ್ಟು ನೀರನ್ನು ಕೈ ಕಾಲು ತೊಳೆಯುವುದರಲ್ಲಿ ಪೋಲು ಮಾಡ ಬೇಡಿ, ಎತ್ತರವಾದ ಪ್ರದೇಶವಾದ್ದರಿಂದ ನೀರಿಗಾಗಿ ಸ್ವಲ್ಪ ಕಷ್ಟಪಡಬೇಕಾಗುತ್ತೆ “ ಎಂದಾಗ ನಮಗೂ ಅದು ನಿಜವೆನಿಸಿ, ಬರಿ ದಣಿವಾರಿಸಿಕೊಂಡು ದೇವರ ದರ್ಶನ ಪಡೆದು ದೇವರ ಮುಂದೆ ಒಂದು ಸಣ್ಣ ಪ್ರಾರ್ಥನಾ ಗೀತೆಯನ್ನು ಹಾಡಿದೆವು. ಅದು ಮುಗಿಸಿ ಪ್ರಕೃತಿಯ ಆನಂದವನ್ನು ಅನುಭವಿಸಲು ಹೊರ ಬರುವ ಹೊತ್ತಿಗೆ ನಮ್ಮ ಹಿಂದೆಯೇ ಬಂದು, ಪ್ರಾರ್ತನೆಗೆ ಮೆಚ್ಚುಗೆ ವ್ಯಕ್ತಪಡಿಸಿ, ನಮ್ಮನ್ನು ಪರಿಚಯ ಮಾಡಿಕೊಂಡ ವ್ಯಕ್ತಿಯೆ ನಾ ಹೇಳಿದ ಮೇಲಿನ ಆ ಅಪರೂಪದ ಮನುಷ್ಯ ಕೀರ್ತಿ. ತೆಳುವಾದ ಕಾಯ, ನಡು ಬೈತೆಲೆ, ಸಾಮಾನ್ಯ ಉಡುಪು, ಹೊಳೆವ ದೊಡ್ಡ ಕಣ್ಣು,ಕೃಷ್ಣ ವರ್ಣ, ಮೇಲು ನೋಟಕ್ಕೆ ಅಪ್ಪಟ ಗ್ರಾಮೀಣ ಪ್ರದೇಶದ ರಾಯಭಾರಿಯಂತಿದ್ದ ಆತ , ನಾವಾಡಿದ್ದ ಸಾಮಾನ್ಯ ಸಂಗೀತಕ್ಕೆ ಮಾರು ಹೋಗಿ, ನಮ್ಮೊಡನೆ ಆತ ಮಾತನಾಡಿದ್ದು, ಸ್ಥಳದ ಬಗ್ಗೆ ವಿವರಣೆ ನೀಡಿದ್ದು, ಆತನ ಮಾತುಗಾರಿಕೆ, ಭಾಷೆಯ ಮೇಲಿದ್ದ ಹಿಡಿತ,ಅದಕ್ಕೆ ತಕ್ಕಂತ ಭಾವ, ಆತನ ಬುದ್ದಿವಂತಿಕೆ ನಿಜವಾಗಿಯೂ ನನ್ನನ್ನು ಮೂಕನನ್ನಾಗಿಸಿದ್ದವು. ಕೆಲವು ಗಂಟೆಗಳ ಕಾಲ ಆತ ನಮ್ಮನು ಸೆರೆ ಹಿಡಿದಿದ್ದ ರೀತಿ ನಿಜಕ್ಕೂ ವಿಬಿನ್ನವಾಗಿತ್ತು.  ಬಿಡಿ ಬಿಡಿಯಾಗಿ ಸ್ಥಳ ಮಹಿಮೆಯನ್ನು ನಿರೂಪಿಸಿದ  ಶೈಲಿಯಂತು ಬಿನ್ನವಾಗಿತ್ತು. ಅಷ್ಟರಲ್ಲಿ ಸೂರ್ಯಾಸ್ತದ ಸಮಯವಾದ್ದರಿಂದ , ಆತ ನಮ್ಮನು ಒಂದು ಜಾಗಕ್ಕೆ ಕರೆದೊಯ್ದು ಅಲ್ಲಿಯ ಸೂರ್ಯಾಸ್ತವನ್ನು ವರ್ಣಿಸುವ ಜೊತೆಗೆ "ಸೂರ್ಯಪಾನ" ಎಂಬ ಒಂದು ಪ್ರಾಚೀನ ಸಾಧನೆಯ ಮೇಲೆ ಬೆಳಕು ಚೇಲಿದ್ದು  ಆತನ ಪಾಂಡಿತ್ಯಕ್ಕೆ ಹಿಡಿದ ಕನ್ನಡಿಯಾಗಿತ್ತು. ಇದೆಲ್ಲದರ ಜೊತೆಗೆ ಆತನಿಗಿದ್ದ ಪೇಟೆ ಜೀವನ, ಸಾಫ್ಟ್‌ವೇರ್ ಮತ್ತು ಇಲ್ಲಿ ಕೆಲಸ ಮಾಡುವ ನಮ್ಮ ಜೀವನ ಶೈಲಿಯ ಬಗ್ಗೆ ಆತನಿಗಿದ್ದ ಕೆಲವೊಂದು ಸಂಶಯಗಳು , ಈ ಬಗ್ಗೆ ಆತ ಮಾತನಾಡಿದ್ದು, ತನ್ನ ಮನದಲ್ಲಿದ್ದ ಕೆಲವು ಪ್ರಶ್ನೆಗಳನ್ನು ನಮಗೂ ಕೇಳಿ, ನಮ್ಮ ಬಗ್ಗೆ ನಾವೇ ಯೋಚನೆ ಮಾಡಿಕೊಳ್ಳುವಂತಹ ಮಾತುಗಳಾಡಿದ ಆತ ನಿಜವಾಗಿಯೂ ಒಬ್ಬ ಚಿಂತಕನಂತೆ ನನಗೆ ಕಾಣತೊಡಗಿದ.

              ನನಗೆ ಈ ಬಾರಿ ಮುಳ್ಳಯ್ಯನಗಿರಿಯಲ್ಲಿ ವಿಶಿಷ್ಟವಾಗಿ ಕಂಡಿದ್ದು ಆ ಪ್ರತಿಭಾವಂತ ಯುವಕ ಕೀರ್ತಿ ಮಾತ್ರ ಹಾಗೂ ಆತನ ಮನೋಭಾವ. ಹೊರಡುವ  ಹೊತ್ತಿಗೆ ಆತ ನಮ್ಮ ಜೊತೆ ಹಾಡಿದ ಒಂದು ಹಾಡು ನಿಜಕ್ಕೂ ಆತನಿಗೆ ಸಂಗೀತದಲ್ಲೂ ಇದ್ದ ಆಸಕ್ತಿ ತೋರಿಸುತ್ತಿತ್ತು ಮತ್ತು ಆತ ಒಬ್ಬ ರಂಗಕರ್ಮಿಯು ಕೂಡ ಎಂದು ನಮಗೆ ತಿಳಿಯಿತು. ಅಷ್ಟುಹೊತ್ತಿಗೆ ಆತನೊಂದಿಗೆ ಸಾಕಷ್ಟು ಸಮಯ ಕಳೆದು, ಕತ್ತಲಾಗುತ್ತಿದ್ದರಿಂದ ಬೇಡದ ಮನ್ನಸ್ಸಿನಿಂದ ಆತನಿಗೆ ವಿದಾಯ ಹೇಳಿ ಹೊರಟಾಗ ನನ್ನ ತಲೆಯಲಿ ಇದ್ದದ್ದು ಆ ಮನುಷ್ಯ ಮತ್ತು  ಆತನು ಕೇಳಿದ ಕೆಲವು ಪ್ರಶ್ನೆಗಳು, ಉತ್ತರಕ್ಕಾಗಿ ಕೆಲವು ದಿನಗಳು ಹುಡುಕುತ್ತಲೇ ಇದ್ದೇ. ಸಿಕ್ಕ ಸ್ವಲ್ಪ ಸಮಯದಲ್ಲೇ ಈತ ತನ್ನ ಪ್ರಭಾವವನ್ನು ನಮ್ಮ ಮೇಲೆ ಬೀರಿದ್ದಂತೂ ನಿಜ ಮತ್ತೆ ಕೆಲವು ಪ್ರಶ್ನೆಗಳನ್ನು ನಮ್ಮಲ್ಲಿಯೇ ಮೂಡುವಂತೆ ಮಾಡಿ ಒಂದು ರೀತಿಯಲ್ಲಿ ಆತ ನಮ್ಮ ಯೋಚನೆಯ ದಾರಿಯನ್ನು ಬದಲಾಯಿಸಿದ್ದು ನಿಜಕ್ಕೂ ಅಚ್ಚರಿತರುವಂತಿತ್ತು.
                                                                                     His Questions :

1. As a villager i m not contributing to global warming then why should i suffer from that ???

2. As engineers do u really need all those comfortable s which r contributing to Global warming ???

3. When u say technology , why common man still has no access to it ?? , By Showing no network coverage phone on spot.

4. We say our economy improved a lot by IT and GDP is very high,, but why that has not improved us yet ??? does that make any sens to me ???
5. As IT industry is very young and we r not facing any probs now,, but what would happen after some years ??

ನಿಮಗಾಗಿ.......
ನಿರಂಜನ್

ಶುಕ್ರವಾರ, ಜನವರಿ 21, 2011

ನಮ್ಮ ಆಫೀಸ್ ಲೈಫ್ !!!!!!!!

                                              ನಮ್ಮ ಆಫೀಸ್ ಲೈಫ್ !!!!!!!!
ಸ್ನೇಹಿತರೆ ,
ಕೆಲವು ವರ್ಷಗಳ ಕಾಲ ಜೊತೆಗಿದ್ದು , ಜೊತೆಗೆ ಕಲಿತು, ಸಾಕಷ್ಟು ತರಲೆ , ಮಸ್ತಿ, ಜಗಳ , ಚೆಲ್ಲಾಟಗಳನ್ನಾಡಿ , ಕಷ್ಟ ಸುಖಗಳನ್ನು ಹಂಚಿಕೊಂಡ ಸ್ನೇಹಿತರು ಒಬ್ಬೊಬ್ಬರಾಗಿ , ಅದು ಪಾರ್ಟಿಗಳನ್ನು ಕೊಟ್ಟು ದೂರವಾಗುತ್ತಿದ್ದರೆನಿಜವಾಗಿಯೂ ಬೇಜಾರಾಗುವುದಿಲ್ಲವೇ ???.   ಚಿಕ್ಕವರಾಗಿದ್ದಾಗ ಶಾಲೆಯಲ್ಲಿ ಹತ್ತನೆ ತರಗತಿ ಮುಗಿಸಿದಾಗ, ಕಾಲೇಜುಗಳಲ್ಲಿ PUC, ಇಂಜಿನಿಯರಿಂಗ್ ಮತ್ತೆ MTech ಕೊನೆಯ ವರ್ಷದಲ್ಲಿ ಆದ ಈ ಅನುಭವ, ಮತ್ತೆ ಈಗ ನನಗೆ ಆಗುತ್ತಿರುವುದು ನಮ್ಮ ಆಫೀಸ್ ಅಲ್ಲಿ. ಕೆಲ ವರ್ಷಗಳ ಹಿಂದೆ ಈ ಕಂಪನಿಗೆ ನಾವು ಸೀರಿದ್ದು ಸುಮಾರು 30 ಜನ, ಬಹುಪಾಲು ನಮ್ಮೆಲ್ಲರಿಗೂ ಇದೆ ಮೊದಲ ಕಂಪನಿಯಾಗಿತ್ತು. ಬೇರೆ ಬೇರೆ ಕಾಲೇಜುಗಳು, ಬ್ರಾಂಚುಗಳು,ಭಾಷೆಗಳು,ಊರುಗಳು ಮತ್ತು ವಯಸ್ಸುಗಳು ಆಗಿದ್ದರು ಸಹ ನಮ್ಮನ್ನು ಬೆಸೆದ  " ಸ್ನೇಹ " ಮಾತ್ರ ಒಂದೇ ಆಗಿತ್ತು. ನಾವು ಆಗತಾನೆ ಕಾಲೇಜು ಮುಗಿಸಿ ಬಂದಿದ್ದರಿಂದ ನಮ್ಮ ತುಂಟತನ ಸ್ವಲ್ಪ ಹಾಗೆಯೇ ಇತ್ತು. ನಾವು ಇಲ್ಲಿ ಟ್ರೈನಿಗಳಾಗಿ ಸೇರಿದ್ದರಿಂದ , ಮೊದಲಿಗೆ ಕೆಲಸದ ಒತ್ತಡ ಕೂಡ ಅಷ್ಟಾಗಿ ಇರದ ಕಾರಣ ಈ ಕಂಪನಿಯಲ್ಲಿ  ಅದು (ತುಂಟತನ) ಇನ್ನೂ ಜಾಸ್ತಿ ಆಯಿತು ಹೊರತು ಕಡಿಮೆ ಆಗಲೇ ಇಲ್ಲ, ಆಡದ ಆಟಗಳಿಲ್ಲ, ಮಾಡದ ತುಂಟಾಟಗಳಿಲ್ಲ,ಒಬ್ಬರಿಗೊಬ್ಬರು ಕಾಲೆಳೆಯದ ದಿನಗಳಂತೂ ಇಲ್ಲವೇ ಇಲ್ಲ.  ನಿಜ ಹೇಳಬೇಕೆಂದರೆ ಸಾಫ್ಟ್ ವೇರ್ ಕಂಪನಿಯಲ್ಲಿ ಇದ್ದರು ಅಲ್ಲಿರುವವರಿಗಿಂತ ಅತೀ ಬಿನ್ನವಾಗಿದ್ದೆವು. ಇಲ್ಲಿಯ ಎಂಜಿನಿಯರುಗಳು ಮತ್ತು ಹಿರಿಯರು ನಮ್ಮನ್ನು ನೋಡಿ ನಗುತ್ತಿದ್ದರು ಮತ್ತು ಕಾಮಿಡಿ ಕಿಲಾಡಿಗಳೆನ್ದು ಅಪರೂಪಕ್ಕೆ ನಮಗೂ ತಮಾಷೆ ಮಾಡುತ್ತಿದ್ದರು. ಆಗಲೇ ನಮಗೂ ಗೊತ್ತಾಗಿದ್ದು ಪರವಾಗಿಲ್ಲ ಇವರು ಕೂಡ ನಗುವರೆಂದು !!!!!!  

           ಗುಂಪು ಗುಂಪಾಗಿ ಊಟಕ್ಕೆ ಹೋಗುತಿದ್ದದ್ದು, ಊಟ ಮುಗಿದ ಮೇಲೆ ಕೋಲ್ ಮಂಜನ ಅದ್ಯಕ್ಷತೆಯಲ್ಲಿ  ನಾವು ಮಾಡುತ್ತಿದ್ದ  "ಮೀಟಿಂಗು" ಅದ್ಭುತವಾಗಿರುತಿತ್ತು, ಅಲ್ಲಿ ನಾವು ಮಾಡದ ಚರ್ಚೆಗಳೇ ಇಲ್ಲ, ಇದಕ್ಕಾಗಿಯೇ ಎಷ್ಟೇ ಕೆಲ್ಸವಿದ್ದರು ಒಂದು ಗಂಟೆ ಅಲ್ಲಿ ನಾವೆಲ್ಲ ಸೇರಿ ಕಷ್ಟ ಸುಖ, ಕೆಲಸದ ವಿಷಯಗಳು, ಗಾಸಿಪ್‌ಗಳು, ಹುಡುಗಿಯರ-ಹುಡುಗರ ಬಗ್ಗೆ , ಸಿನಿಮಾಗಳ ಬಗ್ಗೆ ಇನ್ನೂ ಅನೇಕ ವಿಷಯಗಳ ಬಗ್ಗೆ ಚರ್ಚೆ ಮಾಡುತ್ತಾ ಇದ್ದ್ವಿ. ಕಾಲೇಜುಗಳಲ್ಲಿ ಅಡ್ಡ ಹೆಸರು ಇಡುವ ಹಾಗೆ ಇಲ್ಲಿಯೂ ಕೂಡ ಅಡ್ಡೆಸರುಗಳು , ಕೂಗಾಟಗಲು, ಟಪಾನ್ ಗುಚ್ಚಿ ಡ್ಯಾನ್ಸುಗಳು ಮತ್ತು ಕಾಲಿ ಮತ್ತು ಪೋಲಿ ಮಾತುಗಳು ಇನ್ನುಮುಂದೆ ಇರುವುದಿಲ್ಲವಲ್ಲ ಎಂಬ ಹಾಗೂ ಇಲ್ಲಿಯ ಹಿರಿಯರೊಂದಿಗೆ ಗಂಬೀರವಾಗಿರಬೇಕಲ್ಲಪ್ಪಾ ಎಂಬ ಬಾರಿ ಬೇಸರವಿದೆ.

              ನಮ್ಮ ಮೂಸು (ಕಿರಣ್) ಮೀಮೀಕ್ರಿ , ಸ್ಲೋ ಮಂಜನ ಮುಗ್ದ ನಗು, ಡ್ಯೂಡ್ ಪ್ರಭುವಿನ ವಸ್ತ್ರಾಲಾಂಕಾರ,  ಅಮ್ಮನ ಮಗ ವಿನಯನ ನಗು ಮತ್ತು ತುಂಟತನ, ಮಾರಿಯ ( ಆರಿಫ್) ಸೈರನ್ , ಜ್ಯೋತಿಯ ಸಣ್ಣ ನಗು, ರೆಡ್ಡಿಯ ಅದೇ ಗಾತ್ರದ ನಗು,  ಇನ್ನೂ ಮೇಲೆ ನನಗೆ ನೆನಪುಗಳಾಗೇ ಉಳಿಯಲಿವೆ. ಸ್ನೇಹಿತರೆ ನಿಜವಾಗಿಯೂ ನಿಮ್ಮೊಂದಿಗೆ ನಾ ಕಳೆದೆ ಇಷ್ಟು ದಿನಗಳು ನಿಜಕ್ಕೂ ಮರೆಯಲಾಗದ ದಿನಗಳು. ನಿಮ್ಮನ್ನು ಹಾಗೂ ನಿಮ್ಮ ನೆನಪುಗಳನ್ನು ಸದಾ ನನ್ನೊಡನೆ ಇರಿಸಿಕೊಂಡು , ನಿಮ್ಮನ್ನು ಮರೆಯದೇ , ನಿಮ್ಮ ಮಾತುಗಳನ್ನು ಸದಾ ನೆನಪಿಸಿಕೊಂಡು ನಾ ಒಬ್ಬನೇ ನಗುತ್ತಿರಲು ಇಷ್ಟಪಡುತ್ತೇನೆ. ನೀವೆಲ್ಲರೂ ಒಳ್ಳೇ ಒಳ್ಳೇ ಕಂಪನಿಗೆ ಸೇರಿಕೊಳ್ಳುತ್ತಿರುವಿರಿ ನಿಮಗೆಲ್ಲ ಒಳ್ಳೆಯದಾಗಲಿ ಎನ್ನುತ್ತಾ ಸದಾ ನಿಮ್ಮ ನೆನೆಪಿನಲ್ಲಿ ನನ್ನಿಂದ ಈ ಲೇಖನ ನಿಮಗಾಗಿ :)      
ನಿಮಗಾಗಿ.......
ನಿರಂಜನ್

ಸೋಮವಾರ, ಜನವರಿ 10, 2011

For a change , ನನ್ನಿಂದ ಪ್ರೀತಿಗಾಗಿ !!!!!!

                                           "ನನ್ನಿಂದ ಪ್ರೀತಿಗಾಗಿ"

ಸ್ನೇಹಿತರೆ ಈ ಬಾರಿ ಸ್ವಲ್ಪ ಚೇಂಜ್ ಇರಲಿ ಅಂತ ಲೇಖನಕ್ಕೆ ಬದಲಾಗಿ, "ನನ್ನಿಂದ ಪ್ರೀತಿಗಾಗಿ" ಬರೆದ ನನ್ನ ನಿಜವಾದ ಮತ್ತು ನೈಜ ಭಾವನೆಗಳನ್ನ ಇಲ್ಲಿ ಪೋಸ್ಟ್ ಮಾಡ್ತಾ ಇದೀನಿ !!!!! ನಿದ್ದೇಗೆಟ್ಟು,ಇಷ್ಟಪಟ್ಟು ಬರೆದ ಕೆಲವು ಲೈನುಗಳು ಅಷ್ಟೇ !!! ಒಂದು ವಯಸ್ಸಿನಲ್ಲಿ ಅಥವಾ ಕೆಲವು ವೇಳೆಯಲ್ಲಿ ಇವು ತೀರಾ ಒಬ್ಬರಿಗಾಗಿ  ಅಂದರೆ "ನನ್ನಿಂದ-ನಿನಗಾಗಿ"/ಪ್ರೀತಿಗಾಗಿ ಅನಿಸುತ್ತಿದ್ದ ಇವು , ಈಗ ಸ್ವಲ್ಪ ಬದಲಾಗಿ  "ನನ್ನಿಂದ-ನಿಮಗಾಗಿ"ಆಗಿವೆ !!!!!       
                                             
                                                   
                                                ಸಿಂಧೂರ         

                                   ನೂರಾರು ತಾರೆಯರ ನಡುವೆ ನಿನ್ನ
                                   ಮುದ್ದಾದ ಮೊಗ ಚಂದ ..............

                                    ನೀ ಬರುವ ಹೊತ್ತಿಗೆ ಮರೆಯಾಗುವನು ರವಿ
                                    ನಾಚಿ ಮೊರೆ ಮರೆಮಾಚಿ ನಿನ್ನಿಂದ ..........

                                    ಆಗುವನು ಕವಿ ಶೃಂಗಾರ ಕವಿಯಾಗಿ
                                    ನಿನ್ನ ನೊರೆಯಾಲಿನಂತ ಮೈ ಬಣ್ಣದಿಂದ

                                    ನೂರಾರು ತಾರೆಯರ ನಡುವೆ ನಿನ್ನ
                                    ಮುದ್ದಾದ ಮೊಗ ಚಂದ…
                                                                    ನಿಮಗಾಗಿ.......                                                                                     

                                             ಏಕೆ ಹೀಗೆ !
                                    ಕವಿಯಲ್ಲ ನಾನು, ನಿನ್ನ ನೋಡಿದೊಡನೆ
                                     ಕವನ ಹಾಗೆ ಹೊರಹೊಮ್ಮೂತಿದೆಯಲ್ಲ......  

                                     ಕಲಾವಿದನಲ್ಲ ನಾನು, ನಿನ್ನ ನೋಡಿದೊಡನೆ
                                     ಚಿತ್ರ ಹಾಗೆ ಗರಿಗೆದರಿದೆಯಲ್ಲ..... .

                                     ಹಾಡುಗಾರನಲ್ಲ ನಾನು, ನಿನ್ನ ನೋಡಿದೊಡನೆ        
                                     ಗಾನಸುದೆ ಹರಿಯುತಿದೆಯಲ್ಲ.......

                                     ಕಳ್ಳನಲ್ಲ ನಾನು, ನಿನ್ನ ನೋಡಿದೊಡನೆ
                                     ಹೃದಯ ಕದಿಯಲೆನಿಸುತಿದೆಯಲ್ಲ......

                                     ಹಿಂದೆಂದೂ ಕಂಡಿಲ್ಲ ನಾನು, ನಿನ್ನ ನೋಡಿದೊಡನೆ
                                     ಹೀಗೇಕೆನಿಸುತಿದೆ ನನಗೆ ತಿಳಿದಿಲ್ಲ ......
                                                                             ನಿಮಗಾಗಿ.......

ನಿಮಗಾಗಿ.......
ನಿರಂಜನ್